Gold Price Today: ಮತ್ತಷ್ಟು ಇಳಿಕೆಯಾದ ಚಿನ್ನದ ಬೆಲೆ, ಇಂದೇ ಖರೀದಿಗೆ ಹೋಗಿ

ನೀವು ಚಿನ್ನ ಖರೀದಿಸುವ ಪ್ಲ್ಯಾನ್‌ ಮಾಡುತ್ತಿದ್ದೀರಾ, ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಚಿನ್ನಾಭರಣ

ಚಿನ್ನಾಭರಣ

  • Share this:
Gold Rate on Jan 29, 2022: ದೇಶದಲ್ಲಿ ನಿನ್ನೆಯಿಂದ ಚಿನ್ನದ ಬೆಲೆ (Gold Price)ಯಲ್ಲಿ ಇಳಿಕೆಯಾಗುತ್ತಿದೆ. ಬೆಂಗಳೂರಿನಲ್ಲಿ (Bengaluru) ಸಹ ಇಂದು ಬಂಗಾರದ ಬೆಲೆ ಕಡಿಮೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,500 ರೂ. ಇತ್ತು. ಇಂದು 350 ರೂ. ಕಡಿಮೆಯಾಗಿ 45,150 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 49,640 ರೂ. ಇತ್ತು. ಇಂದು 390 ರೂ. ಕಡಿಮೆಯಾಗಿ 49,250 ರೂ. ಆಗಿದೆ. ಇನ್ನು, ಬೆಂಗಳೂರು ಸೇರಿ ದೇಶದ ವಿವಿಧ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ದರ ಎಷ್ಟಿದೆ ಎಂಬುದನ್ನು ವಿವರವಾಗಿ ನೋಡೋಣ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ..?


ನೀವು ಚಿನ್ನ ಖರೀದಿಸುವ ಪ್ಲ್ಯಾನ್‌ ಮಾಡುತ್ತಿದ್ದೀರಾ, ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 49,640 ರೂ. ಇತ್ತು. ಇಂದು 390 ರೂ. ಇಳಿಕೆಯಾಗಿ 49,250 ರೂ. ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನ ನಿನ್ನೆ 45,500 ರೂ. ಇತ್ತು. ಇಂದು 350 ರೂ. ಇಳಿಕೆಯಾಗಿ 45,150 ರೂ. ಆಗಿದೆ. ಇನ್ನು, ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ.

ಭಾರತದಲ್ಲಿ ಆಭರಣ ಪ್ರಿಯರ ಜನಸಂಖ್ಯೆ ಕಡಿಮೆ ಏನಿಲ್ಲ. ಕೆಲವರು ಚಿನ್ನ, ಬೆಳ್ಳಿ ಆಭರಣಗಳನ್ನು ಧರಿಸಲು ಮಾಡಿಸಿಕೊಳ್ಳುತ್ತಾರೆ. ಇನ್ನೊಂದೆಡೆ, ಆಪತ್ಕಾಲದಲ್ಲಿ ಚಿನ್ನ ಅಡ ಇಡಲು ಅಥವಾ ಮಾರಾಟ ಮಾಡಲು ಬೇಕಾಗುತ್ತದೆಂದು ಅದರ ಮೇಲೆ ಹೂಡಿಕೆ ಮಾಡುವ ಸಂಪ್ರದಾಯ ಸಹ ಇನ್ನೂ ಕಡಿಮೆಯಾಗಿಲ್ಲ.

ಇದನ್ನೂ ಓದಿ: Gold Price Today: ಇಳಿಕೆಯಾದ ಚಿನ್ನದ ಬೆಲೆ, ಆಭರಣ ಖರೀದಿಸಲು ಇದೇ ಸರಿಯಾದ ಸಮಯ..!

ದೇಶದ ಇತರೆ ನಗರಗಳಾದ ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 49 ಸಾವಿರದ ಆಸುಪಾಸಿನಲ್ಲೇ ಇದೆ. ಈ ಮಧ್ಯೆ, ದೇಶದ ಮೆಟ್ರೋ ನಗರಗಳಾದ ಚೆನ್ನೈನಲ್ಲಿ 49,630 ರೂ. ಇದ್ದರೆ, ಮುಂಬೈನಲ್ಲಿ 49,250 ರೂ., ದೆಹಲಿಯಲ್ಲಿ 49,300 ರೂ. ಹಾಗೂ ಕೋಲ್ಕತ್ತದಲ್ಲಿ 49,250 ರೂ. ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಶಿಕ್‌ನಲ್ಲೂ 24 ಕ್ಯಾರೆಟ್‌ ಚಿನ್ನದ ಬೆಲೆ 49 ಸಾವಿರದಿಂದ 50 ಸಾವಿರದ ಆಸುಪಾಸಿನಲ್ಲೇ ಇದೆ.

ಇಂದಿನ ಬೆಳ್ಳಿ ದರ:

ಬಂಗಾರದ ಬೆಲೆ ದೇಶದಲ್ಲಿ ಇಳಿಕೆಯಾದಂತೆ, ಬೆಳ್ಳಿ ದರ (Silver Rate) ಸಹ ಇಳಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 63,200 ರೂ. ಇತ್ತು. ಇಂದು 1,200 ರೂ. ಕಡಿಮೆಯಾಗಿದ್ದು, 62,000 ರೂ. ಆಗಿದೆ.

ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ ಇಂದು 1 ಕೆಜಿ ಬೆಳ್ಳಿಯ ಬೆಲೆ 66,300 ರೂ. ಆಗಿದೆ. ಉಳಿದಂತೆ ಚೆನ್ನೈ, ಹೈದರಾಬಾದ್, ಕೇರಳ, ಕೊಯಮತ್ತೂರು, ಮಧುರೈ, ವಿಜಯವಾಡ, ವಿಶಾಖಪಟ್ಟಣಂನಲ್ಲಿ ಬೆಳ್ಳಿಯ ಬೆಲೆ 66,300 ರೂ. ಆಗಿದೆ. ಇನ್ನು, ಮೆಟ್ರೋ ನಗರಗಳಾದ ಮುಂಬೈ, ದೆಹಲಿ ಹಾಗೂ ಕೋಲ್ಕತ್ತದಲ್ಲಿ 62,000 ರೂ. ದರ ಇದೆ.

ಇದನ್ನೂ ಓದಿ: Aadhar Cardನಲ್ಲಿ ಫೋಟೋ ಬದಲಿಸಬೇಕಾ? ಹೀಗೆ ಮಾಡಿ

ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಇದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ.

ಸೂಚನೆ: ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.
Published by:Latha CG
First published: