Gold Price Today: ದೇಶದಲ್ಲಿ ಹೆಚ್ಚಾದ ಚಿನ್ನ, ಬೆಳ್ಳಿ ದರ; ನಿಮ್ಮ ನಗರದಲ್ಲಿ ಎಷ್ಟಿದೆ ರೇಟು?

ಆಪತ್ಕಾಲದಲ್ಲಿ ಚಿನ್ನ ಅಡ ಇಡಲು ಅಥವಾ ಮಾರಾಟ ಮಾಡಲು ಬೇಕಾಗುತ್ತದೆಂದು, ಅದರ ಮೇಲೆ ಹೂಡಿಕೆ ಮಾಡುವ ಸಂಪ್ರದಾಯ ಇನ್ನೂ ಕಡಿಮೆಯಾಗಿಲ್ಲ.

ಚಿನ್ನಾಭರಣ

ಚಿನ್ನಾಭರಣ

  • Share this:
Gold Rate on Jan 27, 2022: ದೇಶದಲ್ಲಿಂದು ಚಿನ್ನದ ಬೆಲೆ (Gold Price)ಯಲ್ಲಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಸಹ ಇಂದು ಬಂಗಾರದ ಬೆಲೆ ಹೆಚ್ಚಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,750 ರೂ. ಇತ್ತು. ಇಂದು 150 ರೂ. ಹೆಚ್ಚಾಗಿ 47,900 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 49,680 ರೂ. ಇತ್ತು. ಇಂದು  150 ರೂ. ಹೆಚ್ಚಾಗಿ 49,830 ರೂ. ಆಗಿದೆ. ಇನ್ನು, ಬೆಂಗಳೂರು ಸೇರಿ ದೇಶದ ವಿವಿಧ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ(Gold-Silver Rate) ಎಷ್ಟಿದೆ ಎಂಬುದನ್ನು ವಿವರವಾಗಿ ನೋಡೋಣ..

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ..?

ನೀವು ಚಿನ್ನ ಖರೀದಿಸುವ ಪ್ಲ್ಯಾನ್‌ ಮಾಡುತ್ತಿದ್ದೀರಾ, ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 49,910 ರೂ. ಇತ್ತು. ಇಂದು 190 ರೂ. ಹೆಚ್ಚಾಗಿ 50,100 ರೂ. ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನ ನಿನ್ನೆ 45,750 ರೂ. ಇತ್ತು. ಇಂದು 150 ರೂ. ಏರಿಕೆಯಾಗಿ 45,900 ರೂ. ಆಗಿದೆ. ಇನ್ನು, ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ.

ಭಾರತದಲ್ಲಿ ಆಭರಣ ಪ್ರಿಯರ ಜನಸಂಖ್ಯೆ ಕಡಿಮೆ ಏನಿಲ್ಲ. ಆಪತ್ಕಾಲದಲ್ಲಿ ಚಿನ್ನ ಅಡ ಇಡಲು ಅಥವಾ ಮಾರಾಟ ಮಾಡಲು ಬೇಕಾಗುತ್ತದೆಂದು, ಅದರ ಮೇಲೆ ಹೂಡಿಕೆ ಮಾಡುವ ಸಂಪ್ರದಾಯ ಇನ್ನೂ ಕಡಿಮೆಯಾಗಿಲ್ಲ.

ಇದನ್ನೂ ಓದಿ: Gold Price Today: ಏರಿಕೆಯಾಗುತ್ತಲೇ ಹೊರಟ ಚಿನ್ನದ ಬೆಲೆ; ನಾಳೆ ಅನ್ನೋ ಬದಲು ಇವತ್ತೇ ಖರೀದಿಸಿ; ಇಲ್ಲಿದೆ ಇಂದಿನ ದರ

ದೇಶದ ಇತರೆ ನಗರಗಳಾದ ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24  ಕ್ಯಾರೆಟ್‌ ಚಿನ್ನದ ಬೆಲೆ 50 ಸಾವಿರದಿಂದ 51 ಸಾವಿರದ ಆಸುಪಾಸಿನಲ್ಲೇ ಇದೆ.

ಈ ಮಧ್ಯೆ, ದೇಶದ ಮೆಟ್ರೋ ನಗರಗಳಾದ ಚೆನ್ನೈನಲ್ಲಿ 50,590 ರೂ. ಇದ್ದರೆ, ಮುಂಬೈನಲ್ಲಿ 49,830 ರೂ., ದೆಹಲಿಯಲ್ಲಿ 50,100 ರೂ. ಹಾಗೂ ಕೋಲ್ಕತ್ತದಲ್ಲಿ 48,600 ರೂ. ಇದೆ.
ಇದೇ ರೀತಿ ಚಂಡೀಗಢ, ಸೂರತ್‌, ನಾಶಿಕ್‌ನಲ್ಲೂ 24 ಕ್ಯಾರೆಟ್‌ ಚಿನ್ನದ ಬೆಲೆ 50 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಳ್ಳಿ ದರ:

ಬಂಗಾರದ ಬೆಲೆ ದೇಶದಲ್ಲಿ ಏರಿಕೆಯಾದಂತೆ, ಬೆಳ್ಳಿ ದರ (Silver Rate) ಸಹ ಹೆಚ್ಚಾಗಿದೆ. ನಿನ್ನೆ 1 ಕೆಜಿ ಬೆಳ್ಳಿಗೆ  64,100 ರೂ. ಇತ್ತು. ಇಂದು 100  ರೂ. ಹೆಚ್ಚಾಗಿ 64,200 ರೂ. ಆಗಿದೆ.
ಆದರೆ, ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ ಇಂದು 1 ಕೆಜಿ ಬೆಳ್ಳಿಯ ಬೆಲೆ 68,500 ರೂ. ಆಗಿದೆ. ಉಳಿದಂತೆ ಚೆನ್ನೈ, ಹೈದರಾಬಾದ್, ಕೇರಳ, ಕೊಯಮತ್ತೂರು, ಮಧುರೈ, ವಿಜಯವಾಡ, ವಿಶಾಖಪಟ್ಟಣಂನಲ್ಲಿ ಬೆಳ್ಳಿಯ ಬೆಲೆ 68,500 ರೂ. ಆಗಿದೆ.
ಇನ್ನು, ಮೆಟ್ರೋ ನಗರಗಳಾದ ಮುಂಬೈ, ದೆಹಲಿ ಹಾಗೂ ಕೋಲ್ಕತ್ತದಲ್ಲಿ 64,200 ರೂ. ದರ ಇದೆ.

ಇದನ್ನೂ ಓದಿ: Economy: ಕೋವಿಡ್‌ನಿಂದಾಗಿ ಪಾತಾಳಕ್ಕೆ ಇಳಿದ ಬಡವರ ಆದಾಯ; ಹೆಚ್ಚಳಗೊಂಡ ಶ್ರೀಮಂತರ Income

ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಇದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ.
ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.
Published by:Latha CG
First published: