Gold Investment: ತನ್ನ ಎಲ್ಲ ದಾಖಲೆಗಳನ್ನು ಮುರಿಯಲಿದೆ ಚಿನ್ನ: ತಜ್ಞರ ಪ್ರಕಾರ ಇದುವೇ ಹೂಡಿಕೆ ಸಮಯ!

Gold Investment: ಭಾರತ(India)ದಲ್ಲಿ ಚಿನ್ನವನ್ನು ಉತ್ತಮ ಹೂಡಿಕೆಯ ಆಯ್ಕೆ ಎಂದು ಪರಿಗಣಿಸಲಾಗುತ್ತದೆ.. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಚಿನ್ನವನ್ನು ಆಮದು (Gold Import) ಮಾಡಿಕೊಳ್ಳಲು ಇದೇ ಕಾರಣ.

ಚಿನ್ನ

ಚಿನ್ನ

  • Share this:
Gold Investment: ಭಾರತ(India)ದಲ್ಲಿ ಚಿನ್ನವನ್ನು ಉತ್ತಮ ಹೂಡಿಕೆಯ ಆಯ್ಕೆ ಎಂದು ಪರಿಗಣಿಸಲಾಗುತ್ತದೆ.. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಚಿನ್ನವನ್ನು ಆಮದು (Gold Import) ಮಾಡಿಕೊಳ್ಳಲು ಇದೇ ಕಾರಣ. ಕಳೆದ ಕೆಲವು ದಿನಗಳಿಂದ ಒಂದು ಅಥವಾ ಎರಡು ದಿನ ಹೊರತುಪಡಿಸಿದ್ರೆ ಚಿನ್ನದ ಬೆಲೆಯಲ್ಲಿ ಭಾರೀ ಜಿಗಿತ (Gold Price hike) ಕಂಡುಬಂದಿದೆ. ಪ್ರಸ್ತುತ ಇದರ ಬೆಲೆ 48,000 ರೂ. ತಜ್ಞರು ಹೇಳುವಂತೆ ಚಿನ್ನದಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ ಮತ್ತು ಮುಂದಿನ 12 ತಿಂಗಳಲ್ಲಿ ಚಿನ್ನವು ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ದಾಟಬಹುದು ಎಂದು ಊಹಿಸಲಾಗುತ್ತಿದೆ.

ಭಾರತದಲ್ಲಿ ಚಿನ್ನದ ಬೇಡಿಕೆ ಮತ್ತು ಬಳಕೆ ಹೆಚ್ಚು

ಭಾರತವು ವಿಶ್ವದ ಅತಿದೊಡ್ಡ ಚಿನ್ನದ ಆಮದುದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ಚಿನ್ನವನ್ನು ಮುಖ್ಯವಾಗಿ ಆಭರಣ ಉದ್ಯಮದ ಬೇಡಿಕೆಯನ್ನು ಪೂರೈಸಲು ಆಮದು ಮಾಡಿಕೊಳ್ಳಲಾಗುತ್ತದೆ. ಭಾರತವು ಪ್ರಮಾಣಕ್ಕೆ ಅನುಗುಣವಾಗಿ ವಾರ್ಷಿಕವಾಗಿ 800 ರಿಂದ 900 ಟನ್‌ಗಳಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 48,000 ರೂಪಾಯಿ ದಾಟುತ್ತಿದೆ. ಕೋವಿಡ್ -19 ರ ಮೂರನೇ ತರಂಗದ ಮಧ್ಯೆಯೂ ಚಿನ್ನದ ಬೆಲೆ ಏರುತ್ತಲೇ ಇದೆ. ಇದರೊಂದಿಗೆ ಹೂಡಿಕೆದಾರರು ಮತ್ತೆ ಚಿನ್ನದ ಮೇಲಿನ ಹೂಡಿಕೆಯನ್ನು ಲಾಭದಾಯಕ ವ್ಯವಹಾರವೆಂದು ಪರಿಗಣಿಸುತ್ತಿದ್ದಾರೆ.

ಇದನ್ನೂ ಓದಿ:  Cost Of Living: ಜಗತ್ತಿನಲ್ಲಿ ಜೀವನ ನಡೆಸೋದು ದುಬಾರಿ ಆಗ್ತಿರೋದೇಕೆ? ಇಲ್ಲಿವೆ 5 ಕಾರಣಗಳು

ಚಿನ್ನದ ಆಮದುಗಳ ಜೊತೆಗೆ ಭೌತಿಕ ಚಿನ್ನ ಮತ್ತು ಚಿನ್ನದ ಇಟಿಎಫ್‌ಗಳಲ್ಲಿನ ಹೂಡಿಕೆಗಳು ಹೆಚ್ಚಾಗಲು ಇದು ಕಾರಣವಾಗಿದೆ. ತಜ್ಞರು ಕೂಡ ಚಿನ್ನದ ಮೇಲೆ ಹೂಡಿಕೆ ಮಾಡಲು ಉತ್ತಮ ಸಮಯ ಎಂದು ಹೇಳುತ್ತಿದ್ದಾರೆ.

ಚಿನ್ನ ಸಾರ್ವಕಾಲಿಕ ಬೆಲೆಯನ್ನು ದಾಟಬಹುದು

ತಜ್ಞರ ಪ್ರಕಾರ, ಮುಂದಿನ 12 ರಿಂದ 15 ತಿಂಗಳಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ 56,000 ರೂ. ಪ್ರತಿ ಔನ್ಸ್ ಗೆ 1.50 ಲಕ್ಷ ದಾಟುವ ಭರವಸೆಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಸ್ಪಾಟ್ ಮಾರುಕಟ್ಟೆಯಲ್ಲಿ, ಹಳದಿ ಲೋಹವು ಶುಕ್ರವಾರ ಔನ್ಸ್ 1,839 ಡಾಲರ್ ಗೆ ಕೊನೆಗೊಂಡಿತು. ಅಂತಾರಾಷ್ಟ್ರೀಯ ಮತ್ತು ದೇಶೀಯ ಮಾರುಕಟ್ಟೆಗಳಲ್ಲಿ ಶುಕ್ರವಾರದಂದು ಬೆಲೆಬಾಳುವ ಗಟ್ಟಿ ಲೋಹವು ಕುಸಿದಿದ್ದರೂ, ಚಿನ್ನದ ಒಟ್ಟಾರೆ ದೃಷ್ಟಿಕೋನವು ಬುಲಿಶ್ ಆಗಿದೆ.

ಚಿನ್ನದ ಬೆಲೆಯಲ್ಲಿನ ಯಾವುದೇ ಕುಸಿತವನ್ನು ಹತ್ತಿರದ ಅವಧಿಯಲ್ಲಿ ದೊಡ್ಡ ಖರೀದಿ ಅವಕಾಶವಾಗಿ ನೋಡಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸರಕು ಮಾರುಕಟ್ಟೆ ತಜ್ಞರ ಪ್ರಕಾರ, ಈ ವಾರ ಅಮೂಲ್ಯವಾದ ಲೋಹದ ಕುಸಿತವನ್ನು ಲಾಭದ ಬುಕಿಂಗ್ ಎಂದು ನೋಡಬೇಕು ಅಂತ ಹೇಳುತ್ತಾರೆ.

ತಜ್ಞರಿಂದ ಹೂಡಿಕೆದಾರರಿಗೆ ಸಲಹೆ

ಚಿನ್ನದ ಬೆಲೆಯ ದೃಷ್ಟಿಕೋನವು ಸಕಾರಾತ್ಮಕವಾಗಿದೆ. ಬೆಲೆಯಲ್ಲಿ ಯಾವುದೇ ಕುಸಿತವನ್ನು ಹೂಡಿಕೆದಾರರು ಉತ್ತಮ ಖರೀದಿ ಅವಕಾಶವಾಗಿ ನೋಡಬೇಕು ಎಂದು ತಜ್ಞರು ಹೇಳಿದ್ದಾರೆ. ಮುಂದಿನ ಒಂದರಿಂದ ಎರಡು ತಿಂಗಳಲ್ಲಿ ಚಿನ್ನ ಪ್ರತಿ ಔನ್ಸ್‌ಗೆ 1900 ಡಾಲರ್‌ನಿಂದ 1910 ಡಾಲರ್‌ಗೆ ಏರಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:  PM Kisan: ನಿಯಮ ಬದಲಿಸಿದ ಸರ್ಕಾರ: ಮುಂದಿನ ಕಂತು ಸಿಗಬೇಕಾದ್ರೆ ಮೊದಲು ಈ ಕೆಲಸ ಮಾಡಿ

ಈಗ ಚಿನ್ನ ಖರೀದಿಸಿದರೆ ಲಾಭ ಸಿಗಲಿದೆ

ಮತ್ತೊಂದು ವರದಿಯಲ್ಲಿ, ಮುಂದಿನ 12 ರಿಂದ 15 ತಿಂಗಳ ನಡುವೆ ಚಿನ್ನದ ಬೆಲೆ ಪ್ರತಿ ಔನ್ಸ್‌ ಗೆ 2,000 ಡಾಲರ್ ಅಥವಾ ಸುಮಾರು 1,48,854 ರೂ.ಗೆ ತಲುಪಬಹುದು ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಈಗ ಖರೀದಿಸಿದ ಚಿನ್ನವು ನಂತರ ಹೂಡಿಕೆದಾರರಿಗೆ ಲಾಭವಾಗಲಿದೆ.

ಅಲ್ಪಾವಧಿಯಲ್ಲಿ, ಈ ತ್ರೈಮಾಸಿಕದಲ್ಲಿ ಚಿನ್ನದ ಬೆಲೆ 1,915 ಡಾಲರ್ ಅಂದರೆ ರೂ 1,42,533.45 ರ ಸಮೀಪ ತಲುಪಬಹುದು ಎಂದು ಹೇಳಲಾಗುತ್ತಿದೆ. ಇದರ ಬೆಲೆ $ 1,965 ವರೆಗೆ ಬರಬಹುದು.

ಆಮದಿನಲ್ಲಿ 10 ವರ್ಷಗಳ ದಾಖಲೆ ಬ್ರೇಕ್

2021 ರಲ್ಲಿ ಭಾರತವು ಹೆಚ್ಚಿನ ಪ್ರಮಾಣದ ಚಿನ್ನವನ್ನು ಆಮದು ಮಾಡಿಕೊಂಡಿತು. ವರದಿಯ ಪ್ರಕಾರ, ಚಿನ್ನ ಆಮದು ವಿಷಯದಲ್ಲಿ ದೇಶವು ಕಳೆದ ವರ್ಷ 10 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ.

ಭಾರತವು 2021 ರಲ್ಲಿ 1,050 ಟನ್ ಚಿನ್ನವನ್ನು ಆಮದು ಮಾಡಿಕೊಂಡಿತ್ತು. ಇದಕ್ಕಾಗಿ ಒಟ್ಟು 55.7 ಶತಕೋಟಿ ಡಾಲರ್ ಖರ್ಚು ಮಾಡಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಚಿನ್ನದ ಆಮದುಗಳ ಸಂಖ್ಯೆ ದ್ವಿಗುಣವಾಗಿದೆ. ಇದು 2011 ರ ನಂತರದ ಅತ್ಯಧಿಕವಾಗಿದೆ.

ಕಡಿಮೆ ಚಿನ್ನದ ಆಮದು ಕುರಿತು ಮಾತನಾಡುತ್ತಾ, 2020 ರಲ್ಲಿ ಕರೋನಾ ಸಾಂಕ್ರಾಮಿಕ ರೋಗದಿಂದಾಗಿ, $ 23 ಶತಕೋಟಿಗಿಂತ ಕಡಿಮೆ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿದೆ.

ಭಾರತ ಎರಡನೇ ಅತಿ ದೊಡ್ಡ ಆಮದುದಾರ

ಚಿನ್ನದ ಬಳಕೆಯಲ್ಲಿ ಭಾರತ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಹೆಚ್ಚಿನ ಪ್ರಮಾಣದ ಚಿನ್ನವನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಒಟ್ಟು ಚಿನ್ನದ ಆಮದುಗಳಲ್ಲಿ, 44 ಪ್ರತಿಶತವನ್ನು ಸ್ವಿಟ್ಜರ್ಲೆಂಡ್‌ನಿಂದ ಮತ್ತು 11 ಪ್ರತಿಶತವನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಖರೀದಿಸಲಾಗುತ್ತದೆ.

ಕಳೆದ ಕೆಲವು ವರ್ಷಗಳಲ್ಲಿ ಯಾವುದೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಚಿನ್ನದ ಆಮದಿನ ಅಂಕಿಅಂಶಗಳನ್ನು ಗಮನಿಸಿದರೆ, 2014-15ರಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ 339.3 ಟನ್‌ಗಳಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿದೆ.
Published by:Mahmadrafik K
First published: