Gold And Silver Price: ನಿನ್ನೆ ಚಿನ್ನ ಖರೀದಿಸೋದು ಮಿಸ್ ಮಾಡ್ಕೊಂಡ್ರಾ? ಇವತ್ತಿನ ದರ ಇಲ್ಲಿದೆ ನೋಡಿ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಉಂಟಾಗುತ್ತಿರುವ ಮಾರುಕಟ್ಟೆ ಸಂಬಂಧಿತ ವಿದ್ಯಮಾನಗಳು, ಹಣದುಬ್ಬರ (Inflation) ಹಾಗೂ ಕಚ್ಚಾ ತೈಲದಲ್ಲಾಗಿರುವ ಬೆಲೆ (Crude Oil Price) ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳೇ ಆಗಿವೆ.

ಚಿನ್ನ

ಚಿನ್ನ

  • Share this:
ಕಳೆದ ಕೆಲ ದಿನಗಳಿಂದ ಏರಿಕೆಯಾಗಿದ್ದ ಚಿನ್ನ (Gold Price) ಎರಡು ದಿನದಿಂದ ಇಳಿಕೆಯಾಗಿತ್ತು. ಮತ್ತು ಗ್ರಾಹಕರಿಗೂ (Customers) ಖರೀದಿಗೆ ಉತ್ತಮ ಸಮಯವಾಗಿತ್ತು. ಆದರೆ ಇಂದು ಮತ್ತೆ ಬಂಗಾರ ದುಬಾರಿಯಾಗಿದೆ. ನಿನ್ನೆ ಒಂದು ಒಂದು ಗ್ರಾಂ ಚಿನ್ನದ ಬೆಲೆ 4,645 ರೂಪಾಯಿಗೆ ಇಳಿಕೆ ಆಗಿತ್ತು. ಆದರೆ ಇಂದು ಬಂಗಾರದ ಬೆಲೆ ಒಂದು ಗ್ರಾಂಗೆ 4,710 ರೂಪಾಯಿ ಆಗಿದ್ದು, 10 ಗ್ರಾಂ ಬಂಗಾರದ ಮೇಲೆ ಬರೋಬ್ಬರಿ 650 ರೂ ಏರಿಕೆಯಾಗಿದೆ. ಭಾರತವು ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಿಸುತ್ತಿದ್ದು ಮುಂಬರುವ ದಿನಗಳಲ್ಲಿ ಚಿನ್ನ ಮತ್ತಷ್ಟು ಏರಿಕೆಯಾಗುವ (Gold Price Hike) ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹಾಗಾಗಿ ಚಿನ್ನ ಇನ್ನಷ್ಟು ದುಬಾರಿ ಆಗೋ ಮುಂಚೆ ಅದನ್ನು ಈಗಲೇ ಖರೀದಿಸುವುದು ಉತ್ತಮ.

ಕಳೆದ ಕೆಲ ಸಮಯದಿಂದ ಚಿನ್ನದ ಬೆಲೆಗಳಲ್ಲಿ ಅಲ್ಪ ಪ್ರಮಾಣದ ಏರಿಳಿತಗಳು ಆಗುತ್ತಲೇ ಇದ್ದು ಇದಕ್ಕೆ ಪ್ರಮುಖ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಉಂಟಾಗುತ್ತಿರುವ ಮಾರುಕಟ್ಟೆ ಸಂಬಂಧಿತ ವಿದ್ಯಮಾನಗಳು, ಹಣದುಬ್ಬರ (Inflation) ಹಾಗೂ ಕಚ್ಚಾ ತೈಲದಲ್ಲಾಗಿರುವ ಬೆಲೆ (Crude Oil Price) ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳೇ ಆಗಿವೆ.

ನಮ್ಮ ದೇಶದಲ್ಲಷ್ಟೆ ಅಲ್ಲ, ಜಗತ್ತಿನಾದ್ಯಂತ ಬಂಗಾರಕ್ಕೆ ಇರುವ ಬೇಡಿಕೆ ಅಷ್ಟಿಷ್ಟಲ್ಲ. ಭಾರತದ ಮಾರುಕಟ್ಟೆಗಳಲ್ಲಿ ಇಂದು ಚಿನ್ನ ಖರೀದಿ ಸಹಜ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ವ್ಯವಹಾರವನ್ನು ಈ ವ್ಯವಹಾರ ಹೊಂದಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 47,150 ಆಗಿದೆ.

ಇದನ್ನೂ ಓದಿ:  Stock Market: ಲಕ್ಷಕ್ಕೆ ಎರಡೂವರೆ ಕೋಟಿ ರಿಟರ್ನ್ಸ್! ಅಂದು ಈ ಷೇರು ಖರೀದಿಸಿದ್ದವರು ಈಗ ಮಿಲಿಯನೇರ್

ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಒಂದು ನೋಟ ಬೀರೋಣ.

ಒಂದು ಗ್ರಾಂ (1GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,710
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,138

ಎಂಟು ಗ್ರಾಂ (8GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37,680
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,104

ಹತ್ತು ಗ್ರಾಂ (10GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 47,100
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 51,380

ನೂರು ಗ್ರಾಂ (100GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,71,000
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,13,800

ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,150 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,670 ರೂ. 47,100, ರೂ. 47,100 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,250 ರೂ. ಆಗಿದೆ.

ಬೆಳ್ಳಿ ದರ

ಚಿನ್ನದಂತೆ ಸಾಮಾನ್ಯವಾಗಿ ಬೆಳ್ಳಿ ದರಗಳಲ್ಲೂ ವ್ಯತ್ಯಾಸ ಆಗುತ್ತಲೇ ಇರುತ್ತದೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಬೆಳ್ಳಿ ದರ ಒಂದು ಕೆಜಿಗೆ 56,500 ರೂ. ಆಗಿದ್ದು, ಒಂದು ಕೆಜಿ ಬೆಳ್ಳಿ ಮೇಲೆ 1,900 ರೂ ಅಧಿಕವಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನೆ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ.

ಬೆಂಗಳೂರಿನಲ್ಲೂ ಬೆಳ್ಳಿ ದರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಏರಿಕೆಯಾಗಿದೆ. ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 612, ರೂ. 6,120 ಹಾಗೂ ರೂ. 61,200 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 61,200 ಆಗಿದ್ದರೆ ದೆಹಲಿಯಲ್ಲಿ ರೂ. 56,500 ಮುಂಬೈನಲ್ಲಿ ರೂ. 56,500 ಹಾಗೂ ಕೊಲ್ಕತ್ತದಲ್ಲೂ ರೂ. 56,500 ಗಳಾಗಿದೆ.

ಇನ್ನೂ, ಈ ಬಂಗಾರದ ಮೌಲ್ಯ ಜಾಗತಿಕ ಮಾರುಕಟ್ಟೆಯಲ್ಲೂ ಅಪಾರವಾಗಿದೆ. ಸಾಕಷ್ಟು ದೇಶಗಳು ವಿದೇಶಿ ವಿನಿಮಯ ರೂಪದಲ್ಲಿ ಚಿನ್ನದ ಸಂಗ್ರಹ ಹೊಂದಿರುವುದು ಎಲ್ಲರಿಗೂ ಗೊತ್ತೆ ಇದೆ, ಏಕೆಂದರೆ ಚಿನ್ನ ಎಲ್ಲ ದೇಶಗಳಲ್ಲೂ ಮಾನ್ಯತೆ ಪಡೆದಿದ್ದು ಎಲ್ಲರಿಂದಲೂ ಸ್ವೀಕರಿಸಲ್ಪಡುತ್ತದೆ. ಅದರಲ್ಲೂ ವಿಶೇಷವಾಗಿ ಭಾರತ ದೇಶ ಎಂದರೆ ಕೇಳಬೇಕೆ? ಮೊದಲಿನಿಂದಲೂ ಭಾರತದಲ್ಲಿ ಬಂಗಾರಕ್ಕಿರುವ ವಿಶೇಷತೆಯೇ ಬೇರೆ.

ಇದನ್ನೂ ಓದಿ:  Roshni Nadar: ಇವರೇ ಭಾರತದ ಅತ್ಯಂತ ಶ್ರೀಮಂತ ಮಹಿಳೆ ರೋಶನಿ ನಾಡರ್; ಪಟ್ಟಿಯಲ್ಲಿ ಇನ್ಯಾರ‍್ಯಾರಿದ್ದಾರೆ?

ಮದುವೆಯಿಂದ ಹಿಡಿದು ಅನೇಕ ಇತರೆ ಶುಭ ಕಾರ್ಯಗಳಲ್ಲಿ ಭಾರತೀಯರು ಬಂಗಾರವನ್ನು ಯಥೇಚ್ಛವಾಗಿ ಬಳಸುತ್ತಾರೆ. ಅದರಲ್ಲೂ ನವಜಾತ ಶಿಶು ಇರಲಿ ಅಥವಾ ಹೊಸದಾಗಿ ಮದುವೆ ಮಾಡಿಕೊಂಡ ದಂಪತಿಗಳಿರಲಿ ಅವರಲ್ಲಿ ಬಂಗಾರದ ಯಾವುದಾದರೂ ವಸ್ತು ಅಥವಾ ಸಿಂಗಾರದ ಸಾಮಾನು ಇದ್ದೆ ಇರುತ್ತದೆ.

ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್ಟಿಲ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.
Published by:Mahmadrafik K
First published: