Gold And Silver Price: ದಿಢೀರ್ ಏರಿಕೆ ಬಳಿಕ ಇಳಿಕೆ ಕಂಡ ಚಿನ್ನ: ಇವತ್ತು ಖರೀದಿ ಮಾಡೋದನ್ನ ಮಿಸ್ ಮಾಡ್ಕೋಬೇಡಿ

ಇಂದು ದೇಶದಲ್ಲಿ ಚಿನ್ನದ ಬೆಲೆಯಲ್ಲಿ (Gold Price) ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಸಹ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,250 ರೂ. ಇತ್ತು. ಇಂದು 400 ರೂ. ಇಳಿಕೆಯಾಗಿ 46,850 ರೂ. ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Gold And Silver Price Today:  ಹಣದುಬ್ಬರವನ್ನು(Inflation) ಸಮರ್ಥವಾಗಿ ಎದುರಿಸಲು ಇರುವ ಒಂದು ಉತ್ತಮ ವಿಕಲ್ಪವೆಂದರೆ ಚಿನ್ನದ ಮೇಲೆ ಹೂಡಿಕೆ(Invest on Gold). ಅಷ್ಟೆ ಅಲ್ಲ, ಇಂದು ಚಿನ್ನದ ಹೂಡಿಕೆಯನ್ನು ಬಹು ಸುರಕ್ಷಿತ ಹೂಡಿಕೆ(Safe Investment) ಎಂದೂ ಸಹ ಕರೆಯಲಾಗುತ್ತದೆ. ಹಾಗಾಗಿ, ನಮ್ಮ ದೇಶದಲ್ಲಷ್ಟೆ ಅಲ್ಲ, ಜಗತ್ತಿನಾದ್ಯಂತ ಬಂಗಾರಕ್ಕೆ(Gold) ಇರುವ ಬೇಡಿಕೆ ಸಾಕಷ್ಟಿದೆ. ಪ್ರಸ್ತುತ ರಷ್ಯಾ ಹಾಗೂ ಉಕ್ರೇನ್ ದೇಶಗಳ ಮಧ್ಯೆ ಯುದ್ಧ(Russia-Ukraine Crisis) ನಡೆಯುತ್ತಿದ್ದು ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ(International Market) ಚಿನ್ನದ ಬೆಲೆ ಗಗನಕ್ಕೇರುವ ಎಲ್ಲಾ ಸೂಚನೆಗಳು ಕಾಣುತ್ತಿವೆ.  ಹಣದುಬ್ಬರವನ್ನು(Inflation) ಸಮರ್ಥವಾಗಿ ಎದುರಿಸಲು ಇರುವ ಒಂದು ಉತ್ತಮ ವಿಕಲ್ಪವೆಂದರೆ ಚಿನ್ನದ ಮೇಲೆ ಹೂಡಿಕೆ(Invest on Gold). ಅಷ್ಟೆ ಅಲ್ಲ, ಇಂದು ಚಿನ್ನದ ಹೂಡಿಕೆಯನ್ನು ಬಹು ಸುರಕ್ಷಿತ ಹೂಡಿಕೆ(Safe Investment) ಎಂದೂ ಸಹ ಕರೆಯಲಾಗುತ್ತದೆ. ಹಾಗಾಗಿ, ನಮ್ಮ ದೇಶದಲ್ಲಷ್ಟೆ ಅಲ್ಲ, ಜಗತ್ತಿನಾದ್ಯಂತ ಬಂಗಾರಕ್ಕೆ(Gold) ಇರುವ ಬೇಡಿಕೆ ಸಾಕಷ್ಟಿದೆ. ಪ್ರಸ್ತುತ ರಷ್ಯಾ ಹಾಗೂ ಉಕ್ರೇನ್ ದೇಶಗಳ ಮಧ್ಯೆ ಯುದ್ಧ(Russia-Ukraine Crisis) ನಡೆಯುತ್ತಿದ್ದು ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ(International Market) ಚಿನ್ನದ ಬೆಲೆ ಗಗನಕ್ಕೇರುವ ಎಲ್ಲಾ ಸೂಚನೆಗಳು ಕಾಣುತ್ತಿವೆ.

ಇಂದು ದೇಶದಲ್ಲಿ ಚಿನ್ನದ ಬೆಲೆಯಲ್ಲಿ (Gold Price) ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಸಹ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,250 ರೂ. ಇತ್ತು. ಇಂದು 400 ರೂ. ಇಳಿಕೆಯಾಗಿ 46,850 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 51,550 ರೂ. ಇತ್ತು. ಇಂದು 440 ರೂ. ಏರಿಕೆಯಾಗಿ 51,110 ರೂ. ಆಗಿದೆ. ಇನ್ನು, ಬೆಂಗಳೂರು ಸೇರಿ ದೇಶದ ವಿವಿಧ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ದರ ಎಷ್ಟಿದೆ ಎಂಬುದನ್ನು ವಿವರವಾಗಿ ನೋಡೋಣ.

ಇದನ್ನೂ ಓದಿ:  Russia-Ukraine Crisis: ಮುಂದಿನ 2 ವರ್ಷದಲ್ಲಿ ಚಿನ್ನದ ಬೆಲೆ 10,000 ರೂ. ಏರಿಕೆ ಸಾಧ್ಯತೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ..?

ನೀವು ಚಿನ್ನ ಖರೀದಿಸುವ ಪ್ಲ್ಯಾನ್‌ ಮಾಡುತ್ತಿದ್ದೀರಾ, ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 51,550 ರೂ. ಇತ್ತು.

ಇಂದು 440 ರೂ. ಇಳಿಕೆಯಾಗಿ 51,110 ರೂ. ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 47,250 ರೂ. ಇತ್ತು. ಇಂದು 400 ರೂ. ಇಳಿಕೆಯಾಗಿ 46,850 ರೂ. ಆಗಿದೆ. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ.

ಚಿನ್ನದ ಮೇಲೆ ಹೆಚ್ಚಾಗುತ್ತಲೇ ಇರುತ್ತದೆ ಜನರ ಒಲವು

ದೇಶದಲ್ಲಿ ಆಭರಣ ಪ್ರಿಯರ ಜನಸಂಖ್ಯೆಗೇನೂ ಕೊರತೆ ಇಲ್ಲ. ಚಿನ್ನ ಖರೀದಿ, ವಹಿವಾಟು ಹೆಚ್ಚು ನಡೆಯುತ್ತಲೇ ಇರುತ್ತದೆ. ಇನ್ನು ಹಲವರು ಆಪತ್ಕಾಲದಲ್ಲಿ ಚಿನ್ನ ಅಡ ಇಡಲು ಅಥವಾ ಮಾರಲು ಬೇಕಾಗುತ್ತದೆಂದು ಸಹ ಅದರ ಮೇಲೆ ಹೂಡಿಕೆ ಮಾಡುತ್ತಾರೆ. ಚಿನ್ನವನ್ನು ಬಾಂಡ್‌ ರೂಪದಲ್ಲೂ ಖರೀದಿಸಲಾಗುತ್ತದೆ.

ದೇಶದ ಇತರೇ ನಗರಗಳಲ್ಲಿ ಎಷ್ಟಿದೆ ಬೆಲೆ?

ಇನ್ನು, ದೇಶದ ಇತರೆ ನಗರಗಳಾದ ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆ, ಕೊಯಮತ್ತೂರು, ಮಧುರೈನಲ್ಲಿ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 50 ಸಾವಿರದಿಂದ 51 ಸಾವಿರದ ಆಸುಪಾಸಿನಲ್ಲೇ ಇದೆ.

ಮಹಾನಗರಗಳಲ್ಲಿ ಬಂಗಾರದ ಬೆಲೆ ಎಷ್ಟಿದೆ?

ಈ ಮಧ್ಯೆ, ದೇಶದ ಮೆಟ್ರೋಪಾಲಿಟನ್‌ ನಗರಗಳಾದ ಚೆನ್ನೈನಲ್ಲಿ 52,340 ರೂ. ಇದ್ದರೆ, ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ ಹಾಗೂ ಕೋಲ್ಕತ್ತದಲ್ಲಿ 24 ಕ್ಯಾರೆಟ್‌ ಬಂಗಾರದ ಬೆಲೆ 51,110 ರೂ. ಆಗಿದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಶಿಕ್‌ನಲ್ಲೂ 24 ಕ್ಯಾರೆಟ್‌ ಚಿನ್ನದ ಬೆಲೆ 50 ಸಾವಿರದ ಗಡಿ ದಾಟಿದೆ.

ಬೆಳ್ಳಿ ದರ:

ದೇಶದಲ್ಲಿಂದು ಚಿನ್ನದ ಬೆಲೆ ಇಳಿಕೆಯಾಗಿದ್ದರೂ ಬೆಳ್ಳಿ ದರ (Silver Rate) ಸಹ ಇಳಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 66,000 ರೂ. ಇತ್ತು. ಇಂದು 1000 ರೂ. ಇಳಿಕೆಯಾಗಿ 65,000 ರೂ. ಆಗಿದೆ.

ಆದರೆ, ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆ 70,000 ರೂ. ಆಗಿದೆ. ಇದೇ ರೀತಿ ಚೆನ್ನೈ, ಹೈದರಾಬಾದ್, ಕೇರಳ, ವಿಜಯವಾಡ, ವಿಶಾಖಪಟ್ಟಣಂ, ಕೊಯಮತ್ತೂರು, ಮಧುರೈನಲ್ಲಿ ಸಹ 1 ಕೆಜಿ ಬೆಳ್ಳಿಯ ಬೆಲೆ 65,000 ರೂ. ಗಳಿಂದ 70 ಸಾವಿರ ರೂ. ಆಸುಪಾಸಿನಲ್ಲಿದೆ.

ಇದನ್ನೂ ಓದಿ:   LIC: ಪಾಲಿಸಿದಾರರೇ ಗಮನಿಸಿ, ಫೆ. 28ರೊಳಗೆ ಈ ಕೆಲಸ ಮಾಡಿಕೊಳ್ಳಿ

ಇನ್ನು, ಮೆಟ್ರೋಪಾಲಿಟನ್‌ ನಗರಗಳಾದ ದೆಹಲಿ, ಮುಂಬೈ ಹಾಗೂ ಕೋಲ್ಕತ್ತದಲ್ಲಿ 65,000 ರೂ. ಆಗಿದೆ. ಒಟ್ಟಾರೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಮುಂದುವರಿದಿದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ.
Published by:Mahmadrafik K
First published: