Gold And Silver Price: ನಿನ್ನೆ ಏರಿಕೆಯಾಗಿದ್ದ ಚಿನ್ನ ಇಂದು ಇಳಿಕೆ, ಇತ್ತ ಮತ್ತಷ್ಟು ತುಟ್ಟಿಯಾದ ಬೆಳ್ಳಿ; ಇಲ್ಲಿದೆ ಇವತ್ತಿನ ದರ

ದೇಶದ ಇತರೆ ನಗರಗಳಾದ ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆ, ಕೊಯಮತ್ತೂರು, ಮಧುರೈನಲ್ಲಿ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 50 ಸಾವಿರದಿಂದ 51 ಸಾವಿರದ ಆಸುಪಾಸಿನಲ್ಲೇ ಇದೆ.

ಚಿನ್ನ

ಚಿನ್ನ

  • Share this:
Gold And Silver Price Today: ಕೇಂದ್ರ ಬಜೆಟ್ (Union Budget) ಬಳಿಕವೂ ಚಿನ್ನ ತನ್ನ ಏರಿಳಿತದ ಆಟವನ್ನು ಮುಂದುವರಿಸಿದೆ. ನಿನ್ನೆ ಏರಿಕೆಯಾಗಿದ್ದ ಚಿನ್ನ, ಇಂದು ದೇಶದಲ್ಲಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಸಹ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,300 ರೂ. ಇತ್ತು. ಇಂದು 300 ರೂ. ಇಳಿಕೆಯಾಗಿ 46,000 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 50,510 ರೂ. ಇತ್ತು. ಇಂದು 320 ರೂ. ಏರಿಕೆಯಾಗಿ 50,190 ರೂ. ಆಗಿದೆ. ಇನ್ನು, ಬೆಂಗಳೂರು ಸೇರಿ ದೇಶದ ವಿವಿಧ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ದರ ಎಷ್ಟಿದೆ ಎಂಬುದನ್ನು ವಿವರವಾಗಿ ನೋಡೋಣ..

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ..?

ನೀವು ಚಿನ್ನ ಖರೀದಿಸುವ ಪ್ಲ್ಯಾನ್‌ ಮಾಡುತ್ತಿದ್ದೀರಾ, ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 50,510 ರೂ. ಇತ್ತು.

ಇಂದು 320 ರೂ. ಇಳಿಕೆಯಾಗಿ 50,190 ರೂ. ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 46,300 ರೂ. ಇತ್ತು. ಇಂದು 300 ರೂ. ಇಳಿಕೆಯಾಗಿ 46,000 ರೂ. ಆಗಿದೆ. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ.

ಇದನ್ನೂ ಓದಿ:  PF ಖಾತೆದಾರರೆ ಈಗಲೇ ಎಚ್ಚೆತ್ತುಕೊಳ್ಳಿ.. ಈ ತಪ್ಪುಗಳನ್ನು ಮಾಡಿದ್ರೆ ಹಣ ಕಳೆದುಕೊಳ್ಳುತ್ತೀರಿ..!

ಚಿನ್ನದ ಮೇಲೆ ಹೆಚ್ಚಾಗುತ್ತಲೇ ಇರುತ್ತದೆ ಜನರ ಒಲವು

ದೇಶದಲ್ಲಿ ಆಭರಣ ಪ್ರಿಯರ ಜನಸಂಖ್ಯೆಗೇನೂ ಕೊರತೆ ಇಲ್ಲ. ಚಿನ್ನ ಖರೀದಿ, ವಹಿವಾಟು ಹೆಚ್ಚು ನಡೆಯುತ್ತಲೇ ಇರುತ್ತದೆ. ಇನ್ನು ಹಲವರು ಆಪತ್ಕಾಲದಲ್ಲಿ ಚಿನ್ನ ಅಡ ಇಡಲು ಅಥವಾ ಮಾರಲು ಬೇಕಾಗುತ್ತದೆಂದು ಸಹ ಅದರ ಮೇಲೆ ಹೂಡಿಕೆ ಮಾಡುತ್ತಾರೆ. ಚಿನ್ನವನ್ನು ಬಾಂಡ್‌ ರೂಪದಲ್ಲೂ ಖರೀದಿಸಲಾಗುತ್ತದೆ.

ದೇಶದ ಇತರೇ ನಗರಗಳಲ್ಲಿ ಎಷ್ಟಿದೆ ಬೆಲೆ?

ಇನ್ನು, ದೇಶದ ಇತರೆ ನಗರಗಳಾದ ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆ, ಕೊಯಮತ್ತೂರು, ಮಧುರೈನಲ್ಲಿ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 50 ಸಾವಿರದಿಂದ 51 ಸಾವಿರದ ಆಸುಪಾಸಿನಲ್ಲೇ ಇದೆ.

ಮಹಾನಗರಗಳಲ್ಲಿ ಬಂಗಾರದ ಬೆಲೆ ಎಷ್ಟಿದೆ?

ಈ ಮಧ್ಯೆ, ದೇಶದ ಮೆಟ್ರೋಪಾಲಿಟನ್‌ ನಗರಗಳಾದ ಚೆನ್ನೈನಲ್ಲಿ 51,630 ರೂ. ಇದ್ದರೆ, ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ ಹಾಗೂ ಕೋಲ್ಕತ್ತದಲ್ಲಿ 24 ಕ್ಯಾರೆಟ್‌ ಬಂಗಾರದ ಬೆಲೆ 50,190 ರೂ. ಆಗಿದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಶಿಕ್‌ನಲ್ಲೂ 24 ಕ್ಯಾರೆಟ್‌ ಚಿನ್ನದ ಬೆಲೆ 50 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಳ್ಳಿ ದರ:

ದೇಶದಲ್ಲಿಂದು ಚಿನ್ನದ ಬೆಲೆ ಇಳಿಕೆಯಾಗಿದ್ದರೂ ಬೆಳ್ಳಿ ದರ (Silver Rate) ಏರಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 63,800 ರೂ. ಇತ್ತು. ಇಂದು 400 ರೂ. ಏರಿಕೆಯಾಗಿ 63,400 ರೂ. ಆಗಿದೆ.

ಆದರೆ, ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆ 70,000 ರೂ. ಆಗಿದೆ. ಇಂದು 1,400 ರೂ ಏರಿಕೆಯಾಗಿದೆ. ಇದೇ ರೀತಿ ಚೆನ್ನೈ, ಹೈದರಾಬಾದ್, ಕೇರಳ, ವಿಜಯವಾಡ, ವಿಶಾಖಪಟ್ಟಣಂ, ಕೊಯಮತ್ತೂರು, ಮಧುರೈನಲ್ಲಿ ಸಹ 1 ಕೆಜಿ ಬೆಳ್ಳಿಯ ಬೆಲೆ 68 ಸಾವಿರದಿಂದ 70 ಸಾವಿರದ ಆಸುಪಾಸಿನಲ್ಲಿದೆ.

ಇದನ್ನೂ ಓದಿ:  LIC IPO: ಮೆಗಾ-ಐಪಿಒದಲ್ಲಿ ಹೂಡಿಕೆ ಮಾಡುವ ಮೊದಲು ನೀವು ತಿಳಿದುಕೊಳ್ಳಬೇಕಾದ 10 ಪ್ರಮುಖ ವಿಷಯಗಳು ಇಲ್ಲಿದೆ

ಇನ್ನು, ಮೆಟ್ರೋಪಾಲಿಟನ್‌ ನಗರಗಳಾದ ದೆಹಲಿ, ಮುಂಬೈ ಹಾಗೂ ಕೋಲ್ಕತ್ತದಲ್ಲಿ 64,000 ರೂ. ಆಗಿದೆ. ಒಟ್ಟಾರೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಮುಂದುವರಿದಿದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ.

ಬೆಲೆಯಲ್ಲಿ ಏರಿಕೆ-ಇಳಿಕೆ ಆಗಬಹುದು

ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.
Published by:Mahmadrafik K
First published: