Urgent Money: ಮನೆಯಲ್ಲಿದ್ರೆ ಚಿನ್ನ, Personal Loan ತೆಗೆದುಕೊಳ್ಳುವುದೇಕೆ?

ಬ್ಯಾಂಕುಗಳು ವೈಯಕ್ತಿಕ ಸಾಲಗಳ ಮೇಲೆ ಹೆಚ್ಚಿನ ಬಡ್ಡಿ ವಿಧಿಸುವ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈಗ ಪರ್ಸನಲ್ ಲೋನ್ ಗಿಂತ ಮಾರುಕಟ್ಟೆಯಲ್ಲಿ ಚಿನ್ನದ ಸಾಲವು ಅತ್ಯುತ್ತಮ ಆಯ್ಕೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೆಲವೊಮ್ಮೆ ತುರ್ತು ಸಂದರ್ಭಗಳಲ್ಲಿ ಪರ್ಸನಲ್ ಲೋನ್‌ (Personal Loan) ತೆಗೆದುಕೊಳ್ಳಲು ಹೆಚ್ಚಿನ ಜನರು ಮುಂದಾಗುತ್ತಾರೆ, ಬ್ಯಾಂಕುಗಳು ವೈಯಕ್ತಿಕ ಸಾಲಗಳ ಮೇಲೆ ಹೆಚ್ಚಿನ ಬಡ್ಡಿ ವಿಧಿಸುವ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈಗ ಪರ್ಸನಲ್ ಲೋನ್ ಗಿಂತ ಮಾರುಕಟ್ಟೆಯಲ್ಲಿ ಚಿನ್ನದ ಸಾಲವು ಅತ್ಯುತ್ತಮ ಆಯ್ಕೆಯಾಗಿದೆ. ಪ್ರಸ್ತುತ, ಗೃಹ ಸಾಲದ (Home Loan) ಮೇಲಿನ ಬಡ್ಡಿ ದರದಲ್ಲಿ (Rate Of Interest) ಚಿನ್ನದ ಸಾಲ (Gold Loan) ಲಭ್ಯವಿದೆ.  ವಾಸ್ತವವಾಗಿ, ಹಣದ ಹಠಾತ್ ಅಗತ್ಯವಿದ್ದಾಗ ಜನರು ಸಾಮಾನ್ಯವಾಗಿ ವೈಯಕ್ತಿಕ ಸಾಲದ ಆಯ್ಕೆಯನ್ನು ಆರಿಸಿಕೊಳ್ಳುತ್ತಾರೆ. ಆದರೆ ವೈಯಕ್ತಿಕ ಸಾಲ ಪಡೆಯುವುದು ಅಷ್ಟು ಸುಲಭವಲ್ಲ. ಮೊದಲನೆಯದಾಗಿ, ಅದರ ಹೆಚ್ಚಿನ ಬಡ್ಡಿದರವು ಸಾಲ ತೆಗೆದುಕೊಳ್ಳುವ ಬಗ್ಗೆ ಚಿಂತಿಸಬೇಕಿದೆ. ಕೆಲವೊಮ್ಮೆ  CIBIL ಸ್ಕೋರ್ ಸರಿಯಾಗಿಲ್ಲದಿದ್ದರೂ ಅಥವಾ ಕಡಿಮೆ ಆದಾಯ ಮತ್ತು ಇತರ ಕಾರಣಗಳಿಂದ ಸಾಲದ ಅರ್ಹತೆ ಇಲ್ಲದಿದ್ದರೂ ಅನೇಕ ಬಾರಿ ವೈಯಕ್ತಿಕ ಸಾಲವನ್ನು ಪಡೆಯುವುದು ಕಷ್ಟಕರವಾಗಿರುತ್ತದೆ.

ಕಡಿಮೆ ಬಡ್ಡಿಯಲ್ಲಿ ಸಿಗುವ ಚಿನ್ನದ ಸಾಲ  ಪರ್ಸನಲ್ ಲೋನ್ ಮೇಲಿನ  ಸಮಸ್ಯೆಯನ್ನು ಬಗೆಹರಿಸುತ್ತದೆ. ವಾಸ್ತವವಾಗಿ, ಚಿನ್ನದ ಸಾಲವು ಸುರಕ್ಷಿತ ಸಾಲದ ವರ್ಗದ ಅಡಿಯಲ್ಲಿ ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಚಿನ್ನದ ಸಾಲಕ್ಕೆ CIBIL ಸ್ಕೋರ್ ಮುಖ್ಯವಲ್ಲ. ಅಲ್ಲದೆ, ಇದು ವೈಯಕ್ತಿಕ ಸಾಲಗಳಿಗೆ ಹೋಲಿಸಿದರೆ ಸುಲಭವಾಗಿ ಮತ್ತು ಕಡಿಮೆ ಬಡ್ಡಿಯಲ್ಲಿ ಲಭ್ಯವಿದೆ. ಮೊದಲು ಬಡ್ಡಿದರಗಳ ಬಗ್ಗೆ ತಿಳಿದುಕೊಳ್ಳೋಣ. ಪ್ರಸ್ತುತ ಪರಿಸ್ಥಿತಿಯಲ್ಲಿ ಚಿನ್ನದ ಸಾಲಗಳು ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿದೆ.

ಇದನ್ನೂ ಓದಿ:  GPay, Paytm, PhonePe, BHIM ರಕ್ಷಣೆಗೆ ಈ ವಿಧಾನಗಳನ್ನು ಅನುಸರಿಸಿ

ಯಾವ ಬ್ಯಾಂಕ್ ನಲ್ಲಿ ಎಷ್ಟಿದೆ ಬಡ್ಡಿದರ?

ಅಗ್ಗದ ಚಿನ್ನದ ಸಾಲವು ಪ್ರಸ್ತುತ ಮನ್ನಪುರಂ ಮತ್ತು ಮುತ್ತೂಟ್ ಫೈನಾನ್ಸ್‌ನಿಂದ ಶೇಕಡಾ 6.90 ಕ್ಕೆ ಲಭ್ಯವಿದೆ, ಆದರೆ ಮುತ್ತೂಟ್ ಫೈನಾನ್ಸ್‌ನಿಂದ ವೈಯಕ್ತಿಕ ಸಾಲವು ಕನಿಷ್ಠ ಶೇಕಡಾ 14 ಕ್ಕೆ ಲಭ್ಯವಿರುತ್ತದೆ. ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ನಿಂದ ಚಿನ್ನದ ಸಾಲವು ಶೇಕಡಾ 7 ರಷ್ಟು ಮತ್ತು ಕೆನರಾ ಬ್ಯಾಂಕ್‌ನಿಂದ ಶೇಕಡಾ 7.35 ಕ್ಕೆ ಲಭ್ಯವಿರುತ್ತದೆ.

ಎಲ್ಲ ಬ್ಯಾಂಕುಗಳಲ್ಲಿ ಚಿನ್ನದ ಸಾಲ ಲಭ್ಯ

ಪ್ರತಿ ಬ್ಯಾಂಕ್‌ನಲ್ಲಿ ಚಿನ್ನದ ಸಾಲ ಲಭ್ಯವಿದೆ, ಆದರೆ ಎಸ್‌ಬಿಐ ಚಿನ್ನದ ಸಾಲವನ್ನು ಶೇಕಡಾ 7.5ಕ್ಕೆ  ನೀಡುತ್ತದೆ. ಆದರೆ ವೈಯಕ್ತಿಕ ಸಾಲಕ್ಕೆ ಶೇಕಡಾ 9.6 ರಿಂದ 13.85 ರ ಬಡ್ಡಿ ದರವನ್ನು ಪಾವತಿಸಬೇಕಾಗುತ್ತದೆ. PNB ಚಿನ್ನದ ಸಾಲವು ಶೇಕಡಾ 8.7 ಕ್ಕೆ ಲಭ್ಯವಿದ್ದರೆ, ವೈಯಕ್ತಿಕ ಸಾಲವು 8.9 ರಿಂದ 14.5 ಶೇಕಡಾ ಮತ್ತು ICICI ಯಿಂದ 9 ಶೇಕಡಾ ಚಿನ್ನದ ಸಾಲವು ಲಭ್ಯವಿದ್ದರೆ ಇಲ್ಲಿಂದ ವೈಯಕ್ತಿಕ ಸಾಲವು 10.50 ರಿಂದ 19 ಶೇಕಡಾ ವರೆಗೆ ಲಭ್ಯವಿದೆ.

ಚಿನ್ನದ ಸಾಲ ಪಡೆಯುವಾಗ ಈ ಅಂಶಗಳ ಮೇಲಿರಲಿ ಗಮನ ಇರಲಿ

ಚಿನ್ನದ ಸಾಲವನ್ನು ಪಡೆಯುವುದು ಸುಲಭವಲ್ಲ, ಆದರೆ ವೈಯಕ್ತಿಕ ಸಾಲಕ್ಕಿಂತ ಅಗ್ಗವಾಗಿದೆ ಎಂದು ಅರ್ಥಮಾಡಿಕೊಳ್ಳಬಹುದು. ಆದಾಗ್ಯೂ, ಚಿನ್ನದ ಸಾಲವು ಸಂಪೂರ್ಣವಾಗಿ ಲಾಭದಾಯಕವಾಗಿದೆ ಎಂದು ಅಲ್ಲ. ಇದು ಕೆಲವು ಮಿತಿಗಳನ್ನು ಹೊಂದಿದೆ, ಇದನ್ನು ಗ್ರಾಹಕರು ನೆನಪಿನಲ್ಲಿಟ್ಟುಕೊಳ್ಳಬೇಕು.

ಇದನ್ನೂ ಓದಿ:  PM Kisan Yojana: ಇನ್ನೂ ಯಾಕೆ ಜಮೆ ಆಗಿಲ್ಲ ರೈತರ ಖಾತೆಗೆ 10ನೇ ಕಂತು? ಅಕೌಂಟಿಗೆ ಹಣ ಯಾವಾಗ ಬರುತ್ತೆ?

ನಿಗದಿತ ಸಮಯದಲ್ಲಿ ಚಿನ್ನದ ಸಾಲವನ್ನು ಪಾವತಿಸದಿದ್ದಲ್ಲಿ, ಸಾಲ ನೀಡುವ ಕಂಪನಿಯು ಗ್ರಾಹಕರ ಚಿನ್ನವನ್ನು ಮಾರಾಟ ಮಾಡುವ ಹಕ್ಕನ್ನು ಹೊಂದಿರುತ್ತದೆ. ಚಿನ್ನದ ಬೆಲೆ ಕಡಿಮೆಯಾದಾಗ ಹೆಚ್ಚುವರಿ ಚಿನ್ನವನ್ನು ಗಿರವಿ ಇಡುವಂತೆ ಬ್ಯಾಂಕ್ ಅಥವಾ ಹಣಕಾಸು ಕಂಪನಿಯು ಗ್ರಾಹಕರನ್ನು ಕೇಳಬಹುದು.

ಚಿನ್ನದ ಆಭರಣಗಳ ಮೌಲ್ಯದ 90% ವರೆಗೆ ಸಾಲ ದೊರೆಯುತ್ತದೆ. ಚಿನ್ನದ ಸಾಲಕ್ಕಾಗಿ ಕನಿಷ್ಠ 18 ಕ್ಯಾರೆಟ್ ಶುದ್ಧ ಚಿನ್ನವನ್ನು ಒತ್ತೆ ಇಡಬೇಕು. ಬ್ಯಾಂಕ್‌ಗಳು ಅಥವಾ ಎನ್‌ಬಿಎಫ್‌ಸಿಗಳು ಚಿನ್ನದ ಪಟ್ಟಿಯನ್ನು ಒತ್ತೆ ಇಡುವುದಿಲ್ಲ. ಅವರು ಆಭರಣ ಮತ್ತು ಚಿನ್ನದ ನಾಣ್ಯಗಳ ಮೇಲೆ ಮಾತ್ರ ಸಾಲ ನೀಡುತ್ತಾರೆ.
Published by:Mahmadrafik K
First published: