Hallmark: 6 ಅಂಕಿಯ ಈ ಕೋಡ್ ಇಲ್ಲದ ಚಿನ್ನದ ವ್ಯಾಪಾರ ನಿಷೇಧ, ಏಪ್ರಿಲ್ 1ರಿಂದಲೇ ಜಾರಿ

ಚಿನ್ನ (ಸಾಂದರ್ಭಿಕ ಚಿತ್ರ)

ಚಿನ್ನ (ಸಾಂದರ್ಭಿಕ ಚಿತ್ರ)

ತಮ್ಮ ಬಳಿ ಇರುವ ಹಳೆಯ ಉತ್ಪನ್ನಗಳನ್ನು ಮಾರಾಟ ಮಾಡಲು ಚಿನ್ನಾಭರಣ ಮಾಲೀಕರಿಗೆ ಒಂದು ವರ್ಷ ಒಂಬತ್ತು ತಿಂಗಳು ಸರ್ಕಾರ ಅವಕಾಶ ನೀಡಿತ್ತು.

 • Trending Desk
 • 2-MIN READ
 • Last Updated :
 • Karnataka, India
 • Share this:

  ಚಿನ್ನ ಖರೀದಿ ಮಾಡಲು ಯೋಜಿಸುತ್ತಿದ್ದರೆ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಜಾರಿ ಮಾಡುತ್ತಿರುವ ಈ ಹೊಸ ನಿಯಮದ ಬಗ್ಗೆ ತಿಳ್ಕೋಬಿಡಿ. ಬಂಗಾರ ಅಂದಮೇಲೆ ಅದಕ್ಕೆ ಹಾಲ್‌ಮಾರ್ಕ್‌ (Hallmark) ಇರಲೇಬೇಕು. ಇಲ್ಲದಿದ್ದರೆ ಮಾನ್ಯವಾಗುವುದಿಲ್ಲ. ಈ ನಿಯಮವ್ನೇ ಮತ್ತಷ್ಟು ಕಠಿಣವಾಗಿ ಜಾರಿಗೆ ತರಲು ನಿರ್ಧರಿಸಿರುವ ಸಚಿವಾಲಯ ಏಪ್ರಿಲ್ 1 ರಿಂದ ಹಾಲ್‌ಮಾರ್ಕ್‌ ನಂಬರ್‌ ಇಲ್ಲದೆ ಚಿನ್ನಾಭರಣ (Gold Jewellery)  ಮಾರಾಟ ಮಾಡುವಂತಿಲ್ಲ ಎಂಬ ಹೊಸ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ.


  ಚಿನ್ನದ ಹಾಲ್‌ಮಾರ್ಕ್‌: ಏಪ್ರಿಲ್ 1 ರಿಂದ ನಿಯಮ ಬದಲಾವಣೆ
  ಹಾಲ್‌ಮಾರ್ಕ್ ವಿಶಿಷ್ಟ ಗುರುತಿನ (HUID) ಸಂಖ್ಯೆ ಇಲ್ಲದೆ ಚಿನ್ನಾಭರಣ ಮತ್ತು ಚಿನ್ನದ ಕಲಾಕೃತಿಗಳ ಮಾರಾಟವನ್ನು ಏಪ್ರಿಲ್ 1 ರಿಂದ ದೇಶದಲ್ಲಿ ಅನುಮತಿಸಲಾಗುವುದಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.


  ಚಿನ್ನಾಭರಣ ಮಾಲೀಕರಿಗೆ ಕಾಲಾವಕಾಶ ನೀಡಿದ್ದ ಸರ್ಕಾರ
  2021ರ ಜುಲೈ 1ರಲ್ಲೇ ಎಚ್‌ಯುಐಡಿ ನಂಬರ್ ಪರಿಚಯಿಸಲಾಗಿತ್ತು. ನಾಲ್ಕು ಸಂಖ್ಯೆಯ ಹಾಲ್​ಮಾರ್ಕ್ ಇರುವ ಚಿನ್ನಾಭರಣ ಮಾರಾಟಕ್ಕೆ, ತಮ್ಮ ಬಳಿ ಇರುವ ಹಳೆಯ ಉತ್ಪನ್ನಗಳನ್ನು ಮಾರಾಟ ಮಾಡಲು ಚಿನ್ನಾಭರಣ ಮಾಲೀಕರಿಗೆ ಒಂದು ವರ್ಷ ಒಂಬತ್ತು ತಿಂಗಳು ಸರ್ಕಾರ ಅವಕಾಶ ನೀಡಿತ್ತು. ಪ್ರಸ್ತುತ ಈ ನಿಯಮ 2023ರ ಏ.1ರಿಂದ ಕಡ್ಡಾಯವಾಗಿ ಜಾರಿಗೆ ಬರುತ್ತಿದೆ.


  ಗೊಂದಲ ತಪ್ಪಿಸಲು ಹೊಸ ಕ್ರಮ
  ಈ ಕ್ರಮವು ಗ್ರಾಹಕರನ್ನು ರಕ್ಷಿಸಲು ಮತ್ತು ಗುರುತಿಸುವಿಕೆ ಮತ್ತು ಗುಣಮಟ್ಟದ ಭರವಸೆಯೊಂದಿಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳ ಖರೀದಿಯಲ್ಲಿ ಅವರ ವಿಶ್ವಾಸವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಹಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನಿಧಿ ಖರೆ, "ಗ್ರಾಹಕ ಹಿತಾಸಕ್ತಿಯಿಂದ 2023ರ ಮಾರ್ಚ್ 31 ರ ನಂತರ ಅಂದರೆ ಏಪ್ರಿಲ್‌ 1 ರಿಂದ HUID ಇಲ್ಲದೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳು ಮತ್ತು ಚಿನ್ನದ ಕಲಾಕೃತಿಗಳ ಮಾರಾಟವನ್ನು ಅನುಮತಿಸಲಾಗುವುದಿಲ್ಲ ಎಂದು ನಿರ್ಧರಿಸಲಾಗಿದೆ" ಎಂದು ಸಚಿವಾಲಯದ ಹೊಸ ನಿಯಮದ ಬಗ್ಗೆ ತಿಳಿಸಿದರು.


  ಇನ್ಮುಂದೆ 6-ಅಂಕಿಯ ಹಾಲ್‌ಮಾರ್ಕ್‌ ಮಾನ್ಯ
  "ಹಿಂದೆ, HUID ನಾಲ್ಕು ಅಂಕೆಗಳಾಗಿತ್ತು. ಮಾರ್ಚ್ 31 ರ ನಂತರ 6-ಅಂಕಿಯ ಆಲ್ಫಾನ್ಯೂಮರಿಕ್ ಕೋಡ್ ಅನ್ನು ಮಾತ್ರ ಅನುಮತಿಸಲಾಗುವುದು. ಈಗ 6-ಅಂಕಿಯ ಹಾಲ್‌ಮಾರ್ಕ್‌ ಮಾತ್ರ ಮಾರಾಟಕ್ಕೆ ಮಾನ್ಯವಾಗಿರುತ್ತದೆ" ಎಂದು ಖರೆ ತಿಳಿಸಿದರು.


  2022-23ರ ಅವಧಿಯಲ್ಲಿ ಇಲ್ಲಿಯವರೆಗೆ 10.56 ಕೋಟಿ ಚಿನ್ನಾಭರಣ ವಸ್ತುಗಳನ್ನು ಹಾಲ್‌ಮಾರ್ಕ್ ಮಾಡಲಾಗಿದೆ ಎಂದು ಖರೆ ಹೇಳಿದ್ದಾರೆ. 2022-23ರಲ್ಲಿ ಆಪರೇಟಿವ್ ಬಿಐಎಸ್ ನೋಂದಾಯಿತ ಆಭರಣಗಳ ಸಂಖ್ಯೆ 1,53,718 ರಿಂದ ಹೆಚ್ಚಾಗಿದೆ ಎಂದು ಅವರು ಹೇಳಿದರು.


  ಮೈಕ್ರೋ ಸ್ಕೇಲ್ ಯೂನಿಟ್‌ಗಳಿಗೆ ಪ್ರಮಾಣೀಕರಣ/ಕನಿಷ್ಠ ಗುರುತು ಶುಲ್ಕದ ಮೇಲೆ ಶೇಕಡಾ 80 ರಷ್ಟು ರಿಯಾಯಿತಿ ನೀಡಲು ಬಿಐಎಸ್ ನಿರ್ಧರಿಸಿದೆ ಎಂದು ಖರೆ ಮಾಹಿತಿ ನೀಡಿದರು. ಹೆಚ್ಚುವರಿಯಾಗಿ, ಈಶಾನ್ಯ ರಾಜ್ಯಗಳಲ್ಲಿರುವ ಘಟಕಗಳಿಗೆ ಪ್ರಮಾಣೀಕರಣದ ಮೇಲೆ ಶೇಕಡಾ 10 ರಷ್ಟು ರಿಯಾಯಿತಿಯನ್ನು ಸಹ ಒದಗಿಸಲಾಗಿದೆ ಎಂದು ಅವರು ಹೇಳಿದರು.


  ಇದನ್ನೂ ಓದಿ: Money: 50 ರೂಪಾಯಿ ಉಳಿಸಿ 30 ಲಕ್ಷ ನಿಮ್ಮದಾಗಿಸಿಕೊಳ್ಳಿ


  ಇದಕ್ಕೂ ಮುನ್ನ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ಅವರು ಬಿಐಎಸ್ ಚಟುವಟಿಕೆಗಳ ಪರಿಶೀಲನಾ ಸಭೆಯ ನಡೆಸಿದ್ದರು. ಇದರಲ್ಲಿ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್, ಹೆಚ್ಚುವರಿ ಕಾರ್ಯದರ್ಶಿ ನಿಧಿ ಖರೆ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಅಲ್ಲಿಯೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.  ಏನಿದು ಹಾಲ್‌ಮಾರ್ಕ್‌ ಯೂನಿಕ್‌ ಐಡೆಂಟಿಫಿಕೇಶನ್‌?
  HUID - ಹಾಲ್‌ಮಾರ್ಕ್‌ ಯೂನಿಕ್‌ ಐಡೆಂಟಿಫಿಕೇಶನ್‌ ಸಂಖ್ಯೆಯು ಆಭರಣದ ಶುದ್ಧತೆಯನ್ನು ಗುರುತಿಸುತ್ತದೆ. ಇದೊಂದು ಸಂಖ್ಯೆಗಳು ಮತ್ತು ಅಕ್ಷರಗಳನ್ನು ಒಳಗೊಂಡಿರುವ ಒಂದು ಅನನ್ಯ 6-ಅಂಕಿಯ ಆಲ್ಫಾನ್ಯೂಮರಿಕ್ ಕೋಡ್ ಆಗಿದೆ. ಸಚಿವಾಲಯದ ಪ್ರಕಾರ, ಹಾಲ್‌ಮಾರ್ಕಿಂಗ್ ಸಮಯದಲ್ಲಿ ಪ್ರತಿ ಆಭರಣಕ್ಕೂ HUID ನೀಡಲಾಗುವುದು ಮತ್ತು ಇದು ಪ್ರತಿಯೊಂದು ಆಭರಣಕ್ಕೂ ವಿಶಿಷ್ಟವಾಗಿದೆ. ಈ ಅನನ್ಯ ಸಂಖ್ಯೆಯನ್ನು ಅಸ್ಸೇಯಿಂಗ್ ಮತ್ತು ಹಾಲ್‌ಮಾರ್ಕಿಂಗ್ ಕೇಂದ್ರಗಳಲ್ಲಿನ ಆಭರಣಗಳ ಮೇಲೆ ಹಸ್ತಚಾಲಿತವಾಗಿ ಸ್ಟ್ಯಾಂಪ್ ಮಾಡಲಾಗುತ್ತದೆ.


  ಇದನ್ನೂ ಓದಿ: Money: ಆರ್ಥಿಕ ವರ್ಷ ಮತ್ತು ಮೌಲ್ಯಮಾಪನ ವರ್ಷದ ಬಗ್ಗೆ ಗೊತ್ತಾ?


  ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಮಾರ್ಗಸೂಚಿಗಳ ಪ್ರಕಾರ, BIS ಹಾಲ್‌ಮಾರ್ಕ್ 3 ಚಿಹ್ನೆಗಳನ್ನು ಒಳಗೊಂಡಿದೆ. BIS ಲೋಗೋ, ಶುದ್ಧತೆ/ಉತ್ತಮತೆ ಗ್ರೇಡ್, ಮತ್ತು ಆರು-ಅಂಕಿಯ ಆಲ್ಫಾನ್ಯೂಮರಿಕ್ ಕೋಡ್, ಇದನ್ನು HUID ಎಂದು ಕರೆಯಲಾಗುತ್ತದೆ.

  Published by:ಗುರುಗಣೇಶ ಡಬ್ಗುಳಿ
  First published: