Gold Price Hike: ಖರೀದಿದಾರರಿಗೆ ಶಾಕ್ ನೀಡಿದ ಬಂಗಾರದ ಬೆಲೆ! ಮತ್ತೆ ಚಿನ್ನದ ಆಮದು ಸುಂಕ 5% ಹೆಚ್ಚಳ

ಕೇಂದ್ರವು ಭಾರತದ ರೂಪಾಯಿ ಕುಸಿತದ ನಡುವೆ ಆಮದುಗಳನ್ನು ತಡೆಯುವ ಪ್ರಯತ್ನದಲ್ಲಿ ಚಿನ್ನದ ಮೇಲಿನ ಮೂಲ ಆಮದು ತೆರಿಗೆಯನ್ನು ಶೇಕಡಾ 7.5 ರಿಂದ ಶೇಕಡಾ 12.5 ಕ್ಕೆ ಹೆಚ್ಚಿಸಿದೆ. ಮುಂಬರುವ ತಿಂಗಳುಗಳಲ್ಲಿ ಚಿನ್ನದ ಬೆಲೆ ಮತ್ತು ಇದು ನಿಮ್ಮ ಹೂಡಿಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಯುವ ಸಮಯ ಇದಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೇಂದ್ರವು ಭಾರತದ ರೂಪಾಯಿ (Indian Currency) ಕುಸಿತದ ನಡುವೆ ಆಮದುಗಳನ್ನು ತಡೆಯುವ ಪ್ರಯತ್ನದಲ್ಲಿ ಚಿನ್ನದ ಮೇಲಿನ ಮೂಲ ಆಮದು ತೆರಿಗೆಯನ್ನು ಶೇಕಡಾ 7.5 ರಿಂದ ಶೇಕಡಾ 12.5 ಕ್ಕೆ ಹೆಚ್ಚಿಸಿದೆ. ಮುಂಬರುವ ತಿಂಗಳುಗಳಲ್ಲಿ ಚಿನ್ನದ ಬೆಲೆ (Gold Price) ಮತ್ತು ಇದು ನಿಮ್ಮ ಹೂಡಿಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಯುವ ಸಮಯ ಇದಾಗಿದೆ. ಭಾರತವು ಚಿನ್ನದ ಮೇಲಿನ ಮೂಲ ಆಮದು ಸುಂಕವನ್ನು ಶೇಕಡಾ 7.5 ರಿಂದ ಶೇಕಡಾ 12.5 ಕ್ಕೆ ಹೆಚ್ಚಿಸಿದೆ ಎಂದು ಕೇಂದ್ರ ಸರ್ಕಾರ (Central Government) ಜೂನ್ 30 ರಂದು ಗೆಜೆಟೆಡ್ ಅಧಿಸೂಚನೆಯಲ್ಲಿ ತಿಳಿಸಿದೆ. 

ಕಳೆದ ತಿಂಗಳು ದೇಶದ ವ್ಯಾಪಾರ ಸ್ಥಿತಿಯ ಕೊರತೆಯು ದಾಖಲೆಯ ಗರಿಷ್ಠ ಮಟ್ಟಕ್ಕೆ ವಿಸ್ತರಿಸಿದ ನಂತರ ಮತ್ತು ರೂಪಾಯಿ ಮೌಲ್ಯವು ಕುಸಿದ ನಂತರ ಈ ನಿರ್ಧಾರಕ್ಕೆ ಬಂದಿದೆ.  "ಸುಂಕವನ್ನು ಹೆಚ್ಚಿಸುವ ನಿರ್ಧಾರವು ಎರಡು ಪಟ್ಟು ಹೆಚ್ಚು ಆಗಿತ್ತು, ಇದು ಪೆಟ್ರೋಲಿಯಂ ತೆರಿಗೆಯಿಂದ ಉಂಟಾಗುವ ಆದಾಯವನ್ನು ಸರಿದೂಗಿಸುವುದು ಮತ್ತು ಚಾಲ್ತಿ ಖಾತೆಯ ಕೊರತೆಯನ್ನು ಮ್ಯಾನೇಜ್ ಮಾಡುವ ಪ್ರಯತ್ನವಾಗಿದೆ" ಎಂದು ಟ್ರೇಡ್‌ಬುಲ್ಸ್ ಸೆಕ್ಯುರಿಟೀಸ್‌ನ ಹಿರಿಯ ಸರಕು / ಕರೆನ್ಸಿ ಸಂಶೋಧನಾ ವಿಶ್ಲೇಷಕ ಭಾವಿಕ್ ಪಟೇಲ್ ವಿವರಿಸಿದರು.

ಸರ್ಕಾರ ಚಿನ್ನದ ಮೇಲಿನ ಆಮದು ಸುಂಕವನ್ನು ಏಕೆ ಹೆಚ್ಚಿಸಿದೆ?
ಭಾರತದ ವ್ಯಾಪಾರ ಕೊರತೆಯು ಒಂದು ವರ್ಷದಲ್ಲಿ $ 6.53 ಶತಕೋಟಿಯಿಂದ $ 24.29 ಶತಕೋಟಿಗೆ ಏರಿದೆ ಎಂದು ಸರ್ಕಾರವು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ತಿಳಿದುಬಂದಿದೆ. ಪ್ರಸ್ತುತ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲಿ ವ್ಯಾಪಾರ ಕೊರತೆಯು ಕಳೆದ ವರ್ಷ ಇದೇ ಅವಧಿಯಲ್ಲಿ $21.82 ಶತಕೋಟಿಯಿಂದ $44.69 ಶತಕೋಟಿಗೆ ವಿಸ್ತರಿಸಿದೆ ಎಂದು ಹೇಳಬಹುದು. ದೇಶದಲ್ಲಿ ಹೆಚ್ಚುತ್ತಿರುವ ವ್ಯಾಪಾರ ಅಂತರ ಮತ್ತು ವಿದೇಶಿ ನಿಧಿಗಳ ನಿರಂತರ ಹೊರಹರಿವು ಶುಕ್ರವಾರ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯವನ್ನು ರೂ. 79.12 ಕ್ಕೆ ಕುಸಿಯುವಂತೆ ಮಾಡಿದೆ.

ಇದನ್ನೂ ಓದಿ:  McDonald's: ಮೆಕ್‌ಡೊನಾಲ್ಡ್ಸ್ ಇಂಡಿಯಾ ಕಂಪನಿಯ ಹೊಸ ಮೈಲಿಗಲ್ಲು! ಇಲ್ಲಿದೆ ವಿವರ

ಚೀನಾದ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕವಾಗಿದೆ. ದೇಶದಲ್ಲಿ ಹೆಚ್ಚಿದ ಚಿನ್ನದ ಬೇಡಿಕೆಯನ್ನು ಆಮದುಗಳ ಮೂಲಕ ಪೂರೈಸುತ್ತದೆ ಮತ್ತು ಇದು ಹೆಚ್ಚಾಗಿ ಆಭರಣ ಉದ್ಯಮದಿಂದ ನಡೆಸಲ್ಪಡುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮೇ ತಿಂಗಳಲ್ಲಿ ಚಿನ್ನದ ಆಮದು ಸುಮಾರು ಒಂಬತ್ತು ಪಟ್ಟು ಏರಿಕೆಯಾಗಿ 7.7 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ಅಂಕಿ-ಅಂಶಗಳಿಂದ ತಿಳಿದು ಬರುತ್ತದೆ. ಹೆಚ್ಚುತ್ತಿರುವ ವ್ಯಾಪಾರದಿಂದ ಮತ್ತು ರೂಪಾಯಿಯ ಮೌಲ್ಯ ಕುಸಿತದಿಂದ ಚಿನ್ನದ ಆಮದನ್ನು ತಡೆಯಲು, ಕೇಂದ್ರ ಸರ್ಕಾರವು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಂಡಿತು.

ಭಾರತವು ಪ್ರಸ್ತುತ ರೂಪಾಯಿಯ ಮೌಲ್ಯ ಕುಸಿತ ಮತ್ತು ಇತರ ಸ್ಥೂಲ ಆರ್ಥಿಕ ಅಂಶಗಳಿಂದ ಹೆಚ್ಚಿನ ಚಾಲ್ತಿ ಖಾತೆ ಮತ್ತು ವ್ಯಾಪಾರದಲ್ಲಿ ಕೊರತೆಯನ್ನು ಎದುರಿಸುತ್ತಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ, ಚಿನ್ನದ ಬೇಡಿಕೆಯ ಹೆಚ್ಚಳವು ಅಗತ್ಯಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಹೇಳಬಹುದು. ಆಮದನ್ನು ತಡೆಯಲು ಸರ್ಕಾರವು ಚಿನ್ನದ ಬೆಲೆಯನ್ನು ಹೆಚ್ಚಿಸಲು ತೆರಿಗೆಯನ್ನು ಕೂಡ ಹೆಚ್ಚಿಸಿದೆ. ಇದರ ನಂತರ, ಕಳೆದ ವರ್ಷ ಕೇಂದ್ರವು ದೇಶೀಯ ಮಾರುಕಟ್ಟೆಯನ್ನು ಬಲಪಡಿಸಲು ಆಮದು ತೆರಿಗೆಯನ್ನು ಶೇಕಡಾ 7.5 ಕ್ಕೆ ಕಡಿತಗೊಳಿಸಿತ್ತು, ಆದ್ದರಿಂದ ಸಮತೋಲನವನ್ನು ಕಾಪಾಡಿಕೊಳ್ಳಲು ಇದು ಒಂದು ರೀತಿಯ ನಡೆಯಾಗಿದೆ ಎಂದು ಹೇಳಬಹುದು. ಈ ಏರಿಕೆಯು ಸ್ಥಳೀಯ ಮಾರುಕಟ್ಟೆಗಳಲ್ಲಿ ಚಿನ್ನದ ದರವನ್ನು ಹೆಚ್ಚಿಸಲಿದೆ ಎಂದು ಶೇರ್ ಇಂಡಿಯಾದ ಉಪಾಧ್ಯಕ್ಷ ಮತ್ತು ಸಂಶೋಧನಾ ಮುಖ್ಯಸ್ಥ ರವಿ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ:  Stock Market: 1 ಲಕ್ಷಕ್ಕೆ 90 ಲಕ್ಷ ಲಾಭ! ಈ ಷೇರು ಖರೀದಿಸಿದ್ದವರು ಒಂದೇ ವರ್ಷದಲ್ಲಿ ಲಕ್ಷಾಧಿಪತಿಗಳು

ಚಿನ್ನದ ಬೆಲೆ 10 ಗ್ರಾಂಗೆ 2,000 ರೂ ಹೆಚ್ಚಳ: ತಜ್ಞರು ಏನು ಹೇಳ್ತಾರೆ?
"ದೇಶದಲ್ಲಿ ಚಿನ್ನದ ಬೇಡಿಕೆಯನ್ನು ಪೂರೈಸಲು ನಾವು ಚಿನ್ನವನ್ನು ಹೆಚ್ಚು ಆಮದು ಮಾಡಿಕೊಳ್ಳುತ್ತೇವೆ ಎಂಬ ಅಂಶವನ್ನು ಪರಿಗಣಿಸಿದರೆ, ಇದು ದೇಶೀಯ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಂಗೆ ಸುಮಾರು 2,000 ರೂ.ಗಳ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ" ಎಂದು ಸಚ್‌ದೇವ ನ್ಯೂಸ್ 18. ಕಾಮ್ ಗೆ ತಿಳಿಸಿದ್ದಾರೆ.
Published by:Ashwini Prabhu
First published: