Gold and Silver Price, March 20, 2022: ಕಳೆದ ಎರಡು ಮೂರು ದಿನಗಳಿಂದ ಚಿನ್ನ (Gold) ಹಾಗೂ ಬೆಳ್ಳಿಯ (Silver) ಬೆಲೆಯಲ್ಲಿ (Price) ಇಳಿಕೆ ಆಗುತ್ತಿತ್ತು. ಆದರೆ ನಿನ್ನೆ ಇಂದು 24 ಕ್ಯಾರೆಟ್ (24 carat ) ಚಿನ್ನದ ಬೆಲೆಯಲ್ಲಿ 10 ರೂಪಾಯಿಗಳಷ್ಟು ಏರಿಕೆಯಾಗಿತ್ತು 22 ಕ್ಯಾರೆಟ್ (22 carat) ಚಿನ್ನದ ಬೆಲೆಯಲ್ಲಿ ಯಾವುದೇ ಏರಿಳಿತವಾಗಿರಲಿಲ್ಲ. ಆದರೆ ಇಂದು ವೀಕೆಂಡ್ (Weekend) ಅಂತ ಚಿನ್ನ ಖರೀದಿಸುವ ಪ್ಲಾನ್ (Plan) ಮಾಡಿದವರಿಗೆ ಇಲ್ಲಿದೆ 'ಚಿನ್ನ'ದಂತಾ ಸುದ್ದಿ! ಅದೇನಪ್ಪಾ ಅಂದ್ರೆ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಇನ್ನು ಕಳೆದ ವಾರದಿಂದ ಗಗನಕ್ಕೇರಿದ್ದ ಬೆಳ್ಳಿ ಬೆಲೆಯಲ್ಲೂ ಕೂಡ ಕುಸಿತವಾಗಿದೆ. ಇಂದು ಸಿಲ್ವರ್ ರೇಟ್ 1,000 ರೂಪಾಯಿ ಕಡಿಮೆಯಾಗಿದೆ. ಚಿನ್ನ ಹಾಗೂ ಬೆಳ್ಳಿ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.
ಇಂದು ಎಷ್ಟಿದೆ ಚಿನ್ನದ ಬೆಲೆ?
ಚಿನ್ನದ ಬೆಲೆ ಇಂದು ಕುಸಿತ ಕಂಡಿದೆ. ಇಂದು 10 ಗ್ರಾಂ ಚಿನ್ನಕ್ಕೆ ಕೇವಲ 170 ರೂ. ಕುಸಿತವಾಗಿದೆ. ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 170 ರೂ. ಇಳಿಕೆಯಾಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 150 ರೂ. ಕುಸಿತವಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,450 ರೂ. ಇದ್ದುದು, ಇಂದು 47,300 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,770 ರೂಪಾಯಿ ಇತ್ತು. ಇಂದು ವೀಕೆಂಡ್ನಲ್ಲಿ 51,600 ರೂ. ಆಗಿದೆ.
ಬೆಂಗಳೂರಿನಲ್ಲಿ ಇಂದು ಎಷ್ಟಿದೆ ಚಿನ್ನದ ಬೆಲೆ?
ಇಂದು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,300 ರೂಪಾಯಿ ಆಗಿದೆ. ಇನ್ನು ಮಂಗಳೂರಿನಲ್ಲಿ 47,300 ರೂಪಾಯಿ ಆಗಿದ್ದರೆ, ಮೈಸೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,300 ರೂಪಾಯಿ ಇದೆ.
ಇನ್ನು ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಇಂದು 51,600 ರೂಪಾಯಿ ಇದೆ. ಮತ್ತೊಂದೆಡೆ ಮಂಗಳೂರಿನಲ್ಲಿ 51,600 ರೂಪಾಯಿ ಇದ್ದರೆ, ಅದೇ ಮೈಸೂರಿನಲ್ಲೂ ಸಹ 51,600 ರೂಪಾಯಿ ಬೆಲೆ ಇದೆ.
ಇದನ್ನೂ ಓದಿ: Business: ರಿಲಯನ್ಸ್ ತೆಕ್ಕೆಗೆ ಲಿಥಿಯಂ ವರ್ಕ್ಸ್: 61 ಮಿಲಿಯನ್ ಡಾಲರ್ ಮೌಲ್ಯದ ಆಸ್ತಿ ಸ್ವಾಧೀನಪಡಿಸಿಕೊಂಡ ರಿಲಯನ್ಸ್ ನ್ಯೂ ಎನರ್ಜಿ..!
ಇತರೇ ಮಹಾನಗರಗಳಲ್ಲಿ ಎಷ್ಟಿದೆ ಗೋಲ್ಡ್ ರೇಟ್?
ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಚೆನ್ನೈ- 48,050 ರೂ., ಮುಂಬೈ- 47,300 ರೂ, ದೆಹಲಿ- 47,300 ರೂ, ಕೊಲ್ಕತ್ತಾ- 47,300 ರೂ, , ಹೈದರಾಬಾದ್- 47,300 ರೂ, ಕೇರಳ- 47,300 ರೂಪಾಯಿ ಹಾಗೂ ಪುಣೆಯಲ್ಲಿ 47,400 ರೂಪಾಯಿ ಇದೆ.
ಇನ್ನು ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ ಅಂತ ನೋಡೋದಾದ್ರೆ, ಚೆನ್ನೈ- 52,420 ರೂ, ಮುಂಬೈ- 51,600 ರೂ, ದೆಹಲಿ- 51,600 ರೂ, ಕೊಲ್ಕತ್ತಾ- 51,600 ರೂ, ಹೈದರಾಬಾದ್- 51,600 ರೂ, ಕೇರಳ- 51,600 ರೂಪಾಯಿ ಹಾಗೂ ಪುಣೆಯಲ್ಲಿ 51,700 ರೂಪಾಯಿ ಇದೆ.
ವೀಕೆಂಡ್ನಲ್ಲಿ ಎಷ್ಟಿದೆ ಸಿಲ್ವರ್ ರೇಟ್?
ಕಳೆದ ವಾರದಿಂದ ಗಗನಕ್ಕೇರಿದ್ದ ಬೆಳ್ಳಿ ಬೆಲೆ ಇಂದು ಕುಸಿತವಾಗಿದೆ. ಇಂದು ಸಿಲ್ವರ್ ಪ್ರೈಸ್ 1,000 ರೂಪಾಯಿ ಕಡಿಮೆ ಆಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 69,000 ರೂ. ಇದ್ದುದು, ಇಂದು 68,000 ರೂ. ಆಗಿದೆ.
ರಾಜ್ಯದಲ್ಲಿ ಎಷ್ಟಿದೆ ಬೆಳ್ಳಿ ಬೆಲೆ?
ವೀಕೆಂಡ್ ಆದ ಇಂದು ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 72,300 ರೂಪಾಯಿ ಇದೆ. ಇನ್ನು ಮೈಸೂರಿನಲ್ಲಿ 72,300 ರೂಪಾಯಿ ಇದ್ದರೆ, ಮಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 72,300 ರೂಪಾಯಿಯಷ್ಟಾಗಿದೆ.
ಇತರೇ ನಗರಗಳಲ್ಲಿ ಎಷ್ಟಿದೆ ಸಿಲ್ವರ್ ರೇಟ್?
ಇನ್ನು ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ ಇಂದು ಎಷ್ಟಿದೆ ನೋಡೋಣ. ಮುಂಬೈ- 68,000 ರೂ, ಚೆನ್ನೈ- 72,300 ರೂ, ದೆಹಲಿ- 68,000 ರೂ, ಹೈದರಾಬಾದ್- 72,300 ರೂ ಹಾಗೂ ಕೊಲ್ಕತ್ತಾ- 68,000 ರೂಪಾಯಿ ಇದೆ.
ಇದನ್ನೂ ಓದಿ: Investment For Children: ಮಕ್ಕಳ ಭವಿಷ್ಯಕ್ಕಾಗಿ ಹಣ ಕೂಡಿಡುವ ಪೋಷಕರೇ ಮೊದಲು ಇವುಗಳ ಬಗ್ಗೆ ತಿಳಿಯಿರಿ..
ಒಟ್ಟಾರೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಮುಂದುವರಿದಿದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ