ಬೆಂಗಳೂರು: ಯುಗಾದಿ ಹಬ್ಬ, (Ugadi Festival) ಹಬ್ಬಕ್ಕೆ ಏನಾದರೂ ಬೆಲೆಬಾಳುವ ವಸ್ತುವನ್ನು ಖರೀದಿಸಬೇಕು ಅಂತಿದ್ದರೆ ಅನುಮಾನವಿಲ್ಲದೇ ಬಂಗಾರದಂತಹ ವಸ್ತುಗಳನ್ನೇ (Gold Rate) ಖರೀದಿ ಮಾಡಿ. ಏಕೆಂದರೆ ಬಂಗಾರ ಇಂದು ಕೇವಲ ಆಭರಣವಾಗಿರದೇ (Silver Rate) ಉಳಿತಾಯವಾಗಿಯೂ ಇದೆ. ಹೀಗೆ ಹಬ್ಬದ ಸಂಭ್ರಮದಲ್ಲಿ ತೆಗೆದುಕೊಂಡ ಇಂತಹ ಚಿನ್ನದ ವಸ್ತುಗಳು ಭವಿಷ್ಯದಲ್ಲಿ ನಿಮ್ಮ ಕೈಹಿಡಿಯಬಹುದು.
ಯುಗಾದಿಯ ಸಿಹಿ-ಕಹಿ ಅಂತೇ ಜೀವನದಲ್ಲೂ ಆರ್ಥಿಕ ಸಂಕಷ್ಟಗಳು ಎದುರಾಗಬಹುದು. ಅದಕ್ಕಾಗಿ ಹಣದ ಉಳಿತಾಯವಿಲ್ಲದಿದ್ದರೂ ಚಿನ್ನದಂತಹ ಉಳಿತಾಯಗಳು ಇರಲೇಬೇಕು. ಚಿನ್ನದಿಂದ ಉಳಿತಾಯವನ್ನು ಪ್ರಾರಂಭಿಸಲು ನೀವು ಆರ್ಥಿಕ ಪರಿಣತರಾಗಿರಬೇಕಿಲ್ಲ, ಬದಲಿಗೆ ಆಗಾಗ ಒಂದಿಷ್ಟು ಚಿನ್ನ ಮಾಡಿಸಿಟ್ಟುಕೊಂಡರೆ ಮುಗಿಯಿತು.
ಅಂದ ಹಾಗೆ ಹಬ್ಬದ ದಿನದಂದು ನೀವೂ ಸಹ ಬಂಗಾರ ತೆಗೆದುಕೊಳ್ಳಬೇಕು, ಇಲ್ಲಾ ಖರೀದಿ ಮಾಡಿ ನಿಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ನೀಡಬೇಕು ಅಂತಾ ಬಯಸಿದರೆ, ಇಂದಿನ ಚಿನ್ನದ ಬೆಲೆಯನ್ನು ತಿಳಿದು ಖರೀದಿಗೆ ಮುಂದಾಗಿ.
ಇದನ್ನೂ ಓದಿ: Gold Rate Today: ಆಭರಣ ಪ್ರಿಯರಿಗೆ ಕಹಿ ಸುದ್ದಿ! ಇಂದಿನ ಚಿನ್ನದ ಬೆಲೆ ನೋಡಿದ್ರೆ ಶಾಕ್ ಆಗ್ತೀರಾ!
ಎಷ್ಟಿದೆ ಇಂದು ಬಂಗಾರದ ರೇಟ್?
ಬಂಗಾರದ ಬೆಲೆ ಕಳೆದ ಮೂರು ದಿನಗಳಿಂದ ಗಗನಕ್ಕೇರುತ್ತಲೇ ಇತ್ತು. ಆದರೆ ನಿನ್ನೆ ಬೆಲೆ ಏರಿಕೆಯ ಓಟಕ್ಕೆ ಬ್ರೇಕ್ ಬಿದ್ದಿತ್ತು. ಆದರೆ ಹಬ್ಬದ ದಿನ ಬಂಗಾರ ಪ್ರಿಯರಿಗೆ ನಿರಾಶೆಯಾಗಿದ್ದು, ಸ್ವಲ್ಪ ಏರಿಕೆ ಕಂಡಿದೆ. ನಿನ್ನೆ ಪ್ರತಿ ಗ್ರಾಂ ಚಿನ್ನದ ಬೆಲೆ ರೂ 5,480 ಇದ್ದದ್ದು, ಇಂದು ಏರಿಕೆಯಾಗುವ ಮೂಲಕ 5,500 ರೂಪಾಯಿ ಆಗಿದೆ.
ಬೇರೆ ಬೇರೆ ಮಹಾನಗರಗಳಲ್ಲಿ ಇಂದಿನ ಚಿನ್ನದ ದರ ವಿವರ
ಬೆಂಗಳೂರಿನಲ್ಲಿ ಇಂದು ಬೆಳಗಿನ ವೇಳೆಗೆ 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 55,050 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 55,700, ರೂ. 55,000, ರೂ. 55,000 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 55,150 ರೂ. ಆಗಿದೆ.
ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಒಂದು ನೋಟ ಬೀರೋಣ.
ಒಂದು ಗ್ರಾಂ (1GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,500
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,000
ಎಂಟು ಗ್ರಾಂ (8GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 44,000
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 48,000
ಹತ್ತು ಗ್ರಾಂ (10GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 55,000
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 60,000
ನೂರು ಗ್ರಾಂ (100GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,50,000
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,00,000
ಇದನ್ನೂ ಓದಿ: Today Petrol-Diesel Price: ವೀಕೆಂಡ್‌ನಲ್ಲಿ ನಿಮ್ಮ ನಗರದಲ್ಲಿ ತೈಲ ಬೆಲೆ ಹೇಗಿದೆ? ಇಲ್ಲಿದೆ ವಿವರ
ಬೆಳ್ಳಿ ದರ ಸ್ಥಿರ
ಹಬ್ಬದ ದಿನ ಬೆಳ್ಳಿ ಗ್ರಾಹಕರಿಗೆ ನಿರಾಶೆ ಮೂಡಿಸಿಲ್ಲ, ಏಕೆಂದರೆ ನಿನ್ನೆ ಒಂದು ಕೆಜಿ ಬೆಳ್ಳಿಗೆ 72,100 ರೂ ಇದ್ದದ್ದು, ಇಂದು ಸಹ ಅಷ್ಟೇ ಇದೆ.
ಬೆಳ್ಳಿ ಚಿನ್ನದಷ್ಟು ದುಬಾರಿಯಲ್ಲ ಹೌದು, ಆದರೆ ಬೆಳ್ಳಿಯೂ ತನ್ನದೆ ಆದ ಆಕರ್ಷಣೆ ಹೊಂದಿದ್ದು ಬೆಳ್ಳಿ ಆಭರಣಗಳಿಗೂ ಸಾಕಷ್ಟು ಬೇಡಿಕೆಯಿದೆ. ಭಾರತದಲ್ಲಿ ಬೆಳ್ಳಿಯೂ ಸಹ ಹೆಚ್ಚಾಗಿ ಖರೀದಿಸಲ್ಪಡುವ ವಸ್ತುವಾಗಿದೆ.
ವಿಶೇಷವಾಗಿ ಭಾರತದಲ್ಲಿ ಬೆಳ್ಳಿಯಿಂದ ತಯಾರಿಸಲಾದ ದೇವರ ವಿಗ್ರಹಗಳು ಹಾಗೂ ಹಲವು ಬಗೆಯ ಪೂಜಾ ಪರಿಕರಗಳಿಗೆ ಸಾಕಷ್ಟು ಬೇಡಿಕೆಯಿದೆ. ಬೆಳ್ಳಿ ತನ್ನ ವೈಜ್ಞಾನಿಕ ಗುಣಲಕ್ಷಣಗಳಿಗೂ ಹೆಚ್ಚು ಗುರುತಿಸಲ್ಪಡುತ್ತದೆ. ಅಂತೆಯೇ ಬೆಳ್ಳಿಯನ್ನು ಹಲವು ಕೈಗಾರಿಕಾ ಕ್ಷೇತ್ರಗಳಲ್ಲಿ ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ಬೆಂಗಳೂರಿನಲ್ಲಿ ಬೆಳ್ಳಿ ದರ
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 747, ರೂ. 7,470 ಹಾಗೂ ರೂ. 74, 700 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 74, 700 ಆಗಿದ್ದರೆ, ದೆಹಲಿಯಲ್ಲಿ ರೂ. 72, 100, ಮುಂಬೈನಲ್ಲಿ ರೂ. 72, 100 ಹಾಗೂ ಕೊಲ್ಕತ್ತದಲ್ಲೂ ರೂ. 72, 100 ಗಳಾಗಿದೆ.
ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ