Gold Rate: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌, ಮತ್ತಷ್ಟು ಕುಸಿದ ಬಂಗಾರ, ಬೆಳ್ಳಿ ದರ; ನಿಮ್ಮ ನಗರಗಳಲ್ಲಿ ಇಂದಿನ ಬೆಲೆ ವಿವರ ಹೀಗಿದೆ?

10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 51,930 ರೂ. ಇತ್ತು. ಇಂದು 330 ರೂ. ಇಳಿಕೆಯಾಗಿ 51,600 ರೂ. ಆಗಿದೆ. ಇನ್ನು, ಬೆಂಗಳೂರು ಸೇರಿ ದೇಶದ ವಿವಿಧ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬುದನ್ನು ವಿವರವಾಗಿ ನೋಡೋಣ

ಚಿನ್ನ

ಚಿನ್ನ

  • Share this:

Gold Rate on March 17th, 2022: ಸತತ ಮೂರನೇ ದಿನವಾದ ಇಂದು ಬಂಗಾರ, ಬೆಳ್ಳಿ ದರ ಮತ್ತಷ್ಟು ಇಳಿಕೆಯಾಗಿದೆ. ಈ ಮೂಲಕ ಗಗನಮುಖಿಯಾಗಿದ್ದ ಬಂಗಾರ, ಬೆಳ್ಳಿಯ ಮೌಲ್ಯ ಮತ್ತೆ ಇಳಿಕೆಯಾಗುತ್ತಿರುವುದು ಆಭರಣ ಪ್ರಿಯರ ಮೊಗದಲ್ಲಿ ಸಂತಸ ತಂದಿದೆ. ದೇಶದಲ್ಲಿಂದು ಚಿನ್ನದ ಬೆಲೆಯಲ್ಲಿ (Gold Price) ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಸಹ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,600 ರೂ. ಇತ್ತು. ಇಂದು 300 ರೂ. ಕಡಿಮೆಯಾಗಿ 47,300 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 51,930 ರೂ. ಇತ್ತು. ಇಂದು 330 ರೂ. ಇಳಿಕೆಯಾಗಿ 51,600 ರೂ. ಆಗಿದೆ. ಇನ್ನು, ಬೆಂಗಳೂರು ಸೇರಿ ದೇಶದ ವಿವಿಧ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬುದನ್ನು ವಿವರವಾಗಿ ನೋಡೋಣ..


 ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ..?


ನೀವು ಚಿನ್ನ ಖರೀದಿಸುವ ಆಲೋಚನೆಯಲ್ಲಿದ್ದೀರಾ, ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 51,930 ರೂ. ಇತ್ತು. ಇಂದು 330 ರೂ. ಇಳಿಕೆಯಾಗಿ 51,600 ರೂ. ಆಗಿದೆ.


ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 47,600 ರೂ. ಇತ್ತು. ಇಂದು 300 ರೂ. ಕಡಿಮೆಯಾಗಿ 47,300 ರೂ. ಆಗಿದೆ. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ.


ಆಭರಣ ಪ್ರಿಯರ ಸಂಖ್ಯೆಗೇನೂ ಕೊರತೆ ಇಲ್ಲ

ದೇಶದಲ್ಲಿ ಆಭರಣ ಪ್ರಿಯರ ಜನಸಂಖ್ಯೆಗೇನೂ ಕೊರತೆ ಇಲ್ಲ. ಈ ಹಿನ್ನೆಲೆ ಚಿನ್ನ, ಬೆಳ್ಳಿ ವಹಿವಾಟಿಗೂ ಸಹ ಕೊರತೆ ಇಲ್ಲ. ಇನ್ನು ಹಲವರು ಆಪತ್ಕಾಲದಲ್ಲಿ ಚಿನ್ನ ಅಡ ಇಡಲು ಅಥವಾ ಮಾರಲು ಬೇಕಾಗುತ್ತದೆಂದು ಸಹ ಅದರ ಮೇಲೆ ಹೂಡಿಕೆ ಮಾಡುತ್ತಾರೆ.


ಇತರ ನಗರಗಳಲ್ಲಿ ಗೋಲ್ಡ್ ರೇಟ್

ಇನ್ನು, ದೇಶದ ಇತರೆ ನಗರಗಳಾದ ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆ, ಕೊಯಮತ್ತೂರು, ಮಧುರೈನಲ್ಲಿ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 52 ಸಾವಿರದ ಆಸುಪಾಸಿನಲ್ಲೇ ಇದೆ.


ಮೆಟ್ರೋಪಾಲಿಟನ್ ನಗರಗಳಲ್ಲಿ ಹೇಗಿದೆ ಬೆಲೆ?

ಈ ಮಧ್ಯೆ, ದೇಶದ ಮೆಟ್ರೋಪಾಲಿಟನ್‌ ನಗರಗಳಾದ ಚೆನ್ನೈನಲ್ಲಿ 52,280 ರೂ. ಇದ್ದರೆ, ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ ಹಾಗೂ ಕೋಲ್ಕತ್ತದಲ್ಲಿ 24 ಕ್ಯಾರೆಟ್‌ ಬಂಗಾರದ ಬೆಲೆ 51,600 ರೂ. ಆಗಿದೆ.


ಇದನ್ನೂ ಓದಿ: Gold Price: ಚಿನ್ನ ಖರೀದಿಗೆ ಇಂದೇ ಶುಭದಿನ! ಮತ್ತಷ್ಟು ಇಳಿಕೆಯಾಯ್ತು ಗೋಲ್ಡ್, ಸಿಲ್ವರ್ ರೇಟ್

ಇದೇ ರೀತಿ ಚಂಡೀಗಢ, ಸೂರತ್‌, ನಾಶಿಕ್‌ನಲ್ಲೂ 24 ಕ್ಯಾರೆಟ್‌ ಚಿನ್ನದ ಬೆಲೆ 52 ಸಾವಿರದ ಆಸುಪಾಸಿನಲ್ಲೇ ಇದೆ.


ಬೆಳ್ಳಿ ದರ:


ದೇಶದಲ್ಲಿಂದು ಚಿನ್ನದ ಬೆಲೆ ಕಡಿಮೆಯಾದಂತೆ ಬೆಳ್ಳಿ ದರ (Silver Rate) ಸಹ ಇಳಿಕೆಯಾಗಿದೆ.. ನಿನ್ನೆ 1 ಕೆಜಿ ಬೆಳ್ಳಿಗೆ 69,000 ರೂ. ಇತ್ತು. ಇಂದು 1,100 ರೂ. ಕಡಿಮೆಯಾಗಿ 67,900 ರೂ. ಆಗಿದೆ.


ಆದರೆ ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆ 72,300 ರೂ. ಆಗಿದೆ. ಇದೇ ರೀತಿ ಚೆನ್ನೈ, ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣಂ, ಕೊಯಮತ್ತೂರು, ಮಧುರೈನಲ್ಲಿ ಸಹ 1 ಕೆಜಿ ಬೆಳ್ಳಿಯ ಬೆಲೆ 72,300 ರೂ. ಆಗಿದೆ.


ಇದನ್ನೂ ಓದಿ: Petrol Price Today‌: ಮತ್ತಷ್ಟು ಇಳಿಕೆಯಾದ ಕಚ್ಚಾ ತೈಲ ದರ; ನಿಮ್ಮ ನಗರಗಳಲ್ಲಿ ಇಂದಿನ ಪೆಟ್ರೋಲ್‌, ಡೀಸೆಲ್‌ ದರ ನೋಡಿ 

ಈ ಮಧ್ಯೆ, ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ಕೋಲ್ಕತ್ತದಲ್ಲಿ ಬೆಳ್ಳಿ ದರ 67,900 ರೂ. ಆಗಿದೆ.


ಒಟ್ಟಾರೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಮುಂದುವರಿದಿದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ.


ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.

Published by:Divya D
First published: