Gold-Silver Price Today: ಬದಲಾಗಿಲ್ಲ ಚಿನ್ನದ ಬೆಲೆ, ಬೆಳ್ಳಿ ಖರೀದಿಸುವವರಿಗೆ ಸುವರ್ಣಾವಕಾಶ: ಹೀಗಿದೆ ಇಂದಿನ ದರ

Gold and Silver Price on September 12, 2022: ಚಿನ್ನ ಆರ್ಥಿಕ ಸುರಕ್ಷತೆಗೆ ಬಲು ವಿಶ್ವಾಸಪೂರ್ಣ ಸಾಧನವಾಗಿರುವುದರಿಂದ ಬಹಳಷ್ಟು ಜನರು ಇದನ್ನು ಕೊಂಡುಕೊಳ್ಳಲು ಬಯಸುತ್ತಾರೆ ಹಾಗೂ ಈ ಸುರಕ್ಷಿತ ಸಾಧನವನ್ನು ಹೂಡಿಕೆಗೆಂದು ಖರೀದಿಸಲು ಜನರು ಬಯಸುತ್ತಲೇ ಇರುತ್ತಾರೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 4,675 ಆಗಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಿನ್ನೆಗೆ ಹೋಲಿಸಿದರೆ ಇಂದು ಮಾರುಕಟ್ಟೆಯಲ್ಲಿ ಚಿನ್ನದ ದರ ಸ್ಥಿರವಾಗಿದೆ ಅಂತ ಹೇಳಬಹುದು. ಅಲ್ಲದೆ ಕಳೆದ ಕೆಲ ದಿನಗಳಲ್ಲಿ ಆಗುತ್ತಿರುವ ಏರಿಳಿತವನ್ನು ಗಮನಿಸಿದರೆ ಸದ್ಯ ಇದು ಚಿನ್ನ ಕೊಳ್ಳಲು ಉತ್ತಮ ಸಮಯ ಎನ್ನಬಹುದು.

    ಕೆಲ ದಿನಗಳಿಂದ ಚಿನ್ನ-ಬೆಳ್ಳಿ ದರಗಳ ಏರಿಳಿತಗಳ ಕಣ್ಣು ಮುಚ್ಚಾಲೆ ಆಟ ಮುಂದುವರೆದೇ ಇದೆ. ಚಿನ್ನ ಆರ್ಥಿಕ ಸುರಕ್ಷತೆಗೆ ಬಲು ವಿಶ್ವಾಸಪೂರ್ಣ ಸಾಧನವಾಗಿರುವುದರಿಂದ ಬಹಳಷ್ಟು ಜನರು ಇದನ್ನು ಕೊಂಡುಕೊಳ್ಳಲು ಬಯಸುತ್ತಾರೆ ಹಾಗೂ ಈ ಸುರಕ್ಷಿತ ಸಾಧನವನ್ನು ಹೂಡಿಕೆಗೆಂದು ಖರೀದಿಸಲು ಜನರು ಬಯಸುತ್ತಲೇ ಇರುತ್ತಾರೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 4,675 ಆಗಿದೆ.

    ಇದನ್ನೂ ಓದಿ: Bank Charges: ಬ್ಯಾಂಕ್​​ ಗ್ರಾಹಕರಿಗೆ ಎಚ್ಚರ, ಈ ಸೇವೆಗಳಿಗೆಲ್ಲಾ ಹೆಚ್ಚಿನ ಶುಲ್ಕ !

    ಕಳೆದ ಹಲವು ವರ್ಷಗಳಿಂದ ಚಿನ್ನವು ಹಣದುಬ್ಬರದ ವಿರುದ್ಧ ಒಂದು ರಕ್ಷಣಾತ್ಮಕ ಬೇಲಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಬಹುದು. ಹೂಡಿಕೆದಾರರು ಚಿನ್ನವನ್ನು ಪ್ರಮುಖ ಹೂಡಿಕೆಯ ವಸ್ತುವನ್ನಾಗಿ ನೋಡುತ್ತಿದ್ದಾರೆ. ಹಾಗಾಗಿ, ಚಿನ್ನವು ಮಾರುಕಟ್ಟೆಯಲ್ಲಿ ಒಂದು ಉತ್ತಮ ಹೂಡಿಕೆಯ ವಸ್ತುವಾಗಿ ಗುರುತಿಸಿಕೊಂಡಿದೆ. ಭಾರತದ ಮಾರುಕಟ್ಟೆಗಳಲ್ಲಿ ಇಂದು ಚಿನ್ನ ಖರೀದಿ ಸಹಜ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ವ್ಯವಹಾರವನ್ನು ಈ ವ್ಯವಹಾರ ಹೊಂದಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 46,800 ಆಗಿದೆ.

    ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಒಂದು ನೋಟ

    ಒಂದು ಗ್ರಾಂ (1GM)

    22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,675

    24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,100

    ಎಂಟು ಗ್ರಾಂ (8GM)

    22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37,400

    24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,800

    ಹತ್ತು ಗ್ರಾಂ (10GM)

    22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 46,750

    24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 51,000

    ನೂರು ಗ್ರಾಂ (100GM)

    22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,67,500

    24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,10,000

    ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 46,800 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,400, ರೂ. 46,750, ರೂ. 46,750 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 46,900 ರೂ. ಆಗಿದೆ.

    ಇದನ್ನೂ ಓದಿ: Health Insurance: ಆರೋಗ್ಯ ವಿಮೆ ಖರೀದಿಸುತ್ತಿದ್ದೀರಾ? ಈ ಸಣ್ಣ ತಪ್ಪು ಮಾತ್ರ ಮಾಡ್ಬೇಡಿ, ಆಮೇಲೆ ನಿಮ್ಗೆ ಪ್ರಾಬ್ಲಂ!

    ಬೆಳ್ಳಿ ದರ

    ಒಂದೆಡೆ ಚಿನ್ನದ ಬೆಲೆ ಸ್ಥಿರವಾಗಿದ್ದರೆ ಇನ್ನೊಂದೆಡೆ ಇಂದು ಬೆಳ್ಳಿ ದರವು ನೆಲಕಚ್ಚಿದ್ದು ಬೆಳ್ಳಿ ಖರೀದಿಸಬಯಸುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಪ್ರತಿ ಗ್ರಾಂ ಬೆಳ್ಳಿ ಬೆಲೆ 5 ರೂ. 40 ಪೈಸೆಗಳಷ್ಟು ಕುಸಿದಿದೆ. ಚಿನ್ನದಂತೆ ಸಾಮಾನ್ಯವಾಗಿ ಬೆಳ್ಳಿ ದರಗಳಲ್ಲೂ ವ್ಯತ್ಯಾಸ ಆಗುತ್ತಲೇ ಇರುತ್ತದೆ. ಆದಾಗ್ಯೂ, ಕಳೆದ ತಿಂಗಳಿನಲ್ಲಿ ಅಂದರೆ ಆಗಸ್ಟ್ 13 ರಂದು ಬೆಳ್ಳಿಯ ಗರಿಷ್ಠ ಬೆಲೆ ಪ್ರತಿ ಕೆಜಿಗೆ ರೂ. 59,800 ಕ್ಕೆ ತಲುಪಿತ್ತು ಹಾಗೂ ಆಗಸ್ಟ್ 31 ರಂದು ಕನಿಷ್ಠ ಬೆಲೆ ರೂ. 50,800ಕ್ಕೆ ಕುಸಿದಿತ್ತು. ಬೆಳ್ಳಿ ದರ ಇಂದು ಪ್ರತಿ ಕೆಜಿಗೆ ರೂ. 55,000 ಗಳಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನೆ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ.

    ಬೆಂಗಳೂರು ನಗರದಲ್ಲಿ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 604, ರೂ. 6,040 ಹಾಗೂ ರೂ. 60,400 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 60,400 ಆಗಿದ್ದರೆ ದೆಹಲಿಯಲ್ಲಿ ರೂ. 55,000 ಮುಂಬೈನಲ್ಲಿ ರೂ. 55,000 ಹಾಗೂ ಕೊಲ್ಕತ್ತದಲ್ಲೂ ರೂ. 55,000 ಗಳಾಗಿದೆ.

    ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.
    Published by:Precilla Olivia Dias
    First published: