Gold Price Today: ಮತ್ತಷ್ಟು ಭಾರವಾದ ಚಿನ್ನ, ಹೀಗಿದೆ ಇಂದಿನ ದರ!
Gold Price Today: ಮತ್ತಷ್ಟು ಭಾರವಾದ ಚಿನ್ನ, ಹೀಗಿದೆ ಇಂದಿನ ದರ!
ನಿನ್ನೆಯಷ್ಟೇ ಬಂಗಾರ ಏರಿಕೆ ಕಂಡಿತ್ತು. ಇದೀಗ ತನ್ನ ಏರುಗತಿಯ ನಾಗಾಲೋಟವನ್ನು ಮುಂದುವರೆಸಿರುವ ಬಂಗಾರ ಇಂದು ಮತ್ತೆ ಭಾರಿ ಏರಿಕೆ ಕಂಡಿದ್ದು ಇಂದು ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 5,695 ಆಗಿದೆ. ಪ್ರತಿ ಹತ್ತು ಗ್ರಾಂ ಆಭರಣ ಚಿನ್ನದ ದರ ರೂ. 56,950 ಆಗಿದ್ದರೆ ಅಪರಂಜಿ ಬಂಗಾರದ (24 ct) ಬೆಲೆ ಪ್ರತಿ ಹತ್ತು ಗ್ರಾಂಗೆ ರೂ. 62,130 ಆಗಿದೆ.
ನಿನ್ನೆಯಷ್ಟೇ ಬಂಗಾರ ಏರಿಕೆ ಕಂಡಿತ್ತು. ಇದೀಗ ತನ್ನ ಏರುಗತಿಯ ನಾಗಾಲೋಟವನ್ನು ಮುಂದುವರೆಸಿರುವ ಬಂಗಾರ ಇಂದು ಮತ್ತೆ ಭಾರಿ ಏರಿಕೆ ಕಂಡಿದ್ದು ಇಂದು ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 5,695 ಆಗಿದೆ. ಪ್ರತಿ ಹತ್ತು ಗ್ರಾಂ ಆಭರಣ ಚಿನ್ನದ ದರ ರೂ. 56,950 ಆಗಿದ್ದರೆ ಅಪರಂಜಿ ಬಂಗಾರದ (24 ct) ಬೆಲೆ ಪ್ರತಿ ಹತ್ತು ಗ್ರಾಂಗೆ ರೂ. 62,130 ಆಗಿದೆ.
ಭಾರತದಲ್ಲಿ ಬಂಗಾರಕ್ಕೆ ಮೊದಲಿನಿಂದಲೂ ವಿಶೇಷ ಹಾಗೂ ಪವಿತ್ರವಾದ ಸ್ಥಾನವಿದೆ. ಬಂಗಾರವನ್ನು ಇಲ್ಲಿ ಸಮೃದ್ಧತೆಯ ಪ್ರತೀಕ ಎನ್ನಲಾಗುತ್ತದೆ. ಅಲ್ಲದೆ ಬಂಗಾರದಿಂದ ತಯಾರಿಸಲಾದ ವೈವಿಧ್ಯಮಯ ಆಭರಣಗಳಿಗೆ ನಮ್ಮಲ್ಲಿ ಅಪಾರವಾದ ಬೇಡಿಕೆಯೂ ಇದ್ದು ನಿತ್ಯ ದೇಶದಲ್ಲಿ ಕೋಟ್ಯಂತರ ರೂಪಾಯಿಗಳಷ್ಟು ಬಂಗಾರದ ವಹಿವಾಟು ನಡೆಯುತ್ತದೆ.
ಬಂಗಾರ ಕೇವಲ ವ್ಯಕ್ತಿಯೊಬ್ಬ ವೈಯಕ್ತಿಕ ಸಂಪತ್ತನ್ನಲ್ಲದೆ ದೇಶದ ಆರ್ಥಿಕ ಸದೃಢತೆಯನ್ನೂ ತೋರಿಸುತ್ತದೆ. ಹೌದು, ಹಣದುಬ್ಬರದಂತಹ ಸಮಸ್ಯೆಗೆ ಪರಿಣಾಮಕಾರಿ ಉಪಶಮನವಾಗಿರುವ ಬಂಗಾರವನ್ನು ಒಂದು ರಾಷ್ಟ್ರ ಎಷ್ಟು ಪ್ರಮಾಣದಲ್ಲಿ ಹೊಂದಿರುತ್ತದೆಯೋ ಅಷ್ಟೇ ಆರ್ಥಿಕ ಬಲಿಷ್ಠತೆಯನ್ನು ಆ ರಾಷ್ಟ್ರ ಹೊಂದಿರುತ್ತದೆ ಎಂದಾಗಿದೆ.
ಹಾಗಾಗಿ ಬಂಗಾರ ಜಗತ್ತಿನ ಎಲ್ಲ ದೇಶಗಳಲ್ಲೂ ಮಾನ್ಯವಾಗಿದ್ದು ಸ್ವೀಕರಿಸಲ್ಪಡುತ್ತದೆ. ಇನ್ನು, ಬಂಗಾರ ಹೊಂದುವುದು ಭಾರತೀಯರಿಗೆ ಪ್ರತಿಷ್ಠೆಯ ವಿಷಯವಾಗಿದ್ದು ಅದರಲ್ಲೂ ಭಾರತದ ಮಹಿಳೆಯರ ಮನದಲ್ಲಿ ಬಂಗಾರ ಆಕರ್ಷಕ ಸ್ಥಾನ ಹೊಂದಿದೆ. ಕೆಲ ವರದಿಗಳ ಪ್ರಕಾರ, ಭಾರತದ ಮಹಿಳೆಯರು ಹೊಂದಿರುವ ಬಂಗಾರದ ಪ್ರಮಾಣ ಬೇರೆ ಯಾವ ದೇಶದ ಮಹಿಳೆಯರು ಹೊಂದಿಲ್ಲ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 57,000 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 57,370, ರೂ. 56,950, ರೂ. 56,950 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 57,100 ರೂ. ಆಗಿದೆ.
ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರ ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,695 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,213 ಆಗಿದೆ. ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 45,560 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 49,704 ಆಗಿದೆ.
ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 56,950 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 62,130 ಆಗಿದೆ. ಇನ್ನು ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,69,500 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,21,300 ಆಗಿದೆ.
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 827, ರೂ. 8,270 ಹಾಗೂ ರೂ. 82,700ಗಳಾಗಿವೆ.
ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 82,700 ಆಗಿದ್ದರೆ, ದೆಹಲಿಯಲ್ಲಿ ರೂ. 78,000, ಮುಂಬೈನಲ್ಲಿ ರೂ. 78,000 ಹಾಗೂ ಕೊಲ್ಕತ್ತದಲ್ಲೂ ರೂ. 78,000 ಗಳಾಗಿದೆ.
ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.
top videos
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ