Gold-Silver Price Today: ಹೇಗಿದೆ ಇಂದಿನ ಚಿನ್ನ-ಬೆಳ್ಳಿ ದರ? ಖರೀದಿಗೆ ಸೂಕ್ತನಾ?
Gold-Silver Price Today: ಹೇಗಿದೆ ಇಂದಿನ ಚಿನ್ನ-ಬೆಳ್ಳಿ ದರ? ಖರೀದಿಗೆ ಸೂಕ್ತನಾ?
24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ನೋಡೋದಾದ್ರೆ 1 ಗ್ರಾಂ, 8 ಗ್ರಾಂ ಮತ್ತು 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 5,798 ರೂ, 46,384 ರೂಪಾಯಿ ಮತ್ತು 57,980 ರೂಪಾಯಿ ಆಗಿದೆ.
ಎರಡು ದಿನಗಳ ಏರಿಕೆಯಿಂದ ಚಿಂತೆಗೀಡಾಗಿದ್ದ ಆಭರಣ ಖರೀದಿದಾರರಿಗೆ ನಿನ್ನೆ ಕೊಂಚ ರಿಲೀಫ್ ನೀಡಿದ್ದ ಚಿನ್ನದ ದರ ಇಂದು ಮತ್ತೆ ಅವರನ್ನು ಗಲಿಬಿಲಿಯಾಗುವಂತೆ ಮಾಡಿದೆ. ಹೌದು, ನಿನ್ನೆಗೆ ಹೋಲಿಸಿದರೆ ಇಂದು ಆಭರಣ ಚಿನ್ನದ ಪ್ರತಿ ಗ್ರಾಂ ಬೆಲೆ 50 ರೂ. ಏರಿಕೆಯಾಗಿದೆ.
ನಿನ್ನೆ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 5,305 ಇದ್ದದ್ದು ಇಂದು ರೂ. 5,355 ಆಗಿದೆ. ಅದರಂತೆ ಪ್ರತಿ ಹತ್ತು ಗ್ರಾಂ ಆಭರಣ ಚಿನ್ನದ ದರ ರೂ. 53,550 ಆದರೆ 24 ಕ್ಯಾರಟ್ ಬಂಗಾರದ ಬೆಲೆಯು ಪ್ರತಿ ಹತ್ತು ಗ್ರಾಂಗೆ ರೂ. 58,420 ಕ್ಕೆ ಹೋಗಿ ತಲುಪಿದೆ.
ಚಿನ್ನ ಒಂದು ಅಪರೂಪದ ಹೊಳೆಯುವ ಲೋಹವಾಗಿದ್ದು ಕಣ್ಣುಗಳಿಗೆ ಸಾಕಷ್ಟು ಆಕರ್ಷಮಯವಾಗಿ ಕಾಣುತ್ತದೆ ಹಾಗೂ ಅಷ್ಟೇ ದುಬಾರಿಯೂ ಹೌದು. ಹಾಗಾಗಿಯೇ ಚಿನ್ನಕ್ಕೆ ಮೊದಲಿನಿಂದಲೂ ಅಪಾರ ಬೇಡಿಕೆಯಿದೆ ಎನ್ನಬಹುದು.
ಹಾಗಾಗಿಯೇ ಇಂದು ಭಾರತದಲ್ಲಿ ಮದುವೆ, ಮುಂಜಿಗಳಂತಹ ಶುಭ ಸಮಾರಂಭಗಳಿದ್ದಾಗ ಬಹುತೇಕ ಭಾರತೀಯರು ಚಿನ್ನ ಖರೀದಿ ಮಾಡದೆ ಇರಲಾರರು. ಅಷ್ಟೇ ಅಲ್ಲ ಚಿನ್ನ-ಬೆಳ್ಳಿ ಖರೀದಿಗೆಂದೇ ಮೀಸಲಾಗಿರುವ ಹಬ್ಬದ ದಿನವೂ ನಮ್ಮಲ್ಲಿದೆ ಎಂದರೆ ಚಿನ್ನಕ್ಕಿರುವ ಮಹತ್ವ ಎಷ್ಟು ಎಂಬುದನ್ನು ಊಹಿಸಬಹುದು.
ದೇಶದ ಆರ್ಥಿಕ ಸದೃಢತೆಯೂ ಅದು ತಾನು ಹೊಂದಿರುವ ಚಿನ್ನದ ಪ್ರಮಾಣದ ಮೇಲೆ ಅವಲಂಬಿತವಾಗಿದೆ ಹಾಗೂ ಚಿನ್ನ ಜಗತ್ತಿನಾದ್ಯಂತ ಎಲ್ಲ ದೇಶಗಳಲ್ಲೂ ಮಾನ್ಯತೆ ಪಡೆದಿದ್ದು ಸ್ವೀಕರಿಸಲ್ಪಡುತ್ತದೆ. ಈ ಎಲ್ಲ ಅಂಶಗಳಿಂದಾಗಿ ಚಿನ್ನಕ್ಕೆ ದೊಡ್ಡದಾದ ಅಂತಾರಾಷ್ಟ್ರೀಯ ಮಾರುಕಟ್ಟೆಯೇ ಇದೆ.
ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 53,600 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 54,250, ರೂ. 53,550, ರೂ. 53,550 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 53,700 ರೂ. ಆಗಿದೆ.
ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,355 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,842 ಆಗಿದೆ. ಇತ್ತ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 42,840 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 46,736 ಆಗಿದೆ.
ಇನ್ನು ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 53,550 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 58,420 ಆಗಿದೆ. ಅತ್ತ ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,35,500 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,84,200 ಆಗಿದೆ.
ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಜಾಸ್ತಿಯೇ ಏರಿಕೆಯಾಗಿದ್ದರೆ ಇತ್ತ ಬೆಳ್ಳಿಯ ಬೆಲೆಯಲ್ಲೂ ಇಂದು ಅಲ್ಪ ಏರಿಕೆಯಾಗಿದೆ. ನಿನ್ನೆ ಒಂದು ಕೆಜಿಗೆ 69,000 ರೂಪಾಯಿಗಳಷ್ಟಿದ್ದ ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ ರೂ. 69,200ಕ್ಕೆ ಹೋಗಿ ತಲುಪಿದೆ. ಚಿನ್ನದಂತೆ ಇತ್ತೀಚಿನ ಕೆಲ ಸಮಯದಿಂದ ಬೆಳ್ಳಿಯೂ ಸಹ ಉತ್ತಮ ಹೂಡಿಕೆಯ ಸಾಧನವಾಗಿ ಗುರುತಿಸಲ್ಪಟ್ಟಿದ್ದು ಹೂಡಿಕೆದಾರರಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿದೆ.
ಬೆಳ್ಳಿ ಚಿನ್ನದಷ್ಟು ದುಬಾರಿಯಲ್ಲ ಹೌಉ, ಆದರೆ ಬೆಳ್ಳಿಯೂ ತನ್ನದೆ ಆದ ಆಕ್ರ್ಷಣೆ ಹೊಂದಿದ್ದು ಬೆಳ್ಳಿ ಆಭರಣಗಳಿಗೂ ಸಾಕಷ್ಟು ಬೇಡಿಕೆಯಿದೆ. ಭಾರತದಲ್ಲಿ ಬೆಳ್ಳಿಯೂ ಸಹ ಹೆಚ್ಚಾಗಿ ಖರೀದಿಸಲ್ಪಡುವ ವಸ್ತುವಾಗಿದೆ.
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 727, ರೂ. 7,270 ಹಾಗೂ ರೂ. 72,700 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 72,700 ಆಗಿದ್ದರೆ, ದೆಹಲಿಯಲ್ಲಿ ರೂ. 69,200, ಮುಂಬೈನಲ್ಲಿ ರೂ. 69,200 ಹಾಗೂ ಕೊಲ್ಕತ್ತದಲ್ಲೂ ರೂ. 69,200 ಗಳಾಗಿದೆ.
ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ