ಎಲ್ಲರಿಗೂ ಪ್ರಿಯವಾದ ಹಳದಿಲೋಹಕ್ಕೆ ಜಗತ್ತಿನಾದ್ಯಂತ ಬೇಡಿಕೆ ಅಪಾರ. ಕಾರಣ ಅವು ಆಕರ್ಷಕ ಹೂಡಿಕೆಯ ಸಾಧನವಾಗಿದ್ದು ಎಂದಿಗೂ ಮೌಲ್ಯವನ್ನು ಕಳೆದುಕೊಂಡೇ ಇಲ್ಲ. ಅಲ್ಲದೆ, ಅವು ಹೂಡಿಕೆದಾರರಿಗೆ ಸದಾಕಾಲ ಉತ್ತಮ ರಿಟರ್ನ್ ತಂದುಕೊಡುತ್ತಲೇ ಇರುತ್ತದೆ.
ಈ ಚಿನ್ನದ ಬೆಲೆ ಸ್ಥಿರವಾಗಿ ಬಹುಕಾಲ ಇರುವುದು ಕಷ್ಟ, ಯಾವಾಗ, ಹೇಗೆ ಮತ್ತು ಎಷ್ಟು ಪ್ರಮಾಣದಲ್ಲಿ ಏರುತ್ತದೆ ಅಥವಾ ಕುಸಿಯುತ್ತದೆ ಎಂಬುದು ನಿಖರವಾಗಿ ತಿಳಿಯುವುದಿಲ್ಲ. ಆದಾಗ್ಯೂ, ಅದರ ಬೆಲೆಯು ಜಾಗತಿಕವಾಗಿ ಏರ್ಪಡುವ ಹಲವು ವಿದ್ಯಮಾನಗಳಿಂದ ಪ್ರಭಾವಿಸಲ್ಪಡುತ್ತಿರುತ್ತದೆ.
ಚಿನ್ನದ ಮೌಲ್ಯ ಜಾಗತಿಕ ಮಾರುಕಟ್ಟೆಯಲ್ಲೂ ಅಪಾರವಾಗಿದ್ದು ಸಾಕಷ್ಟು ದೇಶಗಳು ವಿದೇಶಿ ವಿನಿಮಯ ರೂಪದಲ್ಲಿ ಚಿನ್ನದ ಸಂಗ್ರಹ ಹೊಂದಿರುತ್ತವೆ. ಇಂದಿನ ದಿನಮಾನಗಳಲ್ಲಿ ಚಿನ್ನವು ಹಣದುಬ್ಬರವನ್ನು ನಿಯಂತ್ರಿಸಬಲ್ಲಂತಹ ಶಕ್ತಿಶಾಲಿ ಸಾಧನ. ಚಿನ್ನ ಎಲ್ಲ ದೇಶಗಳಲ್ಲೂ ಮಾನ್ಯತೆ ಪಡೆದಿದೆ. ಹಾಗಾಗಿ ಇದಕ್ಕೆ ಬೇಡಿಕೆ ಅಪಾರ.
ಒಂದು ರೀತಿಯ ಸೇಫ್ ಡಿಪಾಸಿಟ್ ನಂತಿರುವ ಚಿನ್ನವನ್ನು ಅಥವಾ ಚಿನ್ನದ ಆಭರಣಗಳನ್ನು ಭವಿಷ್ಯದ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡೇ ಜನರು ಕೊಳ್ಳುತ್ತಾರೆ. ಹಾಗಾಗಿ ಚಿನ್ನ ಕೊಳ್ಳಬಯಸುವವರು ಚಿನ್ನದ ಬೆಲೆಗಳ ಮೇಲೆ ಸದಾ ಕಣ್ಣಿಟ್ಟಿರುತ್ತಾರೆ. ಅಂತೆಯೇ, ಈ ನಿತ್ಯದ ಅಪ್ಡೇಟ್ ಆಯಾ ಪ್ರದೇಶಗಳ ಗ್ರಾಹಕರಿಗೆ ಸಾಕಷ್ಟು ಸಹಾಯಕವಾಗುತ್ತದೆ.
ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟೆಷ್ಟಿದೆ ಎಂದು ನೋಡುವುದಾದರೆ, ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 51,350 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 52,210, ರೂ. 51,300, ರೂ. 51,300 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 51,450 ರೂ. ಆಗಿದೆ.
ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,130 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,596 ಆಗಿದೆ. ಇದೇ ರೀತಿ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 41,758 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 44,600 ಆಗಿದೆ.
ಇತ್ತ ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 51,300 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 55,960 ಆಗಿದೆ. ಇನ್ನು ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,13,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,59,600 ಆಗಿದೆ.
ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿಯ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಸಾಮಾನ್ಯವಾಗಿ ಚಿನ್ನದಂತೆ ಬೆಳ್ಳಿ ಬೆಲೆಗಳಲ್ಲೂ ಏರಿಳಿತ ಉಂಟಾಗುತ್ತಲೇ ಇರುತ್ತದೆ. ಕಳೆದ ಎರಡು ದಿನಗಳಲ್ಲಿ ಏರುಗತಿಯನ್ನು ಪ್ರದರ್ಶಿಸಿದ್ದ ಬೆಳ್ಳಿ ಇಂದು ನಿನ್ನೆಯ ಬೆಲೆಯಲ್ಲೇ ಮುಂದುವರೆದಿದ್ದು ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ ರೂ. 71,800 ಆಗಿದೆ.
ಕಳೆದ ತಿಂಗಳನ್ನೇ ನೋಡುವುದಾದರೆ ಬೆಳ್ಳಿ ತನ್ನ ಗರಿಷ್ಠ ಬೆಲೆ ರೂ. 72,300 ತಲುಪಿತ್ತು ಹಾಗೂ ಕನಿಷ್ಠ ಬೆಲೆ ರೂ. 63,600ಕ್ಕೆ ಕುಸಿದಿತ್ತು. ಆದರೆ ಅದರ ಪ್ರದರ್ಶನ ಈ ನೂತನ ವರ್ಷದ ಮಾಸಿಕದಲ್ಲಿ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕು.
ಬೆಂಗಳೂರು ನಗರ ನೋಡುವುದಾದರೆ ಬೆಳ್ಳಿ ಬೆಲೆಯಲ್ಲಿ ಗಮನಾರ್ಹಏರಿಕೆಯಾಗಿದೆ. ನಗರದಲ್ಲಿ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 744, ರೂ. 7,440 ಹಾಗೂ ರೂ. 74,400 ಗಳಾಗಿವೆ.
ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.
Published by:ವಾಸುದೇವ್ ಎಂ
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ