Gold And Silver Price: ಬೆಂಗಳೂರಿನಲ್ಲಿ ಯಥಾಸ್ಥಿತಿ ಕಾಪಾಡಿಕೊಂಡ ಚಿನ್ನ! ಬೆಳ್ಳಿ ದರದಲ್ಲಿ ಕೊಂಚ ಏರಿಕೆ

ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 52,580 ರೂಪಾಯಿಗಳಷ್ಟಿದೆ. ಇಂದೂ ಕೂಡ ಸರಿಸುಮಾರು ಅಷ್ಟೇ ಇದ್ದು, ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇನ್ನು ಭಾರತದ ಇತರ ನಗರಗಳ ಜೊತೆಗೇ ಬೆಂಗಳೂರಿನಲ್ಲಿಯೂ ಬೆಳ್ಳಿಯ ಬೇಡಿಕೆ ಹೆಚ್ಚುತ್ತಿದೆ. ಬೆಂಗಳೂರಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ಬೆಲೆ 74,600 ರೂಪಾಯಿ ಇತ್ತು. ಇದೀಗ ತುಸು ಏರಿಕೆಯಾಗಿ 74,600 ರೂಪಾಯಿ ತಲುಪಿದೆ.

ಚಿನ್ನದ ಆಭರಣಗಳು

ಚಿನ್ನದ ಆಭರಣಗಳು

  • Share this:
Gold And Silver Price, March 12, 2022:  ರಷ್ಯಾ (Russia) ಉಕ್ರೇನ್ (Ukraine) ಯುದ್ಧದ (War) ಪರಿಣಾಮ ಕೇವಲ ಕಚ್ಚಾ ತೈಲದ (Oil) ಮೇಲೆಯಲ್ಲದೆ ಜಾಗತಿಕವಾಗಿ ಚಿನ್ನ(Gold) ಬೆಳ್ಳಿ (Silver) ದರಗಳ (Price) ಮೇಲೆಯೂ ಬೀಳುತ್ತಿದೆ. ಕಳೆದ ಎರಡ್ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗುತ್ತಲೇ ಇತ್ತು. ಆದರೆ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 52,580 ರೂಪಾಯಿಗಳಷ್ಟಿದೆ. ಇಂದೂ ಕೂಡ ಸರಿಸುಮಾರು ಅಷ್ಟೇ ಇದ್ದು, ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇನ್ನು ಭಾರತದ ಇತರ ನಗರಗಳ ಜೊತೆಗೇ ಬೆಂಗಳೂರಿನಲ್ಲಿಯೂ ಬೆಳ್ಳಿಯ ಬೇಡಿಕೆ ಹೆಚ್ಚುತ್ತಿದೆ. ಬೆಂಗಳೂರಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ಬೆಲೆ 74,600 ರೂಪಾಯಿ ಇತ್ತು. ಇದೀಗ ತುಸು ಏರಿಕೆಯಾಗಿ 74,600 ರೂಪಾಯಿ ತಲುಪಿದೆ.

 ಬೆಂಗಳೂರಿನಲ್ಲಿ ಇಂದು ಎಷ್ಟಿದೆ ಚಿನ್ನದ ಬೆಲೆ?

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 52,580 ರೂಪಾಯಿಗಳಷ್ಟಿದೆ. ಇಂದೂ ಕೂಡ ಸರಿಸುಮಾರು ಅಷ್ಟೇ ಇದ್ದು, ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇನ್ನು 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ನಿನ್ನೆ 48,200 ರೂಪಾಯಿ ಇತ್ತು. ಇಂದೂ ಸಹ ಅದೇ ದರ ಮೂಂದುವರೆದಿದೆ ಅಂತ ಗುಡ್ ರಿಟರ್ನ್ಸ್ ತಿಳಿಸಿದೆ.

ಇನ್ನು ಮಂಗಳೂರಿನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 52,580 ರೂಪಾಯಿಗಳಷ್ಟಿದೆ. ಹಾಗೆಯೇ ಮೈಸೂರಿನಲ್ಲೂ ಕೂಡ ಚಿನ್ನಕ್ಕೆ ಇದೇ ರೇಟ್ ಇದೆ.

ಇತರೇ ಮಹಾನಗರಗಳಲ್ಲಿ ಇಂದಿನ ಚಿನ್ನದ ಬೆಲೆ

ದೇಶದ ವಾಣಿಜ್ಯ ರಾಜಧಾನಿಯಾದ ಮುಂಬೈನಲ್ಲಿ ಇಂದು 22 ಕ್ಯಾರೆಟ್‌ನ 10 ಗ್ರಾಂ ಬಂಗಾರದ ಬೆಲೆ 48,200 ರೂಪಾಯಿ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 52,580 ರೂಪಾಯಿ ಇದೆ. ಇನ್ನು ದೇಶದ ಇತರೇ ಮಹಾನಗರಗಳಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಬಂಗಾರದ ಬೆಲೆ ನೋಡೋದಾದ್ರೆ, ದೆಹಲಿಯಲ್ಲಿ 52,570 ರೂ., ಚೈನ್ನೆನಲ್ಲಿ 53,520 ರೂಪಾಯಿ, ಹೈದ್ರಾಬಾದ್‌ನಲ್ಲಿ 52,580 ರೂಪಾಯಿ, ಕೋಲ್ಕತ್ತಾದಲ್ಲಿ 52,580 ರೂಪಾಯಿ ಬೆಲೆ ಇದೆ.

ಇದನ್ನೂ ಓದಿ: Paytm Bank ಸಸ್ಪೆಂಡ್! ಕೋಟ್ಯಾಂತರ ವಹಿವಾಟು ನಡೆಸಿದ್ದ ಬ್ಯಾಂಕ್​ಗೆ ಏಕೆ ಈ ಶಿಕ್ಷೆ?

ಬೆಳ್ಳಿ ದರ

ನಿನ್ನೆಗೆ ಹೋಲಿಸಿದರೆ ಇಂದು ಭಾರತದಲ್ಲಿ ಬೆಳ್ಳಿ ದರದಲ್ಲಿ ಮತ್ತೆ ಕೊಂಚ ಏರಿಕೆ ಆಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನೆ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ.

ಬೆಂಗಳೂರಿನಲ್ಲಿ ಎಷ್ಟಿದೆ ಸಿಲ್ವರ್ ರೇಟ್?

ಭಾರತದ ಇತರ ನಗರಗಳ ಜೊತೆಗೇ ಬೆಂಗಳೂರಿನಲ್ಲಿಯೂ ಬೆಳ್ಳಿಯ ಬೇಡಿಕೆ ಹೆಚ್ಚುತ್ತಿದೆ. ಬೆಂಗಳೂರಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ಬೆಲೆ 74,600 ರೂಪಾಯಿ ಇತ್ತು. ಇದೀಗ ತುಸು ಏರಿಕೆಯಾಗಿ 74,600 ರೂಪಾಯಿ ತಲುಪಿದೆ. ಇನ್ನು ಮೈಸೂರಿನಲ್ಲಿ 74,600 ರೂಪಾಯಿ ಇದ್ದರೆ, ಮಂಗಳೂರಿನಲ್ಲಿ ಸಹ ಅದೇ ಬೆಲೆ ಇದೆ.

ಇಂದು ಪ್ರಮುಖ ನಗರಗಳಲ್ಲಿ ಎಷ್ಟಿದೆ ಬೆಳ್ಳಿ ಬೆಲೆ?

ಚೆನ್ನೈನಲ್ಲಿ ಇಂದು 1 ಕೆಜಿ ಬೆಳ್ಳಿಗೆ 74,600 ರೂಪಾಯಿಗಳು ಇದ್ದರೆ, ದೆಹಲಿಯಲ್ಲಿ 70200 ರೂಪಾಯಿ ಆಗಿದೆ. ಇನ್ನು ಹೈದ್ರಾಬಾದ್‌ನಲ್ಲಿ 74,600 ರೂಪಾಯಿ, ಕೋಲ್ಕತ್ತಾ ಹಾಗೂ ಮುಂಬೈನಲ್ಲಿ 70,200 ರೂಪಾಯಿ ಬೆಲೆ ಇದೆ.

ಇದನ್ನೂ ಓದಿ: ತೆರಿಗೆ ಉಳಿತಾಯ, ಒಳ್ಳೆ ಆದಾಯ! ಪ್ರಮುಖ 3 Mutual Funds ಬಗ್ಗೆ ತಿಳಿದುಕೊಳ್ಳಿ

ಬೆಲೆಯಲ್ಲಿ ಏರಿಕೆ-ಇಳಿಕೆ ಆಗಬಹುದು

ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.
Published by:Annappa Achari
First published: