Gold Price Today: ಮತ್ತೆ ಹೆಚ್ಚಾಯ್ತು ಚಿನ್ನದ ಬೆಲೆ - ಹಳದಿ ಲೋಹದ ಇಂದಿನ ದರ ಇಲ್ಲಿದೆ

Gold And Silver Price: ಹಾಗಾಗಿಯೇ ಇಂದಿಗೂ ಭಾರತದ ಮಾರುಕಟ್ಟೆಗಳಲ್ಲಿ ಬಂಗಾರ ಖರೀದಿ ಎಂಬುದು ಬಹು ಸಾಮಾನ್ಯ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ವ್ಯವಹಾರವನ್ನು ಬಂಗಾರ ಹೊಂದಿದೆ. ಇನ್ನು ಪೆಟ್ರೋಲ್ ಡೀಸೆಲ್ ಗಳಂತೆ ಬಂಗಾರದ ಬೆಲೆಗಳಲ್ಲೂ ಆಗಾಗ ವ್ಯತ್ಯಾಸಗಳು ಆಗುತ್ತಲೇ ಇರುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಷ್ಯಾ-ಉಕ್ರೇನ್ (Russia- Ukraine) ಯುದ್ಧದ ಪರಿಣಾಮ ಕೇವಲ ಕಚ್ಚಾ ತೈಲದ ಮೇಲೆಯಲ್ಲದೆ ಜಾಗತಿಕವಾಗಿ ಚಿನ್ನ-ಬೆಳ್ಳಿ (Gold And Silver) ದರಗಳ ಮೇಲೆಯೂ ಬೀಳುತ್ತಿದೆ. ಕಳೆದ ಎರಡ್ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗುತ್ತಲೇ ಸಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಮತ್ತೆ ಹೆಚ್ಚಳವಾಗಿದೆ. ಕಳೆದ ಹಲವು ಸಮಯದಿಂದ ಚಿನ್ನವು ಮಾರುಕಟ್ಟೆಯಲ್ಲಿ ಒಂದು ಉತ್ತಮ ಹೂಡಿಕೆಯ ವಸ್ತುವಾಗಿ ಗುರುತಿಸಿಕೊಂಡಿದೆ. ಇಂದು ಚಿನ್ನದ ಹೂಡಿಕೆ ಬಹು ಸುರಕ್ಷಿತ ಹೂಡಿಕೆ ಎಂದೇ ಹಲವು ತಜ್ಞರು ಹೇಳುತ್ತಾರೆ. ಹಾಗಾಗಿ ಅದರಲ್ಲೂ ವಿಶೇಷವಾಗಿ ಭಾರತೀಯರಿಗೆ ಚಿನ್ನದ ಆಕರ್ಷಣೆ ತುಸು ಹೆಚ್ಚು ಎಂದು ಹೇಳಬಹುದು. ಆರ್ಥಿಕ ಸಂಕಷ್ಟದ ಕಾಲದಲ್ಲಿ ಕೈಯನ್ನು ಹಿಡಿಯುವ ನಂಬಿಕಸ್ಥ ಗೆಳೆಯ ಎಂದು ನಂಬಲಾಗಿರುವ ಚಿನ್ನವು ಈಗ ಹೂಡಿಕೆಯ ವಸ್ತುವಾಗಿಯೂ ಪ್ರಾಮುಖ್ಯತೆ ಪಡೆದಿದೆ. ಹಾಗಾಗಿ, ನಮ್ಮ ದೇಶದಲ್ಲಷ್ಟೆ ಅಲ್ಲ, ಜಗತ್ತಿನಾದ್ಯಂತ ಬಂಗಾರಕ್ಕೆ ಇರುವ ಬೇಡಿಕೆ ಅಷ್ಟಿಷ್ಟಲ್ಲ.

ಅದರಲ್ಲೂ ವಿಶೇಷವಾಗಿ ಭಾರತ ದೇಶ ಎಂದರೆ ಕೇಳಬೇಕೆ? ಮೊದಲಿನಿಂದಲೂ ಭಾರತದಲ್ಲಿ ಬಂಗಾರಕ್ಕಿರುವ ವಿಶೇಷತೆಯೇ ಬೇರೆ. ಮದುವೆಯಿಂದ ಹಿಡಿದು ಅನೇಕ ಇತರೆ ಶುಭ ಕಾರ್ಯಗಳಲ್ಲಿ ಭಾರತೀಯರು ಬಂಗಾರವನ್ನು ಯಥೇಚ್ಚವಾಗಿ ಬಳಸುತ್ತಾರೆ. ಅದರಲ್ಲೂ ನವಜಾತ ಶಿಷು ಇರಲಿ ಅಥವಾ ಹೊಸದಾಗಿ ಮದುವೆ ಮಾಡಿಕೊಂಡ ದಂಪತಿಗಳಿರಲಿ ಅವರಲ್ಲಿ ಬಂಗಾರದ ಯಾವುದಾದರೂ ವಸ್ತು ಅಥವಾ ಸಿಂಗಾರದ ಸಾಮಾನು ಇದ್ದೇ ಇರುತ್ತದೆ.

ಅಲ್ಲದೆ ಕಳೆದ ಕೆಲ ದಶಕಗಳಿಂದ ಜಾಗತಿಕ ಮಾರುಕಟ್ಟೆಯಾಗಲಿ ಅಥವಾ ದೇಶೀಯ ಮಾರುಕಟ್ಟೆಯಾಗಲಿ, ಹೂಡಿಕೆದಾರರು ಬಂಗಾರದ ನಿವೇಶನದ ಕುರಿತು ಹೆಚ್ಚು ಆಸಕ್ತರಾಗಿದ್ದಾರೆ. ಹಣದುಬ್ಬರದ ವಿರುದ್ಧವೂ ಸಹ ಬಂಗಾರ ಖರೀದಿ ಒಂದೊಳ್ಳೆಯ ಮಾರ್ಗವಾಗಿದೆ ಎಂಬುದು ಹಲವು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ. ಹಾಗಾಗಿ, ಇಂದು ಬಹು ಜನರು ಬಂಗಾರವನ್ನು ಒಂದು ಪ್ರಮುಖ ಹೂಡಿಕೆಯ ಮಾರ್ಗವಾಗಿ ಗುರುತಿಸುತ್ತಿದ್ದಾರೆ.

ಹಾಗಾಗಿಯೇ ಇಂದಿಗೂ ಭಾರತದ ಮಾರುಕಟ್ಟೆಗಳಲ್ಲಿ ಬಂಗಾರ ಖರೀದಿ ಎಂಬುದು ಬಹು ಸಾಮಾನ್ಯ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ವ್ಯವಹಾರವನ್ನು ಬಂಗಾರ ಹೊಂದಿದೆ. ಇನ್ನು ಪೆಟ್ರೋಲ್ ಡೀಸೆಲ್ ಗಳಂತೆ ಬಂಗಾರದ ಬೆಲೆಗಳಲ್ಲೂ ಆಗಾಗ ವ್ಯತ್ಯಾಸಗಳು ಆಗುತ್ತಲೇ ಇರುತ್ತವೆ.

ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮದಿಂದಾಗಿ ಎಲ್ಲೆಡೆ ಷೇರು ಮಾರುಕಟ್ಟೆಯಲ್ಲಿ ವ್ಯತ್ಯಾಸವಾಗುತ್ತಿದ್ದು ಇದರ ಪ್ರಭಾವ ಚಿನ್ನ ಬೆಳ್ಳಿ ದರಗಳ ಮೇಲೂ ಬೀಳುತ್ತಿದೆ. ಈಗ ಪ್ರಸ್ತುತ ಮತ್ತೆ ಚಿನ್ನ ಏರುಮುಖ ಮಾಡಿ ಸಾಗುತ್ತಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ನಿನ್ನೆಗೆ ಹೋಲಿಸಿದರೆ ಭಾರಿ ವ್ಯತ್ಯಾಸವೇನೂ ಆಗಿಲ್ಲ. ಒಂದು ಗ್ರಾಂ 22 ಕ್ಯಾರಟ್ ನ ಬಂಗಾರದ ಬೆಲೆ ರೂ. ರೂ. 4,940 ಆಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್ ಬೆಲೆ - ನಿಮ್ಮ ನಗರದಲ್ಲಿ ತೈಲ ದರ ಹೀಗಿದೆ

ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಬನ್ನಿ ಒಂದು ಪಕ್ಷಿ ನೋಟ ಬೀರೋಣ.

ಒಂದು ಗ್ರಾಂ (1GM)

22 ಕ್ಯಾರಟ್ ಬಂಗಾರದ ಬೆಲೆ - ರೂ. 4,980

24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,433

ಎಂಟು ಗ್ರಾಂ (8GM)

22 ಕ್ಯಾರಟ್ ಬಂಗಾರದ ಬೆಲೆ - ರೂ. 39,840

24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 43,464

ಹತ್ತು ಗ್ರಾಂ (10GM)

22 ಕ್ಯಾರಟ್ ಬಂಗಾರದ ಬೆಲೆ - ರೂ. 49,800

24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 54,330

ನೂರು ಗ್ರಾಂ (100GM)

22 ಕ್ಯಾರಟ್ ಬಂಗಾರದ ಬೆಲೆ - ರೂ. 4,98,000

24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,43,300

ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ ರೂ. 49,800 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ.50,200, ರೂ. 49,800, ರೂ. 49,800 ರಷ್ಟಿದೆ.

ಬೆಳ್ಳಿ ದರ

ನಿನ್ನೆಗೆ ಹೋಲಿಸಿದರೆ ಇಂದು ಭಾರತದಲ್ಲಿ ಬೆಳ್ಳಿ ದರದಲ್ಲಿ ಮತ್ತೆ ಹೆಚ್ಚಳವಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನೆ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ.

ಇದನ್ನೂ ಓದಿ: ನಾಟಿ ಕೋಳಿ ಸಾಕಾಣಿಕೆಯಿಂದ 24 ಲಕ್ಷ ರೂಪಾಯಿ ಗಳಿಸುತ್ತಿರುವ ರೈತ! ನೀವೂ ಕೇಳಿ ಇವರ ಸಲಹೆ

ಇಂದು, ಬೆಂಗಳೂರಿನಲ್ಲಿ ಬೆಳ್ಳಿಯ ದರದಲ್ಲಿ ಕೊಂಚ ಇಳಿಕೆಯಾಗಿದ್ದು 10gm, 100gm, 1000gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 767, ರೂ. 7,670 ಹಾಗೂ ರೂ. 76,700 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 76,700 ಆಗಿದ್ದರೆ ದೆಹಲಿಯಲ್ಲಿ 71,200 ಮುಂಬೈನಲ್ಲಿ 71,200 ಹಾಗೂ ಕೋಲ್ಕತ್ತದಲ್ಲೂ ರೂ. 71,200 ಗಳಾಗಿದೆ.
Published by:Sandhya M
First published: