Gold Price: ಯಥಾ ಸ್ಥಿತಿ ಕಾಯ್ದುಕೊಂಡ ಚಿನ್ನ; ಬೆಳ್ಳಿ 4,400 ರೂ. ಏರಿಕೆ! ಎಷ್ಟಿದೆ ಗೊತ್ತಾ ಗೋಲ್ಡ್-ಸಿಲ್ವರ್ ರೇಟ್?

ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 48,600 ರೂ. ಇತ್ತು. ಇಂದು ಸಹ ಅಷ್ಟೇ ಬೆಲೆ ಇದೆ. ಆದರೆ ಬೆಳ್ಳಿ ದರ ಮಾತ್ರ ಬರೋಬ್ಬರಿ 4,400 ರೂಪಾಯಿಗಳಷ್ಟು ಏರಿಕೆಯಾಗಿದೆ!

ಬಂಗಾರದ ಆಭರಣಗಳ ಸಂಗ್ರಹ ಚಿತ್ರ

ಬಂಗಾರದ ಆಭರಣಗಳ ಸಂಗ್ರಹ ಚಿತ್ರ

  • Share this:
    Gold Rate on April 11, 2022: ದೇಶದಲ್ಲಿ ಏಪ್ರಿಲ್‌ ತಿಂಗಳಲ್ಲಿ ಚಿನ್ನದ ದರದಲ್ಲಿ ಕಡಿಮೆಯಾಗುತ್ತದೆಂಬ ನಿರೀಕ್ಷೆ ಇತ್ತಾದರೂ ಸದ್ಯ ಚಿನ್ನದ ಬೆಲೆ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ರಷ್ಯಾ - ಉಕ್ರೇನ್‌ ಯುದ್ಧ (Russia Ukraine War), ಷೇರು ಮಾರುಕಟ್ಟೆಯಲ್ಲಿ (Share Market) ಅಲ್ಲೋಲ ಕಲ್ಲೋಲ - ಮುಂತಾದ ಕಾರಣಗಳಿಂದ ಚಿನ್ನ, ಬೆಳ್ಳಿ ದರ ಹೆಚ್ಚಾಗಿದೆ. ದೇಶದಲ್ಲಿಂದು ಚಿನ್ನದ ಬೆಲೆಯಲ್ಲಿ (Gold Price) ಸ್ಥಿರತೆ ಕಾಯ್ದುಕೊಂಡಿದೆ. ಬೆಂಗಳೂರಿನಲ್ಲಿ (Bengaluru) ಸಹ ಚಿನ್ನದ ಬೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 48,600 ರೂ. ಇತ್ತು. ಇಂದು ಸಹ ಅಷ್ಟೇ ಬೆಲೆ ಇದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 53,020 ರೂ. ಇತ್ತು. ಇಂದು ಸಹ ಅದೇ ದರ ಇದೆ. ಇನ್ನು, ಬೆಂಗಳೂರು ಸೇರಿ ದೇಶದ ವಿವಿಧ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬುದನ್ನು ವಿವರವಾಗಿ ನೋಡೋಣ..

    ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ..?

    ನೀವು ಚಿನ್ನ ಖರೀದಿಸುವ ಆಲೋಚನೆಯಲ್ಲಿದ್ದೀರಾ, ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆ ನಿನ್ನೆ 53,020 ರೂ. ಇತ್ತು. ಇಂದು ಸಹ ಅದೇ ದರ ಇದೆ. ಅದೇ ರೀತಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 48,600 ರೂ. ಇತ್ತು. ಇಂದು ಸಹ ಅಷ್ಟೇ ಬೆಲೆ ಇದೆ. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ.

    ಪ್ರಮುಖ ನಗರಗಳಲ್ಲಿ ಎಷ್ಟಿದೆ ಗೋಲ್ಡ್ ರೇಟ್?

    ಇನ್ನು, ದೇಶದ ಇತರೆ ನಗರಗಳಾದ ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆ, ಕೊಯಮತ್ತೂರು, ಮಧುರೈ, ಚಂಡೀಗಢ, ಸೂರತ್‌, ನಾಶಿಕ್‌ನಲ್ಲೂ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 53 ಸಾವಿರದಿಂದ 54 ಸಾವಿರದ ಆಸುಪಾಸಿನಲ್ಲೇ ಇದೆ.

    ಇದನ್ನೂ ಓದಿ: ಸಂಬಳ ಕೊಟ್ಟಿಲ್ಲ ಎಂದು ದೂರಿದ ಸಿಬ್ಬಂದಿ, ಕೊಟ್ಟಿದ್ದೇವೆ ಎಂದ ಕಂಪನಿ: ಬೀದಿಗೆ ಬಂದ BharatPe ಜಗಳ

    ಈ ಮಧ್ಯೆ, ದೇಶದ ಮೆಟ್ರೋಪಾಲಿಟನ್‌ ನಗರಗಳಾದ ಚೆನ್ನೈನಲ್ಲಿ 24 ಕ್ಯಾರೆಟ್‌ ಚಿನ್ನದ ಬೆಲೆ 53,660 ರೂ. ಇದ್ದರೆ, ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ ಹಾಗೂ ಕೋಲ್ಕತ್ತದಲ್ಲಿ 24 ಕ್ಯಾರೆಟ್‌ ಬಂಗಾರದ ಬೆಲೆ 53,020 ರೂ. ಆಗಿದೆ.

    4,400 ರೂಪಾಯಿ ಏರಿಕೆ ಕಂಡ ಬೆಳ್ಳಿ ದರ

    ದೇಶದಲ್ಲಿಂದು ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದ್ದರೆ ಬೆಳ್ಳಿ ದರ (Silver Rate) ದಲ್ಲಿ ಭಾರಿ ಏರಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 67,100 ರೂ. ಇತ್ತು. ಇಂದು 4,400 ರೂ. ಹೆಚ್ಚಾಗಿ 71,500 ರೂ. ಆಗಿದೆ.

    ಬೆಂಗಳೂರು ಹಾಗೂ ಇತರೇ ಮಹಾನಗರಗಳಲ್ಲಿ ಸಿಲ್ವರ್ ರೇಟ್

    ಇನ್ನು, ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ ಸಹ 1 ಕೆಜಿ ಬೆಳ್ಳಿಯ ಬೆಲೆ 71,500 ರೂ. ಆಗಿದೆ. ಇದೇ ರೀತಿ ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣಂ, ಕೇರಳದಲ್ಲಿ ಸಹ 1 ಕೆಜಿ ಬೆಳ್ಳಿಯ ಬೆಲೆ 71,500 ರೂ. ಇದೆ.

    ಇನ್ನೊಂದೆಡೆ, ಕೊಯಮತ್ತೂರು, ಮಧುರೈ, ಪುಣೆ, ಸೂರತ್‌, ನಾಶಿಕ್‌, ಚಂಡೀಗಢ ಸೇರಿ ಹಲವು ನಗರಗಳಲ್ಲಿ 1 ಕೆಜಿ ಬೆಳ್ಳಿಯ ಮೌಲ್ಯ 67,000 ರೂ. ಇದೆ.

    ಈ ಮಧ್ಯೆ, ರಾಷ್ಟ್ರ ರಾಜಧಾನಿ ದೆಹಲಿ, ಚೆನ್ನಯ ಹಾಗೂ ಕೋಲ್ಕತ್ತದಲ್ಲಿ 1 ಕೆಜಿ ಬೆಳ್ಳಿಯ ದರ 67,000 ರೂ. ಇದ್ದರೆ, ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 1 ಕೆಜಿ ಬೆಳ್ಳಿಯ ದರ 71,500 ರೂ. ಆಗಿದೆ.

    ಇದನ್ನೂ ಓದಿ: Multibagger Stock: 1 ಲಕ್ಷಕ್ಕೆ 25 ಲಕ್ಷ ಲಾಭ; ರಿಸ್ಕ್ ತಕೊಂಡವ್ರಿಗೆ ಸಿಕ್ತು ಲಾಭ!

    ಒಟ್ಟಾರೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಮುಂದುವರಿದಿದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.
    Published by:Annappa Achari
    First published: