Gold Price: ವೀಕೆಂಡ್‌ನಲ್ಲೂ ಆಭರಣ ಪ್ರಿಯರಿಗೆ ಶಾಕ್! ಇಂದೂ ಏರಿಕೆಯಾದ ಚಿನ್ನ-ಬೆಳ್ಳಿ ದರ

ವೀಕೆಂಡ್‌ನಲ್ಲಾದ್ರೂ ಚಿನ್ನ ಹಾಗೂ ಬೆಳ್ಳಿ ಬೆಲೆ ಕಡಿಮೆ ಆಗಬಹುದು, ಇಂದಾದರೂ ಚಿನ್ನ, ಬೆಳ್ಳಿ ಖರೀದಿ ಮಾಡಬೇಕು ಅಂತ ನೀವೇನಾದ್ರೂ ಯೋಚನೆ ಮಾಡ್ತಾ ಇದ್ದೀರಾ? ಹಾಗಿದ್ರೆ ಹಾಗಿದ್ರೆ ಸ್ವಲ್ಪ ನಿಧಾನಿಸಿ, ಈ ಸುದ್ದಿಯನ್ನು ಓದಿ. ಯಾಕೆಂದ್ರೆ ಭಾರತದಲ್ಲಿ ಚಿನ್ನದ ದರ ಇಂದು 10 ಗ್ರಾಂ.ಗೆ 390 ರೂ. ಏರಿಕೆಯಾಗಿದೆ. ಆದರೆ, ನಿನ್ನೆ ದಾಖಲೆಯ 4,200 ರೂ. ಕುಸಿತ ಕಂಡಿದ್ದ ಬೆಳ್ಳಿಯ ಬೆಲೆ, ಇದೀಗ 300 ರೂ. ಏರಿಕೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Gold And Silver Price on April 10, 2022: ಬಹುತೇಕ ಈ ವಾರ ಪೂರ್ತಿ ಚಿನ್ನ (Gold) ಹಾಗೂ ಬೆಳ್ಳಿ ದರದಲ್ಲಿ (Silver Price) ಏರಿಕೆ ಆಗುತ್ತಲೇ ಇದೆ. ಇದೀಗ ಇಂದು ಭಾನುವಾರ (Sunday) ಆಗಿರುವುದರಿಂದ ವೀಕೆಂಡ್‌ನಲ್ಲಾದ್ರೂ (Week End) ಚಿನ್ನ ಹಾಗೂ ಬೆಳ್ಳಿ ಬೆಲೆ ಕಡಿಮೆ ಆಗಬಹುದು, ಇಂದಾದರೂ ಚಿನ್ನ, ಬೆಳ್ಳಿ ಖರೀದಿ ಮಾಡಬೇಕು ಅಂತ ನೀವೇನಾದ್ರೂ ಯೋಚನೆ ಮಾಡ್ತಾ ಇದ್ದೀರಾ? ಹಾಗಿದ್ರೆ ಹಾಗಿದ್ರೆ ಸ್ವಲ್ಪ ನಿಧಾನಿಸಿ, ಈ ಸುದ್ದಿಯನ್ನು ಓದಿ. ಯಾಕೆ ಅಂದರೆ ನಿನ್ನೆಯಂತೆ ಇಂದೂ ಕೂಡ ಭಾರತದ ಮಾರುಕಟ್ಟೆಯಲ್ಲಿ (Indian Market) ಆಭರಣ (Jewellery) ಚಿನ್ನದ ಬೆಲೆಯಲ್ಲಿ (Gold rate) ಏರಿಕೆಯಾಗಿದೆ.  ಹಾಗಾದ್ರೆ ಬೆಂಗಳೂರು ಸೇರಿದಂತೆ ನಿಮ್ಮ ಊರಿನಲ್ಲಿ ಬೆಳ್ಳಿ, ಬಂಗಾರದ ಬೆಲೆ ಎಷ್ಟಿದೆ? ಇತರೇ ನಗರಗಳಲ್ಲಿ ಸಿಲ್ವರ್ ಹಾಗೂ ಗೋಲ್ಡ್ ರೇಟ್ ಎಷ್ಟು ಅಂತ ತಿಳಿದುಕೊಳ್ಳಲು ಈ ಸ್ಟೋರಿ ಓದಿ…

 ಭಾರತದಲ್ಲಿ ಇಂದು ಎಷ್ಟಿದೆ ಬಂಗಾರದ ಬೆಲೆ?

ಭಾರತದಲ್ಲಿ ಚಿನ್ನದ ದರ ಇಂದು 10 ಗ್ರಾಂ.ಗೆ 390 ರೂ. ಏರಿಕೆಯಾಗಿದೆ. ಆದರೆ, ನಿನ್ನೆ ದಾಖಲೆಯ 4,200 ರೂ. ಕುಸಿತ ಕಂಡಿದ್ದ ಬೆಳ್ಳಿಯ ಬೆಲೆ, ಇದೀಗ 300 ರೂ. ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 48,250 ರೂ. ಇದ್ದುದು 48,600 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 52,630 ರೂ. ಇದ್ದುದು 53,020 ರೂ. ಆಗಿದೆ.

ಬೆಂಗಳೂರಿನಲ್ಲಿ ಎಷ್ಟಿದೆ ಚಿನ್ನದ ರೇಟ್?

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಇಂದು 48,600 ರೂಪಾಯಿ ಆಗಿದೆ. ಹಾಗೆಯೇ ಮಂಗಳೂರಿನಲ್ಲಿ 48,600 ರೂಪಾಯಿ ಇದ್ದರೆ, ಮೈಸೂರಿನಲ್ಲೂ 48,600 ರೂಪಾಯಿ ಬೆಲೆ ಇದೆ. ಹಾಗೆಯೇ ಬೆಂಗಳೂರಿನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಇಂದು 53,020 ರೂಪಾಯಿ ಆಗಿದ್ದರೆ, ಮಂಗಳೂರು ಹಾಗೂ ಮೈಸೂರಿನಲ್ಲೂ ಸಹ 53,020 ರೂಪಾಯಿ ಬೆಲೆ ತಲುಪಿದೆ.

ಇದನ್ನೂ ಓದಿ: Petrol-Diesel Price Today: ವೀಕೆಂಡ್​ಗೆ ಕೊಂಚ ರಿಲ್ಯಾಕ್ಸ್, ಕೆಲವೆಡೆ ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ, ಇಂದಿನ ದರ ಹೀಗಿದೆ

 ಇತರೇ ಮಹಾನಗರಗಳಲ್ಲಿ ಗೋಲ್ಡ್ ರೇಟ್ ಎಷ್ಟಿದೆ?

ಇನ್ನು 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ಚೆನ್ನೈ- 49,190 ರೂ., ಮುಂಬೈ- 48,600 ರೂ, ದೆಹಲಿ- 48,600 ರೂ, ಕೊಲ್ಕತ್ತಾ- 48,600 ರೂ, ಹೈದರಾಬಾದ್- 48,600 ರೂ, ಕೇರಳ- 48,600 ರೂಪಾಯಿ ಹಾಗೂ ಪುಣೆಯಲ್ಲಿ 48,700 ರೂಪಾಯಿ ಬೆಲೆ ಇದೆ.

24 ಕ್ಯಾರೆಟ್‌ ಗೋಲ್ಡ್ ಬೆಲೆ ಎಷ್ಟು?

ಇನ್ನು 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ಚೆನ್ನೈ- 53,660 ರೂ, ಮುಂಬೈ- 53,020 ರೂ, ದೆಹಲಿ- 53,020 ರೂ, ಕೊಲ್ಕತ್ತಾ- 53,020 ರೂ, ಹೈದರಾಬಾದ್- 53,020 ರೂ, ಕೇರಳ- 53,020 ರೂ, ಪುಣೆ- 53,120 ರೂಪಾಯಿ ಬೆಲೆ ನಿಗದಿಯಾಗಿದೆ.

ಇಂದಿನ ಬೆಳ್ಳಿಯ ದರ

ಇಂದು 1 ಕೆಜಿ ಬೆಳ್ಳಿ ಬೆಲೆ 300 ರೂ. ಏರಿಕೆ ಕಂಡಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 66,800 ರೂ. ಇದ್ದುದು ಇಂದು 67,100 ರೂಪಾಯಿಗೆ ಏರಿಕೆಯಾಗಿದೆ. ಇಂದು  ಬೆಂಗಳೂರು- 71,500 ರೂ, ಮೈಸೂರು- 71,500 ರೂ., ಮಂಗಳೂರು- 71,500 ರೂ., ಮುಂಬೈ- 71,500 ರೂ, ಚೆನ್ನೈ- 71,500 ರೂ, ದೆಹಲಿ- 67,100 ರೂ, ಹೈದರಾಬಾದ್- 71,500 ರೂ, ಕೊಲ್ಕತ್ತಾ- 67000 ರೂಪಾಯಿ ಬೆಲೆ ನಿಗದಿಯಾಗಿದೆ.

ಇದನ್ನೂ ಓದಿ: Russia Ukraine War Effect: ಇಂಡೋನೇಷ್ಯಾದ ಬಡವರಿಗೆ ಅಡುಗೆ ಎಣ್ಣೆಯೇ ಸಿಗುತ್ತಿಲ್ಲ!

ಒಟ್ಟಾರೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಮುಂದುವರಿದಿದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.
Published by:Annappa Achari
First published: