Gold Price: ನಿನ್ನೆ ಚಿನ್ನ ಖರೀದಿಸೋದು ಮಿಸ್ ಮಾಡ್ಕೊಂಡ್ರಾ? ಅದೇ ಬೆಲೆಯಲ್ಲಿ ಬಂಗಾರವನ್ನ ಇವತ್ತು ಖರೀದಿಸಿ

ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,050 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 48,170, ರೂ. 47,050, ರೂ. 47,050 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,050 ರೂ. ಆಗಿದೆ.

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ (India Market) ಚಿನ್ನದ ಬೆಲೆಯಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ. ಇಂದು ಒಂದು ಗ್ರಾಂ ಆಭರಣದ ಚಿನ್ನದ ಬೆಲೆ (Gold Price) ರೂ. 4,705 ಆಗಿದೆ. ಮೇ 18 ರಂದು ಹತ್ತು ಗ್ರಾಂ 22 ಕ್ಯಾರಟ್ಟಿನ ಬಂಗಾರದ ಬೆಲೆ ರೂ. 46,100 ಇದ್ದದ್ದು ತದನಂತರ ಮೂರು ದಿನಗಳ ಕಾಲ ಸತತವಾಗಿ ಏರಿಕೆ ಕಂಡು ರೂ. 47,050 ಕ್ಕೆ ಹೋಗಿ ತಲುಪಿತ್ತು. ನಿನ್ನೆ ಹಾಗೂ ಇಂದು ಬೆಲೆ ಸ್ಥಿರವಾಗಿದೆ. ಇನ್ನು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಉಂಟಾಗುತ್ತಿರುವ ಕಚ್ಚಾ ತೈಲದಲ್ಲಾಗುತ್ತಿರುವ ಬೆಲೆ (Crude Oil Price) ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳು ಚಿನ್ನ ಹಾಗೂ ಬೆಳ್ಳಿ ದರಗಳ ಮೇಲೆ ಪ್ರಭಾವ ಬೀರುತ್ತಿವೆ.

ಆರ್ಥಿಕ ಸಂಕಷ್ಟದ ಕಾಲದಲ್ಲಿ ಕೈಯನ್ನು ಹಿಡಿಯುವ ನಂಬಿಕಸ್ಥ ಗೆಳೆಯ ಎಂದು ನಂಬಲಾಗಿರುವ ಚಿನ್ನವು ಈಗ ಹೂಡಿಕೆಯ ವಸ್ತುವಾಗಿಯೂ ಪ್ರಾಮುಖ್ಯತೆ ಪಡೆದಿದೆ. ಹಾಗಾಗಿ, ನಮ್ಮ ದೇಶದಲ್ಲಷ್ಟೆ ಅಲ್ಲ, ಜಗತ್ತಿನಾದ್ಯಂತ ಬಂಗಾರಕ್ಕೆ ಇರುವ ಬೇಡಿಕೆ ಅಷ್ಟಿಷ್ಟಲ್ಲ. ಭಾರತದ ಮಾರುಕಟ್ಟೆಗಳಲ್ಲಿ ಇಂದು ಚಿನ್ನ ಖರೀದಿ ಸಹಜ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ವ್ಯವಹಾರವನ್ನು ಈ ವ್ಯವಹಾರ ಹೊಂದಿದೆ. ದೇಶದಲ್ಲಿ ಇಂದು 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 47,050 ಆಗಿದೆ.

ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಬನ್ನಿ ಒಂದು ಪಕ್ಷಿ ನೋಟ ಬೀರೋಣ.

ಒಂದು ಗ್ರಾಂ (1GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,705
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,133

ಎಂಟು ಗ್ರಾಂ (8GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37,640
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,064

ಹತ್ತು ಗ್ರಾಂ (10GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 47,050
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 51,330

ನೂರು ಗ್ರಾಂ (100GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,70,500
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,13,300

ಇದನ್ನೂ ಓದಿ:  Fake SBI SMS: ನಿಮ್ಮ ಅಕೌಂಟ್ ಬ್ಲಾಕ್ ಆಗಿದೆ! ಹೀಗೆ ಮೆಸೇಜ್ ಬಂದರೆ ಏನು ಮಾಡಬೇಕು?

ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,050 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 48,170, ರೂ. 47,050, ರೂ. 47,050 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,050 ರೂ. ಆಗಿದೆ.

ಬೆಳ್ಳಿ ದರ

ಒಂದು ವಾರದಿಂದ ಭಾರತದಲ್ಲಿ ಬೆಳ್ಳಿ ದರದಲ್ಲಿ ಏರಿಳಿತ ಕಂಡುಬಂದಿದೆ. ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿ ದರದಲ್ಲಿ ಯಾವುದೇ ಏರಿಕೆಯಾಗಿಲ್ಲ. ಇಂದು ಭಾರತದ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ಬೆಳ್ಳಿ ಬೆಲೆ 61,400 ರೂ. ಆಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನೆ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ.

ಪ್ರಸ್ತುತ, ಬೆಂಗಳೂರು ನಗರದಲ್ಲಿ ಇಂದು 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 659, ರೂ. 6,590 ಹಾಗೂ ರೂ. 65,900 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 65,900 ಆಗಿದ್ದರೆ ದೆಹಲಿಯಲ್ಲಿ ರೂ. 61,400 ಮುಂಬೈನಲ್ಲಿ ರೂ. 61,400 ಹಾಗೂ ಕೊಲ್ಕತ್ತದಲ್ಲೂ ರೂ. 61,400 ಗಳಾಗಿದೆ.

ಭಾರತದಲ್ಲಿ ಚಿನ್ನಕ್ಕೆ ವಿಶೇಷ ಪ್ರಾಮುಖ್ಯತೆ

ಇನ್ನೂ, ಈ ಬಂಗಾರದ ಮೌಲ್ಯ ಜಾಗತಿಕ ಮಾರುಕಟ್ಟೆಯಲ್ಲೂ ಅಪಾರವಾಗಿದೆ. ಸಾಕಷ್ಟು ದೇಶಗಳು ವಿದೇಶಿ ವಿನಿಮಯ ರೂಪದಲ್ಲಿ ಚಿನ್ನದ ಸಂಗ್ರಹ ಹೊಂದಿರುವುದು ಎಲ್ಲರಿಗೂ ಗೊತ್ತೆ ಇದೆ, ಏಕೆಂದರೆ ಚಿನ್ನ ಎಲ್ಲ ದೇಶಗಳಲ್ಲೂ ಮಾನ್ಯತೆ ಪಡೆದಿದ್ದು ಎಲ್ಲರಿಂದಲೂ ಸ್ವೀಕರಿಸಲ್ಪಡುತ್ತದೆ. ಅದರಲ್ಲೂ ವಿಶೇಷವಾಗಿ ಭಾರತ ದೇಶ ಎಂದರೆ ಕೇಳಬೇಕೆ? ಮೊದಲಿನಿಂದಲೂ ಭಾರತದಲ್ಲಿ ಬಂಗಾರಕ್ಕಿರುವ ವಿಶೇಷತೆಯೇ ಬೇರೆ.

ಮದುವೆಯಿಂದ ಹಿಡಿದು ಅನೇಕ ಇತರೆ ಶುಭ ಕಾರ್ಯಗಳಲ್ಲಿ ಭಾರತೀಯರು ಬಂಗಾರವನ್ನು ಯಥೇಚ್ಚವಾಗಿ ಬಳಸುತ್ತಾರೆ. ಅದರಲ್ಲೂ ನವಜಾತ ಶಿಷು ಇರಲಿ ಅಥವಾ ಹೊಸದಾಗಿ ಮದುವೆ ಮಾಡಿಕೊಂಡ ದಂಪತಿಗಳಿರಲಿ ಅವರಲ್ಲಿ ಬಂಗಾರದ ಯಾವುದಾದರೂ ವಸ್ತು ಅಥವಾ ಸಿಂಗಾರದ ಸಾಮಾನು ಇದ್ದೆ ಇರುತ್ತದೆ.

ಇದನ್ನೂ ಓದಿ:  Bengaluru Hacker: 7 ಕೋಟಿ ಎಗರಿಸಿದ ಬೆಂಗಳೂರಿನ ಹ್ಯಾಕರ್! ಖದೀಮರನ್ನು ಪತ್ತೆಹಚ್ಚಲು ಪೊಲೀಸರ ಶತಪ್ರಯತ್ನ

ಹೆಚ್ಚಾದ ಚಿನ್ನದ ಮೇಲಿನ ಹೂಡಿಕೆ

ಕಳೆದ ಹಲವು ವರ್ಷಗಳಿಂದ ಚಿನ್ನವು ಹಣದುಬ್ಬರದ ವಿರುದ್ಧ ಒಂದು ರಕ್ಷಣಾತ್ಮಕ ಬೇಲಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಬಹುದು. ಹೂಡಿಕೆದಾರರು ಚಿನ್ನವನ್ನು ಪ್ರಮುಖ ಹೂಡಿಕೆಯ ವಸ್ತುವನ್ನಾಗಿ ನೋಡುತ್ತಿದ್ದಾರೆ. ಹಾಗಾಗಿ, ಚಿನ್ನವು ಮಾರುಕಟ್ಟೆಯಲ್ಲಿ ಒಂದು ಉತ್ತಮ ಹೂಡಿಕೆಯ ವಸ್ತುವಾಗಿ ಗುರುತಿಸಿಕೊಂಡಿದೆ. ಇಂದು ಚಿನ್ನದ ಹೂಡಿಕೆ ಬಹು ಸುರಕ್ಷಿತ ಹೂಡಿಕೆ ಎಂದೇ ಹಲವು ತಜ್ಞರು ಹೇಳುತ್ತಾರೆ. ಹಾಗಾಗಿ ಅದರಲ್ಲೂ ವಿಶೇಷವಾಗಿ ಭರತೀಯರಿಗೆ ಚಿನ್ನದ ಆಕರ್ಷಣೆ ತುಸು ಹೆಚ್ಚೇ ಎಂದು ಹೇಳಬಹುದು.
Published by:Mahmadrafik K
First published: