Gold Price Today : ದಿನದಿಂದ ದಿನಕ್ಕೆ ಏರಿಕೆಯಾಗ್ತಿರುವ ಚಿನ್ನ; ಬಂಗಾರ ಖರೀದಿಸೋ ಪ್ಲಾನ್ ಇದ್ರೆ ತಡ ಮಾಡಬೇಡಿ!

ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಇದನ್ನು ಹೊರತುಪಡಿಸಿ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನ ಹೇಗಿದೆ ಎಂಬುದರ ಮೇಲೆಯೂ ಚಿನ್ನೆ-ಬೆಳ್ಳಿ ದರಗಳ ಬೆಲೆಗಳಲ್ಲಿ ವ್ಯತ್ಯಾಸವಾಗುತ್ತಲೇ ಇರುತ್ತದೆ.

ಚಿನ್ನಾಭರಣ

ಚಿನ್ನಾಭರಣ

  • Share this:
Gold And Silver Price 23 February 2022: ಇಂದು ಚಿನ್ನದ ಹೂಡಿಕೆ(Gold Investment)ಯನ್ನು ಬಹು ಸುರಕ್ಷಿತ ಹೂಡಿಕೆ ಎಂದು ಕರೆಯಲಾಗುತ್ತದೆ. ಹಾಗಾಗಿ, ನಮ್ಮ ದೇಶದಲ್ಲಷ್ಟೆ ಅಲ್ಲ, ಜಗತ್ತಿನಾದ್ಯಂತ ಬಂಗಾರಕ್ಕೆ ಇರುವ ಬೇಡಿಕೆ (Demand) ಅಷ್ಟಿಷ್ಟಲ್ಲ. ಅದರಲ್ಲೂ ವಿಶೇಷವಾಗಿ ಭಾರತ ದೇಶ ಎಂದರೆ ಕೇಳಬೇಕೆ? ಮೊದಲಿನಿಂದಲೂ ಭಾರತ(India)ದಲ್ಲಿ ಬಂಗಾರಕ್ಕಿರುವ ವಿಶೇಷತೆಯೇ ಬೇರೆ. ಮದುವೆಯಿಂದ ಹಿಡಿದು ಅನೇಕ ಇತರೆ ಶುಭ ಕಾರ್ಯಗಳಲ್ಲಿ ಭಾರತೀಯರು ಬಂಗಾರವನ್ನು ಯಥೇಚ್ಚವಾಗಿ ಬಳಸುತ್ತಾರೆ. ಅದರಲ್ಲೂ ನವಜಾತ ಶಿಶು (New Born Baby) ಇರಲಿ ಅಥವಾ ಹೊಸದಾಗಿ ಮದುವೆ (Marriage) ಮಾಡಿಕೊಂಡ ದಂಪತಿಗಳಿರಲಿ ಅವರಲ್ಲಿ ಬಂಗಾರದ ಯಾವುದಾದರೂ ವಸ್ತು ಅಥವಾ ಸಿಂಗಾರದ ಸಾಮಾನು ಇದ್ದೆ ಇರುತ್ತದೆ.

ಇಂದು ಬಂಗಾರದ ನಿವೇಶನದ ಕುರಿತು ಹೆಚ್ಚು ಆಸಕ್ತರಾಗಿದ್ದಾರೆ. ಹಣದುಬ್ಬರದ ವಿರುದ್ಧವೂ ಸಹ ಬಂಗಾರ ಖರೀದಿ ಒಂದೊಳ್ಳೆಯ ಮಾರ್ಗವಾಗಿದೆ ಎಂಬುದು ಹಲವು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ. ಹಾಗಾಗಿ, ಇಂದು ಬಹು ಜನರು ಬಂಗಾರವನ್ನು ಒಂದು ಪ್ರಮುಖ ಹೂಡಿಕೆಯ ವಸ್ತು ಎಂದು ಗುರುತಿಸಿದ್ದಾರೆ.

ಬಂಗಾರ ಖರೀದಿ (Gold Purchase) ಎಂಬುದು ಬಹು ಸಾಮಾನ್ಯ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ವ್ಯವಹಾರವನ್ನು ಬಂಗಾರ ಹೊಂದಿದೆ.

ಬಂಗಾದರ ಬೆಲೆ ಕೊಂಚ ಇಳಿಕೆ

ಇಂದು ಭಾರತದ ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ಅತಿ ಕೊಂಚ ಇಳಿಕೆಯಾಗಿದೆ. ನಿನ್ನೆಗೆ ಒಂದು ಗ್ರಾಂ 22 ಕ್ಯಾರಟ್ ನ ಬಂಗಾರದ ಬೆಲೆ ರೂ. 4,599 ಆಗಿದ್ದರೆ ಇಂದಿನ ದರ ರೂ. 4,590 ಆಗಿದೆ. ಮಾರುಕಟ್ಟೆಯಲ್ಲಿ ಇಂದಿನ ಬಂಗಾರ ಹಾಗೂ ಬೆಳ್ಳಿ ದರಗಳ ಕುರಿತು ತಿಳಿಯೋಣ.

ಇದನ್ನೂ ಓದಿ:  LPG Price: ಗ್ರಾಹಕರೇ ಗಮನಿಸಿ, ಈ ಕಾರಣಕ್ಕೆ ಏಪ್ರಿಲ್ ನಲ್ಲಿ ದುಪ್ಪಟ್ಟು ಆಗಲಿದೆಯಂತೆ LPG ಬೆಲೆ

ಒಂದು ಗ್ರಾಂ (1GM)

22 ಕ್ಯಾರಟ್ ಬಂಗಾರದ ಬೆಲೆ - ರೂ. 4,626

24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,047

ಎಂಟು ಗ್ರಾಂ (8GM)

22 ಕ್ಯಾರಟ್ ಬಂಗಾರದ ಬೆಲೆ - ರೂ. 37,008

24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,376

ಹತ್ತು ಗ್ರಾಂ (10GM)

22 ಕ್ಯಾರಟ್ ಬಂಗಾರದ ಬೆಲೆ - ರೂ. 46,260

24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 50,470

ನೂರು ಗ್ರಾಂ (100GM)

22 ಕ್ಯಾರಟ್ ಬಂಗಾರದ ಬೆಲೆ - ರೂ. 4,62,600

24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,04,700

ರಾಜಧಾನಿ ನಗರ ಬೆಂಗಳೂರಿನಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಬೆಲೆಯಲ್ಲಿ ತುಸು ಏರಿಕೆಯಾಗಿದ್ದು 22 ಕ್ಯಾರಟ್ ಬಂಗಾರದ ಬೆಲೆ (ಪ್ರತಿ ಹತ್ತು ಗ್ರಾಂಗಳಿಗೆ)ರೂ. 46,260 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ.47,350, ರೂ. 46,260, ರೂ. 46,260 ರಷ್ಟಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೂ. 46,260 ಆಗಿದೆ.

ಇದನ್ನೂ ಓದಿ:  Joint Home Loans: 45ನೇ ವಯಸ್ಸಿನಲ್ಲಿ Home Loan ತೆಗೆದುಕೊಳ್ತಿದ್ದೀರಾ? ಹಾಗಾದ್ರೆ ಈ ವಿಷಯಗಳು ನಿಮಗೆ ಗೊತ್ತಿರಲಿ

ಬೆಳ್ಳಿ ದರ

ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಇದನ್ನು ಹೊರತುಪಡಿಸಿ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನ ಹೇಗಿದೆ ಎಂಬುದರ ಮೇಲೆಯೂ ಚಿನ್ನೆ-ಬೆಳ್ಳಿ ದರಗಳ ಬೆಲೆಗಳಲ್ಲಿ ವ್ಯತ್ಯಾಸವಾಗುತ್ತಲೇ ಇರುತ್ತದೆ.

ನಿನ್ನೆಗೆ ಹೋಲಿಸಿದರೆ ಬೆಳ್ಳಿ ದರದಲ್ಲಿ ಬೆಂಗಳೂರಿನಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. ಇಂದು, ಬೆಂಗಳೂರಿನಲ್ಲಿ 10gm, 100gm, 1000gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 700, ರೂ. 7000 ಹಾಗೂ ರೂ. 70,000 ಗಳಾಗಿದೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 69,100 ಆಗಿದ್ದರೆ ದೆಹಲಿಯಲ್ಲಿ 64,400 ಮುಂಬೈನಲ್ಲಿ 64,400 ಹಾಗೂ ಕೋಲ್ಕತ್ತದಲ್ಲೂ ರೂ. 64,400 ಗಳಾಗಿದೆ.

ಬೆಲೆಯಲ್ಲಿ ಏರಿಕೆ-ಇಳಿಕೆ ಆಗಬಹುದು

ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.
Published by:Mahmadrafik K
First published: