Gold Price Today: ಚಿನ್ನ ಖರೀದಿಗೆ ಹೋಗ್ತಿದ್ದೀರಾ? ಹಾಗಾದ್ರೆ ಇವತ್ತಿನ ಬೆಲೆ ಚೆಕ್ ಮಾಡ್ಕೊಳ್ಳಿ

ಭಾರತದ ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ಅತಿ ಕೊಂಚ ಇಳಿಕೆಯಾಗಿದೆ. ನಿನ್ನೆಗೆ ಒಂದು ಗ್ರಾಂ 22 ಕ್ಯಾರಟ್ ನ ಬಂಗಾರದ ಬೆಲೆ ರೂ. 4,600 ಆಗಿದ್ದರೆ ಇಂದಿನ ದರ ರೂ. 4,599 ಆಗಿದೆ.

ಚಿನ್ನ

ಚಿನ್ನ

  • Share this:
Gold And Silver Price Today 21 Feb 2022: ಆರ್ಥಿಕ ಸಂಕಷ್ಟಗಳು ತಲೆದೋರಿದಾಗ, ಯಾರಿಂದಲೂ ಸಾಲ (Loan) ಕೇಳದಂತಹ ಜಾಯಮಾನ ನಿಮ್ಮದಾಗಿದ್ದರೆ ನಿಮ್ಮ ಸಹಾಯಕ್ಕೆ ನಿಲ್ಲುವ  ವಸ್ತುಗಳ ಪೈಕಿ ಒಂದು ಬಂಗಾರವು ಪ್ರಮುಖ ಎಂಬುದರಲ್ಲಿ ಸಂದೇಹವೇ ಇಲ್ಲ. ಅಲ್ಲದೆ, ಚಿನ್ನವು ಸುರಕ್ಷಿತವಾಗಿರುವ ಹೂಡಿಕೆ(Investment)ಯೂ ಆಗಿ ಗಮನ ಸೆಳೆಯುತ್ತದೆ. ಹಾಗಾಗಿ, ನಮ್ಮ ದೇಶದಲ್ಲಷ್ಟೆ ಅಲ್ಲ, ಜಗತ್ತಿನಾದ್ಯಂತ ಬಂಗಾರಕ್ಕೆ ಇರುವ ಬೇಡಿಕೆ ಅಷ್ಟಿಷ್ಟಲ್ಲ. ಅದರಲ್ಲೂ ವಿಶೇಷವಾಗಿ ಭಾರತ ದೇಶ ಎಂದರೆ ಕೇಳಬೇಕೆ? ಮೊದಲಿನಿಂದಲೂ ಭಾರತ(India)ದಲ್ಲಿ ಬಂಗಾರಕ್ಕಿರುವ ವಿಶೇಷತೆಯೇ ಬೇರೆ. ಮದುವೆಯಿಂದ ಹಿಡಿದು ಅನೇಕ ಇತರೆ ಶುಭ ಕಾರ್ಯಗಳಲ್ಲಿ ಭಾರತೀಯರು ಬಂಗಾರವನ್ನು ಯಥೇಚ್ಚವಾಗಿ ಬಳಸುತ್ತಾರೆ. ಅದರಲ್ಲೂ ನವಜಾತ ಶಿಶು (Baby) ಇರಲಿ ಅಥವಾ ಹೊಸದಾಗಿ ಮದುವೆ (Marriage) ಮಾಡಿಕೊಂಡ ದಂಪತಿಗಳಿರಲಿ ಅವರಲ್ಲಿ ಬಂಗಾರದ ಯಾವುದಾದರೂ ವಸ್ತು ಅಥವಾ ಸಿಂಗಾರದ ಸಾಮಾನು ಇದ್ದೆ ಇರುತ್ತದೆ.

ಅಲ್ಲದೆ ಕಳೆದ ಕೆಲ ದಶಕಗಳಿಂದ ಜಾಗತಿಕ ಮಾರುಕಟ್ಟೆಯಾಗಲಿ ಅಥವಾ ದೇಶೀಯ ಮಾರುಕಟ್ಟೆಯಾಗಲಿ, ಹೂಡಿಕೆದಾರರು ಬಂಗಾರದ ನಿವೇಶನದ ಕುರಿತು ಹೆಚ್ಚು ಆಸಕ್ತರಾಗಿದ್ದಾರೆ. ಹಣದುಬ್ಬರದ ವಿರುದ್ಧವೂ ಸಹ ಬಂಗಾರ ಖರೀದಿ ಒಂದೊಳ್ಳೆಯ ಮಾರ್ಗವಾಗಿದೆ ಎಂಬುದು ಹಲವು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ. ಹಾಗಾಗಿ, ಇಂದು ಬಹು ಜನರು ಬಂಗಾರವನ್ನು ಒಂದು ಪ್ರಮುಖ ಹೂಡಿಕೆಯ ಮಾರ್ಗವಾಗಿ ಗುರುತಿಸುತ್ತಿದ್ದಾರೆ.

ಹಾಗಾಗಿಯೇ ಇಂದಿಗೂ ಭಾರತದ ಮಾರುಕಟ್ಟೆ(Indian Market)ಗಳಲ್ಲಿ ಬಂಗಾರ ಖರೀದಿ ಎಂಬುದು ಬಹು ಸಾಮಾನ್ಯ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ವ್ಯವಹಾರವನ್ನು ಬಂಗಾರ ಹೊಂದಿದೆ. ಇನ್ನು ಪೆಟ್ರೋಲ್ ಡೀಸೆಲ್ ಗಳಂತೆ ಬಂಗಾರದ ಬೆಲೆಗಳಲ್ಲೂ ಆಗಾಗ ವ್ಯತ್ಯಾಸಗಳು ಆಗುತ್ತಲೇ ಇರುತ್ತವೆ.
ಇಂದು ಭಾರತದ ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ಅತಿ ಕೊಂಚ ಇಳಿಕೆಯಾಗಿದೆ. ನಿನ್ನೆಗೆ ಒಂದು ಗ್ರಾಂ 22 ಕ್ಯಾರಟ್ ನ ಬಂಗಾರದ ಬೆಲೆ ರೂ. 4,600 ಆಗಿದ್ದರೆ ಇಂದಿನ ದರ ರೂ. 4,599 ಆಗಿದೆ.  ಮಾರುಕಟ್ಟೆಯಲ್ಲಿ ಇಂದಿನ  ಬಂಗಾರದ ದರಗಳ ಕುರಿತು ಬನ್ನಿ ಒಂದು ಪಕ್ಷಿ ನೋಟ ಬೀರೋಣ.

ಇದನ್ನೂ ಓದಿ:  Petrol Price Today : ಗಮನಿಸಿ: ರಾಜ್ಯದಲ್ಲಿ ಇಂದು ಪೆಟ್ರೋಲ್-ಡೀಸೆಲ್ ದರಗಳ ವಿವರ ಹೀಗಿದೆ

ಒಂದು ಗ್ರಾಂ (1GM)
22 ಕ್ಯಾರಟ್ ಬಂಗಾರದ ಬೆಲೆ - ರೂ. 4,599
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,018

ಎಂಟು ಗ್ರಾಂ (8GM)
22 ಕ್ಯಾರಟ್ ಬಂಗಾರದ ಬೆಲೆ - ರೂ. 36,792
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,144

ಹತ್ತು ಗ್ರಾಂ (10GM)
22 ಕ್ಯಾರಟ್ ಬಂಗಾರದ ಬೆಲೆ - ರೂ. 45,990
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 50,180

ನೂರು ಗ್ರಾಂ (100GM)
22 ಕ್ಯಾರಟ್ ಬಂಗಾರದ ಬೆಲೆ - ರೂ. 4,59,900
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,01,800

ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ ರೂ. 45,990 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ.47,320, ರೂ. 45,990, ರೂ. 45,990 ರಷ್ಟಿದೆ.

ಬೆಳ್ಳಿ ದರ

ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನೆ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ.

ಇದನ್ನೂ ಓದಿ: Digital Marketing: ಸ್ಥಳೀಯ ಉತ್ಪನ್ನಗಳಿಗೆ ಆನ್​ಲೈನ್ ಅಂಗಡಿ..! ಹಳ್ಳಿ ಯುವಕನ ಹೊಸ ಐಡಿಯಾ

ಇಂದು, ಬೆಂಗಳೂರಿನಲ್ಲಿ 10gm, 100gm, 1000gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 700, ರೂ. 7000 ಹಾಗೂ ರೂ. 70,000 ಗಳಾಗಿದೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 68,600 ಆಗಿದ್ದರೆ ದೆಹಲಿಯಲ್ಲಿ 64,000 ಮುಂಬೈನಲ್ಲಿ 64,000 ಹಾಗೂ ಕೋಲ್ಕತ್ತದಲ್ಲೂ ರೂ. 64,000 ಗಳಾಗಿದೆ.
Published by:Mahmadrafik K
First published: