Gold Price: ಬಂಗಾರದ ಬೆಲೆ ನಿನ್ನೆ ಏರಿಕೆ, ಇಂದು ಇಳಿಕೆ; ಚಿನ್ನ ಖರೀದಿಗೂ ಮುನ್ನ ಇವತ್ತಿನ ದರ ತಿಳಿದುಕೊಳ್ಳಿ

ಚಿನ್ನದ ವಿಷಯಕ್ಕೆ ಬಂದಾಗ ಇಂದು ಇದ್ದ ಬೆಲೆ ನಾಳೆ ಇರಲ್ಲ, ನಾಳೆ ಇದ್ದ ಬೆಲೆ ಮುಂದೊಂದಿನ ಇರಲ್ಲ. ಬೆಳ್ಳಿ ಬಂಗಾರ ದರದಲ್ಲಿ (Gold And Silver) ಹಾವು-ಏಣಿ ಆಟ ಸಹಜ. ಹೀಗಾಗಿ ಚಿನ್ನ ಖರೀದಿಸುವ ಮುನ್ನ ಬೆಲೆಯನ್ನು ಒಮ್ಮೆ ತಿಳಿದುಕೊಳ್ಳುವುದು ಉತ್ತಮ.

ಚಿನ್ನ

ಚಿನ್ನ

  • Share this:
Gold And Silver Price Today: ಜಾಗತಿಕ ಮಾರುಕಟ್ಟೆಯಲ್ಲಿನ ನಡೆಯುತ್ತಿರುವ ಬದಲಾವಣೆ ಹಿನ್ನೆಲೆಯಲ್ಲಿ ಏರಿಕೆಯ ಹಾದಿಯಲ್ಲಿ ಸಾಗಿರುವ ಚಿನ್ನದ ಬೆಲೆ (Gold Price) ಇಂದು ಮತ್ತೆ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಚಿನ್ನದ ವಿಷಯಕ್ಕೆ ಬಂದಾಗ ಇಂದು ಇದ್ದ ಬೆಲೆ ನಾಳೆ ಇರಲ್ಲ, ನಾಳೆ ಇದ್ದ ಬೆಲೆ ಮುಂದೊಂದಿನ ಇರಲ್ಲ. ಬೆಳ್ಳಿ ಬಂಗಾರ ದರದಲ್ಲಿ (Gold And Silver) ಹಾವು-ಏಣಿ ಆಟ ಸಹಜ. ಹೀಗಾಗಿ ಚಿನ್ನ ಖರೀದಿಸುವ ಮುನ್ನ ಬೆಲೆಯನ್ನು ಒಮ್ಮೆ ತಿಳಿದುಕೊಳ್ಳುವುದು ಉತ್ತಮ. ಮಾರುಕಟ್ಟೆಯಲ್ಲಿ ನಿನ್ನೆ ಒಂದು ಗ್ರಾಂ ಆಭರಣದ ಚಿನ್ನದ ಬೆಲೆ ರೂ. 4,785 ಇದ್ದದ್ದು ಇಂದು 4,775 ರೂಪಾಯಿಯಾಗಿದ್ದು, ಕಳೆದೆರೆಡು ದಿನಗಳಲ್ಲಿ ಏರಿಳಿತಗಳು ನಡೆಯುತ್ತಿವೆ.

ಆರ್ಥಿಕ ಸಂಕಷ್ಟದ ಕಾಲದಲ್ಲಿ ಕೈ ಹಿಡಿಯುವ ನಂಬಿಕಸ್ಥ ಗೆಳೆಯ ಎಂದು ನಂಬಲಾಗಿರುವ ಚಿನ್ನವು ಈಗ ಹೂಡಿಕೆಯ ವಸ್ತುವಾಗಿಯೂ ಪ್ರಾಮುಖ್ಯತೆ ಪಡೆದಿದೆ. ಹಾಗಾಗಿ, ನಮ್ಮ ದೇಶದಲ್ಲಷ್ಟೆ ಅಲ್ಲ, ಜಗತ್ತಿನಾದ್ಯಂತ ಬಂಗಾರಕ್ಕೆ ಇರುವ ಬೇಡಿಕೆ ಅಷ್ಟಿಷ್ಟಲ್ಲ. ಭಾರತದ ಮಾರುಕಟ್ಟೆಗಳಲ್ಲಿ ಇಂದು ಚಿನ್ನ ಖರೀದಿ ಸಹಜ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ವ್ಯವಹಾರವನ್ನು ಈ ವ್ಯವಹಾರ ಹೊಂದಿದೆ. ಬೆಂಗಳೂರಿನಲ್ಲಿ ಇಂದು 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 47,750 ಆಗಿದೆ.

ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಬನ್ನಿ ಒಂದು ಪಕ್ಷಿ ನೋಟ ಇಲ್ಲಿದೆ.

ಒಂದು ಗ್ರಾಂ (1GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,775
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,210

ಎಂಟು ಗ್ರಾಂ (8GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 38,200
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,680

ಹತ್ತು ಗ್ರಾಂ (10GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 47,750
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 52,100

ನೂರು ಗ್ರಾಂ (100GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,77,500
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,21,000

ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,750 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,920, ರೂ. 47,750, ರೂ. 47,750 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,750 ರೂ. ಆಗಿದೆ.

ಇದನ್ನೂ ಓದಿ:  Price Hike: ಬೆಲೆ ಏರಿಕೆ ಹೊಡೆತ ತಡೆದುಕೊಳ್ಳಲು ಇನ್ನೂ ಮೂರು ತಿಂಗಳು ರೆಡಿಯಾಗಿ!

ಬೆಳ್ಳಿ ದರ

ಒಂದು ವಾರದಿಂದ ಭಾರತದಲ್ಲಿ ಬೆಳ್ಳಿ ದರದಲ್ಲಿ ಏರಿಳಿತ ಕಂಡುಬಂದಿದೆ. ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿಯಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡುಬಂದಿದೆ. ನಿನ್ನೆ 1 ಕೆಜಿಗೆ 62,500 ಇದ್ದ ಬೆಳ್ಳಿ ಇಂದು ಭಾರತದ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 61,600 ರೂ. ಆಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ.

ಪ್ರಸ್ತುತ, ಬೆಂಗಳೂರು ನಗರದಲ್ಲಿ ಇಂದು 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 675, ರೂ. 6,750 ಹಾಗೂ ರೂ. 67,500 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 67,500 ಆಗಿದ್ದರೆ ದೆಹಲಿಯಲ್ಲಿ ರೂ. 61,600 ಮುಂಬೈನಲ್ಲಿ ರೂ. 61,600 ಹಾಗೂ ಕೊಲ್ಕತ್ತದಲ್ಲೂ ರೂ. 61,600 ಗಳಾಗಿದೆ.

ಬೆಲೆ ಏರಿಳಿತಕ್ಕೆ ಕಾರಣಗಳೇನು?

ಕಳೆದ ಕೆಲ ಸಮಯದಿಂದ ಚಿನ್ನದ ಬೆಲೆಗಳಲ್ಲಿ ಅಲ್ಪ ಪ್ರಮಾಣದ ಏರಿಳಿತಗಳು ಆಗುತ್ತಲೇ ಇದ್ದು ಇದಕ್ಕೆ ಪ್ರಮುಖ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಕಚ್ಚಾ ತೈಲದಲ್ಲಾಗುತ್ತಿರುವ ಬೆಲೆ ಏರಿಕೆ, ಹಣದುಬ್ಬರ ಹಾಗೂ ಇತರೆ ಜಾಗತಿಕ ಅಂಶಗಳೇ ಆಗಿವೆ.

ಇದನ್ನೂ ಓದಿ:  Labour Salary: 10 ಸಾವಿರಕ್ಕಿಂತ ಕಡಿಮೆ ಈ ಕಾರ್ಮಿಕರ ಆದಾಯ! ಆಘಾತಕಾರಿ ಮಾಹಿತಿ ಬಹಿರಂಗ

ಹೆಚ್ಚಾದ ಚಿನ್ನದ ಮೇಲಿನ ಹೂಡಿಕೆ

ಕಳೆದ ಹಲವು ವರ್ಷಗಳಿಂದ ಚಿನ್ನವು ಹಣದುಬ್ಬರದ ವಿರುದ್ಧ ಒಂದು ರಕ್ಷಣಾತ್ಮಕ ಬೇಲಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಬಹುದು. ಹೂಡಿಕೆದಾರರು ಚಿನ್ನವನ್ನು ಪ್ರಮುಖ ಹೂಡಿಕೆಯ ವಸ್ತುವನ್ನಾಗಿ ನೋಡುತ್ತಿದ್ದಾರೆ. ಹಾಗಾಗಿ, ಚಿನ್ನವು ಮಾರುಕಟ್ಟೆಯಲ್ಲಿ ಒಂದು ಉತ್ತಮ ಹೂಡಿಕೆಯ ವಸ್ತುವಾಗಿ ಗುರುತಿಸಿಕೊಂಡಿದೆ. ಇಂದು ಚಿನ್ನದ ಹೂಡಿಕೆ ಬಹು ಸುರಕ್ಷಿತ ಹೂಡಿಕೆ ಎನ್ನುತ್ತಾರೆ ತಜ್ಞರು .

ಇನ್ನೂ, ಈ ಬಂಗಾರದ ಮೌಲ್ಯ ಜಾಗತಿಕ ಮಾರುಕಟ್ಟೆಯಲ್ಲೂ ಅಪಾರವಾಗಿದೆ. ಸಾಕಷ್ಟು ದೇಶಗಳು ವಿದೇಶಿ ವಿನಿಮಯ ರೂಪದಲ್ಲಿ ಚಿನ್ನದ ಸಂಗ್ರಹ ಹೊಂದಿರುವುದು ಎಲ್ಲರಿಗೂ ಗೊತ್ತೆ ಇದೆ, ಏಕೆಂದರೆ ಚಿನ್ನ ಎಲ್ಲ ದೇಶಗಳಲ್ಲೂ ಮಾನ್ಯತೆ ಪಡೆದಿದ್ದು ಎಲ್ಲರಿಂದಲೂ ಸ್ವೀಕರಿಸಲ್ಪಡುತ್ತದೆ.
Published by:Mahmadrafik K
First published: