Gold and Silver Price, March 19, 2022: ಕಳೆದ ಎರಡು ಮೂರು ದಿನಗಳಿಂದ ಚಿನ್ನ (Gold) ಹಾಗೂ ಬೆಳ್ಳಿಯ (Silver) ಬೆಲೆಯಲ್ಲಿ (Price) ಇಳಿಕೆ ಆಗುತ್ತಿತ್ತು. ಆದರೆ ನಿನ್ನೆ ಹೋಳಿ (Holi) ಹಬ್ಬದ (Festival) ಸಂದರ್ಭದಲ್ಲಿ ಮತ್ತೆ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಏರಿಕೆಯಾಗಿತ್ತು. ಆದರೆ ಇಂದು 24 ಕ್ಯಾರೆಟ್ (24 carat ) ಚಿನ್ನದ ಬೆಲೆಯಲ್ಲಿ 10 ರೂಪಾಯಿಗಳಷ್ಟು ಏರಿಕೆಯಾಗಿದೆ. 22 ಕ್ಯಾರೆಟ್ (22 carat) ಚಿನ್ನದ ಬೆಲೆಯಲ್ಲಿ ಯಾವುದೇ ಏರಿಳಿತವಾಗಿಲ್ಲ. ಭಾರತದಲ್ಲಿ ಬೆಳ್ಳಿಯ ಬೆಲೆ ಕೂಡ (Silver Price) ಇಂದು ಯಥಾಸ್ಥಿತಿಯಲ್ಲಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.
ಇಂದು 22 ಕ್ಯಾರೆಟ್, 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ?
ಭಾರತದ ಅನೇಕ ನಗರಗಳಲ್ಲಿ ಎರಡು ದಿನಗಳಿಂದ ಚಿನ್ನದ ಬೆಲೆ ಕುಸಿತವಾಗಿತ್ತು. ಆದರೆ, ಇಂದು 22 ಕ್ಯಾರೆಟ್ ಚಿನ್ನದ ಬೆಲೆ 47,450 ರೂ. ಇದ್ದುದು ಯಥಾಸ್ಥಿತಿಯಲ್ಲಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 51,760 ರೂಪಾಯಿ ಇತ್ತು. ಆದರೆ ಇಂದು ಕೇವಲ 10 ರೂಪಾಯಿ ಜಾಸ್ತಿಯಾಗಿದೆ. ಅಂದರೆ ಇಂದು 51,770 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ ಎಷ್ಟಿದೆ 22 ಕ್ಯಾರೆಟ್ ಚಿನ್ನದ ಬೆಲೆ?
ಇಂದು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಬೆಂಗಳೂರು- 47,450 ರೂಪಾಯಿ ಆಗಿದೆ. ಇನ್ನು ಮಂಗಳೂರಿನಲ್ಲಿ 47,450 ರೂಪಾಯಿ ಆಗಿದ್ದರೆ, ಮೈಸೂರಿನಲ್ಲಿ 47,450 ರೂಪಾಯಿ ಬೆಲೆ ಇದೆ.
ಇದನ್ನೂ ಓದಿ: Swiggy: ಕೇಂದ್ರ ಸರ್ಕಾರ 27.5 ಕೋಟಿ ರೂಪಾಯಿ ಕೊಡಬೇಕಾ ಸ್ವಿಗ್ಗಿಗೆ? ಈ ಬಗ್ಗೆ ಹೈಕೋರ್ಟ್ ಹೇಳಿದ್ದೇನು?
24 ಕ್ಯಾರೆಟ್ಗೆ ಬೆಂಗಳೂರಿನಲ್ಲಿ ದರ ಎಷ್ಟಿದೆ?
ಇನ್ನು ಬೆಂಗಳೂರಿನಲ್ಲಿ 24 ಕ್ಯಾರೆಟ್ನ ಗೋಲ್ಡ್ಗೆ 51,770 ರೂಪಾಯಿ ಆಗಿದೆ. ಹಾಗೆಯೇ ಮಂಗಳೂರಿನಲ್ಲಿ ಬೆಲೆ 51,770 ರೂಪಾಯಿ ಆದರೆ, ಮೈಸೂರಿನಲ್ಲಿ 51,770 ರೂಪಾಯಿ ದರವಿದೆ.
ದೇಶದ ಇತರೇ ನಗರಗಳಲ್ಲಿ ಚಿನ್ನದ ಬೆಲೆ
ಇನ್ನು ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 48,220 ರೂ. ಮುಂಬೈ- 47,450 ರೂ, ದೆಹಲಿ- 47,450 ರೂ, ಕೊಲ್ಕತ್ತಾ- 47,450 ರೂ, ರೂ, ಹೈದರಾಬಾದ್- 47,450 ರೂ, ಕೇರಳ- 47,450 ರೂಪಾಯಿ ಹಾಗೂ ಪುಣೆಯಲ್ಲಿ 47,480 ರೂಪಾಯಿ ಇದೆ.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನಕ್ಕೆ ಇಂದು ಚೆನ್ನೈ- 52,600 ರೂ, ಮುಂಬೈ- 51,770 ರೂ, ದೆಹಲಿ- 51,770 ರೂ, ಕೊಲ್ಕತ್ತಾ- 51,770 ರೂ, , ಹೈದರಾಬಾದ್- 51,770 ರೂ, ಕೇರಳ- 51,770 ರೂ ಹಾಗೂ ಪುಣೆಯಲ್ಲಿ 51,790 ರೂಪಾಯಿ ಇದೆ.
ಭಾರತದಲ್ಲಿ ಇಂದು ಸಿಲ್ವರ್ ರೇಟ್
ಕಳೆದ ವಾರದಿಂದ ಗಗನಕ್ಕೇರಿದ್ದ ಬೆಳ್ಳಿ ಬೆಲೆ ಇಂದು ಯಥಾಸ್ಥಿತಿಯ ಕಾಯ್ದುಕೊಂಡಿದೆ. ಇಂದು ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 69,000 ರೂಪಾಯಿ ಇದೆ.
ಪ್ರಮುಖ ನಗರಗಳಲ್ಲಿ ಎಷ್ಟಿದೆ ಬೆಳ್ಳಿಯ ಬೆಲೆ?
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 72,900 ರೂ, ಮೈಸೂರು- 72,900 ರೂ., ಮಂಗಳೂರು- 72,900 ರೂ., ಮುಂಬೈ- 69,000 ರೂ, ಚೆನ್ನೈ- 72,900 ರೂ, ದೆಹಲಿ- 69,000 ರೂ, ಹೈದರಾಬಾದ್- 72,900 ರೂ, ಕೊಲ್ಕತ್ತಾ- 69,000 ರೂ. ಇದೆ.
ಇದನ್ನೂ ಓದಿ: Explained: ಪೆಟ್ರೋಲ್ ಬೆಲೆ ಇಳಿಕೆಯಾಗ್ತಿರೋದು ಖುಷಿ ಪಡುವ ವಿಚಾರನಾ? ಭಾರತದ ಮೇಲೆ ಇದರ ಪರಿಣಾಮ ಏನು ಗೊತ್ತಾ?
ಒಟ್ಟಾರೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಮುಂದುವರಿದಿದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ