Gold Price: ಹೋಳಿ ಹಬ್ಬದ ದಿನವೇ ದುಬಾರಿಯಾದ ಚಿನ್ನ! ನಿಮ್ಮ ನಗರಗಳಲ್ಲಿ ಇಂದು ಗೋಲ್ಡ್ ರೇಟ್ ಎಷ್ಟು?

ಹೋಳಿ ಹಬ್ಬದ ನೆಪದಲ್ಲಾದರೂ ಚಿನ್ನ, ಬೆಳ್ಳಿ ಆಭರಣ ಖರೀದಿ ಮಾಡ್ಬೇಕು ಅಂತ ಪ್ಲಾನ್ ಮಾಡಿದ್ದೀರಾ? ಹಾಗಿದ್ರೆ ಆಭರಣದ ಅಂಗಡಿಗೆ ಹೋಗುವ ಮುನ್ನ ಇದನ್ನೊಮ್ಮೆ ಓದಿಕೊಂಡು ಹೋಗಿ. ಯಾಕೆಂದ್ರೆ ಕೆಲ ದಿನಗಳಿಂದ ಭಾರೀ ಕುಸಿತ ಕಂಡಿದ್ದ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Gold and Silver Price, March 18, 2022: ಕಳೆದ ಎರಡು ಮೂರು ದಿನಗಳಿಂದ ಚಿನ್ನ (Gold) ಹಾಗೂ ಬೆಳ್ಳಿಯ (Silver) ಬೆಲೆಯಲ್ಲಿ (Price) ಇಳಿಕೆ ಆಗುತ್ತಿತ್ತು. ಹೀಗಾಗಿ ಇಂದು ಹೋಳಿ ಹಬ್ಬದ (Holi Festival) ನೆಪದಲ್ಲಾದರೂ ಚಿನ್ನ, ಬೆಳ್ಳಿ ಆಭರಣ (Jewellery) ಖರೀದಿ ಮಾಡ್ಬೇಕು ಅಂತ ಪ್ಲಾನ್ ಮಾಡಿದ್ದೀರಾ? ಹಾಗಿದ್ರೆ ಆಭರಣದ ಅಂಗಡಿಗೆ (Shop) ಹೋಗುವ ಮುನ್ನ ಇದನ್ನೊಮ್ಮೆ ಓದಿಕೊಂಡು ಹೋಗಿ. ಯಾಕೆಂದ್ರೆ ಕೆಲ ದಿನಗಳಿಂದ ಭಾರೀ ಕುಸಿತ ಕಂಡಿದ್ದ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 160 ರೂ. ಏರಿಕೆಯಾಗಿದೆ. ಭಾರತದಲ್ಲಿ ಬೆಳ್ಳಿಯ ಬೆಲೆ ಕೂಡ ನಿನ್ನೆಗಿಂತಲೂ ಇಂದು 1,100 ರೂ. ಏರಿಕೆ ಕಂಡಿದೆ.

ಇಂದು ಕೊಂಚ ದುಬಾರಿಯಾಗಿದೆ ಚಿನ್ನ

ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ. ಹೀಗಾಗಿ ನಿನ್ನೆ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,300 ರೂ. ಇತ್ತು. ಇಂದು 47,450 ರೂಪಾಯಿಗೆ ಏರಿಕೆ ಕಂಡಿದೆ. ಹಾಗೇಯೇ ನಿನ್ನೆ 24 ಕ್ಯಾರೆಟ್ ಚಿನ್ನದ ಬೆಲೆ 51,600 ರೂ. ಇತ್ತು. ಇಂದು ಅದರ ಬೆಲೆ 51,760 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ ಎಷ್ಟಿದೆ ಇಂದು ಚಿನ್ನದ ಬೆಲೆ?

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್‌ ಚಿನ್ನದ ಬೆಲೆ 47,450 ರೂಪಾಯಿ ಆಗಿದೆ.  ಇನ್ನು ಇಂದು 24 ಕ್ಯಾರೆಟ್‌ ಚಿನ್ನದ ಬೆಲೆ 51,760 ರೂಪಾಯಿ ಆಗಿದೆ.

ಇದನ್ನೂ ಓದಿ: Paytm ಷೇರಿನಲ್ಲಿ ಭಾರಿ ಕುಸಿತ: ನಿತ್ಯ ₹88 ಕೋಟಿ ಕಳೆದುಕೊಳ್ಳುತ್ತಿರುವ ಸಂಸ್ಥಾಪಕ ವಿಜಯ್​ ಶೇಖರ್​​ ಶರ್ಮಾ!

ರಾಜ್ಯದ ಇತರೇ ನಗರಗಳಲ್ಲಿ ಎಷ್ಟಿದೆ ಗೋಲ್ಡ್‌ ರೇಟ್?

ಇನ್ನು ಮಂಗಳೂರಿನಲ್ಲಿ 22 ಕ್ಯಾರೆಟ್‌ ಗೋಲ್ಡ್‌ ಬೆಲೆ 47,450 ರೂಪಾಯಿ ಆಗಿದ್ದರೆ, ಮೈಸೂರಿನಲ್ಲಿ 47,450 ರೂಪಾಯಿ ಆಗಿದೆ. ಹಾಗೇಯೇ 24 ಕ್ಯಾರೆಟ್‌ ಗೋಲ್ಡ್‌ಗೆ ಮಂಗಳೂರಿನಲ್ಲಿ 51,760 ರೂಪಾಯಿ ಇದ್ದರೆ,  ಮೈಸೂರಿನಲ್ಲಿ 51,760 ರೂಪಾಯಿ ಇದೆ.

ದೇಶದ ಪ್ರಮುಖ ನಗರಗಳಲ್ಲಿ ಗೋಲ್ಡ್ ರೇಟ್ ಎಷ್ಟಿದೆ?

ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48.140 ರೂ. ಮುಂಬೈ- 47,450 ರೂ, ದೆಹಲಿ- 47,450 ರೂ, ಕೊಲ್ಕತ್ತಾ- 47,450 ರೂ, , ಹೈದರಾಬಾದ್- 47,450 ರೂ, ಕೇರಳ- 47,450 ರೂಪಾಯಿ ಇದ್ದರೆ, ಪುಣೆಯಲ್ಲಿ 47,480 ರೂಪಾಯಿ ಇದೆ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್‌ ಚಿನ್ನದ ದರ

ದೇಶದ ಪ್ರಮುಖ ನಗರಗಳಲ್ಲಿ ಇಂದು 24 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ- 52,510 ರೂ, ಮುಂಬೈ- 51,760 ರೂ, ದೆಹಲಿ- 51,760 ರೂ, ಕೊಲ್ಕತ್ತಾ- 51,760 ರೂ, ಹೈದರಾಬಾದ್- 51,760 ರೂ, ಕೇರಳ- 51,760 ರೂಪಾಯಿ ಇದ್ದರೆ ಪುಣೆಯಲ್ಲಿ 51,790 ರೂಪಾಯಿ ತಲುಪಿದೆ.

ಇಂದು ಬೆಳ್ಳಿ ದರ ಎಷ್ಟಿದೆ?

ಒಂದೇ ದಿನದಲ್ಲಿ ಬೆಳ್ಳಿ ಬೆಲೆ 1,100 ರೂ. ಹೆಚ್ಚಳವಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 67,900 ರೂ. ಇದ್ದುದು 69,000 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 72,900 ರೂ, ಮೈಸೂರು- 72,900 ರೂ., ಮಂಗಳೂರು- 72,900 ರೂ., ಮುಂಬೈ- 69,000 ರೂ, ಚೆನ್ನೈ- 72,900 ರೂ, ದೆಹಲಿ- 69,000 ರೂ, ಹೈದರಾಬಾದ್- 72,900 ರೂ, ಕೊಲ್ಕತ್ತಾ- 69,000 ರೂ. ಇದೆ.

ಇದನ್ನೂ ಓದಿ: Disabled Health Insurance: ವಿಶೇಷಚೇತನರಿಗೂ ಇದೆ ಆರೋಗ್ಯ ವಿಮೆ; ಪಾಲಿಸಿ, ಪ್ರಯೋಜನದ ವಿವರ ತಿಳಿದುಕೊಳ್ಳಿ

ಒಟ್ಟಾರೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಮುಂದುವರಿದಿದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.
Published by:Annappa Achari
First published: