Gold Price: ಯುಗಾದಿ ಹೊಸ್ತಿಲಲ್ಲೇ ಮನೆಗೆ ಬರಲಿ ಚಿನ್ನ! ಬೆಲೆ ಇಳಿದಿದೆ ಇಂದೇ ಬೆಳ್ಳಿ-ಬಂಗಾರ ಖರೀದಿಸೋಣ

ಯುಗಾದಿ ಹಬ್ಬದ ಹೊಸ್ತಿಲಲ್ಲೇ ಬೆಳ್ಳಿ, ಬಂಗಾರದ ಬೆಲೆ ಇಳಿಕೆಯಾಗಿದೆ. ಹಬ್ಬಕ್ಕೆ ಚಿನ್ನ ಖರೀದಿಸಬೇಕು ಅಂತಿದ್ದರೆ ಇಂದೇ ಶಾಪ್‌ಗೆ ಹೋಗೋದು ಬೆಸ್ಟ್. ಅದಕ್ಕೂ ಮುನ್ನ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಅಂತ ಒಮ್ಮೆ ತಿಳ್ಕೊಂಡು ಹೋಗಿ...

ಚಿನ್ನಾಭರಣ

ಚಿನ್ನಾಭರಣ

 • Share this:
  Gold Rate on March 31, 2022: ಯುಗಾದಿ ಹಬ್ಬ (Yugadi Festival) ಬಂದೇ ಬಿಡ್ತು. ಈ ಹೊತ್ತಿನಲ್ಲಾದ್ರೂ ಚಿನ್ನ ಖರೀದಿಸಬೇಕು ಅಂತ ಯೋಚನೆ ಮಾಡಿದ್ದೀರಾ? ಹಾಗಿದ್ರೆ ಮತ್ಯಾಕೆ ತಡ ಮಾಡ್ತೀರಿ? ಇಂದೇ ಹೋಗಿ ಚಿನ್ನ, ಬೆಳ್ಳಿ (Silver) ಖರೀದಿಸಿ! ಯಾಕೆಂದರೆ ಮಾರ್ಚ್‌ ತಿಂಗಳಲ್ಲಿ ಹಲವು ದಿನಗಳ ಕಾಲ ಗಗನಮುಖಿಯಾಗಿದ್ದ ಚಿನ್ನದ ದರ ತಿಂಗಳಾಂತ್ಯಕ್ಕೆ (Month End) ಬಂದಂತೆ ಕುಸಿತ ಕಾಣುತ್ತಿದೆ. ಕಳೆದ 3 ದಿನಗಳಿಂದ ಬಂಗಾರದ ದರ ಇಳಿಕೆಯಾಗುತ್ತಿದೆ. ದೇಶದಲ್ಲಿಂದು ಚಿನ್ನದ ಬೆಲೆಯಲ್ಲಿ (Gold Price) ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಸಹ ಚಿನ್ನದ ಬೆಲೆ ಕಡಿಮೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ ತೂಕದ 22 ಕ್ಯಾರೆಟ್ ಚಿನ್ನದ ಬೆಲೆ 47,750 ರೂ. ಇತ್ತು. ಇಂದು 100 ರೂ. ಇಳಿಕೆಯಾಗಿ 47,650 ರೂ. ಆಗಿದೆ. ಅಂತೆಯೇ 10 ಗ್ರಾಂ ತೂಕದ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 52,100 ರೂ. ಇತ್ತು. ಇಂದು 120 ರೂ. ಇಳಿಕೆಯಾಗಿ 51,980 ರೂ. ಆಗಿದೆ. ಇನ್ನು, ಬೆಂಗಳೂರು ಸೇರಿ ದೇಶದ ವಿವಿಧ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬುದನ್ನು ವಿವರವಾಗಿ ನೋಡೋಣ..

  ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ..?

  ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ ನಿನ್ನೆ 52,100 ರೂ. ಇತ್ತು. ಇಂದು 120 ರೂ. ಇಳಿಕೆಯಾಗಿ 51,980 ರೂ. ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,750 ರೂ. ಇತ್ತು. ಇಂದು 100 ರೂ. ಇಳಿಕೆಯಾಗಿ 47,650 ರೂ. ಆಗಿದೆ. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ.

  ಮಹಾನಗರಗಳಲ್ಲಿ ಎಷ್ಟಿದೆ ಬಂಗಾರದ ಬೆಲೆ?

  ಇನ್ನು, ದೇಶದ ಇತರೆ ನಗರಗಳಾದ ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆ, ಕೊಯಮತ್ತೂರು, ಮಧುರೈ, ಚಂಡೀಗಢ, ಸೂರತ್‌, ನಾಶಿಕ್‌ನಲ್ಲೂ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 52 ಸಾವಿರದ ಆಸುಪಾಸಿನಲ್ಲೇ ಇದೆ.

  ಇದನ್ನೂ ಓದಿ: Inspiration: ಕನಸಿನ ಬೆನ್ನೇರಿ ಕೈ ತುಂಬಾ ಸಂಬಳ ಇದ್ದ ಕೆಲ್ಸಾನೇ ಬಿಟ್ರು.. ಈಗ ಮಲ್ಟಿ ಮಿಲಿಯನ್ ಬ್ರ್ಯಾಂಡ್‌ ನಿರ್ಮಿಸಿದ್ದಾರೆ!

  ಈ ಮಧ್ಯೆ, ದೇಶದ ಮೆಟ್ರೋಪಾಲಿಟನ್‌ ನಗರಗಳಾದ ಚೆನ್ನೈನಲ್ಲಿ 24 ಕ್ಯಾರೆಟ್‌ ಚಿನ್ನದ ಬೆಲೆ 52,280 ರೂ. ಇದ್ದರೆ, ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ ಹಾಗೂ ಕೋಲ್ಕತ್ತದಲ್ಲಿ 24 ಕ್ಯಾರೆಟ್‌ ಬಂಗಾರದ ಬೆಲೆ 51,980 ರೂ. ಆಗಿದೆ.

  ಇಂದಿನ ಬೆಳ್ಳಿ ದರ

  ದೇಶದಲ್ಲಿಂದು ಚಿನ್ನದ ಬೆಲೆ ಕಡಿಮೆಗಿದ್ದರೆ ಬೆಳ್ಳಿ ದರ (Silver Rate) ದಲ್ಲಿ ಏರಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 68,000 ರೂ. ಇತ್ತು. ಇಂದು 4,100 ರೂ. ಹೆಚ್ಚಾಗಿ 72,100 ರೂ. ಆಗಿದೆ. ಆದರೆ ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ ಬೆಳ್ಳಿಯ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಅಂದರೆ, ನಿನ್ನೆಯಂತೆ 1 ಕೆಜಿ ಬೆಳ್ಳಿಯ ಬೆಲೆ 72,100 ರೂ. ಆಗಿದೆ.

  ಪ್ರಮುಖ ನಗರಗಳಲ್ಲಿ ಸಿಲ್ವರ್ ರೇಟ್ ಎಷ್ಟಿದೆ?

  ಇದೇ ರೀತಿ ಚೆನ್ನೈ, ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣಂ, ಕೊಯಮತ್ತೂರು, ಕೇರಳದಲ್ಲಿ ಸಹ 1 ಕೆಜಿ ಬೆಳ್ಳಿಯ ಬೆಲೆ 72,100 ರೂ. ಇದೆ. ಈ ಮಧ್ಯೆ, ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಕೋಲ್ಕತ್ತದಲ್ಲಿ 1 ಕೆಜಿ ಬೆಳ್ಳಿಯ ದರ 67,200 ರೂ. ಆಗಿದೆ. ಆದರೆ, ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 72,100 ರೂ. ಆಗಿದೆ.

  ಒಟ್ಟಾರೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಮುಂದುವರಿದಿದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ.

  ಇದನ್ನೂ ಓದಿ: Wheat Price Hike: ಹೆಚ್ಚಾಯ್ತು ಗೋಧಿ ಬೆಲೆ! ಎಲ್ಲಿ ಎಷ್ಟು ರೇಟ್? ರೈತರಿಗೆ ಸಿಗುವ ಹಣವೆಷ್ಟು?

  ಸೂಚನೆ: ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.
  Published by:Annappa Achari
  First published: