Gold and Silver price on July 30, 2022: ಶ್ರಾವಣ (Shravana) ಮಾಸ ಕಾಲಿಟ್ಟಿದೆ. ಇನ್ನೆನ್ನಿದ್ದರೂ ಹಬ್ಬಗಳದ್ದೇ (Festival) ಹಾವಳಿ. ಈ ಹಬ್ಬಗಳಲೆಲ್ಲ ಆಭರಣ (Jewellery) ಖರೀದಿಸೋದು ಶಾಸ್ತ್ರವೂ ಹೌದು, ಮಹಿಳೆಯರ (Women’s) ಆಸೆಯೂ ಹೌದು, ಆದ್ರೆ ಶ್ರಾವಣದ ಆರಂಭದಲ್ಲೇ ಆಭರಣ ಪ್ರಿಯರಿಗೆ (Jewellery Lovers) ಬೆಲೆ ಏರಿಕೆ (Price Hike) ಶಾಕ್ ತಟ್ಟಿದೆ. ಇಂದು ಚಿನ್ನದ ಬೆಲೆ (Gold Price) ಹಾಗೂ ಬೆಳ್ಳಿ ಬೆಲೆ (Silver Rate) ಹೆಚ್ಚಳ ಆಗಿದೆ. ಭಾರತದ ಮಾರುಕಟ್ಟೆಯಲ್ಲಿ (Indian Market) ಇಂದು ಬಂಗಾರದ ಬೆಲೆಯಲ್ಲಿ ಸುಮಾರು 110 ರೂಪಾಯಿಗಳಷ್ಟು ಏರಿಕೆಯಾಗಿದೆ. ಇನ್ನು ಬೆಳ್ಳಿ ಬೆಲೆ ಇಂದು 1,500 ರೂ. ಏರಿಕೆಯಾಗಿದೆ. ಭಾರತವು ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಿಸುತ್ತಿದ್ದು ಮುಂಬರುವ ದಿನಗಳಲ್ಲಿ ಚಿನ್ನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹಾಗಾಗಿ ಚಿನ್ನ ಇನ್ನಷ್ಟು ದುಬಾರಿ ಆಗೋ ಮುಂಚೆ ಅದನ್ನು ಈಗಲೇ ಖರೀದಿಸುವುದು ಉತ್ತಮ. ಕಳೆದ ಕೆಲ ಸಮಯದಿಂದ ಚಿನ್ನದ ಬೆಲೆಗಳಲ್ಲಿ ಅಲ್ಪ ಪ್ರಮಾಣದ ಏರಿಳಿತಗಳು ಆಗುತ್ತಲೇ ಇದ್ದು ಇದಕ್ಕೆ ಪ್ರಮುಖ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (Indian Market) ಉಂಟಾಗುತ್ತಿರುವ ಮಾರುಕಟ್ಟೆ ಸಂಬಂಧಿತ ವಿದ್ಯಮಾನಗಳು, ಹಣದುಬ್ಬರ ಹಾಗೂ ಕಚ್ಚಾ ತೈಲದಲ್ಲಾಗಿರುವ ಬೆಲೆ ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳೇ ಆಗಿವೆ.
ಒಂದು ಗ್ರಾಂ ಬಂಗಾರ
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,725
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,154
ಎಂಟು ಗ್ರಾಂ ಬಂಗಾರ
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 37,760
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,192
ಹತ್ತು ಗ್ರಾಂ ಬಂಗಾರ
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 47,200
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 51,540
ನೂರು ಗ್ರಾಂ ಬಂಗಾರ
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,72,000
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,14,900
ಇದನ್ನೂ ಓದಿ: Petrol-Diesel Price Today: 18 ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ ಏರಿಕೆ, ಹಲವೆಡೆ ವ್ಯತ್ಯಾಸವಿಲ್ಲ
ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್
ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,250 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 48,050, ರೂ. 47,200, ರೂ. 47,200 ಆಗಿದೆ. ಇನ್ನು ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,350 ರೂ. ಆಗಿದೆ.
ಇಂದಿನ ಬೆಳ್ಳಿ ಬೆಲೆ ವಿವರ
ನಿನ್ನೆ 1 ಕೆಜಿ ಬೆಳ್ಳಿಯ ದರ 56,500 ರೂ. ಇದ್ದುದು ಇಂದು 58,000 ರೂ. ಆಗಿದೆ. ಇನ್ನು ಬೆಂಗಳೂರಲ್ಲಿ 62,300 ರೂ, ಮೈಸೂರು- 62,300 ರೂ., ಮಂಗಳೂರು- 62,300 ರೂಪಾಯಿ ಆಗಿದೆ. ಇನ್ನುಳಿದಂತೆ ಮುಂಬೈ- 58,000 ರೂ, ಚೆನ್ನೈ- 62,300 ರೂ, ದೆಹಲಿ- 58,000 ರೂ, ಹೈದರಾಬಾದ್- 62,300 ರೂ, ಕೊಲ್ಕತ್ತಾ- 58,000 ರೂಪಾಯಿ ಬೆಲೆ ಇದೆ.
ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ