Gold and Silver price on July 3, 2022: ನಿನ್ನೆ ತುಟ್ಟಿಯಾಗಿದ್ದ ಬಂಗಾರದ ಬೆಲೆ ಇಂದು ಮತ್ತಷ್ಟು ದುಬಾರಿಯಾಗಿದೆ. ಈ ಮೂಲಕ ಇಂದು ವೀಕೆಂಡ್ನಲ್ಲಿ ಆಭರಣ ಖರೀದಿಸಬೇಕು ಎಂದುಕೊಂಡಿದ್ದ ಆಭರಣ ಪ್ರಿಯರಿಗೆ ಶಾಕ್ ಕೊಟ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಉಂಟಾಗುತ್ತಿರುವ ಕಚ್ಚಾ ತೈಲದಲ್ಲಾಗುತ್ತಿರುವ ಬೆಲೆ ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳು ಚಿನ್ನ ಹಾಗೂ ಬೆಳ್ಳಿ ದರಗಳ (Silver Price) ಮೇಲೆ ಪ್ರಭಾವ ಬೀರುತ್ತಿವೆ. ಹೀಗಾಗಿ ಇಂದು ಬಂಗಾರದ ದರ ಏರಿಕೆಯಾಗಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದ್ದು, ಆಭರಣ ಪ್ರಿಯರಿಗೆ ಸಮಾಧಾನ ತಂದಿದೆ.
ಭಾರತದ ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ದರ
ಭಾರತದ ಚೀನಿವಾರ ಪೇಟೆಯಲ್ಲಿ ಇಂದು 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 52340 ರೂಪಾಯಿ ಆಗಿದೆ. ಹಾಗೆಯೇ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ಇಂದು 48,050 ರೂಪಾಯಿ ನಿಗದಿಯಾಗಿದೆ. ಅದೇ ರೀತಿ ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 63,500 ರೂಪಾಯಿ ದಾಖಲಾಗಿದೆ.
ಬೆಂಗಳೂರಿನಲ್ಲಿ ಎಷ್ಟಿದೆ ಗೋಲ್ಡ್ ರೇಟ್?
ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 48,050 ರೂಪಾಯಿ ಆಗಿದೆ. ಇನ್ನು ಮಂಗಳೂರಿನಲ್ಲಿ 48,050 ರೂಪಾಯಿ ಇದ್ದರೆ, ಮೈಸೂರಲ್ಲಿ 48,050 ರೂಪಾಯಿ ಬೆಲೆ ಇದೆ. ಅದೇ ರೀತಿ ಬೆಂಗಳೂರಿನಲ್ಲಿ 24 ಕ್ಯಾರೆಟ್ನ 10 ಗ್ರಾಂ ಬಂಗಾರಕ್ಕೆ ಇಂದು 52,420 ರೂಪಾಯಿ ಬೆಲೆ ನಿಗದಿಯಾಗಿದೆ. ಮತ್ತೊಂದೆಡೆ 52,420 ರೂಪಾಯಿ ಹಾಗೂ ಮೈಸೂರಿನಲ್ಲಿ 52,420 ರೂಪಾಯಿ ಬೆಲೆ ಫಿಕ್ಸ್ ಆಗಿದೆ.
ಇದನ್ನೂ ಓದಿ: LIC Policy: ದಿನಕ್ಕೆ 45 ರೂಪಾಯಿ ಪಾವತಿಸಿ, ಪ್ರೀಮಿಯಂ ಮುಗಿದ ಮೇಲೆಯೋ ಹಣ ಪಡೆಯಿರಿ
ದೇಶದ ಇತರೆಡೆ ಎಷ್ಟಿದೆ ಬಂಗಾರದ ಬೆಲೆ?
ಇನ್ನು ದೇಶದ ಇತರೇ ಪ್ರಮುಖ ನಗರಗಳಾದ ಚೆನ್ನೈ 47,920 (22 ಕ್ಯಾರೆಟ್) - 52,280 (24 ಕ್ಯಾರೆಟ್), ದೆಹಲಿ 48,100 (22 ಕ್ಯಾರೆಟ್) - 52,400 (24 ಕ್ಯಾರೆಟ್), ಹೈದರಾಬಾದ್ 48,000 (22 ಕ್ಯಾರೆಟ್) - 52,340 (24 ಕ್ಯಾರೆಟ್), ಕೋಲ್ಕತಾ 48,000 (22 ಕ್ಯಾರೆಟ್) - 52,340 (24 ಕ್ಯಾರೆಟ್), ಹಾಗೂ ಮುಂಬೈನಲ್ಲಿ 48,000 (22 ಕ್ಯಾರೆಟ್) - 52,340 (24 ಕ್ಯಾರೆಟ್) ರೂಪಾಯಿ ಬೆಲೆ ನಿಗದಿಯಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಇಂದಿನ ಬೆಳ್ಳಿ ಬೆಲೆ ಎಷ್ಟು?
ಭಾರತೀಯ ಮಾರುಕಟ್ಚೆಲ್ಲಿ ನಿನ್ನೆ ಒಂದು ಕೆಜಿ ಬೆಳ್ಳಿಗೆ 65,000 ರೂಪಾಯಿ ಬೆಲೆ ಇತ್ತು. ಇಂದು ಕೊಂಚ ಇಳಿಕೆಯಾಗಿದೆ. ಅಂದರೆ ಇಂದು 1 ಕೆಜಿ ಬೆಳ್ಳಿಗೆ 63,500 ಬೆಲೆ ನಿಗದಿಯಾಗಿದೆ.
ಬೆಂಗಳೂರು ಹಾಗೂ ಇತರೆಡೆ ಎಷ್ಟಿದೆ ಸಿಲ್ವರ್ ರೇಟ್?
ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 63,500 ರೂಪಾಯಿ ನಿಗದಿಯಾಗಿದೆ. ಅದೇ ರೀತಿ ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ 1 ಕೆಜಿ ಬೆಳ್ಳಿಗೆ ಇಂದು 63,500 ರೂಪಾಯಿ ಬೆಲೆ ಇದೆ.
ಇದನ್ನೂ ಓದಿ: Explained: ಆದಾಯ ತೆರಿಗೆ ಮತ್ತು ಟಿಡಿಎಸ್ ಎರಡೂ ಒಂದೇ ಅಂದ್ಕೊಂಡಿದ್ದೀರಾ? ಮೊದಲು ಇವುಗಳ ನಡುವಿನ ವ್ಯತ್ಯಾಸ ತಿಳಿದುಕೊಳ್ಳಿ
ಒಟ್ಟಾರೆ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ-ಇಳಿಕೆ ಆಗಬಹುದು. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ