Gold and Silver Price on April 3, 2022: ಯುಗಾದಿ ಹಬ್ಬದ (Ugadi Festival) ದಿನ ಚಿನ್ನ (Gold) ಹಾಗೂ ಬೆಳ್ಳಿ ಬೆಲೆಯಲ್ಲಿ (Silver Price) ಏರಿಕೆಯಾಗಿ, ಆಭರಣ (Jewellery) ಪ್ರಿಯರು ಬೇಸರಗೊಂಡಿದ್ದರು. ಆದರೆ ಯುಗಾದಿ ಮರುದಿನ, ಅದರಲ್ಲೂ ವೀಕೆಂಡ್ (Week End) ದಿನವೇ ಆಭರಣ ಪ್ರಿಯರಿಗೆ ಗುಡ್ ನ್ಯೂಸ್ (Good News) ಸಿಕ್ಕಿದೆ. ಇಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ನಿನ್ನೆ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 48,100 ರೂ. ಇತ್ತು. ಆದರೆ ಇಂದು 47,950 ರೂ. ಆಗಿದೆ. ಆದರೆ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ನಿನ್ನೆ 52,470 ರೂ. ಇದ್ದ ಬೆಲೆ ಇಂದು 52,480 ರೂ. ಆಗಿದೆ. ನಿನ್ನೆ ಭಾರೀ ಹೆಚ್ಚಳವಾಗಿದ್ದ ಬೆಳ್ಳಿಯ ಬೆಲೆ (Silver Price) ಇಂದು ಒಂದೇ ದಿನದಲ್ಲಿ 800 ರೂ. ಇಳಿಕೆ ಕಂಡಿದೆ.
ಬೆಂಗಳೂರಿನಲ್ಲಿ ಎಷ್ಟಿದೆ 22 ಕ್ಯಾರೆಟ್ ಬಂಗಾರದ ಬೆಲೆ?
ಬೆಂಗಳೂರಿನಲ್ಲಿ 22 ಕ್ಯಾರೆಟ್ ಬಂಗಾರದ ಬೆಲೆಯಲ್ಲಿ ಇಳಿಕೆಯಾಗಿದೆ. 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ ಇಂದು 47,950 ರೂಪಾಯಿ ಬೆಲೆ ಇದೆ. ಇನ್ನು ಮಂಗಳೂರು ಹಾಗೂ ಮೈಸೂರಿನಲ್ಲೂ ಕೂಡ ಇಷ್ಟೇ ಬೆಲೆ ನಿಗದಿಯಾಗಿದೆ.
24 ಕ್ಯಾರೆಟ್ನ ಬಂಗಾರದ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ 24 ಕ್ಯಾರೆಟ್ನ 10 ಗ್ರಾಂ ಬಂಗಾರದ ಬೆಲೆ ಇಂದು 52,480 ರೂಪಾಯಿ ತಲುಪಿದೆ. ಇನ್ನು ಮೈಸೂರಿನಲ್ಲಿ 52,480 ರೂಪಾಯಿ ಹಾಗೂ ಮಂಗಳೂರಿನಲ್ಲೂ 52,480 ರೂಪಾಯಿ ಬೆಲೆ ಇದೆ.
ಇದನ್ನೂ ಓದಿ: Russian Diamond: ರಷ್ಯಾದ ಲಕಲಕ ಹೊಳೆಯುವ ವಜ್ರ ಖರೀದಿ ಮಾಡೋದು ಇನ್ಮೇಲೆ ಕಷ್ಟ!
ಪ್ರಮುಖ ನಗರಗಳಲ್ಲಿ ಎಷ್ಟಿದೆ ಗೋಲ್ಡ್ ರೇಟ್?
ಇನ್ನು ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ನ 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ ಅಂತ ತಿಳಿದುಕೊಳ್ಳೋಣ. ಚೆನ್ನೈ- 48,200 ರೂ. ಮುಂಬೈ- 47,950 ರೂ, ದೆಹಲಿ- 47,950 ರೂ, ಕೊಲ್ಕತ್ತಾ- 47,950 ರೂ, , ಹೈದರಾಬಾದ್- 47,950 ರೂ, ಕೇರಳ- 47,950 ರೂಪಾಯಿ ಹಾಗೂ ಪುಣೆಯಲ್ಲಿ ಇಂದು 48,000 ರೂಪಾಯಿ ಬೆಲೆ ಇದೆ.
24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ ಎಷ್ಟಿದೆ ರೇಟ್?
ದೇಶದ ಪ್ರಮುಖ ನಗರಗಳ್ಲಿ 24 ಕ್ಯಾರೆಟ್ನ 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ ಅಂತ ನೋಡೋದಾದ್ರೆ, ಚೆನ್ನೈ- 52,580 ರೂ, ಮುಂಬೈ- 52,480 ರೂ, ದೆಹಲಿ- 52,480 ರೂ, ಕೊಲ್ಕತ್ತಾ- 52,480 ರೂ, ಹೈದರಾಬಾದ್- 52,480 ರೂ, ಕೇರಳ- 52,480 ರೂಪಾಯಿ ಇದ್ದರೆ, ಪುಣೆಯಲ್ಲಿ 52,400 ರೂಪಾಯಿ ಬೆಲೆ ಇದೆ.
ಇಂದು ಬೆಳ್ಳಿ ದರ ಎಷ್ಟಿದೆ?
ಇಂದು ಒಂದೇ ದಿನದಲ್ಲಿ 1 ಕೆಜಿ ಬೆಳ್ಳಿ ಬೆಲೆ 800 ರೂ. ಇಳಿಕೆ ಕಂಡಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 67,600 ರೂ. ಇದ್ದುದು ಇಂದು 66,800 ರೂ.ಗೆ ಕುಸಿತವಾಗಿದೆ.
ಪ್ರಮುಖ ನಗರಗಳಲ್ಲಿ ಎಷ್ಟಿದೆ ಸಿಲ್ವರ್ ರೇಟ್?
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 71,300 ರೂ, ಮೈಸೂರು- 71,300 ರೂ., ಮಂಗಳೂರು- 71,300 ರೂ., ಮುಂಬೈ- 66,800 ರೂ, ಚೆನ್ನೈ- 71,300 ರೂ, ದೆಹಲಿ- 66,800 ರೂ, ಹೈದರಾಬಾದ್- 71,300 ರೂ, ಕೊಲ್ಕತ್ತಾ- 66,800 ರೂ. ಆಗಿದೆ.
ಇದನ್ನೂ ಓದಿ: Gift deed or Will: ಗಿಫ್ಟ್ ಡೀಡ್ ಅಥವಾ ವಿಲ್.. ನಿಮ್ಮವರಿಗೆ ಕೊಡಲು ಯಾವುದು ಉತ್ತಮ?
ಒಟ್ಟಾರೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಮುಂದುವರಿದಿದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ