Gold And Silver Price; ಎರಡು ದಿನಗಳ ಬಳಿಕ ಏರಿಕೆಯಾದ ಚಿನ್ನ: ಖರೀದಿಗೂ ತೆರಳುವ ಮುನ್ನ ಇವತ್ತಿನ ಬೆಲೆ ನೋಡಿ

ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Gold And Silver Price Today: ಕೇಂದ್ರ ಬಜೆಟ್‌ (Central Budget) ನಂತರ ಏರಿಕೆಯ ಹಾದಿಯಲ್ಲಿದ್ದ ಬಂಗಾರದ (Gold) ಬೆಲೆ (Rate) ಕಳೆದ 2 ದಿನಗಳಿಂದ ಇಳಿಕೆಯಾಗಿತ್ತು. ಇಂದು ದೇಶದಲ್ಲಿ ಚಿನ್ನದ ಬೆಲೆಯಲ್ಲಿ (Gold Price) ಏರಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಸಹ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,800 ರೂ. ಇತ್ತು. ಇಂದು 500 ರೂ. ಏರಿಕೆಯಾಗಿ 46,300 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 49,970 ರೂ. ಇತ್ತು. ಇಂದು 540 ರೂ. ಏರಿಕೆಯಾಗಿ 50,510 ರೂ. ಆಗಿದೆ. ಇನ್ನು, ಬೆಂಗಳೂರು ಸೇರಿ ದೇಶದ ವಿವಿಧ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ದರ ಎಷ್ಟಿದೆ ಎಂಬುದನ್ನು ವಿವರವಾಗಿ ನೋಡೋಣ..

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ..?

ನೀವು ಚಿನ್ನ ಖರೀದಿಸುವ ಪ್ಲ್ಯಾನ್‌ ಮಾಡುತ್ತಿದ್ದೀರಾ, ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 49,970 ರೂ. ಇತ್ತು.

ಇಂದು 540 ರೂ. ಏರಿಕೆಯಾಗಿ 50,510 ರೂ. ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 45,800 ರೂ. ಇತ್ತು. ಇಂದು 500 ರೂ. ಏರಿಕೆಯಾಗಿ 46,300 ರೂ. ಆಗಿದೆ. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ.

ಇದನ್ನೂ ಓದಿ:  Petrol And Diesel Price: ನಿಮ್ಮ ನಗರಗಳಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು? ಇಲ್ಲಿದೆ ಓದಿ

ಚಿನ್ನದ ಮೇಲೆ ಹೆಚ್ಚಾಗುತ್ತಲೇ ಇರುತ್ತದೆ ಜನರ ಒಲವು

ದೇಶದಲ್ಲಿ ಆಭರಣ ಪ್ರಿಯರ ಜನಸಂಖ್ಯೆಗೇನೂ ಕೊರತೆ ಇಲ್ಲ. ಚಿನ್ನ ಖರೀದಿ, ವಹಿವಾಟು ಹೆಚ್ಚು ನಡೆಯುತ್ತಲೇ ಇರುತ್ತದೆ. ಇನ್ನು ಹಲವರು ಆಪತ್ಕಾಲದಲ್ಲಿ ಚಿನ್ನ ಅಡ ಇಡಲು ಅಥವಾ ಮಾರಲು ಬೇಕಾಗುತ್ತದೆಂದು ಸಹ ಅದರ ಮೇಲೆ ಹೂಡಿಕೆ ಮಾಡುತ್ತಾರೆ. ಚಿನ್ನವನ್ನು ಬಾಂಡ್‌ ರೂಪದಲ್ಲೂ ಖರೀದಿಸಲಾಗುತ್ತದೆ.

ದೇಶದ ಇತರೇ ನಗರಗಳಲ್ಲಿ ಎಷ್ಟಿದೆ ಬೆಲೆ?

ಇನ್ನು, ದೇಶದ ಇತರೆ ನಗರಗಳಾದ ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆ, ಕೊಯಮತ್ತೂರು, ಮಧುರೈನಲ್ಲಿ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 50 ಸಾವಿರದಿಂದ 51 ಸಾವಿರದ ಆಸುಪಾಸಿನಲ್ಲೇ ಇದೆ.

ಮಹಾನಗರಗಳಲ್ಲಿ ಬಂಗಾರದ ಬೆಲೆ ಎಷ್ಟಿದೆ?

ಈ ಮಧ್ಯೆ, ದೇಶದ ಮೆಟ್ರೋಪಾಲಿಟನ್‌ ನಗರಗಳಾದ ಚೆನ್ನೈನಲ್ಲಿ 51,590 ರೂ. ಇದ್ದರೆ, ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ ಹಾಗೂ ಕೋಲ್ಕತ್ತದಲ್ಲಿ 24 ಕ್ಯಾರೆಟ್‌ ಬಂಗಾರದ ಬೆಲೆ 50,510 ರೂ. ಆಗಿದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಶಿಕ್‌ನಲ್ಲೂ 24 ಕ್ಯಾರೆಟ್‌ ಚಿನ್ನದ ಬೆಲೆ 50 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಳ್ಳಿ ದರ:

ದೇಶದಲ್ಲಿಂದು ಚಿನ್ನದ ಬೆಲೆ ಇಳಿಕೆಯಾಗಿದ್ದರೂ ಬೆಳ್ಳಿ ದರ (Silver Rate) ಏರಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 68,000 ರೂ. ಇತ್ತು. ಇಂದು 600 ರೂ. ಏರಿಕೆಯಾಗಿ 68,600 ರೂ. ಆಗಿದೆ.

ಇದನ್ನೂ ಓದಿ:  Red Sandal: ರಕ್ತಚಂದನ ಬೆಳೆಯಿಂದ ಲಕ್ಷ ಲಕ್ಷ ಸಂಪಾದನೆ, ನೀವೂ ಬೆಳೆಯಬಹುದು ನೋಡಿ!

ಆದರೆ, ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆ 68,000 ರೂ. ಆಗಿದೆ. ಇದೇ ರೀತಿ ಚೆನ್ನೈ, ಹೈದರಾಬಾದ್, ಕೇರಳ, ವಿಜಯವಾಡ, ವಿಶಾಖಪಟ್ಟಣಂ, ಕೊಯಮತ್ತೂರು, ಮಧುರೈನಲ್ಲಿ ಸಹ 1 ಕೆಜಿ ಬೆಳ್ಳಿಯ ಬೆಲೆ 68,000 ರೂ. ಆಸುಪಾಸಿನಲ್ಲಿದೆ.

ಇನ್ನು, ಮೆಟ್ರೋಪಾಲಿಟನ್‌ ನಗರಗಳಾದ ದೆಹಲಿ, ಮುಂಬೈ ಹಾಗೂ ಕೋಲ್ಕತ್ತದಲ್ಲಿ 63,800 ರೂ. ಆಗಿದೆ. ಒಟ್ಟಾರೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಮುಂದುವರಿದಿದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ.

ಬೆಲೆಯಲ್ಲಿ ಏರಿಕೆ-ಇಳಿಕೆ ಆಗಬಹುದು

ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.
Published by:Mahmadrafik K
First published: