• Home
  • »
  • News
  • »
  • business
  • »
  • Gold Price: ಗೋಲ್ಡನ್ ಸುದ್ದಿ ಇಲ್ಲಿದೆ ನೋಡಿ; ಚಿನ್ನದ ಮೇಲೆ ಬರೋಬ್ಬರಿ 1,050 ರೂ. ಇಳಿಕೆ!

Gold Price: ಗೋಲ್ಡನ್ ಸುದ್ದಿ ಇಲ್ಲಿದೆ ನೋಡಿ; ಚಿನ್ನದ ಮೇಲೆ ಬರೋಬ್ಬರಿ 1,050 ರೂ. ಇಳಿಕೆ!

ಚಿನ್ನಾಭರಣ

ಚಿನ್ನಾಭರಣ

ಇಂದು ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಮುಖವಾಗಿದೆ. ಹತ್ತು ಗ್ರಾಂ 24 ಕ್ಯಾರೆಟ್ ಚಿನ್ನದ ಮೇಲೆ ಬರೋಬ್ಬರಿ 1,050 ರೂಪಾಯಿ ಇಳಿಕೆ ಆಗಿದೆ.

  • Share this:

    ಎರಡ್ಮೂರು ದಿನಗಳಿಂದ ಮಾರುಕಟ್ಟೆಯಲ್ಲಿ ಏರಿಕೆ ಕಾಣುತ್ತಿದ್ದ ಬಂಗಾರದ ಬೆಲೆ (Gold Price) ನಿನ್ನೆ ಸ್ಥಿರತೆ ಕಂಡುಕೊಂಡಿತ್ತು. ಆದರೆ ಇಂದು ಮಾರುಕಟ್ಟೆಯಲ್ಲಿ ಚಿನ್ನದ ದರ (Gold Rate) ಇಳಿಮುಖವಾಗಿದೆ. ಹತ್ತು ಗ್ರಾಂ 24 ಕ್ಯಾರೆಟ್ ಚಿನ್ನದ ಮೇಲೆ ಬರೋಬ್ಬರಿ 1,050 ರೂಪಾಯಿ ಇಳಿಕೆ ಆಗಿದೆ. ನಿನ್ನೆ ಒಂದು ಗ್ರಾಂ ಆಭರಣದ (Jewellery) ಚಿನ್ನದ ಬೆಲೆ ರೂ. 4,836 ಇದ್ದದ್ದು ಇಂದು 4,740 ರೂಪಾಯಿ ಆಗಿದೆ. ಕಳೆದ ಒಂದು ವಾರದಿಂದ ಬಂಗಾರದ ಬೆಲೆಯಲ್ಲಿ ಏರಿಳಿತ ತುಂಬಾ ಸಾಮಾನ್ಯವಾಗಿ ಬಿಟ್ಟಿದೆ. ಇಳಿಕೆ ಆಗುತ್ತಿದೆ ಎನ್ನುವಷ್ಟರಲ್ಲಿ ಏರಿಕೆ ಕಂಡಿದ್ದ ಚಿನ್ನ ಇಂದು ಮತ್ತೆ ಇಳಿಕೆ ಆಗಿದೆ. ಕಳೆದ ಹಲವಾರು ದಿನಗಳಿಂದ ಚಿನ್ನದ ಬೆಲೆಗಳಲ್ಲಿ ಅಲ್ಪ ಪ್ರಮಾಣದ ಏರಿಳಿತಗಳು ದಾಖಲಾಗುತ್ತಲೇ ಇವೆ. ಇದಕ್ಕೆ ಪ್ರಮುಖ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಕಚ್ಚಾ ತೈಲದಲ್ಲಾಗುತ್ತಿರುವ ಬೆಲೆ (Crude Oil) ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳೇ ಆಗಿವೆ.


    ಇನ್ನೂ, ಈ ಬಂಗಾರದ ಮೌಲ್ಯ ಜಾಗತಿಕ ಮಾರುಕಟ್ಟೆಯಲ್ಲೂ ಅಪಾರವಾಗಿದೆ. ಸಾಕಷ್ಟು ದೇಶಗಳು ವಿದೇಶಿ ವಿನಿಮಯ ರೂಪದಲ್ಲಿ ಚಿನ್ನದ ಸಂಗ್ರಹ ಹೊಂದಿರುವುದು ಎಲ್ಲರಿಗೂ ಗೊತ್ತೆ ಇದೆ, ಏಕೆಂದರೆ ಚಿನ್ನ ಎಲ್ಲ ದೇಶಗಳಲ್ಲೂ ಮಾನ್ಯತೆ ಪಡೆದಿದ್ದು ಎಲ್ಲರಿಂದಲೂ ಸ್ವೀಕರಿಸಲ್ಪಡುತ್ತದೆ. ಅದರಲ್ಲೂ ವಿಶೇಷವಾಗಿ ಭಾರತ ದೇಶ ಎಂದರೆ ಕೇಳಬೇಕೆ? ಮೊದಲಿನಿಂದಲೂ ಭಾರತದಲ್ಲಿ ಬಂಗಾರಕ್ಕಿರುವ ವಿಶೇಷತೆಯೇ ಬೇರೆ. ಮದುವೆಯಿಂದ ಹಿಡಿದು ಅನೇಕ ಇತರೆ ಶುಭ ಕಾರ್ಯಗಳಲ್ಲಿ ಭಾರತೀಯರು ಬಂಗಾರವನ್ನು ಯಥೇಚ್ಚವಾಗಿ ಬಳಸುತ್ತಾರೆ. ಅದರಲ್ಲೂ ನವಜಾತ ಶಿಶು ಇರಲಿ ಅಥವಾ ಹೊಸದಾಗಿ ಮದುವೆ ಮಾಡಿಕೊಂಡ ದಂಪತಿಗಳಿರಲಿ ಅವರಲ್ಲಿ ಬಂಗಾರದ ಯಾವುದಾದರೂ ವಸ್ತು ಅಥವಾ ಸಿಂಗಾರದ ಸಾಮಾನು ಇದ್ದೆ ಇರುತ್ತದೆ.


    ಭಾರತೀಯರು ಬಂಗಾರ ಪ್ರಿಯರು


    ಕಳೆದ ಹಲವು ವರ್ಷಗಳಿಂದ ಚಿನ್ನವು ಹಣದುಬ್ಬರದ ವಿರುದ್ಧ ಒಂದು ರಕ್ಷಣಾತ್ಮಕ ಬೇಲಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಬಹುದು. ಹೂಡಿಕೆದಾರರು ಚಿನ್ನವನ್ನು ಪ್ರಮುಖ ಹೂಡಿಕೆಯ ವಸ್ತುವನ್ನಾಗಿ ನೋಡುತ್ತಿದ್ದಾರೆ. ಹಾಗಾಗಿ, ಚಿನ್ನವು ಮಾರುಕಟ್ಟೆಯಲ್ಲಿ ಒಂದು ಉತ್ತಮ ಹೂಡಿಕೆಯ ವಸ್ತುವಾಗಿ ಗುರುತಿಸಿಕೊಂಡಿದೆ. ಇಂದು ಚಿನ್ನದ ಹೂಡಿಕೆ ಬಹು ಸುರಕ್ಷಿತ ಹೂಡಿಕೆ ಎಂದೇ ಹಲವು ತಜ್ಞರು ಹೇಳುತ್ತಾರೆ. ಹಾಗಾಗಿ ಅದರಲ್ಲೂ ವಿಶೇಷವಾಗಿ ಭಾರತೀಯರಿಗೆ ಚಿನ್ನದ ಆಕರ್ಷಣೆ ತುಸು ಹೆಚ್ಚೇ ಎಂದು ಹೇಳಬಹುದು.


    ಇದನ್ನೂ ಓದಿ: PM Kisan: ರೈತರಿಗೆ ಹಣ ಕೊಟ್ಟು ಜೊತೆಗೆ ಶಾಕ್​ ಕೊಟ್ಟ ಸರ್ಕಾರ! ಸಾವಿರಾರು ಅನ್ನದಾತರಿಗೆ ನೋಟಿಸ್​​​


    ಆರ್ಥಿಕ ಸಂಕಷ್ಟದ ಕಾಲದಲ್ಲಿ ಕೈಯನ್ನು ಹಿಡಿಯುವ ನಂಬಿಕಸ್ಥ ಗೆಳೆಯ ಎಂದು ನಂಬಲಾಗಿರುವ ಚಿನ್ನವು ಈಗ ಹೂಡಿಕೆಯ ವಸ್ತುವಾಗಿಯೂ ಪ್ರಾಮುಖ್ಯತೆ ಪಡೆದಿದೆ. ಹಾಗಾಗಿ, ನಮ್ಮ ದೇಶದಲ್ಲಷ್ಟೆ ಅಲ್ಲ, ಜಗತ್ತಿನಾದ್ಯಂತ ಬಂಗಾರಕ್ಕೆ ಇರುವ ಬೇಡಿಕೆ ಅಷ್ಟಿಷ್ಟಲ್ಲ. ಭಾರತದ ಮಾರುಕಟ್ಟೆಗಳಲ್ಲಿ ಇಂದು ಚಿನ್ನ ಖರೀದಿ ಸಹಜ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ವ್ಯವಹಾರವನ್ನು ಈ ವ್ಯವಹಾರ ಹೊಂದಿದೆ. ಬೆಂಗಳೂರಿನಲ್ಲಿ ಇಂದು 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 47,4600 ಆಗಿದೆ.


    ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಒಂದು ನೋಟ ಬೀರೋಣ.
    ಒಂದು ಗ್ರಾಂ (1GM)
    22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,740
    24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,171


    ಎಂಟು ಗ್ರಾಂ (8GM)
    22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37,920
    24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,368


    ಹತ್ತು ಗ್ರಾಂ (10GM)
    22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 47,400
    24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 51,710


    ನೂರು ಗ್ರಾಂ (100GM)
    22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,74,000
    24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,17,100
    ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,400 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,550, ರೂ. 47,400, ರೂ. 47,400 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,400 ರೂ. ಆಗಿದೆ.


    ಬೆಳ್ಳಿ ದರ
    ಚಿನ್ನದಂತೆ ಸಾಮಾನ್ಯವಾಗಿ ಬೆಳ್ಳಿ ದರಗಳಲ್ಲೂ ವ್ಯತ್ಯಾಸ ಆಗುತ್ತಲೇ ಇರುತ್ತದೆ. ಇಂದು ಬಂಗಾರದಂತೆ ಬೆಳ್ಳಿಯ ಬೆಲೆಯಲ್ಲಿ ಗಮನಾರ್ಹವಾದ ಇಳಿಕೆ ಇಲ್ಲ. ಇಂದು ಭಾರತದ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 59,800 ರೂ. ಆಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ.


    ಪ್ರಸ್ತುತ, ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದಿನ ಬೆಲೆಗಳು ಸ್ಥಿರವಾಗಿವೆ. ಅಷ್ಟಕ್ಕೂ ಬೆಂಗಳೂರಿನಲ್ಲಿ 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 660, ರೂ. 6,600 ಹಾಗೂ ರೂ. 66,000 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 66,000 ಆಗಿದ್ದರೆ ದೆಹಲಿಯಲ್ಲಿ ರೂ. 59,800 ಮುಂಬೈನಲ್ಲಿ ರೂ. 59,800 ಹಾಗೂ ಕೊಲ್ಕತ್ತದಲ್ಲೂ ರೂ. 59,800 ಗಳಾಗಿದೆ.
    ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

    Published by:Kavya V
    First published: