ಈ ರೀತಿಯ ಅವಕಾಶ (Opportunity) ಜೀವಮಾನದಲ್ಲಿ ಒಮ್ಮೆಯಷ್ಟೇ ಸಿಗುತ್ತೆ ಎನ್ನಬಹುದು. ಕೆಲವರು ಕಷ್ಟ ಪಟ್ಟು ದುಡಿದು ಕೋಟ್ಯಧಿಪತಿ (Billionaire) ಯಾಗುತ್ತಾರೆ. ಇನ್ನೂ ಕೆಲವರು ಬೇರೆಯವರ ತಲೆ ಮೇಲೆ ಕೈಯಿಟ್ಟು ಕೋಟ್ಯಧಿಪತಿಯಾಗುತ್ತಾರೆ. ಆದರೆ ಎರಡಕ್ಕೂ ಸ್ವಲ್ಪ ಸಮಯ (Time) ನಾದರೂ ಬೇಕು. ಇಲ್ಲಿ ಇಂದು ನಾವು ಹೇಳುತ್ತಿರುವ ಒಂದು ಅವಕಾಶವನ್ನು ಬಳಸಿಕೊಂಡರೇ ಕೆಲವೇ ಕ್ಷಣಗಳಲ್ಲಿ ನೀವೂ ಕೋಟ್ಯಧಿಪತಿಯಾಗಬಹುದು. ಆದರೆ, ಇದು ಸುಲಭದ ಅವಕಾಶವಲ್ಲ. ಒಂದು ಸುಳಿವು (Hint) ಬೇಕಾಗಿದೆ. ಆ ಸುಳಿವು ಕೊಟ್ಟರೆ ನಿಮ್ಮ ಕೈಸೇರೋದು ಒಂದು, ಎರಡು ಕೋಟಿಯಲ್ಲ. ಬರೋಬ್ಬರಿ 289.25 ಕೋಟಿ. ಇದನ್ನು ಓದಿ ಶಾಕ್ (Shock) ಆಯ್ತಾ? ಆಗಲೇಬೇಕು. ಯಾಕೆಂದರೆ ಒಂದು ಸುಳಿವುಗಾಗಿ ಯಾರಾದರೂ ಇಷ್ಟು ಹಣ ಕೊಡುತ್ತಾರಾ ಅಂತ ನಿಮಗೆ ಅನ್ನಿಸದೇ ಇರದು.
ಈ ದಂಪತಿ ಕೊಂದ ಹಂತಕನ ಸುಳಿವು ಕೊಡಿ!
ಕೆನಡಾದ ಶ್ರೀಮಂತ ದಂಪತಿಗಳಾದ ಬ್ಯಾರಿ ಮತ್ತು ಹನಿ ಶೆರ್ಮನ್ ಅವರನ್ನು ಕೊಂದ ಹಂತಕರು ಬಗ್ಗೆ ಸುಳಿವು ಕೊಟ್ಟರೆ 3.5 ಮಿಲಿಯನ್ ಡಾಲರ್ (289.25 ಕೋಟಿ ರೂ.) ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಕೊಲೆಯಾದ ದಂಪತಿ ಮಗ ಈ ಬಹುಮಾನವನ್ನು ಘೋಷಿಸಿದ್ದಾರೆ. ಈ ಮೊದಲು ಬಹುಮಾನ 1 ಕೋಟಿ ಡಾಲರ್ ಆಗಿತ್ತು. 5 ವರ್ಷಗಳ ಹಿಂದೆ ದಂಪತಿಯ ಶವಗಳು ಅವರ ಮನೆಯಲ್ಲಿ ಪತ್ತೆಯಾಗಿದ್ದವು.
ಬಹುಮಾನ ಮೊತ್ತ ಏರಿಸಿದ ದಂಪತಿ ಮಗ!
ಮೊದಲಿಗೆ ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಲಾಗಿತ್ತು. ಆದರೆ ಪೊಲೀಸರು ಅದನ್ನು ಕೊಲೆ ಎಂದು ಘೋಷಿಸಿದರು. ಅಂದಿನಿಂದ ಹಂತಕನ ಹುಡುಕಾಟ ನಡೆಯುತ್ತಿದೆ, ಆದರೆ ಇಲ್ಲಿಯವರೆಗೆ ಯಾವುದೇ ಪ್ರಗತಿಯನ್ನು ಸಾಧಿಸಲಾಗಿಲ್ಲ. ಆ ಹಂತಕನ ಒಂದೇ ಒಂದು ಸುಳಿವು ಕೂಡ ಸಿಕ್ಕಿಲ್ಲ. ಕಳೆದ ವಾರ, ಅವರ ಮಗ ಜೊನಾಥನ್ ಶೆರ್ಮನ್ 1 ಮಿಲಿಯನ್ ಡಾಲರ್ ಬಹುಮಾನಕ್ಕೆ ಹೆಚ್ಚುವರಿ 2.5 ಮಿಲಿಯನ್ ಡಾಲರ್ಗಳನ್ನು ಸೇರಿಸಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಕೃಷಿ ಕ್ಷೇತ್ರದಲ್ಲಿ ಕಮಾಲ್ ಮಾಡಿದ ವ್ಯಕ್ತಿ! ಇದ್ರಿಂದಲೇ 30 ಲಕ್ಷ ಆದಾಯ ಅಂದ್ರೆ ಸುಮ್ನೆನಾ?
ಅಪೊಟೆಕ್ಸ್ನ ಸಂಸ್ಥಾಪಕರಾಗಿದ್ದ ದಂಪತಿ!
ಬ್ಯಾರಿ ಶೆರ್ಮನ್ ಔಷಧೀಯ ಕಂಪನಿ ಅಪೊಟೆಕ್ಸ್ನ ಸಂಸ್ಥಾಪಕರಾಗಿದ್ದರು ಮತ್ತು ಅವರ ಸಾವಿನ ಮೊದಲು ಅಂದಾಜು $3 ಬಿಲಿಯನ್ ಆದಾಯವನ್ನು ಹೊಂದಿದ್ದರು. ಅವರ ಪತ್ನಿ ಪ್ರಸಿದ್ಧ ಸಮಾಜ ಸೇವಕಿ. ಡಿಸೆಂಬರ್ 13, 2017 ರಂದು ಪೊಡ್ಜ್ ಟೊರೊಂಟೊದಲ್ಲಿನ ಅವರ ಮನೆಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಬಲವಂತದ ಪ್ರವೇಶಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಇದನ್ನು ಆತ್ಮಹತ್ಯೆ ಎಂದು ಘೋಷಿಸಲಾಯಿತು. ಆದರೆ ಪೊಲೀಸರು ನಂತರ ಇದು ಕೊಲೆ ಮತ್ತು ಅದರ ಹಿಂದಿನ ಕಾರಣ ಹಣ ಎಂದು ಹೇಳಿದರು.
ಮಗ ಕೊಲೆ ಬಗ್ಗೆ ಹೇಳಿದ್ದಿಷ್ಟು!
ಅಪರಾಧಿಯನ್ನು ಹಿಡಿಯುವವರೆಗೂ ಈ ಪ್ರಕರಣವನ್ನು ಮುಚ್ಚುವುದಿಲ್ಲ ಎಂದು ಜೊನಾಥನ್ ಶೆರ್ಮನ್ ಹೇಳಿದ್ದಾರೆ. ದಿನದಿಂದ ದಿನಕ್ಕೆ ನೋವು, ಸಂಕಟ ಹೆಚ್ಚಾಗುತ್ತಿದೆ ಎಂದರು. ಹಾಗಾಗಿಯೇ ಆದಷ್ಟು ಬೇಗ ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ. ಜೊನಾಥನ್, 'ಅವರ ಸಾವು ನನಗೆ ತುಂಬಾ ನೋವುಂಟು ಮಾಡಿದೆ' ಎಂದು ಹೇಳಿದರು. ಮಾಹಿತಿಯ ಪ್ರಕಾರ, ಸಾಯುವಾಗ ವೆರಿಯ ವಯಸ್ಸು 75 ವರ್ಷ ಮತ್ತು ಹನಿ ಅವರ ವಯಸ್ಸು 70 ವರ್ಷ.
ಇದನ್ನೂ ಓದಿ: ಗುಡ್ ನ್ಯೂಸ್, 5 ಲಕ್ಷದವರೆಗೆ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಲು ಬಜೆಟ್ನಲ್ಲಿ ಪ್ರಸ್ತಾವನೆ!
ಆತ್ಮಹತ್ಯೆ ಅಲ್ಲ ಕೊಲೆ ಎನಿಸಿದ್ದು ಯಾಕೆ?
ಆರಂಭದಲ್ಲಿ ಕೊಲೆ ಎಂದು ಪೊಲೀಸರು ಘೋಷಿಸಿದ್ದನ್ನು ಕೋಟ್ಯಾಧಿಪತಿ ದಂಪತಿಯ ಪುತ್ರ ಇದನ್ನು ಅಲ್ಲಗಳೆದಿದ್ದರು. ಅವರು ತಮ್ಮದೇ ಆದ ವಿಧಿವಿಜ್ಞಾನ ತಂಡ ಮತ್ತು ಖಾಸಗಿ ಪತ್ತೆದಾರರನ್ನು ನೇಮಿಸಿಕೊಂಡರು. ಹೈಪ್ರೊಫೈಲ್ ಕೇಸ್ ಆಗಿರುವುದರಿಂದ ಪೊಲೀಸರ ಮೇಲೆ ಎಲ್ಲ ಕಡೆಯಿಂದ ಒತ್ತಡವಿತ್ತು.
ಮರಣೋತ್ತರ ಪರೀಕ್ಷೆ ನಡೆಸಿದಾಗ ದಂಪತಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಶವ ಪರೀಕ್ಷೆ ವರದಿಯಲ್ಲಿ ದೃಢಪಟ್ಟಿದೆ. ಶವ ಪತ್ತೆಯಾದ ಆರು ವಾರಗಳ ನಂತರ ಪೊಲೀಸರು ಇದು ಆತ್ಮಹತ್ಯೆಯಲ್ಲ ಎಂದು ಒಪ್ಪಿಕೊಂಡಿದ್ದಾರೆ. ತಪ್ಪು ತಿಳುವಳಿಕೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಮೊದಲು ತಿಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ