ಸೋನಿ ಟಿವಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10 ಗಂಟೆಗೆ ಪ್ರಸಾರವಾಗುವ ಶಾರ್ಕ್ಸ್ ಟ್ಯಾಂಕ್ ಇಂಡಿಯಾ (Shark Tank India) ಹಲವಾರು ಸ್ಟಾರ್ಟಪ್‌ಗಳಿಗೆ (Startups) ಯಶಸ್ವಿ ಜಾಗತಿಕ ಕಂಪನಿಗಳಾಗುವಂತೆ ಬೆಂಬಲ ನೀಡಿದ್ದು ಬ್ಯುಸಿನೆಸ್‌ಗೆ (Business) ಧನಸಹಾಯ ಹೊಂದಲು ಆಶಿಸುತ್ತಿರುವ ಉದ್ಯಮಿಗಳಿಗೂ ನೆರವು ನೀಡುತ್ತದೆ. ಅಶ್ನೀರ್ ಗ್ರೋವರ್ (ಭಾರತ್‌ಪೇ ಸಹ-ಸ್ಥಾಪಕರು), ವಿನೀತಾ ಸಿಂಗ್ (ಶುಗರ್ ಕಾಸ್ಮೆಟಿಕ್ಸ್ ಸಹ-ಸ್ಥಾಪಕರು), ಪೆಯೂಶ್ ಬನ್ಸಾಲ್, ನಮಿತಾ ಥಾಪರ್ (ಎಮ್‌ಕ್ಯೂರ್ ಫಾರ್ಮಾ ನಿರ್ದೇಶಕರು), ಅನುಪಮ್ ಮಿತ್ತಲ್ (ಪೀಪಲ್ ಗ್ರೂಪ್ ಸಿಇಒ), ಗಜಲ್ ಅಲಘ್ (ಮಾಮಾ ಅರ್ತ್ ಸಹ-ಸ್ಥಾಪಕರು) ಮತ್ತು ಅಮನ್ ಗುಪ್ತಾ (ಬೋಟ್ ಸಹ-ಸ್ಥಾಪಕರು) ಕಾರ್ಯಕ್ರಮದ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ.
ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ 2
ಪುಣೆಯ ಸ್ಯಾನಿಟರಿ ನ್ಯಾಪ್ಕಿನ್ ವಿಲೇವಾರಿ ಸಂಸ್ಥೆಯ ಸ್ಥಾಪಕರಾದ ಅಜಿಂಕ್ಯ ಧರಿಯಾ ಈ ಬಾರಿಯ ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್‌ನಲ್ಲಿ ತಮ್ಮ ಬ್ಯುಸಿನೆಸ್ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು ವಿಲೇವಾರಿ ಮಾಡಿದ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಹೇಗೆ ಮರುಬಳಕೆ ಮಾಡುವುದು ಎಂಬುದರ ಕುರಿತು ಅನಿಸಿಕೆ ತಿಳಿಸಿದ್ದಾರೆ. 2% ಈಕ್ವಿಟಿಗೆ ರೂ 50 ಲಕ್ಷ ಆರ್ಥಿಕ ನೆರವನ್ನು ಕೇಳಿದ್ದಾರೆ.
ತಾಯಿಯೇ ರೋಲ್ ಮಾಡೆಲ್
26 ರ ಹರೆಯದ ಅಜಿಂಕ್ಯಾ ವ್ಯಾಪಾರಿ ಕುಟುಂಬದಿಂದ ಬಂದವರಾಗಿದ್ದು ಸಾಮಾಜಿಕವಾಗಿ ಪ್ರಭಾವಶಾಲಿಯಾಗಿರಬೇಕು ಎಂಬ ಇಚ್ಛೆಯನ್ನಿಟ್ಟುಕೊಂಡವರು.ಸಮಾಜ ಕಲ್ಯಾಣ ಸಂಬಂಧಿತ ಅನೇಕ ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಇಸ್ರೋ ಯೋಜನೆಗಾಗಿ ಕೂಡ ಅಜಿಂಕ್ಯಾ ಕೆಲಸ ಮಾಡಿದ್ದಾರೆ ಎಂದು ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ವ್ಯಾಪಾರಕ್ಕೆ ನೆರವನ್ನೀಯಲು ಕುಟುಂಬದ ಸಹಕಾರವನ್ನು ಕೇಳಲು ಹಿಂಜರಿಕೆ ಹೊಂದಿರಲಿಲ್ಲ ಎಂದು ತಿಳಿಸಿರುವ ಅಜಿಂಕ್ಯಾ ಬ್ಯುಸಿನೆಸ್ ನಡೆಸಲು ತಮ್ಮ ತಾಯಿ ರೋಲ್ ಮಾಡೆಲ್ ಎಂದು ತಿಳಿಸಿದ್ದಾರೆ. ಸ್ಯಾನಿಟರ್ ನ್ಯಾಪ್‌ಕಿನ್‌ಗಳ ವಿಲೇವಾರಿ ಬ್ಯುಸಿನೆಸ್ ಅನ್ನು ಅಜಿಂಕ್ಯಾ ಆರಂಭಿಸಿದ್ದರಿಂದ ಅವರ ಸಹೋದರಿ ಕೂಡ ನೆರವನ್ನು ನೀಡಿದ್ದು, ರೀಸರ್ಚ್ ನಡೆಸಲು ಪ್ಯಾಡ್‌ಗಳ ಸಂಗ್ರಹಕ್ಕಾಗಿ ಸ್ನೇಹಿತೆಯರ ನೆರವನ್ನು ಕೇಳಿದ್ದರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹರಾಜಿಗೆ ಬಂತು ಆ ನಟನ ಬ್ರೇಕಪ್ ಲೆಟರ್, 15 ಲಕ್ಷಕ್ಕೆ ಸೇಲ್ ಆಗುತ್ತಂತೆ!
ತೀರ್ಪುಗಾರರಿಂದ ಶ್ಲಾಘನೆ
ತೀರ್ಪುಗಾರರಲ್ಲಿ ಒಬ್ಬರಾಗಿರುವ ಅಮನ್, ಸರ್ಕಾರ ಮತ್ತು ಇತರ ಕಂಪನಿಗಳಿಂದ ಅನೇಕ ಅನುದಾನವನ್ನು ಪಡೆದಿದ್ದಾರೆ ಎಂದು ತಿಳಿಸಿದ್ದು, ಅಜಿಂಕ್ಯಾರನ್ನು 2020 ರ ಪ್ಯಾಡ್‌ಮ್ಯಾನ್ ಎಂದು ಕರೆದಿದ್ದಾರೆ ಹಾಗೂ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇನ್ನೊಬ್ಬ ತೀರ್ಪುಗಾರರಾದ ಪೀಯುಷ್ ಮೊತ್ತವನ್ನು ಅಜಿಂಕ್ಯಾರಿಗೆ ಆಫರ್ ಮಾಡುತ್ತಾ, ನಿಮ್ಮ ಮೊತ್ತವೆಷ್ಟು ಎಂಬುದನ್ನು ಉಲ್ಲೇಖಿಸಿ ಎಂದು ಕೇಳಿದ್ದಾರೆ.
ಈ ಸಮಯದಲ್ಲಿ ತೀರ್ಪುಗಾರರಾದ ಅನುಪಮ್, ವಿನೀತಾ ಸಿಂಗ್, ನಮಿತಾ ತಾಪರ್ ಜೊತೆಯಾಗಿ ಅಜಿಂಕ್ಯಾರಿಗೆ ಆಫರ್ ನೀಡುತ್ತಾರೆ. ಕೊನೆಗೆ ಡೀಲ್ ಅನ್ನು 4% ಈಕ್ವಿಟಿಯಂತೆ 1 ಕೋಟಿಗೆ ನಿರ್ಧರಿಸಲಾಗುತ್ತದೆ.
ಸೀಸನ್‌ನಲ್ಲಿ ಭಾಗವಹಿಸಿದ ವ್ಯಾಪಾರೋದ್ಯಮಿಗಳು
ನಂತರ ಬಂದ ಯುವ ಉದ್ಯಮಿಗಳು ಕುಶಲಕರ್ಮಿ, ಅಡುಗೆ ಸಾಮಾನು ಹಾಗೂ ಗೃಹಾಲಂಕಾರ ಕ್ಷೇತ್ರದಲ್ಲಿರುವ ಕುಟುಂಬದಿಂದ ಬಂದವರಾಗಿದ್ದು ಉದಯಪುರದ ನಿವಾಸಿಗಳು ಎಂಬುದಾಗಿ ತಿಳಿಸಿದ್ದಾರೆ.
ಈ ವ್ಯಾಪಾರವಲ್ಲದೆ ಇನ್ನಿತರ ಕೆಲಸಗಳನ್ನು ಮಾಡುವುದಾಗಿಯೂ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಇವರ ಕೆಲಸಗಳಿಂದ ತೀರ್ಪುಗಾರರು ಸಂಪ್ರೀತರಾದಗಿದ್ದು ಭಾರತದಲ್ಲಿ ಅವರ ಕುಶಲಕರ್ಮ ಕೆಲಸಗಳಿಗೆ ಅಷ್ಟೊಂದು ಮಾರುಕಟ್ಟೆ ಇಲ್ಲ ಎಂಬುದಾಗಿ ತಿಳಿಸಿದ್ದಾರೆ ಹಾಗೂ ರಫ್ತಿನತ್ತ ಹೆಚ್ಚು ಗಮನಹರಿಸುವಂತೆ ಸಲಹೆ ನೀಡಿದ್ದಾರೆ.
ಯುವ ಸಂಸ್ಥಾಪಕರೇ ಸೀಸನ್‌ನಲ್ಲಿ ಹೆಚ್ಚು ಭಾಗವಹಿಸುತ್ತಿದ್ದಾರೆ
ಕಾರ್ಯಕ್ರಮಕ್ಕೆ ಆಗಮಿಸಿದ ಮತ್ತೊಬ್ಬ ಉದ್ಯಮಿ ಶ್ರೇಯಾನ್ ದಾಗಾ, ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ಸ್ಥಾಪಕರಾಗಿದ್ದಾರೆ ಎಂದು ತಿಳಿಸಿದ್ದಾರೆ. 2% ಈಕ್ವಿಟಿಗೆ ರೂ 30 ಲಕ್ಷ ಆಫರ್ ಅನ್ನು ಈ ಯುವ ಉದ್ಯಮಿ ತೀರ್ಪುಗಾರರ ಮುಂದಿಟ್ಟರು.
ತನ್ನ ವ್ಯಾಪಾರ ಅನಿಸಿಕೆಗಳನ್ನು ಹಂಚಿಕೊಂಡ ಶ್ರೇಯಾನ್, 8 ರ ಹರೆಯದಲ್ಲೇ ಬ್ಯುಸಿನೆಸ್ ಪ್ರಯಾಣವನ್ನು ಆರಂಭಿಸಿದ್ದಾಗಿ ತಿಳಿಸಿದ್ದಾರೆ. ತಮ್ಮ ಪೇಂಟಿಂಗ್‌ಗಳನ್ನು ಮಾರಿ ರೂ 9000 ಸಂಪಾದಿಸುತ್ತಿದ್ದರು ಎಂಬುದನ್ನು ಶ್ರೇಯಾನ್ ತಿಳಿಸಿದ್ದು ತಮಗೆ 18 ರ ಹರೆಯ ಎಂಬುದನ್ನು ತೀರ್ಪುಗಾರರ ಮುಂದೆ ಶ್ರೇಯಾನ್ ಬಹಿರಂಗಪಡಿಸಿದ್ದಾರೆ.
ಸಸ್ಯಶಾಸ್ತ್ರೀಯ ಆಭರಣಗಳ ಪ್ರದರ್ಶನ
ಇತ್ತೀಚಿನ ಸಂಚಿಕೆಯಲ್ಲಿ ಒಣಗಿದ ಹೂವು, ಎಲೆ ಹಾಗೂ ಬೀಜಗಳಿಂದ ನಿರ್ಮಿಸಲಾದ ಆಭರಣಗಳ ಶ್ರೇಣಿಯನ್ನು ಸುಪ್ರಿಯಾ ದೋಂತಿ ಪರಿಚಯಿಸಿದ್ದಾರೆ. ಸಸ್ಯಶಾಸ್ತ್ರೀಯ ಆಭರಣಗಳು ಎಂಬ ಹೆಸರನ್ನೂ ಇವುಗಳು ಹೊಂದಿದ್ದು ಅನೇಕ ಸೆಲೆಬ್ರಿಟಿಗಳಿಗೆ ಈ ಆಭರಣಗಳು ಇಷ್ಟವಾಗಿದೆ ಎಂಬುದನ್ನು ಸುಪ್ರಿಯಾ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ