Loan: ಆಧಾರ್ ಕಾರ್ಡ್ ಇದ್ರೆ ಸಾಕು ನೀವೂ ಲೋನಿಗೆ ಅರ್ಜಿ ಸಲ್ಲಿಸಬಹುದು! ಹೇಗೆ ಅಂತೀರಾ ಇಲ್ಲಿದೆ ನೋಡಿ
ಕೆಲವೊಮ್ಮೆ ಸಾಲ ಕೊಟ್ಟವರು ತಮ್ಮ ಹಣವನ್ನು ಬೇಗನೆ ಹಿಂತಿರುಗಿಸಿ ಅಂತ ಕಿರುಕುಳ ಕೊಡುವುದನ್ನು ನಾವು ನೋಡಿರುತ್ತೇವೆ. ಇನ್ನೂ ಯಾರ ಬಳಿಯೂ ಸಾಲವನ್ನು ಪಡೆಯಬಾರದು ಎಂದು ನಿಮಗೆ ಅನ್ನಿಸಿದರೆ ಬ್ಯಾಂಕ್ ಗಳು ಸಹ ನಿಮಗೆ ನಿಮ್ಮ ಸಂಬಳದ ಮೇಲೆ ಸಾಲ ನೀಡುತ್ತವೆ. ಇದು ಇಲ್ಲದೆ ಹೋದರೆ ನೀವು ಸಾಲ ಪಡೆಯಲು ನಿಮಗೆ ಇನ್ನೊಂದು ಹೊಸ ಮಾರ್ಗವನ್ನು ನಾವು ತಿಳಿಸಿ ಕೂಡುತ್ತೇವೆ ನೋಡಿ.
ದುಡ್ಡಿನ ಅವಶ್ಯಕತೆ ಯಾರಿಗೆ ಇರಲ್ಲ ಹೇಳಿ? ಭೂಮಿಯ (Earth) ಮೇಲೆ ಬದುಕುತ್ತಿರುವಂತಹ ಪ್ರತಿಯೊಬ್ಬ ಮನುಷ್ಯನಿಗೂ ಅವರವರ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಮತ್ತು ಕಷ್ಟದ ಸಮಯಗಳಲ್ಲಿ ಹಣ (Money) ಬೇಕೇಬೇಕು. ಹೀಗಾಗಿ ಜನರು ತಮಗೆ ತುರ್ತಾಗಿ ಏನಾದರೂ ಹಣದ ಅವಶ್ಯಕತೆ ಇದ್ದರೆ ತಕ್ಷಣಕ್ಕೆ ಅಂತ ಅವರ ಸ್ನೇಹಿತರ ಮತ್ತು ಸಂಬಂಧಿಕರ ಬಳಿ ಸಾಲ ತೆಗೆದುಕೊಳುತ್ತಾರೆ. ಅವರಿಗೆ ಎಲ್ಲಿಯೂ ಹಣ ಸಿಗದೇ ಹೋದರೆ ತಮ್ಮ ಮನೆಯಲ್ಲಿರುವ ಆಭರಣಗಳನ್ನು (Jewelry) ಈ ಫೈನಾನ್ಸ್ ಗಳಲ್ಲಿ (Finance) ಅಡವಿಟ್ಟು ಸಾಲ (Loan) ಪಡೆಯುತ್ತಾರೆ. ಆಮೇಲೆ ಹಣ ಬಂದ ನಂತರ ಆ ಇರಿಸಿದಂತಹ ಆಭರಣಗಳನ್ನು ಹಿಂದಕ್ಕೆ ಪಡೆಯುತ್ತಾರೆ.
ಆದರೆ ಕೆಲವೊಮ್ಮೆ ಸಾಲ ಕೊಟ್ಟವರು ತಮ್ಮ ಹಣವನ್ನು ಬೇಗನೆ ಹಿಂತಿರುಗಿಸಿ ಅಂತ ಕಿರುಕುಳ ಕೊಡುವುದನ್ನು ನಾವು ನೋಡಿರುತ್ತೇವೆ. ಇನ್ನೂ ಯಾರ ಬಳಿಯೂ ಸಾಲವನ್ನು ಪಡೆಯಬಾರದು ಎಂದು ನಿಮಗೆ ಅನ್ನಿಸಿದರೆ ಬ್ಯಾಂಕ್ ಗಳು ಸಹ ನಿಮಗೆ ನಿಮ್ಮ ಸಂಬಳದ ಮೇಲೆ ಸಾಲ ನೀಡುತ್ತವೆ. ಇದು ಇಲ್ಲದೆ ಹೋದರೆ ನೀವು ಸಾಲ ಪಡೆಯಲು ನಿಮಗೆ ಇನ್ನೊಂದು ಹೊಸ ಮಾರ್ಗವನ್ನು ನಾವು ತಿಳಿಸಿ ಕೂಡುತ್ತೇವೆ ನೋಡಿ.
ಆಧಾರ್ ಕಾರ್ಡ್ ಗಳ ಮೇಲೆ ಸಹ ಸಾಲ ಪಡೆಯಬಹುದು ಹೌದು.. ನಿಮ್ಮ ಬಳಿ ಆಧಾರ್ ಕಾರ್ಡ್ ಅಂತೂ ಇದ್ದೇ ಇರುತ್ತದೆ ಅಲ್ಲವೇ? ಆಧಾರ್ ಕಾರ್ಡ್ ಈಗ ಒಂದು ಪ್ರಮುಖವಾದ ಗುರುತಿನ ದಾಖಲೆಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ನಿಮ್ಮ ಮಕ್ಕಳಿಗೆ ಶಾಲಾ ಪ್ರವೇಶವನ್ನು ಪಡೆಯುವುದರಿಂದ ಹಿಡಿದು ಬ್ಯಾಂಕ್ ಖಾತೆಗಳನ್ನು ತೆರೆಯುವುದು ಸೇರಿದಂತೆ ಅನೇಕ ಕಾರ್ಯಗಳನ್ನು ಪೂರ್ಣಗೊಳಿಸಲು ಆಧಾರ್ ಕಾರ್ಡ್ ತುಂಬಾನೇ ಅಗತ್ಯವಾಗಿದೆ. ಆದಾಗ್ಯೂ, ಅದೇ ಆಧಾರ್ ಕಾರ್ಡ್ ನಿಮಗೆ ತ್ವರಿತವಾಗಿ ಹಣ ಬೇಕಾದಾಗ ಸಾಲ ಪಡೆಯಲು ಸಹ ಸಹಾಯ ಮಾಡುತ್ತದೆ ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ.
ನಿಮ್ಮ ಆಧಾರ್ ಕಾರ್ಡ್ ಸಹಾಯದಿಂದ, ನೀವು ಯಾವುದೇ ತೊಂದರೆಯಿಲ್ಲದೆ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ ಅನೇಕ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಆಧಾರ್ ಕಾರ್ಡ್ ಗಳ ಮೇಲೆ ಸಹ ಸಾಲ ನೀಡುತ್ತವೆ.
750ಕ್ಕಿಂತಲೂ ಹೆಚ್ಚು ಕ್ರೆಡಿಟ್ ಸ್ಕೋರ್ ಹೊಂದಿರಲೇಬೇಕು ನೀವು ಈ ಆಯ್ಕೆಯನ್ನು ಪರಿಗಣಿಸುವ ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. 750 ಕ್ಕಿಂತ ಹೆಚ್ಚು ಕ್ರೆಡಿಟ್ ಸ್ಕೋರ್ ಹೊಂದಿರುವ ಯಾವುದೇ ಗ್ರಾಹಕರು ಆಧಾರ್ ಕಾರ್ಡ್ ಮೇಲೆ ಸಾಲ ಪಡೆಯಲು ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಗಮನಾರ್ಹವಾಗಿ, ಬ್ಯಾಂಕುಗಳು ಅಂತಹ ಸಂದರ್ಭಗಳಲ್ಲಿ ಕಡಿಮೆ ಬಡ್ಡಿದರವನ್ನು ವಿಧಿಸುತ್ತವೆ ಎಂದು ಹೇಳಲಾಗುತ್ತಿದೆ.
ಹೆಚ್ಚಿನ ಬ್ಯಾಂಕುಗಳು ಮತ್ತು ಹಣಕಾಸು ಕಂಪನಿಗಳು ‘ನೋ ಇವರ್ ಕ್ಲೈಂಟ್’ (ಕೆವೈಸಿ) ಪ್ರಕ್ರಿಯೆ ಆದ ನಂತರವೇ ವೈಯಕ್ತಿಕ ಸಾಲಗಳನ್ನು ಈ ಬ್ಯಾಂಕುಗಳು ಸುಲಭವಾಗಿ ಅನುಮೋದಿಸುತ್ತವೆ ಎಂದು ಹೇಳಲಾಗುತ್ತಿದೆ.
ಆಧಾರ್ ಕಾರ್ಡ್ ಮೂಲಕ ವೈಯಕ್ತಿಕ ಸಾಲಕ್ಕಾಗಿ ನೀವು ಹೇಗೆ ಅರ್ಜಿ ಸಲ್ಲಿಸಬಹುದು ಎಂಬುದು ಇಲ್ಲಿದೆ ನೋಡಿ.
ಮೊದಲಿಗೆ ಆಧಾರ್ ಕಾರ್ಡ್ ಮೂಲಕ ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಬ್ಯಾಂಕಿನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಗಮನಾರ್ಹವಾಗಿ, ನೀವು ಬ್ಯಾಂಕಿನ ಮೊಬೈಲ್ ಅಪ್ಲಿಕೇಶನ್ ಮೂಲಕವೂ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.
ನಂತರ ನಿಮ್ಮ ಮೊಬೈಲ್ ಫೋನ್ ನಲ್ಲಿ ನೀವು ಸ್ವೀಕರಿಸಿದ ಒಟಿಪಿಯನ್ನು ಅಲ್ಲಿ ನಮೂದಿಸಿರಿ.
ವೈಯಕ್ತಿಕ ಸಾಲದ ಆಯ್ಕೆಯನ್ನು ಆರಿಸಿಕೊಳ್ಳಿರಿ.
ನಿಮ್ಮ ಜನ್ಮ ದಿನಾಂಕ ಮತ್ತು ವಿಳಾಸದೊಂದಿಗೆ ಸಾಲದ ಮೊತ್ತ ಮತ್ತು ಇತರ ಅಗತ್ಯ ಮಾಹಿತಿಯನ್ನು ಅದರಲ್ಲಿ ನಮೂದಿಸಿರಿ.
ನಂತರ, ನೀವು ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನಂತಹ ಪ್ರಮುಖ ಗುರುತಿನ ದಾಖಲೆಗಳ ಪ್ರತಿಯನ್ನು ಆ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕು.
ಕೊನೆಯದಾಗಿ ನೀವು ಸಲ್ಲಿಸಿದ ವಿವರಗಳನ್ನು ಬ್ಯಾಂಕುಗಳು ಮತ್ತೊಮ್ಮೆ ಪರಿಶೀಲಿಸಿಕೊಂಡು ತದ ನಂತರವೇ ಅವರು ನಿಮ್ಮ ಸಾಲವನ್ನು ಅನುಮೋದಿಸುತ್ತಾರೆ.
Published by:Ashwini Prabhu
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ