Richest Person: ಒಂದೇ ದಿನ 80,000 ಕೋಟಿ ಕಳೆದುಕೊಂಡ ಜೆಫ್ ಬೆಜೋಸ್; ಗೌತಮ್ ಅದಾನಿ ವಿಶ್ವದ 2 ನೇ ಶ್ರೀಮಂತ ವ್ಯಕ್ತಿಯಾಗುವ ಸಾಧ್ಯತೆ

ಅಮೆಜಾನ್‌ ಸ್ಥಾಪಕ ಬೆಜೋಸ್‌ ಸುಮಾರು 80,000 ಕೋಟಿ ಕಳೆದುಕೊಂಡಿದ್ದು, ಶ್ರೀಮಂತರ ಪಟ್ಟಿಯಲ್ಲಿ ಕೆಳಗೆ ಇಳಿಯುವ ಸಾಧ್ಯತೆ ಇದೆ. ಇದೇ ಸಮಯದಲ್ಲಿ ಆ ಸ್ಥಾನಕ್ಕೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ, ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಸ್ಪರ್ಧೆಗೆ ಇಳಿಯುವ ಲಕ್ಷಣಗಳು ಕಂಡು ಬರುತ್ತಿವೆ.

ಜೆಫ್ ಬೆಜೋಸ್ ಮತ್ತು ಗೌತಮ್ ಅದಾನಿ

ಜೆಫ್ ಬೆಜೋಸ್ ಮತ್ತು ಗೌತಮ್ ಅದಾನಿ

  • Share this:
ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಜೆಫ್ ಬೆಜೋಸ್ (Jeff Bezos) ಅವರ ಸ್ಥಾನ ಈ ಬಾರಿ ಕೈತಪ್ಪಿ ಹೋಗುವ ಸಾಧ್ಯತೆಗಳು ಎದ್ದು ಕಾಣುತ್ತಿವೆ. ಅಮೆಜಾನ್‌ ಸ್ಥಾಪಕ ಬೆಜೋಸ್‌ (Jeff Bezos ಸುಮಾರು 80,000 ಕೋಟಿ ಕಳೆದುಕೊಂಡಿದ್ದು, ಶ್ರೀಮಂತರ ಪಟ್ಟಿಯಲ್ಲಿ ಕೆಳಗೆ ಇಳಿಯುವ ಸಾಧ್ಯತೆ ಇದೆ. ಇದೇ ಸಮಯದಲ್ಲಿ ಆ ಸ್ಥಾನಕ್ಕೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ, ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಸ್ಪರ್ಧೆಗೆ ಇಳಿಯುವ ಲಕ್ಷಣಗಳು ಕಂಡು ಬರುತ್ತಿವೆ. ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಶೀಘ್ರದಲ್ಲೇ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರನ್ನು ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯ ಸ್ಥಾನದಿಂದ ಪದಚ್ಯುತಗೊಳಿಸಬಹುದು ಎನ್ನಲಾಗುತ್ತಿದೆ.

ಒಂದೇ ದಿನ 80,000 ಕೋಟಿ ರೂ ಕಳೆದುಕೊಂಡ ಬೆಜೋಸ್
ಬೆಜೋಸ್ ಒಂದೇ ದಿನದಲ್ಲಿ ತಮ್ಮ ಆದಾಯದಲ್ಲಿ $9.84 ಶತಕೋಟಿ (ಸುಮಾರು 80,000 ಕೋಟಿ ರೂ.) ಕಳೆದುಕೊಂಡ ನಂತರ ಬೆಜೋಸ್‌ ಮತ್ತು ಗೌತಮ್‌ ಅದಾನಿ ಈ ಇಬ್ಬರು ಬಿಲಿಯನೇರ್‌ಗಳ ನಿವ್ವಳ ಮೌಲ್ಯದ ನಡುವಿನ ವ್ಯತ್ಯಾಸ ಕೇವಲ $3 ಬಿಲಿಯನ್ ಆಗಿದೆ.

ನಿವ್ವಳ ಮೌಲ್ಯದ ಕಡಿಮೆ ವ್ಯತ್ಯಾಸ ಮತ್ತು ದಿನೇ ದಿನೇ ತನ್ನ ಬೊಕ್ಕಸಕ್ಕೆ ಹೆಚ್ಚಿನ ಲಾಭವನ್ನು ಸೇರಿಸುತ್ತಿರುವುದರಿಂದ ಅದಾನಿ ಗ್ರೂಪ್‌ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು ಎಂದು ನಿರೀಕ್ಷಿಸಲಾಗಿದೆ. ಕಳೆದ ಬುಧವಾರ (ಸೆಪ್ಟೆಂಬರ್ 7) ಸುಮಾರು $6 ಬಿಲಿಯನ್ ಅಂತರದಲ್ಲಿದ್ದ ಅದಾನಿ ಮತ್ತು ಬೆಜೋಸ್ ಅವರ ನಿವ್ವಳ ಮೌಲ್ಯವು ಕೇವಲ ಒಂದು ವಾರದಲ್ಲಿ ಅರ್ಧಕ್ಕೆ ಇಳಿದಿದೆ.

ಇದನ್ನೂ ಓದಿ:  Share Market: ಯುಎಸ್ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ; ಈ ಬಿಲಿಯನೇರ್‌ಗಳು ಕಳೆದುಕೊಂಡ ಆದಾಯವೆಷ್ಟು ಗೊತ್ತಾ?

ಹಲವು ಶ್ರೀಮಂತರ ನಿವ್ವಳ ಮೌಲ್ಯ ಇಳಿಕೆ
ಕೇವಲ ಬೆಜೋಸ್‌ ಆದಾಯ ಮಾತ್ರವಲ್ಲದೇ ವಿಶ್ವದ ಹಲವು ಶ್ರೀಮಂತರ ನಿವ್ವಳ ಮೌಲ್ಯ ಇಳಿಕೆಯಾಗಿದೆ. ಎಲೋನ್ ಮಸ್ಕ್ ಸೇರಿದಂತೆ ವಾಲ್ ಸ್ಟ್ರೀಟ್‌ನಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಆದಾಯವು ಕುಸಿತ ಕಂಡಿದೆ. ಟೆಸ್ಲಾ ಸಿಇಒ ಮಸ್ಕ್ ಅವರ ನಿವ್ವಳ ಮೌಲ್ಯವು $ 8.4 ಬಿಲಿಯನ್ (ಸುಮಾರು ರೂ 70,000 ಕೋಟಿ) ಕಡಿಮೆಯಾಗಿದೆ. ಮತ್ತೊಂದೆಡೆ, ಅದಾನಿ ಅದೇ ದಿನದಲ್ಲಿ $ 1.58 ಶತಕೋಟಿಯನ್ನು ತಮ್ಮ ಸಂಪತ್ತಿಗೆ ಸೇರಿಸುವ ಮೂಲಕ, ಅವರ ಒಟ್ಟು ಸಂಪತ್ತನ್ನು $ 147 ಶತಕೋಟಿಗೆ ಹೆಚ್ಚಿಸಿಕೊಂಡಿದ್ದಾರೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಮಸ್ಕ್ ಅವರ ನಿವ್ವಳ ಮೌಲ್ಯವು $256 ಶತಕೋಟಿ, ಬೆಜೋಸ್ ಅವರ ನಿವ್ವಳ ಮೌಲ್ಯ $ 150 ಶತಕೋಟಿ ಮತ್ತು ಅದಾನಿ $ 147 ಬಿಲಿಯನ್ ಇದೆ.

ದಿನೇ ದಿನೇ ಆದಾಯದ ಬೊಕ್ಕಸ ಹೆಚ್ಚಿಸಿಕೊಳ್ಳುತ್ತಿರುವ ಅದಾನಿ ಗ್ರೂಪ್
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅದಾನಿಯ ಸಂಪತ್ತು ದಿನೇ ದಿನೇ ಹೆಚ್ಚಾಗುತ್ತಿದೆ. ಈ ವರ್ಷದ ಫೆಬ್ರವರಿಯಲ್ಲಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾದರು.

ಇದನ್ನೂ ಓದಿ:  Indian Inflation: ಭಾರತದಲ್ಲಿನ ಹಣದುಬ್ಬರದ ಒತ್ತಡ ಅಷ್ಟೇನೂ ದೊಡ್ಡದಲ್ಲ: HSBC ಮುಖ್ಯ ಕಾರ್ಯನಿರ್ವಾಹಕ

ಎರಡು ತಿಂಗಳ ನಂತರ ಏಪ್ರಿಲ್‌ನಲ್ಲಿ, ಅದಾನಿಯವರ ನಿವ್ವಳ ಮೌಲ್ಯವು $100 ಶತಕೋಟಿ ದಾಟಿತು ಮತ್ತು ಜುಲೈನಲ್ಲಿ, ಅವರು ಮೈಕ್ರೋಸಾಫ್ಟ್‌ನ ಬಿಲ್ ಗೇಟ್ಸ್‌ರನ್ನು ಮೀರಿಸಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾದರು. ಆಗಸ್ಟ್ 30 ರಂದು, ಅವರು ಮೂರನೇ ಸ್ಥಾನಕ್ಕೆ ಏರಿದರು, ಸೂಚ್ಯಂಕದ ಮೊದಲ ಮೂರು ಸ್ಥಾನಗಳನ್ನು ಗಳಿಸಿದ ಮೊದಲ ಏಷ್ಯನ್ ವ್ಯಕ್ತಿ ಸಹ ಆಗಿದ್ದರು. ‌

ಈ ವರ್ಷ ನಿವ್ವಳ ಮೌಲ್ಯ $ 70.3 ಶತಕೋಟಿ ಏರಿಕೆ
ಅದಾನಿ ಗ್ರೂಪ್ ಅಧ್ಯಕ್ಷರ ನಿವ್ವಳ ಮೌಲ್ಯವು ಈ ವರ್ಷ $ 70.3 ಶತಕೋಟಿಗಳಷ್ಟು ಏರಿಕೆಯಾಗಿದೆ. ಅದಾನಿ ಗ್ರೂಪ್ ಕಂಪನಿಗಳಲ್ಲಿ ಅದಾನಿಯವರ ಹಿಡುವಳಿಗಳ ಮೌಲ್ಯವು ಕಳೆದ ಎರಡು ವರ್ಷಗಳಲ್ಲಿ $112 ಶತಕೋಟಿ ಜಿಗಿದಿದೆ ಮತ್ತು ಅವರ ನಿವ್ವಳ ಮೌಲ್ಯವು ಕಳೆದ ಎರಡು ವರ್ಷಗಳಲ್ಲಿ $30.7 ಶತಕೋಟಿಯಿಂದ $142.7 ಶತಕೋಟಿಗೆ 365 ಶೇಕಡಾ ಏರಿಕೆ ಕಂಡಿದೆ ಎಂದು ಇತ್ತೀಚಿನ ವರದಿಗಳು ಹೇಳಿವೆ.
Published by:Ashwini Prabhu
First published: