Gautam Adani: ಬಿಲ್ ಗೇಟ್ಸ್‌ರನ್ನೇ ಹಿಂದಿಕ್ಕಿದ ಗೌತಮ್ ಅದಾನಿ! ಫೋರ್ಬ್ಸ್‌ ಶ್ರೀಮಂತರ ಪಟ್ಟಿಯಲ್ಲಿ 4ನೇ ಸ್ಥಾನ

ಅದಾನಿ ಗ್ರೂಪ್ಸ್‌ನ (Adani Groups) ಗೌತಮ್ ಅದಾನಿ ಅವರು ಮೈಕ್ರೋಸಾಫ್ಟ್ (Microsoft) ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅದಾನಿಯವರ ನಿವ್ವಳ ಮೌಲ್ಯ (Net Worth) 113 ಬಿಲಿಯನ್ ಡಾಲರ್ ತಲುಪಿದೆ.

ಬಿಲ್‌ ಗೇಟ್ಸ್‌ರನ್ನು ಹಿಂದಿಕ್ಕಿದ ಗೌತಮ್ ಅದಾನಿ

ಬಿಲ್‌ ಗೇಟ್ಸ್‌ರನ್ನು ಹಿಂದಿಕ್ಕಿದ ಗೌತಮ್ ಅದಾನಿ

  • Share this:
ಭಾರತದ ಖ್ಯಾತ ಉದ್ಯಮಿ (Industrialist) ಗೌತಮ್ ಅದಾನಿ (Gautam Adani) ಅವರು ವಿಶ್ವದ ಖ್ಯಾತ ಉದ್ಯಮಿ ಬಿಲ್ ಗೇಟ್ಸ್ (Bill Gates) ಅವರನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ಫೋರ್ಬ್ಸ್ (Forbs) ರಿಲೀಸ್ ಮಾಡಿದ ಶ್ರೀಮಂತರ ಪಟ್ಟಿಯಲ್ಲಿ ಬಿಲ್ ಗೇಟ್ಸ್ ಐದನೇ ಸ್ಥಾನ ಪಡೆದಿದ್ದರೆ, ಅವರನ್ನು ಹಿಂದಿಕ್ಕಿ ಗೌತಮ್ ಅದಾನಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅದಾನಿ ಗ್ರೂಪ್ಸ್‌ನ (Adani Groups) ಗೌತಮ್ ಅದಾನಿ ಅವರು ಮೈಕ್ರೋಸಾಫ್ಟ್ (Microsoft) ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅದಾನಿಯವರ ನಿವ್ವಳ ಮೌಲ್ಯ (Net Worth) 113 ಬಿಲಿಯನ್ ಡಾಲರ್ ತಲುಪಿದೆ, ಆದರೆ ಗೇಟ್ಸ್ ಪ್ರಸ್ತುತ 102 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ. ಫೋರ್ಬ್ಸ್ ಬಿಲಿಯನೇರ್ ಸೂಚ್ಯಂಕದಲ್ಲಿ ಈ ವಿಷಯ ಬಹಿರಂಗವಾಗಿದೆ.

ಏರುತ್ತಿದೆ ಅದಾನಿ ಒಡೆತನದ ಸಂಪತ್ತು

ಅದಾನಿ ಗ್ರೂಪ್‌ನ ಮುಖ್ಯಸ್ಥ ಗೌತಮ್ ಅದಾನಿ ಆಸ್ತಿಯಲ್ಲಿ ಸುಮಾರು 23 ಶತಕೋಟಿ ಡಾಲರ್‌ಗಳಷ್ಟು ಹೆಚ್ಚಳವಾಗಿದ್ದು, ಹೆಚ್ಚುತ್ತಿರುವ ಸಂಪತ್ತಿನ ವಿಷಯದಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. 2022 ರಲ್ಲಿ ಅವರ ಸಂಪತ್ತು ಸುಮಾರು 23 ಶತಕೋಟಿ ಡಾಲರ್ಗಳಷ್ಟು ಹೆಚ್ಚಾಗಿದೆ, ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ. 2021 ಮತ್ತು 2020ರಲ್ಲಿ ಅದಾನಿ ಸಂಪತ್ತು 40-40 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ. ಅದಾನಿ ಸಂಪತ್ತಿನ ಹೆಚ್ಚಳಕ್ಕೆ ದೊಡ್ಡ ಕಾರಣವೆಂದರೆ ಅದಾನಿ ಸಮೂಹದ ಷೇರುಗಳಲ್ಲಿ ಸ್ಥಿರವಾದ ಏರಿಕೆಯಾಗಿದೆ.

ಹಲವು ಉದ್ಯಮಗಳಲ್ಲಿ ಇನ್ವೆಸ್ಟ್‌ಮೆಂಟ್

ಅದಾನಿ ಗ್ರೂಪ್ಸ್ ಈಗಾಗಲೇ ಮೂಲಸೌಕರ್ಯ ಉದ್ಯಮದಲ್ಲಿ ತೊಡಗಿದೆ. ಜೊತೆಗೆ ಆರು ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿಗಳಲ್ಲಿ ಷೇರುಗಳನ್ನು ಹೊಂದಿದ್ದಾರೆ. ವಿದ್ಯುತ್, ಹಸಿರು ಶಕ್ತಿ, ಅನಿಲ, ಬಂದರುಗಳು ಮುಂತಾದವುಗಳಲ್ಲಿ ಅದಾನಿ ಗ್ರೂಪ್ಸ್ ಪಾಲುದಾರಿಕೆ ಹೊಂದಿದೆ.

ಇದನ್ನೂ ಓದಿ: GST ಲೆಕ್ಕಾಚಾರ ಹೇಗಿರುತ್ತದೆ ಗೊತ್ತಾ? ನಾಳೆಯಿಂದ ಯಾವೆಲ್ಲ ವಸ್ತುಗಳು ದುಬಾರಿಯಾಗಲಿವೆ?

ಕಾಲೇಜ್‌ನಿಂದ ಡ್ರಾಪ್ ಔಟ್ ಆಗಿದ್ದ ಅದಾನಿ

ಹಾರ್ವರ್ಡ್‌ನಿಂದ ಹೊರಬಂದ ಬಿಲ್ ಗೇಟ್ಸ್‌ರಂತೆ ಕಾಲೇಜು ಡ್ರಾಪ್‌ಔಟ್ ಆಗಿರುವು 60 ವರ್ಷದ ಅದಾನಿ 1988 ರಲ್ಲಿ ಸರಕು ರಫ್ತು ಮಾಡುವ ಸಂಸ್ಥೆಯನ್ನು ಪ್ರಾರಂಭಿಸಿದರು. ಅವರು 2008 ರಲ್ಲಿ ಫೋರ್ಬ್ಸ್‌ನ ವಿಶ್ವದ ಬಿಲಿಯನೇರ್‌ಗಳ ಪಟ್ಟಿಯಲ್ಲಿ 9.3 ಶತಕೋಟಿ ಡಾಲರ್ ಮೌಲ್ಯದಲ್ಲಿ ಕಾಣಿಸಿಕೊಂಡರು. ಜೂನ್‌ನಲ್ಲಿ, ಶುಕ್ರವಾರದಂದು ಅವರ 60 ನೇ ಹುಟ್ಟುಹಬ್ಬವನ್ನು ಆಚರಿಸಲು ಅದಾನಿ ಮತ್ತು ಅವರ ಕುಟುಂಬವು 600 ಶತಕೋಟಿ ರೂಪಾಯಿಗಳನ್ನು ($7.7 ಶತಕೋಟಿ) ಹಲವಾರು ಸಾಮಾಜಿಕ ಕಾರ್ಯಗಳಿಗೆ ದೇಣಿಗೆ ನೀಡಲು ವಾಗ್ದಾನ ಮಾಡಿದೆ.

 ಇದನ್ನೂ ಓದಿ: Gold Price: ಆಭರಣ ಪ್ರಿಯರಿಗೆ ಭಾನುವಾರ ಬಂಗಾರದಂತ ಸುದ್ದಿ! ಇಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ

 ಅದಾನಿಗಿಂತ ಮುಂದಿರುವ ಮೂವರು ಕೈಗಾರಿಕೋದ್ಯಮಿಗಳು

ಫೋರ್ಬ್ಸ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಸಂಪತ್ತಿನ ವಿಷಯದಲ್ಲಿ ಅದಾನಿಗಿಂತ ಈಗ ಕೇವಲ ಮೂವರು ಉದ್ಯಮಿಗಳು ಮಾತ್ರ ಮುಂದೆ ಇದ್ದಾರೆ. ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಮಸ್ಕ್ ಅವರ ಸಂಪತ್ತು 229 ಬಿಲಿಯನ್ ಡಾಲರ್ ಆಗಿದೆ. ಪಟ್ಟಿಯಲ್ಲಿ ಎರಡನೆ ಸ್ಥಾನದಲ್ಲಿ ಫ್ರೆಂಚ್ ಐಷಾರಾಮಿ ಸರಕುಗಳ ಕಂಪನಿ LMVH ಮಾಲೀಕ ಬರ್ನಾರ್ಡ್ ಅರ್ನಾಲ್ಟ್ ಮತ್ತು ಅವರ ಕುಟುಂಬ ಇದೆ. ಅವರ ಒಟ್ಟು ಸಂಪತ್ತು 145 ಬಿಲಿಯನ್ ಡಾಲರ್. ಮೂರನೇ ಸ್ಥಾನದಲ್ಲಿ ಅಮೆರಿಕದ ಇ-ಕಾಮರ್ಸ್ ಕಂಪನಿ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಇದ್ದಾರೆ. ಬೆಜೋಸ್ ಅವರ ನಿವ್ವಳ ಮೌಲ್ಯ $136 ಬಿಲಿಯನ್ ಆಗಿದೆ.
Published by:Annappa Achari
First published: