ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni), ಕ್ರಿಕೆಟ್‌ನ (Cricket) ಗ್ರೇಟ್ ಮೈಂಡ್. ಈ ಐಕಾನ್ ಆಟಗಾರನನ್ನ ದೇಶ ವಿದೇಶಗಳಲ್ಲಿ, ಫಾಲೋ (Follow) ಮಾಡ್ತಾರೆ. ಧೋನಿಯ ಸ್ಟೈಲಿಶ್ ಲುಕ್ಸ್ಗೆ,(Stylish Look) ಸಾಕಷ್ಟು ಮಂದಿ ಪ್ರಭಾವ ಆಗಿದ್ದಾರೆ. ಧೋನಿ ಟೀಮ್ ಇಂಡಿಯಾ (Team India) ನಾಯಕತ್ವ (Captaincy) ವಹಿಸಿಕೊಂಡ ಬಳಿಕ ಮೊಟ್ಟ ಮೊದಲ ಬಾರಿ ರಾಷ್ಟ್ರೀಯ ತಂಡವನ್ನು ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ (ICC Test Ranking) ಅಗ್ರ ಸ್ಥಾನಕ್ಕೇರಿಸಿದ್ದ ಕೀರ್ತಿ ಕೂಡ ಧೋನಿಗೆ ಸಲ್ಲುತ್ತದೆ. ಅಷ್ಟೇ ಅಲ್ಲದೆ ತಮ್ಮ ಶಾಂತ ಸ್ವಭಾವ ಹಾಗೂ ತೀಕ್ಷ್ಣ ನಾಯಕತ್ವದಿಂದ ಇಡೀ ವಿಶ್ವದ (World) ಗಮನವನ್ನು ಕೂಲ್ ಕ್ಯಾಪ್ಟನ್ ಸೆಳೆದಿದ್ರು. 2022ರ ಐಪಿಎಲ್ ಸೀಸನ್ನ ಮೊದಲ ಪಂದ್ಯದಲ್ಲೇ ಅರ್ಧ ಶತಕ ಬಾರಿಸಿ ಸೌಂಡ್ ಮಾಡಿದ್ದರು ಮಾಹಿ. ಐಪಿಎಲ್ ಸೀಸನ್ ಮುಗಿದ ಬಳಿಕ ಧೋನಿ ಮತ್ತೆ ಸುದ್ದಿಯಲ್ಲಿದ್ದಾರೆ.
ಅನ್ನದಾತರ ಬೆನ್ನಿಗೆ ನಿಂತ ಧೋನಿ
ಮಹೇಂದ್ರ ಸಿಂಗ್ ಧೋನಿ ಆಟದ ಗತ್ತು ಈಗ ಕಡಿಮೆಯಾಗಿದೆ. ಧೋನಿಗೆ ವಯಸ್ಸಾಯ್ತು ಅನ್ನುವವರೇ ಹೆಚ್ಚಾಗಿದ್ದಾರೆ. ಧೋನಿ ಕೂಡ ತಮ್ಮ ಹಳೆ ಖದರ್ ಅನ್ನು ಕಳೆದುಕೊಂಡಿದ್ದಾರೆ. ಟೀಂ ಇಂಡಿಯಾ ಕೆಟ್ನಿಂದ ನಿವೃತ್ತಿ ಪಡೆದುಕೊಂಡು ಧೋನಿ ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅದರಲ್ಲಿ ಕೃಷಿ ಕ್ರೇತ್ರ ಮೇಲೆ ಧೋನಿ ಹೆಚ್ಚಿನ ಒಲವನ್ನು ಹೊಂದಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲೇ ಇದ್ದು ಏನಾದರೂ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಬೇಕು ಎಂದು ಧೋನಿ ಅಂದುಕೊಂಡಿದ್ದರು. ಇದು ಈಗ ನೆರವೇರುತ್ತಿದೆ. ಆಧುನಿಕ ಶೈಲಿಯಲ್ಲಿ ರೈತರಿಗೆ ಸಹಾಯ ಮಾಡಲು ಧೋನಿ ಮುಂದಾಗಿದ್ದಾರೆ.
ಆಧುನಿಕ ಶೈಲಿಯಲ್ಲಿ ಸಹಾಯ ಮಾಡ್ತಾರಂತೆ ಧೋನಿ!
ಆಧುನಿಕ ಶೈಲಿಯಲ್ಲಿ ರೈತರಿಗೆ ಸಹಾಯ ಮಾಡಲು ಮುಂದಾಗಿರುವ ಮಹೇಂದ್ರ ಸಿಂಗ್ ಧೋನಿ ಮಹತ್ವದ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಇಂಡಿಯನ್ ಗರುಡ ಡ್ರೋನ್ ಕಂಪನಿಯಲ್ಲಿ ಶೇರ್ ಖರೀದಿಸಿರುವ ಮಾಹಿ, ರೈತರಿಗೆ ನೆರವಾಗಲು ನಿರ್ಧಾರ ಕೈಗೊಂಡಿದ್ದಾರೆ. ಈ ಶೇರ್ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ್ದಾರೆ. ಗರುಡ ಕಂಪನಿಯ ಡ್ರೋನ್ಗಳು ಅನ್ನದಾತರಿಗೆ ಸಹಕಾರಿಯಗಿದೆ. ಇದರ ಸಹಾಯದಿಂದ ಕೀಟ ನಾಶಕ, ಕಳೆ ನಾಶಕ, ನೀರು, ರಸಗೊಬ್ಬರವನ್ನು ಸುಲಭವಾಗಿ ಬೆಳೆಗಳಿಗೆ ಸಿಂಪಡಿಸಬಹುದು.
ಇದನ್ನೂ ಓದಿ: ಧೋನಿಗಿಂತ ಹಾರ್ದಿಕ್ ಪಾಂಡ್ಯ ಬೆಸ್ಟ್ ಅಂತೆ! ಈ ಅಂಕಿ ಅಂಶಗಳು ಕೂಡ ಅದನ್ನೇ ಹೇಳ್ತಿವೆ
ಬ್ರಾಂಡ್ ಅಂಬಾಸಿಡರ್ ಆಗಿರುವ ಧೋನಿ,
ಧೋನಿ ಗರುಡ ಏರೋಸ್ಪೇಸ್ನ ಇದೀಗ ಶೇರ್ ಹೋಲ್ಡರ್ ಆಗಿದ್ದಾರೆ. ಜೊತೆಗೆ ಬ್ರಾಂಡ್ ಅಂಬಾಸಿಡರ್ ಆಗಿರುವ ಧೋನಿ, ರೈತರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.ಗರುಡ ಎರೋಸ್ಪೇಸ್ನ ಭಾಗವಾಗಲು ನನಗೆ ಸಂತೋಷವಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆಂದು ಕಂಪನಿ ಪ್ರಕಟಣೆ ಹೊರಡಿಸಿದೆ. ಗರುಡ ಕಂಪನಿಯ 300 ಡ್ರೋನ್ಗಳು ಈಗಾಗಲೇ 26 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಇದನ್ನೂ ಓದಿ: ಈ 5 ಕ್ರಿಕೆಟಿಗರಿಗೆ ಧೋನಿ ಅಂದ್ರೆ ಅಷ್ಟಕಷ್ಟೆಯಂತೆ! ರಿಟೈರ್ ಆದಕೂಡ್ಲೇ ಬಾಯಿ ಬಿಟ್ಟಿದ್ದಾರೆ ನೋಡಿ
ನಯನತಾರಾ ಸಿನಿಮಾಗೆ ಬಂಡವಾಳ ಹೂಡ್ತಿದ್ದಾರಂತೆ ಧೋನಿ!
ವರದಿಗಳ ಪ್ರಕಾರ, ಮಹೇಂದ್ರ ಸಿಂಗ್ ಧೋನಿ ಮತ್ತು ನಟಿ ನಯನತಾರಾ ಹೊಸ ಯೋಜನೆಗಾಗಿ ಜೊತೆಯಾಗುತ್ತಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರಿಕೆಟ್‌ನ ದಿಕ್ಕನ್ನೇ ಬದಲಿಸಿದ್ದಾರೆ.ಭಾರತದ ಮಾಜಿ ನಾಯಕ, ಅವರು 2011 ರ ವಿಶ್ವಕಪ್ ಸೇರಿದಂತೆ ಭಾರತಕ್ಕಾಗಿ ಅನೇಕ ಟ್ರೋಫಿಗಳನ್ನು ಗೆದ್ದಿದ್ದಾರೆ.ಪ್ರಸ್ತುತ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದ ನಾಯಕರಾಗಿದ್ದಾರೆ. ಹೀಗಿರುವಾಗ ಧೋನಿ ನಿರ್ಮಾಣ ಸಂಸ್ಥೆ ಆರಂಭಿಸಿ ತಮಿಳಿನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ. ನಟ ರಜನಿಕಾಂತ್ ಅವರ ನಿರ್ಮಾಣ ಸಂಸ್ಥೆಯಲ್ಲಿ ಸಹಾಯಕರಾಗಿದ್ದ ಸಂಜಯ್ ಈಗಷ್ಟೇ ಸೇರಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ