Future Of Internet: ಭವಿಷ್ಯದ ಅಂತರ್ಜಾಲಕ್ಕಾಗಿ 60 ದೇಶಗಳು ಸಹಿ, ಭಾರತ ಸಹಿ ಹಾಕಿಲ್ಲ ಏಕೆ?

ಯುರೋಪಿಯನ್ ಕಮಿಷನ್ ಬಿಡುಗಡೆಯ ಪ್ರಕಾರ ಮುಂಬರುವ ವಾರಗಳಲ್ಲಿ ಹೆಚ್ಚಿನ ದೇಶಗಳು ಇದನ್ನು ಅನುಸರಿಸುವ ನಿರೀಕ್ಷೆಯಿದೆ. ಆದರೆ ಇದುವರೆಗೆ ಸಹಿ ಮಾಡಿದ ದೇಶಗಳಲ್ಲಿ ಭಾರತ ಸೇರಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂಟರ್ನೆಟ್ ಅನ್ನು ಮುಕ್ತ ಮತ್ತು ತಟಸ್ಥವಾಗಿರಿಸಲು (Internet Open, Free, And Neutral)  ಜಾಗತಿಕ ಘೋಷಣೆಗೆ 60 ದೇಶಗಳು ಸಹಿ ಹಾಕಿವೆ. ಆದರೆ ಈ ದೇಶಗಳ ಪಟ್ಟಿಯಲ್ಲಿ ಭಾರತ ಸೇರಿಲ್ಲ. ಈ ಘೋಷಣೆಗೆ ಸಹಿ ಹಾಕಿದ ಪ್ರಮುಖ ದೇಶಗಳಲ್ಲಿ ಅಮೆರಿಕಾ, ಯುರೋಪಿಯನ್ ಯೂನಿಯನ್​ನ ದೇಶಗಳು, ಯುನೈಟೆಡ್ ಕಿಂಗ್‌ಡಮ್, ಕೆನಡಾ ಮತ್ತು ಫ್ರಾನ್ಸ್ ದೇಶಗಳು ಸೇರಿವೆ. ‘ಅಂತರ್ಜಾಲದ ಭವಿಷ್ಯಕ್ಕಾಗಿ ಘೋಷಣೆ’ (Future On Internet) ಎಂದು ಕರೆಯಲ್ಪಡುವ ಈ ದಾಖಲೆಯು ಡಿಜಿಟಲ್ ಸರ್ವಾಧಿಕಾರವನ್ನು ತಡೆಗಟ್ಟುವ ಕುರಿತು ರೂಪಿಸಲಾದ ಒಪ್ಪಂದವಾಗಿದೆ ಎಂದು ಸಹಿ ಹಾಕಿದ ದೇಶಗಳು ಘೋಷಣೆ ಮಾಡಿವೆ.

ಜಾಗತಿಕವಾಗಿ ಹೆಚ್ಚುತ್ತಿರುವ ಡಿಜಿಟಲ್ ಯುಗದಲ್ಲಿ ಕೆಲವು ದೇಶಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಗ್ರಹಿಸಲು, ಸ್ವತಂತ್ರ ಸುದ್ದಿ ಸೈಟ್‌ಗಳನ್ನು ಸೆನ್ಸಾರ್ ಮಾಡಲು, ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡಲು, ತಪ್ಪು ಮಾಹಿತಿಯನ್ನು ಉತ್ತೇಜಿಸಲು ಮತ್ತು ಅವರ ನಾಗರಿಕರಿಗೆ ಇತರ ಮಾನವ ಹಕ್ಕುಗಳನ್ನು ನಿರಾಕರಿಸಲು ವರ್ತಿಸುತ್ತವೆ.

ಅಂತರ್ಜಾಲದ ಭವಿಷ್ಯಕ್ಕಾಗಿ ಈ ಘೋಷಣೆ
ಅದೇ ಸಮಯದಲ್ಲಿ ಲಕ್ಷಾಂತರ ಜನರು ಇನ್ನೂ ಅಂತರ್ಜಾಲ ಬಳಕೆಗೆ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ಸೈಬರ್ ಸುರಕ್ಷತೆ ಅಪಾಯಗಳು ಮತ್ತು ಬೆದರಿಕೆಗಳು ನೆಟ್‌ವರ್ಕ್‌ಗಳ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಹಾಳುಮಾಡುತ್ತವೆ. ಈ ನಿಟ್ಟಿನಲ್ಲಿ ಅಂತರ್ಜಾಲದ ಭವಿಷ್ಯಕ್ಕಾಗಿ ಈ ಘೋಷಣೆ ಮಾಡಲಾಗಿದೆ ಎಂದು ಶ್ವೇತಭವನವು ಹೇಳಿಕೆಯಲ್ಲಿ ತಿಳಿಸಿದೆ.

ಸಹಿ ಹಾಕದ ದೇಶಗಳಲ್ಲಿ ಯಾರೆಲ್ಲ ಇಲ್ಲ?
ಆಸ್ಟ್ರಿಯಾ, ಬೆಲ್ಜಿಯಂ, ಬಲ್ಗೇರಿಯಾ, ಕ್ಯಾಬೊ ವರ್ಡೆ, ಕೆನಡಾ, ಕೊಲಂಬಿಯಾ, ಕೋಸ್ಟರಿಕಾ, ಕ್ರೊಯೇಷಿಯಾ, ಸೈಪ್ರಸ್, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಡೊಮಿನಿಕನ್ ರಿಪಬ್ಲಿಕ್, ಎಸ್ಟೋನಿಯಾ, ಯುರೋಪಿಯನ್ ಕಮಿಷನ್ ಮತ್ತು ಫಿನ್‌ಲ್ಯಾಂಡ್ ಸೇರಿದಂತೆ ಒಟ್ಟು 60  ದೇಶಗಳು ಸಹಿ ಹಾಕಿವೆ.

ಈ ಘೋಷಣೆಯ ಭಾಗವಾಗಿರದ ದೊಡ್ಡ ರಾಷ್ಟ್ರಗಳಲ್ಲಿ ಭಾರತ, ಚೀನಾ ಮತ್ತು ರಷ್ಯಾ ಸೇರಿವೆ. ಆದರೆ ಯಾವ ಕಾರಣಕ್ಕೆ ಸಹಿ ಹಾಕಿಲ್ಲ ಎಂದು ಈ ದೇಶಗಳು ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: PM Kisan: ಸರ್ಕಾರಕ್ಕೇ ಟೋಪಿ ಹಾಕಿ ಡಬಲ್ ಧಮಾಕಾ! ಇನ್ಮೇಲೆ ಈ ಆಟ ನಡೆಯಲ್ಲ!

ಯುರೋಪಿಯನ್ ಕಮಿಷನ್ ಬಿಡುಗಡೆಯ ಪ್ರಕಾರ ಮುಂಬರುವ ವಾರಗಳಲ್ಲಿ ಹೆಚ್ಚಿನ ದೇಶಗಳು ಇದನ್ನು ಅನುಸರಿಸುವ ನಿರೀಕ್ಷೆಯಿದೆ. ಆದರೆ ಇದುವರೆಗೆ ಸಹಿ ಮಾಡಿದ ದೇಶಗಳಲ್ಲಿ ಭಾರತ ಸೇರಿಲ್ಲ. ಯುರೋಪಿಯನ್ ಕಮಿಷನ್ ಹೇಳಿಕೆಯ ಪ್ರಕಾರ, ಘೋಷಣೆಯು ಇಂಟರ್ನೆಟ್ ಮತ್ತು ಡಿಜಿಟಲ್ ತಂತ್ರಜ್ಞಾನಗಳಿಗೆ ಧನಾತ್ಮಕ ದೃಷ್ಟಿಯನ್ನು ಮುನ್ನಡೆಸಲು ಪಾಲುದಾರರಲ್ಲಿ ರಾಜಕೀಯ ಬದ್ಧತೆಯನ್ನು ಪ್ರತಿನಿಧಿಸುತ್ತದೆ.

ಕೈಗೆಟುಕುವ ಸಂಪರ್ಕವನ್ನು ಮುಂದುವರೆಸುವ ಉದ್ದೇಶ
ಘೋಷಣೆಯ ತತ್ವಗಳು ಮಾನವ ಹಕ್ಕುಗಳು ಮತ್ತು ಎಲ್ಲಾ ಜನರ ಮೂಲಭೂತ ಸ್ವಾತಂತ್ರ್ಯಗಳನ್ನು ರಕ್ಷಿಸುವ ಬದ್ಧತೆಗಳನ್ನು ಒಳಗೊಂಡಿವೆ. ಮಾಹಿತಿಯ ಮುಕ್ತ ಹರಿವನ್ನು ಮುನ್ನಡೆಸುವ ಜಾಗತಿಕ ಇಂಟರ್ನೆಟ್ ಅನ್ನು ಉತ್ತೇಜಿಸುವುದು, ಡಿಜಿಟಲ್ ಸೌಕರ್ಯಗಳನ್ನು ಒಳಗೊಂಡಿರುವ ಮತ್ತು ಕೈಗೆಟುಕುವ ಸಂಪರ್ಕವನ್ನು ಮುಂದುವರಿಸುವುದು ಈ ಘೋಷಣೆಯ ಉದ್ದೇಶವಾಗಿದೆ.

ನಂಬಿಕೆಯನ್ನು ಉತ್ತೇಜನೆ ಮಾಡುವುದು
ಗೌಪ್ಯತೆಯ ರಕ್ಷಣೆ ಸೇರಿದಂತೆ ಜಾಗತಿಕ ಡಿಜಿಟಲ್ ಪರಿಸರ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಉತ್ತೇಜಿಸುವುದು ಮತ್ತು ಎಲ್ಲರ ಅನುಕೂಲಕ್ಕಾಗಿ ಇಂಟರ್ನೆಟ್ ಚಾಲನೆಯಲ್ಲಿರಿಸುವ ಆಡಳಿತಕ್ಕೆ ಬಹುಪಾಲುದಾರರ ವಿಧಾನವನ್ನು ರಕ್ಷಿಸುವುದು ಮತ್ತು ಬಲಪಡಿಸುವುದು ಈ ಘೋಷಣೆಯ ಉದ್ದೇಶಗಳಾಗಿವೆ.

ಇದನ್ನೂ ಓದಿ: Petrol Online Delivery: ಆನ್​ಲೈನ್​ನಲ್ಲೇ ಪೆಟ್ರೋಲ್ ಮಾರಿ! ಕರ್ನಾಟಕದಲ್ಲಿ ನೀವೇ ಶುರು ಮಾಡಿ!

ಸಹಿ ಮಾಡಿದವರು ಇಂಟರ್ನೆಟ್ ಬಳಕೆಯನ್ನು ಸ್ಥಗಿತಗೊಳಿಸುವುದಿಲ್ಲ.  ನಾಗರಿಕರ ಮೇಲೆ ಅಕ್ರಮವಾಗಿ ಕಣ್ಣಿಡಲು, ವ್ಯಕ್ತಿಯ ವೈಯಕ್ತಿಕ ಡೇಟಾವನ್ನು ಪ್ರವೇಶಿಸಲು ಅಥವಾ ಚುನಾವಣೆಗಳನ್ನು ದುರ್ಬಲಗೊಳಿಸಲು ತಪ್ಪು ಮಾಹಿತಿ ಪ್ರಚಾರಗಳನ್ನು ನಡೆಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಶ್ವೇತಭವನ ಗುರುವಾರ ತಿಳಿಸಿದೆ. ಇಂಟರ್ನೆಟ್‌ಗೆ ಪ್ರವೇಶವನ್ನು ಉತ್ತೇಜಿಸುವಾಗ ಅದರ ಬಳಕೆದಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಭರವಸೆ ನೀಡಿದೆ, ವಿಶೇಷವಾಗಿ ಯುವಜನರು ಮತ್ತು ಮಹಿಳೆಯರು ಈ ಯೋಜನೆಯ ಫಲಾನುಭವ ಪಡೆಯಲಿದ್ದಾರೆ ಎಂದು ಅಮೆರಿಕಾ ತಿಳಿಸಿದೆ.
Published by:guruganesh bhat
First published: