2022ರ ಇನ್ನುಳಿದ ದಿನಗಳಿಗೆ ಇಲ್ಲಿವೆ 5 ಕ್ರಿಪ್ಟೊ ಭವಿಷ್ಯಗಳು

ಕ್ರಿಪ್ಟೊ ಸ್ವತ್ತುಗಳಿಗೆ ಇದೊಂದು ಅನಿರೀಕ್ಷಿತ ವರ್ಷವಾಗಿತ್ತು ಎಂದಷ್ಟೇ ಹೇಳಬಹುದು. ದುರದೃಷ್ಟಕರ ಘಟನೆಗಳ ಸರಣಿಯು ಉದ್ಯಮಕ್ಕೆ ಒಂದರ ಮೇಲೆ ಒಂದರಂತೆ ಬಂದೆರಗಿದವು, ಅದರ ಪರಿಣಾಮವಾಗಿ ವರ್ಷದ ಆರಂಭದಲ್ಲಿ ಉದ್ಯಮ ಪರಿಣತರು ಮಾಡಿದ್ದ ಊಹೆಗಳು ತಲೆಕೆಳಗಾದವು.

ಕ್ರಿಪ್ಟೊ ಸ್ವತ್ತುಗಳಿಗೆ ಇದೊಂದು ಅನಿರೀಕ್ಷಿತ ವರ್ಷವಾಗಿತ್ತು ಎಂದಷ್ಟೇ ಹೇಳಬಹುದು. ದುರದೃಷ್ಟಕರ ಘಟನೆಗಳ ಸರಣಿಯು ಉದ್ಯಮಕ್ಕೆ ಒಂದರ ಮೇಲೆ ಒಂದರಂತೆ ಬಂದೆರಗಿದವು, ಅದರ ಪರಿಣಾಮವಾಗಿ ವರ್ಷದ ಆರಂಭದಲ್ಲಿ ಉದ್ಯಮ ಪರಿಣತರು ಮಾಡಿದ್ದ ಊಹೆಗಳು ತಲೆಕೆಳಗಾದವು.

ಕ್ರಿಪ್ಟೊ ಸ್ವತ್ತುಗಳಿಗೆ ಇದೊಂದು ಅನಿರೀಕ್ಷಿತ ವರ್ಷವಾಗಿತ್ತು ಎಂದಷ್ಟೇ ಹೇಳಬಹುದು. ದುರದೃಷ್ಟಕರ ಘಟನೆಗಳ ಸರಣಿಯು ಉದ್ಯಮಕ್ಕೆ ಒಂದರ ಮೇಲೆ ಒಂದರಂತೆ ಬಂದೆರಗಿದವು, ಅದರ ಪರಿಣಾಮವಾಗಿ ವರ್ಷದ ಆರಂಭದಲ್ಲಿ ಉದ್ಯಮ ಪರಿಣತರು ಮಾಡಿದ್ದ ಊಹೆಗಳು ತಲೆಕೆಳಗಾದವು.

 • Share this:
  ಕ್ರಿಪ್ಟೊ (Crypto) ಸ್ವತ್ತುಗಳಿಗೆ ಇದೊಂದು ಅನಿರೀಕ್ಷಿತ ವರ್ಷವಾಗಿತ್ತು ಎಂದಷ್ಟೇ ಹೇಳಬಹುದು. ದುರದೃಷ್ಟಕರ ಘಟನೆಗಳ ಸರಣಿಯು ಉದ್ಯಮಕ್ಕೆ (Industry) ಒಂದರ ಮೇಲೆ ಒಂದರಂತೆ ಬಂದೆರಗಿದವು, ಅದರ ಪರಿಣಾಮವಾಗಿ ವರ್ಷದ ಆರಂಭದಲ್ಲಿ (Year Starting) ಉದ್ಯಮ ಪರಿಣತರು ಮಾಡಿದ್ದ ಊಹೆಗಳು ತಲೆಕೆಳಗಾದವು. ಅದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು, 2022ರ ಇನ್ನುಳಿದ ಭಾಗವು ಹೇಗೆ ವರ್ತಿಸಬಹುದು ಎಂಬ ಕೆಲವು ಊಹೆಗಳ ಪಟ್ಟಿಯನ್ನು ಕ್ರಿಪ್ಟೊ ಹೂಡಿಕೆದಾರರು ಮತ್ತು ಉತ್ಸಾಹಿಗಳಿಗೆ ನಾವು ಇಲ್ಲಿ ನೀಡಿದ್ದೇವೆ. ಯಾವುದೇ ಪ್ರತ್ಯೇಕತೆ ಇಲ್ಲದೆಯೇ, ಅವುಗಳನ್ನು ಇಲ್ಲಿ ನೀಡಲಾಗಿದೆ. ಕ್ರಿಪ್ಟೊ ಉದ್ಯಮಕ್ಕೆ (Crypto Industry) 2022ರಲ್ಲಿ ಅನಿಶ್ಚಿತತೆ ಎಂಬ ಪದವು ಬಹುಮುಖ್ಯವಾದುದಾಗಿತ್ತು  1 - ಅನಿಶ್ಚಿತತೆಯು ಮುಂದುವರಿಯಲಿದೆ 

  ಕ್ರಿಪ್ಟೊ ಉದ್ಯಮಕ್ಕೆ 2022ರಲ್ಲಿ ಅನಿಶ್ಚಿತತೆ ಎಂಬ ಪದವು ಬಹುಮುಖ್ಯವಾದುದಾಗಿತ್ತು. ವರ್ಷದ ಆರಂಭವು ಸಾಧಾರಣ ಎಂಬಂತೆ ಶುರುವಾದರೂ, ಆನಂತರದ ತಿಂಗಳುಗಳು ಯುಕ್ರೇನ್‌ನಲ್ಲಿ ನಡೆದ ಯುದ್ಧದಿಂದ ಹಿಡಿದು ಹಲವು ರಾಷ್ಟ್ರಗಳಲ್ಲಿ ಕಂಡುಬಂದ ದಶಕಗಳಲ್ಲೇ ಹೆಚ್ಚಿನ ಪ್ರಮಾಣದ ಹಣದುಬ್ಬರ ಹಾಗೂ ತೈಲ ಬೆಲೆಗಳ ಏರಿಕೆಯಂತಹ ಹಲವಾರು ಜಾಗತಿಕ ಸಮಸ್ಯೆಗಳಿಗೆ ಸಾಕ್ಷಿಯಾದವು. ಈ ಸಮಸ್ಯೆಗಳಲ್ಲಿ ಹಲವು ಸಮಸ್ಯೆಗಳು ಶೀಘ್ರದಲ್ಲೇ ಕಡಿಮೆಯಾಗುವ ಅಥವಾ ದೂರ ಸರಿಯುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಇದರರ್ಥ ಏನೆಂದರೆ ಜಾಗತಿಕ ಮಾರುಕಟ್ಟೆಗಳು ಮತ್ತು ಕ್ರಿಪ್ಟೊ ಉದ್ಯಮದಲ್ಲಿ 2022ರ ಇನ್ನುಳಿದ ಅರ್ಧ ವರ್ಷದಲ್ಲಿಯೂ ಸಹ ಅನಿಶ್ಚಿತತೆಯನ್ನು ಕಾಣಬಹುದು ಎಂಬುದಾಗಿದೆ. ಈಗಿನ ಸುದೀರ್ಘ ಅನಿಶ್ಚಿತತೆಯು ಈ ವರ್ಷಾಂತ್ಯಕ್ಕೂ ಮೊದಲೇ ಕೊನೆಯಾಗಲಿದೆ ಎಂದು ಕೆಲವು ಪರಿಣತರು ಭಾವಿಸಿದ್ದರೂ, ಯಾವಾಗ ಈ ಎಲ್ಲಾ ಸಂಗತಿಗಳು ಉತ್ತಮವಾಗಲಿವೆ ಎಂಬುದನ್ನು ಊಹಿಸುವುದು ಕಷ್ಟಕರವಾದದ್ದು. 

  2 - ನಿಯಂತ್ರಣಗಳು ಜಾರಿಯಾಗಲಿವೆ 

  ಸ್ಟೇಬಲ್‌ಕಾಯಿನ್ Tether ಅನ್ನು US ಡಾಲರ್‌ನಿಂದ ಬೇರ್ಪಡಿಸಿದ್ದು ಹಣಕಾಸು ಮತ್ತು ಕ್ರಿಪ್ಟೊ ಉದ್ಯಮಕ್ಕೆ ಬರಸಿಡಿಲಿನಂತೆ ಬಂದೆರಗಿದೆ ಹಾಗೂ ಅದರಿಂದಾಗಿ US ಖಜಾನೆ ಕಾರ್ಯದರ್ಶಿ ಜೇನೆಟ್ ಯಲ್ಲೆನ್ ಅವರು ಸ್ಟೇಬಲ್‌ಕಾಯಿನ್‌ಗಳ ವಿಷಯಕ್ಕೆ ಬಂದರೆ ಅಪಾಯವು ಏರುತ್ತಿದೆ ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ, ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಹ ಕ್ರಿಪ್ಟೊಕರೆನ್ಸಿಗಳು ಅಪರಾಧ ಚಟುವಟಿಕೆಗಳಿಗೆ ಬಳಕೆಯಾಗುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದ್ದು, ಇದಕ್ಕೆ ಜಾಗತಿಕ ಪರಿಹಾರ ಬೇಕಿದೆ ಎಂದು ಹೇಳಿದ್ದಾರೆ. ಉದ್ಯಮ ಮುಖ್ಯಸ್ಥರು ಸಾಧ್ಯವಾದಷ್ಟು ಪ್ರಮಾಣದಲ್ಲಿ ಸರ್ಕಾರದ ಮಧ್ಯಸ್ಥಿಕೆಯನ್ನು ಎದುರು ನೋಡುತ್ತಿದ್ದು, ಅದು ಅವರು ಮುಕ್ತವಾಗಿ ಕಾರ್ಯ ನಿರ್ವಹಿಸುವಂತೆ ಅನುಕೂಲ ಮಾಡಿಕೊಡುತ್ತದೆ ಎಂಬ ಭರವಸೆ ಹೊಂದಿದ್ದಾರೆ. ಇವೆಲ್ಲುಗಳನ್ನು ಸಮಗ್ರವಾಗಿ ನೋಡಿದಾಗ ನಮಗೆ ತಿಳಿಯುವುದು ಏನೆಂದರೆ ಕ್ರಿಪ್ಟೊ ಉದ್ಯಮವು ದೊಡ್ಡದಾಗಿ ಬೆಳೆಯುತ್ತಿರುವುದರಿಂದ ಹಾಗೂ ಇನ್ನಷ್ಟು ವಿಸ್ತರಿಸಿಕೊಳ್ಳುವುದರಿಂದ ಒಂದಷ್ಟು ನಿಯಂತ್ರಣಗಳು ಜಾರಿಯಾಗುವುದನ್ನು ನಾವು ಮುಂದಿನ ದಿನಗಳಲ್ಲಿ ನೋಡಬಹುದು. 

  3 - ಕ್ರಿಪ್ಟೊ ಜನಪ್ರಿಯಗೊಳಿಸಲು ಪಾಪ್ ಸಂಸ್ಕೃತಿ ಮುಂದುವರಿಯಲಿದೆ

  ಅದು ಗೇಮ್‌ಗಳಾಗಿರಲಿ, ಚಲನಚಿತ್ರಗಳು ಅಥವಾ ಸಂಗೀತ ಆಗಿರಲಿ, ಜನಪ್ರಿಯ ಸಂಸ್ಕೃತಿಯು (ಪಾಪ್ಯುಲರ್ ಕಲ್ಚರ್) ಕ್ರಿಪ್ಟೊ ಉದ್ಯಮದೊಂದಿಗೆ ಸಂಪರ್ಕ ಹೊಂದಲು NFT ಗಳು ಜತೆಜತೆಗೆ ಮೆಟಾವರ್ಸ್‌ನಂತಹ ಹಲವಾರು ವಿಧಾನಗಳನ್ನು ಕಂಡುಕೊಳ್ಳುತ್ತದೆ. ಇದರಿಂದಾಗಿ, ಸೆಲೆಬ್ರಿಟಿಗಳು ಮತ್ತು ಲೇಬಲ್‌ಗಳು ತಮ್ಮ ಸದಾಕಾಲದ ಅಭಿಮಾನಿ ಬಳಗವನ್ನು ಈ ಹೊಸ ಪ್ಲಾಟ್‌ಫಾರ್ಮ್‌ಗಳಿಗೆ ಕರೆತರುವುದರಿಂದ ಈ ಹೊಸ ತಂತ್ರಜ್ಞಾನಗಳ ಹೆಚ್ಚಿನ ಸಮೂಹ ಅಳವಡಿಕೆಯನ್ನು ಕಾಣಬಹುದು. ಅವರು ಕ್ರಿಕೆಟ್ ಆಟಗಾರರಾಗಿರಲಿ ಅಥವಾ ಸೆಲೆಬ್ರಿಟಿಗಳು, ಕ್ರೀಡಾ ಲೀಗ್‌ಗಳು ಅಥವಾ ಜಾಗತಿಕ ಬ್ರ್ಯಾಂಡ್‌ಗಳು ಆಗಿರಲಿ, ಒಂದಲ್ಲ ಒಂದು ಸಮಯದಲ್ಲಿ ಪ್ರತಿಯೊಬ್ಬರೂ ಕ್ರಿಪ್ಟೊ ಆಕರ್ಷಣೆಗೆ ಒಳಗಾಗುತ್ತಾರೆ. ಈಗಿರುವ ಪ್ರಶ್ನೆ ಏನೆಂದರೆ, ಅವರೆಲ್ಲ ತಮ್ಮ ಕ್ರಿಪ್ಟೊ/ ಕ್ರಿಪ್ಟೊ ಸಂಬಂಧಿತ ಟೋಕನ್‌ಗಳನ್ನು ಘೋಷಣೆ ಮಾಡಿದಾಗ ನೀವು ಅವರಿಗಾಗಿ ಸಿದ್ಧರಿರುತ್ತೀರೇ?

  4 – ಹೊಸ ಕಾಯಿನ್‌ಗಳು ಮುಖ್ಯವಾಹಿನಿಗೆ ಬರಲಿವೆ 

  ಎರಡು ಅತಿ ದೊಡ್ಡ ಕಾಯಿನ್‌ಗಳಾದ ಬಿಟ್‌ಕಾಯಿನ್ ಮತ್ತು ಈಥರ್‌ ಇವುಗಳ ಮೌಲ್ಯವು ಕುಸಿತ ಕಂಡಿದ್ದರಿಂದಾಗಿ ಬಹುಶಃ ಎಲ್ಲಾ ಕ್ರಿಪ್ಟೊ ಸ್ವತ್ತುಗಳ ಒಟ್ಟಾರೆ ಮೌಲ್ಯವು ಕಳೆದ ನವೆಂಬರ್‌ನಲ್ಲಿ $2.7 ಟ್ರಿಲಿಯನ್‌ನಷ್ಟು ಇದ್ದದ್ದು ಕಳೆದ ಕೆಲವು ತಿಂಗಳುಗಳಲ್ಲಿ ಒಂದು ಟ್ರಿಲಿಯನ್‌ಗಿಂತಲೂ ಕಡಿಮೆಯಾಗಿದೆ. ಇತರ ಜನಪ್ರಿಯ ಕಾಯಿನ್‌ಗಳು ಸಹ ತೀವ್ರ ಕುಸಿತ ಕಂಡಿರುವುದರಿಂದಾಗಿ, ಗ್ರಾಹಕರು ಪರಿಚಯ ಇರುವ ಹಾಗೂ ಅಪಾಯವಿಲ್ಲದ ಕಾಯಿನ್‌ಗಳೆಡೆಗೆ ಆಸಕ್ತಿ ತೋರಿಸುವುದರಿಂದ ಮುಂಚೂಣಿಯಲ್ಲಿರುವ ಪರಿಷ್ಕೃತ ಇಥೇರಿಯಮ್ ಬ್ಲಾಕ್‌ಚೈನ್ ಮತ್ತು ಇತರ ಸ್ಟೇಬಲ್‌ಕಾಯಿನ್‌ಗಳು ಜತೆಗೆ ಗೇಮ್ ಕಾಯಿನ್‌ಗಳು ಮುಂಬರುವ ತಿಂಗಳುಗಳಲ್ಲಿ ಹೆಚ್ಚು ಆಕರ್ಷಣೆ ಗಿಟ್ಟಿಸಬಹುದು. ಇದು ದೊಡ್ಡ ಕಾಯಿನ್‌ಗಳಿಂದ ಹೊರಗೆ ನಾವು ಪ್ರಸ್ತುತ ನೋಡುತ್ತಿರುವುದಕ್ಕಿಂತ ಹೆಚ್ಚು ಹೊಸ ಕಾಯಿನ್‌ಗಳ ಆವಿಷ್ಕಾರ ಮತ್ತು ಅಳವಡಿಕೆಗೆ ಕಾರಣವಾಗಬಹುದು. ಹೊಸ ಕಾಯಿನ್‌ಗಳನ್ನು ಎಲ್ಲಿ ಹುಡುಕುವುದು ಮತ್ತು ಹೂಡಿಕೆ ಮಾಡುವುದು ಎಂದು ಯೋಚಿಸುತ್ತಿದ್ದರೆ, ಸದಸ್ಯರು ಹೂಡಿಕೆ ಮಾಡಲಿಕ್ಕಾಗಿ 100 ಕಾಯಿನ್‌ಗಳಿಗಿಂತಲೂ (ಇನ್ನೂ ಹೆಚ್ಚುತ್ತಿದೆ) ಹೆಚ್ಚಿನ ಕಾಯಿನ್‌ಗಳನ್ನು ಹೊಂದಿರುವ ಭಾರತದ ಅತ್ಯಂತ ಹಳೆಯ ಕ್ರಿಪ್ಟೊಕರೆನ್ಸಿ ಎಕ್ಸ್‌ಚೇಂಜ್ ZebPay ಅನ್ನು ಪರಿಶೀಲಿಸಲು ನಾವು ನಿಮಗೆ ಸಲಹೆ ನೀಡುತ್ತೇವೆ.

  5 – ಕ್ರಿಪ್ಟೊ ಮತ್ತು ಹಣಕಾಸು ಮಾರುಕಟ್ಟೆಗಳು ಜತೆಯಾಗಿ ಹೆಣೆದುಕೊಂಡಿರುತ್ತವೆ

  ಜಾಗತಿಕ ಹಣಕಾಸು ಉದ್ಯಮದಿಂದ ಸ್ವತಂತ್ರವಾಗಿ ಇರುತ್ತೇವೆ ಎಂದು ಕ್ರಿಪ್ಟೊ ಉದ್ಯಮವು ನೀಡಿದ್ದ ಪ್ರಮುಖ ಭರವಸೆಯು ಈಗ ಯಕ್ಷ ಪ್ರಶ್ನೆಯಾಗಿದೆ. ಹೂಡಿಕೆದಾರರು ಏರಿಳಿತಗಳನ್ನು ಭಾವಿಸುತ್ತಾರೆ ಮತ್ತು ಉದ್ಯಮದಿಂದ ತಮ್ಮ ಹೂಡಿಕೆಗಳನ್ನು ಹಿಂದಕ್ಕೆ ತೆಗೆದುಕೊಳ್ಳುವುದನ್ನು ಈಗಲೂ ಅಪಾಯಕಾರಿ ಎಂದು ಕಾಣುವುದರಿಂದ ಬಹುತೇಕ ಪ್ರತಿ ಜಾಗತಿಕ ಸಂಗತಿಯು ಕ್ರಿಪ್ಟೊ ಉದ್ಯಮದ ಗಾತ್ರ ಮತ್ತು ಪ್ರಮಾಣದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಬಡ್ಡಿ ದರಗಳನ್ನು ಏರಿಕೆ ಮಾಡಿದ US ಫೆಡರಲ್ ನಿರ್ಧಾರವು ವಿಶ್ವದಾದ್ಯಂತದ ಈಕ್ವಿಟಿ ಮಾರುಕಟ್ಟೆಗಳ ಮೇಲೆ ಮಾತ್ರವಲ್ಲದೆ ಕ್ರಿಪ್ಟೊ ಉದ್ಯಮದ ಮೇಲೆಯೂ ನೇರವಾಗಿ ಪರಿಣಾಮ ಬೀರಿದ್ದು, ಇತ್ತೀಚಿನ ಸಂದರ್ಭಗಳಲ್ಲಿ ಎಂದೂ ಉಂಟಾಗದೇ ಇದ್ದ ಕುಸಿತವನ್ನು ಅನುಭವಿಸಿದೆ. ಹಾಗಾಗಿ ಇದೆಲ್ಲವನ್ನೂ ಗಮನಿಸಿ ಹೇಳುವುದಾದರೆ ಭವಿಷ್ಯದಲ್ಲಿ ಕ್ರಿಪ್ಟೊ ಉದ್ಯಮದಲ್ಲಿ ಹೂಡಿಕೆ ಮಾಡುವುದಾದರೆ ಜಾಗತಿಕ ಆಗುಹೋಗುಗಳನ್ನು ಸಹ ಗಮನದಲ್ಲಿರಿಸಿಕೊಂಡು ಹೂಡಿಕೆ ಮಾಡಬೇಕು. 

  ಜಾಗತಿಕ ಕ್ರಿಪ್ಟೊ ಉದ್ಯಮವು ಹೇಗೆ ವರ್ತಿಸಬಹುದು ಎಂಬುದರ ಕುರಿತು ಇವು ಕೇವಲ ಕೆಲವು ಊಹೆಗಳಷ್ಟೇ. ಒಂದು ವಿಷಯವಮತೂ ನಿಶ್ಚಿತ, ಈ ಅಂಧಕಾರವು ಸುದೀರ್ಘಾವಧಿಗೆ ಇರಲಾರದು. 2022ರ ಅಂತ್ಯದ ವೇಳೆಗೆ, ಈಗಿನ ಕುಸಿತವು ಚೇತರಿಕೆ ಕಾಣಲಿದೆ ಎಂದು ಬಹುತೇಕ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ನೀವು ಕ್ರಿಪ್ಟೊ ಉದ್ಯಮ ಪ್ರವೇಶಿಸಲು ಬಯಸುತ್ತಿದ್ದರೆ, ದರಗಳು ದಾಖಲೆ ಮಟ್ಟದಲ್ಲಿ ಇಳಿಕೆ ಆಗಿರುವುದರಿಂದ ಹೂಡಿಕೆ ಮಾಡಲು ಇದು ಸರಿಯಾದ ಸಮಯವಾಗಿದೆ. ನಿಮ್ಮ ಸಂಶೋಧನೆ ನಡೆಸಿ, ಉದ್ಯಮವನ್ನು ತಿಳಿದುಕೊಳ್ಳಿ ಮತ್ತು ಇಲ್ಲಿ ZebPay ಯೊಂದಿಗೆ ನಿಮ್ಮ ಕ್ರಿಪ್ಟೊ ಪೋರ್ಟ್‌ಫೋಲಿಯೊ ತೆರೆಯಿರಿ.

  ಈ ಪ್ಲಾಟ್‌ಫಾರ್ಮ್ ಸಮಗ್ರ ಬ್ಲಾಗ್ ವಿಭಾಗವನ್ನು ಸಹ ಒಳಗೊಂಡಿದ್ದು, ಅದು ಕ್ರಿಪ್ಟೊ ಬಗೆಗಿನ ಎಲ್ಲಾ ಸಂಗತಿಗಳ ಕುರಿತು ನೀವು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ, ನೀವು ಅದನ್ನು ಇಲ್ಲಿ ಪಡೆದುಕೊಳ್ಳಬಹುದು. ಅಂತಿಮವಾಗಿ, ಕ್ರಿಪ್ಟೊ ಉದ್ಯಮದಲ್ಲಿ ನಡೆಯುತ್ತಿರುವ ಇತ್ತೀಚಿನ ವಿದ್ಯಮಾನಗಳ ಕುರಿತು ಎಲ್ಲವನ್ನೂ ತಿಳಿದುಕೊಳ್ಳಲು ಅವರ ನ್ಯೂಸ್‌ಲೆಟರ್‌ಗೆ ಸಬ್‌ಸ್ಕ್ರೈಬ್ ಆಗಿ ಎಂದು ಸಲಹೆ ನೀಡಲು ನಾವು ಬಯಸುತ್ತೇವೆ.
  Published by:Rahul TS
  First published: