E-Commerce: ವ್ಯಾಪಾರ ಕ್ಷೇತ್ರದಲ್ಲಿ ಇ-ಕಾಮರ್ಸ್‌ ಹೇಗೆ ಕೆಲಸ ಮಾಡುತ್ತೆ ಎಂಬ ಮಾಹಿತಿ ಇಲ್ಲಿದೆ ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವಿಶ್ವದಾದ್ಯಂತ ಆರ್ಥಿಕ ವಲಯಗಳು ಪುನರ್‌ನಿರ್ಮಾಣ ಹಾಗೂ ಪುನಶ್ಚೇತನಕ್ಕೆ ನಾಂದಿ ಹಾಡುತ್ತಿದ್ದಂತೆ ಕೆಲವೊಂದು ಉದ್ಯಮ ಟ್ರೆಂಡ್‌ಗಳ ಪ್ರಸ್ತುತಿಗೂ ಕಾರಣವಾಗಿವೆ. ಉದ್ಯಮದ ವಿಧ ಹಾಗೂ ರೀತಿಯನ್ನೇ ಬದಲಾಯಿಸಿದ ಕೆಲವೊಂದು ಟ್ರೆಂಡ್‌ಗಳು ಇಲ್ಲಿವೆ.

  • Trending Desk
  • 2-MIN READ
  • Last Updated :
  • New Delhi, India
  • Share this:

ಕೊರೋನಾದ ನಂತರ ಪ್ರಪಂಚದಾದ್ಯಂತ (World) ಹಲವು ಬದಲಾವಣೆಗಳು ಸಂಭವಿಸಿದವು. ಶಿಕ್ಷಣದಲ್ಲಿ (Education), ಕೆಲಸದ ಮಾದರಿಯಲ್ಲಿ ಹೀಗೆ ಅನೇಕ ಕ್ಷೇತ್ರಗಳು ಸಾಂಪ್ರದಾಯಿಕ ಶೈಲಿಯನ್ನು ಮುರಿದು ಬೇರೆಯದ್ದೇ ಹಾದಿಯಲಿ ಸಾಗಿದವು. ಅದರಲ್ಲೂ ವ್ಯಾಪಾರದಲ್ಲಿ ಸಾಕಷ್ಟ ಬದಲಾವಣೆಗಳು ಸಂಭವಿಸಿದವು. ಸಾಂಕ್ರಾಮಿಕದ ನಂತರ ಸ್ಟಾರ್ಟಪ್‌ಗಳು (Startup) ಹಾಗೂ ವ್ಯಾಪಾರವು (Marketing) ಅನೇಕ ರೀತಿಯಲ್ಲಿ ಮಾರ್ಪಾಡುಗಳನ್ನು ಪಡೆದುಕೊಂಡಿದ್ದು, ಹೊಸ ಬಗೆಯ ಟ್ರೆಂಡ್‌ಗಳ ಅನು಼ಷ್ಠಾನಕ್ಕೆ ಕಾರಣವಾಗಿವೆ.


ಉದ್ಯಮ ಕ್ಷೇತ್ರವು ಅನೇಕ ಹೊಸ ಟ್ರೆಂಡ್‌ಗಳನ್ನು ಕಂಡುಕೊಂಡಿದ್ದು ಹೈಬ್ರೀಡ್ ಟ್ರೆಂಡ್, ರಿಮೋಟ್ ಟ್ರೆಂಡ್, ವರ್ಕ್ ಫ್ರಮ್ ಹೋಮ್ ಇತ್ಯಾದಿಗಳು ಪ್ರಮುಖವಾದವುಗಳು. 2020ರಲ್ಲಿ ನಡೆದಂತಹ ಕೆಲವೊಂದು ಘಟನೆಗಳು ಸಂಪೂರ್ಣ ವಿಶ್ವವನ್ನೇ ಬದಲಾಯಿಸುವುದರ ಜೊತೆಗೆ ವ್ಯಾಪಾರ ಕ್ಷೇತ್ರದಲ್ಲೂ ಅನೇಕ ನವೀಕರಣಗಳಿಗೆ ಕಾರಣವಾಯಿತು.


ವಿಶ್ವದಾದ್ಯಂತ ಆರ್ಥಿಕ ವಲಯಗಳು ಪುನರ್‌ನಿರ್ಮಾಣ ಹಾಗೂ ಪುನಶ್ಚೇತನಕ್ಕೆ ನಾಂದಿ ಹಾಡುತ್ತಿದ್ದಂತೆ ಕೆಲವೊಂದು ಉದ್ಯಮ ಟ್ರೆಂಡ್‌ಗಳ ಪ್ರಸ್ತುತಿಗೂ ಕಾರಣವಾಗಿವೆ. ಉದ್ಯಮದ ವಿಧ ಹಾಗೂ ರೀತಿಯನ್ನೇ ಬದಲಾಯಿಸಿದ ಕೆಲವೊಂದು ಟ್ರೆಂಡ್‌ಗಳು ಇಲ್ಲಿವೆ


* ವೇಗವರ್ಧಿತ ಟೆಕ್ ಅಡಾಪ್ಷನ್ - ಡಿಜಿಟಲ್ ರೂಪಾಂತರ ಮತ್ತು ಅಳವಡಿಕೆ ವ್ಯವಹಾರಗಳು ವ್ಯಾಪಾರದಲ್ಲಿ ಈಗ ಛಾಪು ಮೂಡಿಸುತ್ತಿವೆ. ಇ-ಕಾಮರ್ಸ್‌ ಸೇವೆಗಳು ಈಗ ಜನರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತಿದ್ದರಿಂದ ಈ ಕ್ಷೇತ್ರವು ಕೊರೋನಾದ ನಂತರ ಹೆಚ್ಚಿನ ರೀತಿಯಲ್ಲಿ ಪ್ರವರ್ಧಮಾನಕ್ಕೆ ಬಂದಿದೆ. ಕೊರೋನಾ ಸಮಯದಲ್ಲಿ Shopify ನಂತಹ ವೆಬ್‌ಸೈಟ್‌ಗಳು ಕೇವಲ 3 ತಿಂಗಳಲ್ಲಿ 10 ವರ್ಷಗಳ ಮೌಲ್ಯದ ಬೆಳವಣಿಗೆಯನ್ನು ಕಂಡಿದ್ದವು. ಜಾಗತಿಕ ಇ-ಕಾಮರ್ಸ್ ಮಾರಾಟವು 2021 ರಲ್ಲಿ $5.2 ಟ್ರಿಲಿಯನ್ ಆಗಿತ್ತು ಮತ್ತು ಇದು ಮುಂದಿನ ನಾಲ್ಕು ವರ್ಷಗಳಲ್ಲಿ 56% ರಷ್ಟು ಬೆಳೆಯುವ ನಿರೀಕ್ಷೆಯಿದ್ದು, 2026ರ ವೇಳೆಗೆ $8.1 ಟ್ರಿಲಿಯನ್ ತಲುಪಬಹುದು ಎಂದು ಅಂದಾಜಿಲಾಗಿದೆ.


ಇದನ್ನೂ ಓದಿ: Shivaratri Tour: ಶಿವರಾತ್ರಿ ಪ್ರವಾಸಕ್ಕೆ ಇಲ್ಲಿದೆ ಕಡಿಮೆ ಬೆಲೆಯ ಸೂಪರ್​​​ ಟೂರ್​​​ ಪ್ಯಾಕೇಜ್!


ಇ-ಕಾಮರ್ಸ್‌ ನಂತಹ ಬೆಳೆಯುತ್ತಿರುವ ಆನ್‌ಲೈನ್ ವಾಣಿಜ್ಯದೊಂದಿಗೆ, CRM, ಲಾಜಿಸ್ಟಿಕ್ಸ್ ಮತ್ತು ಆಟೊಮೇಷನ್, AI ಬಾಟ್‌ಗಳು, ಟೆಲಿಮ್ಯಾಟಿಕ್ಸ್ ಮುಂತಾದ ಟೆಕ್ ಪ್ರಗತಿಗಳು ಪ್ರಸ್ತುತ ವೇಗವರ್ಧಿತ ಬೆಳವಣಿಗೆಯನ್ನು ಕಂಡುಕೊಳ್ಳುತ್ತಿವೆ.
ಆನ್‌ಲೈನ್‌ ಶಾಪಿಂಗ್‌ ಎಂಬುವುದು ಪ್ರಸ್ತುತ ಮತ್ತು ಭವಿಷ್ಯದ ವ್ಯಾಪಾರದ ಟ್ರೆಂಡ್‌ ಆಗಿದೆ.


* AI ಮತ್ತು ಆಟೊಮೇಷನ್ - AI ಪ್ರಸ್ತುತ ಹೆಚ್ಚು ಚಾಲ್ತಿಯಲ್ಲಿರುವ ತಂತ್ರಜ್ಞಾನವಾಗಿದ್ದು, ವ್ಯಾಪಾರ-ಉದ್ಯಮದಲ್ಲಿ ಅಗ್ರಗಣ್ಯ ಸ್ಥಾನ ಪಡೆದುಕೊಳ್ಳುತ್ತಿದೆ. ಸ್ಪೀಚ್ ರೆಕಗ್ನಿಷನ್, ನ್ಯಾಚುರಲ್ ಲ್ಯಾಂಗ್ವೇಜ್ ಜನರೇಷನ್, ವರ್ಚುವಲ್ ಏಜೆಂಟ್‌ಗಳು, ಬಯೋಮೆಟ್ರಿಕ್ಸ್, ಡಿಸಿಷನ್ ಮ್ಯಾನೇಜ್‌ಮೆಂಟ್ ಟೂಲ್‌ಗಳು, ಬಯೋಮೆಟ್ರಿಕ್ಸ್, ಮೆಷಿನ್ ಲರ್ನಿಂಗ್, ಡೀಪ್ ಲರ್ನಿಂಗ್ ಮತ್ತು ಎಐ-ಆಪ್ಟಿಮೈಸ್ಡ್ ಹಾರ್ಡ್‌ವೇರ್‌ಗಳಂತಹ ಸೌಲಭ್ಯಗಳು ಈ ವರ್ಷದ ಜನಪ್ರಿಯ ವ್ಯವಹಾರದ ಟ್ರೆಂಡ್‌ಗಳಾಗಿವೆ.


* ಸುಸ್ಥಿರತೆ - ಹದಗೆಡುತ್ತಿರುವ ಆರೋಗ್ಯ, ಪರಿಸರ ಮತ್ತು ಹವಾಮಾನ ಬದಲಾವಣೆಯ ಬಗ್ಗೆ ಜಗತ್ತು ಹೆಚ್ಚು ಜಾಗೃತವಾಗುತ್ತಿದ್ದಂತೆ, ಸುಸ್ಥಿರತೆಯು ವ್ಯವಹಾರಗಳ ಸಹ ಮುನ್ನೆಲೆಗೆ ಬರುತ್ತಿವೆ. ಇಂದಿನ ಜಾಗೃತ ಗ್ರಾಹಕರ ನೆಲೆಯು ಸರಿಯಾದ ಪರಿಸರ ಮತ್ತು ಸಾಮಾಜಿಕ  ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ನೋಡುತ್ತಿದ್ದು, ಈ ಕ್ಷೇತ್ರವು ಕೂಡ ವ್ಯವಹಾರದ ಮುಖ್ಯವಾದ ಟ್ರೆಂಡ್‌ ಆಗಿದೆ.




* ಹೈಬ್ರಿಡ್ ಕೆಲಸದ ವಾತಾವರಣ - ಕೊರೋನಾದ ಸಮಯದಲ್ಲಿ ಸಂಪೂರ್ಣ ಕೆಲಸದ ವಿಧಾನವೇ ಬದಲಾಯಿತು. ಇನ್ನೂ ಸಹ ಕಂಪನಿಗಳು ಹೈಬ್ರಿಡ್ ಕೆಲಸದ ವಾತಾವರಣವನ್ನು ಉದ್ಯೋಗಿಗಳಿಗೆ ಕಲ್ಪಿಸಿಕೊಟ್ಟಿವೆ. ಕೆಲಸದ ಈ ಟ್ರೆಂಡಿ ಮಾರ್ಗ ಕಳೆದ ಮೂರು ವರ್ಷಗಳಿಂದ ಜನಪ್ರಿಯವಾಗಿದ್ದು, ಮುಂದಿನ ದಿನದಲ್ಲೂ ವ್ಯವಹಾರದ ಟ್ರೆಂಡಿಂಗ್ ಆಗಿ ಉಳಿಯುವುದರಲ್ಲಿ ಅನುಮಾನವಿಲ್ಲ.
ರಿಮೋಟ್ ಕೆಲಸದ ಆಯ್ಕೆಗಳು, ಹೊಂದಿಕೊಳ್ಳುವ ಸಮಯಗಳು ಮತ್ತು ಕೆಲಸ-ಜೀವನದ ಸಮತೋಲನದೊಂದಿಗೆ ಸೃಜನಾತ್ಮಕ ಕೆಲಸದ ಪರಿಸರದೊಂದಿಗೆ ಹೈಬ್ರಿಡ್ ಹೊಂದಿಕೊಳ್ಳುವಿಕೆಯ ಕಡೆಗೆ ಈ ಬದಲಾವಣೆಯು 2023 ರ ಉನ್ನತ ವ್ಯಾಪಾರ ಪ್ರವೃತ್ತಿಗಳಲ್ಲಿ ಒಂದಾಗಿದೆ.


* ಸಾಮಾಜಿಕ ಮಾಧ್ಯಮ - ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಮಾಧ್ಯಮವು ಪ್ರಪಂಚದ ಬಹುಪಾಲು ಜನರಿಗೆ ಮಾಹಿತಿ ಮತ್ತು ಮನರಂಜನೆಯ ಸ್ಥಳವಾಗಿದೆ. ಹೆಚ್ಚಿನ ಜನರು ತಮ್ಮ ಸಮಯವನ್ನು ಆನ್‌ಲೈನ್‌ನಲ್ಲಿ ಕಳೆಯುವುದರಿಂದ, ವ್ಯಾಪಾರಗಳು ಜನರಿಗೆ ಬೇಗ ತಲುಪುತ್ತಿವೆ. ಸಾಮಾಜಿಕ ಮಾಧ್ಯಮವು ಈಗ ವ್ಯಾಪಾರದ ಅವಿಭಾಜ್ಯ ಅಂಗವಾಗಿ ಹೊಸ ಪ್ರವೃತ್ತಿ ಪಟ್ಟಿಗೆ ಸೇರಿದೆ.

First published: