ಯಾವುದೇ ಸ್ಟಾರ್ಟಪ್ಗಳು (Startup) ಲಾಭ ನಷ್ಟ, ಹಾವು ಏಣಿಯನ್ನು ತಮ್ಮ ಉದ್ಯಮದಲ್ಲಿ ನೋಡುತ್ತಲೇ ಇರುತ್ತವೆ. ಕೆಲವು ಈ ಆಟದಲ್ಲಿ ಜಯಶಾಲಿಯಾದರೆ ಇನ್ನೊಂದಷ್ಟು ಸ್ಟಾರ್ಟಪ್ಗಳು ಹೇಳಹೆಸರಿಲ್ಲದಂತೆ ಕಣ್ಮರೆಯಾಗುತ್ತವೆ. ಕೋವಿಡ್ (COVID-19 Effect) ವಕ್ಕರಿಸಿದ ನಂತರ ಲಾಭಯುತವಾಗಿ ನಡೆಯುತ್ತಿದ್ದ ಅದೆಷ್ಟೋ ಸ್ಟಾರ್ಟಪ್ ಸಂಸ್ಥೆಗಳು ಮೇಲೇಳದಷ್ಟು ಕುಸಿದು ಬಿದ್ದಿವೆ ಇನ್ನೊಂದಿಷ್ಟು ಕೊಂಚ ಚೇತರಿಕೆಯನ್ನು ಕಂಡುಕೊಂಡಿವೆ. ವಿಶ್ವದಾದ್ಯಂತ ನಷ್ಟಕ್ಕೊಳಗಾದ ಅದೆಷ್ಟೋ ಸಂಸ್ಥೆಗಳಿವೆ ಹಾಗೂ ಉದ್ಯಮದಲ್ಲಿ ನಷ್ಟಕ್ಕೊಳಗಾಗಿ ಅವುಗಳು ಅಂತ್ಯವನ್ನು ಕಂಡುಕೊಂಡಿವೆ.
2022 ರಲ್ಲಿ ಕೂಡ ನಷ್ಟಕ್ಕೊಳಗಾದ ಸ್ಟಾರ್ಟಪ್ಗಳ ಪಟ್ಟಿ ಬೆಳೆದಿದೆ ಹಾಗೂ ಲಾಭ ಕಾಣದೇ ಮುಚ್ಚುವ ಪರಿಸ್ಥಿತಿಗೆ ಒಳಗಾಗಿವೆ ಹಾಗಿದ್ದರೆ ಅವು ಯಾವುವು ಎಂಬುದನ್ನು ನೋಡೋಣ
ಏರ್ಲಿಫ್ಟ್
ಪಾಕಿಸ್ತಾನದ ಅತ್ಯಂತ ಶ್ರೀಮಂತ ಸ್ಟಾರ್ಟಪ್ ಸಂಸ್ಥೆಯಾಗಿದ್ದು ಬಂಡವಾಳದ ಕೊರತೆಯನ್ನೆದುರಿಸಿದ ಕಾರಣ ಮುಚ್ಚಬೇಕಾದ ಪರಿಸ್ಥಿತಿ ಉಂಟಾಯಿತು. $85 ಮಿಲಿಯನ್ ಲಾಭವನ್ನು ಗಳಿಸಿದರೂ ಉದ್ಯಮ ಕೈಹಿಡಿಯಲಿಲ್ಲ.
ಏರ್ಗೊ ಎಐ
ಕಾರು ಉತ್ಪನ್ನ ಸಂಸ್ಥೆ ವಿಶ್ವದ ಎರಡು ಕಾರು ತಯಾಕರ ಸಂಸ್ಥೆ ವೋಕ್ಸ್ವ್ಯಾಗನ್ ಮತ್ತು ಫೋರ್ಡ್ ಎರಡರ ಬೆಂಬಲವನ್ನು ಹೊಂದಿತ್ತು. ಪಿಟ್ಸ್ಬರ್ಗ್ ಮೂಲದ ಸಂಸ್ಥೆಯು ತನ್ನ ಆರು ತಿಂಗಳ ಅಸ್ತಿತ್ವದಲ್ಲಿ $1 ಶತಕೋಟಿ ಹಣವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.
ಫಾಸ್ಟ್
ಫಾಸ್ಟ್, ಆನ್ಲೈನ್ ಚೆಕ್ಔಟ್ ಉತ್ಪನ್ನಗಳನ್ನು ಒದಗಿಸುವ ಸ್ಟಾರ್ಟ್ಅಪ್ ಅತೀವ ನಷ್ಟದ ನಂತರ ಏಪ್ರಿಲ್ನಲ್ಲಿ ಸಂಸ್ಥೆಯನ್ನು ಮುಚ್ಚುವ ನಿರ್ಧಾರವನ್ನು ಘೋಷಿಸಿತು. 2021 ರ ಪ್ರಗತಿ ಅಷ್ಟೊಂದು ಲಾಭದಾಯಕವಾಗಿರಲಿಲ್ಲ
FTX
ಕ್ರಿಪ್ಟೋಕರೆನ್ಸಿ ವಿನಿಮಯ ಸಂಸ್ಥೆ FTX ತಾಂತ್ರಿಕವಾಗಿ ಸ್ಥಗಿತಗೊಳ್ಳದೇ ಇದ್ದರೂ ದಿವಾಳಿತನಕ್ಕೆ ಅರ್ಜಿಸಲ್ಲಿಸಿದ ಕಂಪನಿಯಾಗಿದೆ. ಸಂಸ್ಥೆಯ ಸಿಇಒ ಮತ್ತು ಸಂಸ್ಥಾಪಕ ಸ್ಯಾಮ್ ಬ್ಯಾಂಕ್ಮನ್-ಫ್ರೈಡ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂಬುದಾಗಿ ತಿಳಿಸಿದೆ.
ಹೌಸ್
ಆಲ್ಕೋಹಾಲ್ ಬ್ರ್ಯಾಂಡ್ ಈ ವರ್ಷದ ಆರಂಭದಲ್ಲಿ ಸ್ಥಗಿತಗೊಂಡಿತು. $10 ಮಿಲಿಯನ್ ಆದಾಯದ ಮಿತಿಯನ್ನು ದಾಟಿದ ನಂತರ ಸಂಸ್ಥೆ ಮುಚ್ಚುವ ಪ್ರಕಟಣೆಯನ್ನು ಘೋಷಿಸಿದೆ.
ಇನ್ಸ್ಟನ್
ಗ್ರಾಹಕರಿಗೆ ಮುನ್ಸೂಚನೆ ನೀಡದೆಯೇ 2022 ರ ಏಪ್ರಿಲ್ ಮಧ್ಯದಲ್ಲಿ ಸ್ಥಗಿತಗೊಂಡಿತು. 2005 ರಲ್ಲಿ ಸ್ಟಾರ್ಟಪ್ ಲ್ಯಾಬ್ಗಳಿಂದ ಈ ಸ್ಟಾರ್ಟಪ್ ಸ್ಥಾಪನೆಗೊಂಡಿತು.
ಕೈಟ್
ಕೈಟ್, AI-ಚಾಲಿತ ಕೋಡಿಂಗ್ ಸಹಾಯಕವನ್ನು ಅಭಿವೃದ್ಧಿಪಡಿಸುವ ಸ್ಟಾರ್ಟಪ್ ಉದ್ಯಮದಲ್ಲಿ ಹತ್ತಾರು ಮಿಲಿಯನ್ ಡಾಲರ್ ಲಾಭವನ್ನು ಪಡೆದುಕೊಂಡರೂ ಮುಚ್ಚಬೇಕಾದ ಪರಿಸ್ಥಿತಿಯುಂಟಾಯಿತು. ಬಿಲ್ಗಳನ್ನು ಪಾವತಿಸಲು ಕೈಟ್ ಹೆಣಗಾಡಿತು ಹಾಗೂ ಸಂಸ್ಥಾಪಕ ಆಡಮ್ ಸ್ಮಿತ್ ಸಂಸ್ಥೆಯನ್ನು ಮುಚ್ಚುವುದಾಗಿ ಘೋಷಿಸಿದರು.
ಕಿಟ್ಟಿ ಹವಾಕ್
2010 ರಲ್ಲಿ ಸಂಸ್ಥೆ ಆರಂಭವಾದಾಗ ಭರವಸೆಯ ಹೊಸ ಆಶಾಕಿರಣವನ್ನು ಹೊಂದಿತ್ತು. ಸ್ವಯಂ-ಚಾಲನಾ ಕಾರ್ ಪ್ರವರ್ತಕ ಸೆಬಾಸ್ಟಿಯನ್ ಥ್ರೂನ್ ಸಂಸ್ಥೆಯ ಸ್ಥಾಪಕರು. ಗೂಗಲ್ನ ಸಹ ಸ್ಥಾಪಕ ಲ್ಯಾರಿ ಪೇಜ್ನ ಬೆಂಬಲವನ್ನು ಸೆಬಾಸ್ಟಿಯನ್ ಹೊಂದಿದ್ದರೂ ಸ್ಟಾರ್ಟಪ್ ಅಂತ್ಯಗೊಂಡಿತು.
ಮೋಡ್ಸಿ
ಜೂನ್ ಅಂತ್ಯದಲ್ಲಿ ಮೋಡ್ಸಿ ಆನ್ಲೈನ್ ಒಳಾಂಗಣ ವಿನ್ಯಾಸ ಸೇವೆಗಳನ್ನು ಆರಂಭಿಸಿದ ಸ್ಟಾರ್ಟಪ್ ಥಟ್ಟನೆ ತನ್ನ ಸೇವೆಗಳನ್ನು ನಿಲ್ಲಿಸಿತು. ವಿನ್ಯಾಸಕರನ್ನು ವಜಾಗೊಳಿಸಿತು ಹಾಗೂ ಗ್ರಾಹಕರು ಮತ್ತು ಆರ್ಡರ್ಗಳನ್ನು ಕೈಬಿಟ್ಟಿತು.
ನೊಪಿಯಾರೈಡ್
NopeaRide, ಕೀನ್ಯಾದ ಮೊದಲ ಸಂಪೂರ್ಣ ವಿದ್ಯುತ್ ವಾಹನ ಸೇವಾ ಸ್ಥಾರ್ಟಪ್, ನವೆಂಬರ್ನಲ್ಲಿ 70 ವಾಹನಗಳ ಸೇವೆ ಮತ್ತು ನೈರೋಬಿಯಾದ್ಯಂತ ಚಾರ್ಜಿಂಗ್ ನೆಟ್ವರ್ಕ್ ಅನ್ನು ನಿರ್ಮಿಸಿದ ನಂತರ ಮುಚ್ಚಲಾಯಿತು. ಪೋಷಕ ಕಂಪನಿ EkoRent Oy ಹೆಚ್ಚುವರಿ ಹಣವನ್ನು ಸಂಗ್ರಹಿಸಲು ಸಾಧ್ಯವಾಗದ ನಂತರ ಮುಚ್ಚಲಾಯಿತು.
ಆನ್ವರ್ಡ್ ಮೊಬಿಲಿಟಿ
ಕೆಲವು ಸ್ಟಾರ್ಟಪ್ಗಳು ವಿಫಲತೆಗಳು ಅನಿರೀಕ್ಷಿತವಾಗಿರುತ್ತವೆ. ಆನ್ವರ್ಡ್ ಕೂಡ ಅದೇ ಪಟ್ಟಿಗೆ ಸೇರ್ಪಡೆಗೊಳ್ಳುತ್ತದೆ. ಬ್ಲ್ಯಾಕ್ಬೆರಿಯನ್ನು ಮರಳಿ ಮಾರುಕಟ್ಟೆಗೆ ಪರಿಚಯಿಸುವ ಇರಾದೆಯನ್ನು ಇದು ಹೊಂದಿತ್ತು.
ರಿಯಾಲಿ
ರಿಯಲ್ ಎಸ್ಟೇಟ್ ಫಿನ್ಟೆಕ್ ಸ್ಟಾರ್ಟ್ಅಪ್ ರಿಯಾಲಿ ಆಗಸ್ಟ್ನಲ್ಲಿ ಮುಚ್ಚಿತು ವರ್ಷದ ಹಿಂದೆ ಇದರ ಲಾಭ $100 ಮಿಲಿಯನ್ ಎಂದು ಅಂದಾಜಿಸಲಾಗಿದೆ.
ಶಾಪ್ಎಕ್ಸ್
ಆರ್ಥಿಕ ಸಂಕಷ್ಟ ಮತ್ತು ಬಂಡವಾಳವನ್ನು ಹೆಚ್ಚಿಸುವ ಸವಾಲುಗಳನ್ನು ಎದುರಿಸಿದ ನಂತರ ಭಾರತ ಮೂಲದ ShopX ಆಗಸ್ಟ್ನಲ್ಲಿ ದಿವಾಳಿತನಕ್ಕೆ ಅರ್ಜಿ ಸಲ್ಲಿಸಿತು. ಸಂಸ್ಥೆಯ ನಿವ್ವಳ ಮೌಲ್ಯ $175 ಮಿಲಿಯನ್ ಆಗಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ