ಭಾರತದ ಸ್ಟಾರ್ಟಪ್ ವ್ಯವಸ್ಥೆಗೆ ಶಕ್ತಿ ತುಂಬುವಿಕೆ: ಗುಣವತ್ತಾ ಸೇ ಆತ್ಮನಿರ್ಭರತಾದ ಪ್ರಮುಖ ಅಂಶ

ಭಾರತದ ಸ್ಟಾರ್ಟಪ್ ವ್ಯವಸ್ಥೆಯು ಸರಿಯಾದ ಮಾರುಕಟ್ಟೆ ಸ್ಥಿತಿಗಳು, ಡಿಜಿಟಲ್ ಮೂಲಸೌಕರ್ಯ, ನೀತಿ ಹಾಗೂ ನಿಯಂತ್ರಣದ ಸಂಗಮದ ಪ್ರಯೋಜನ ಪಡೆಯುತ್ತಿದೆ.

ಭಾರತದ ಸ್ಟಾರ್ಟಪ್ ವ್ಯವಸ್ಥೆಯು ಸರಿಯಾದ ಮಾರುಕಟ್ಟೆ ಸ್ಥಿತಿಗಳು, ಡಿಜಿಟಲ್ ಮೂಲಸೌಕರ್ಯ, ನೀತಿ ಹಾಗೂ ನಿಯಂತ್ರಣದ ಸಂಗಮದ ಪ್ರಯೋಜನ ಪಡೆಯುತ್ತಿದೆ.

ಭಾರತದ ಸ್ಟಾರ್ಟಪ್ ವ್ಯವಸ್ಥೆಯು ಸರಿಯಾದ ಮಾರುಕಟ್ಟೆ ಸ್ಥಿತಿಗಳು, ಡಿಜಿಟಲ್ ಮೂಲಸೌಕರ್ಯ, ನೀತಿ ಹಾಗೂ ನಿಯಂತ್ರಣದ ಸಂಗಮದ ಪ್ರಯೋಜನ ಪಡೆಯುತ್ತಿದೆ.

  • Share this:

    ಇಂದು, ಭಾರತವು ಮೂರನೇ ಅತಿದೊಡ್ಡ ಆರ್ಥಿಕಶಕ್ತಿಯಾಗುವತ್ತ ಹೆಜ್ಜೆಹಾಕುತ್ತಿದೆ, ವಿದೇಶಗಳಲ್ಲಿ ಉದ್ಯಮ ಸ್ಥಾಪನೆ, ಉತ್ಪಾದನೆಯಲ್ಲಿ ಹೂಡಿಕೆ, ಇಂಧನ ಪರಿವರ್ತನೆ ಹಾಗೂ ನಮ್ಮ ಸುಧಾರಿತ ಡಿಜಿಟಲ್ ಮೂಲಸೌಕರ್ಯದಿಂದಾಗಿ ನಮ್ಮ ಆರ್ಥಿಕ ಪ್ರಗತಿಯ ವೇಗವರ್ಧನೆಯಾಗಿದೆ. ಆದಾಗ್ಯೂ, “ಇಂಡಿಯಾ” ನಿಜವಾಗಿ ಬೆಳಗಲು “ಭಾರತ”ವು ಜತೆಯಾಗಿ ಬರಬೇಕಿದೆ.


    2015 ರ ಸಮಯದಲ್ಲಿ, ದೇಶದ ಜೀವಾಳವಾದ ಗ್ರಾಮೀಣ ಪ್ರದೇಶದಲ್ಲಿ 67.2% ನಷ್ಟು ಜನರು ವಾಸಿಸುತ್ತಿದ್ದರು. ಅದು ಭಾರತದ ಮಾನವ ಬಂಡವಾಳದ 2/3 ಭಾಗದಷ್ಟಾಗಿದೆ. 2050 ರ ವೇಳೆಗೆ, ನಗರ-ಗ್ರಾಮೀಣದ ವರ್ಗೀಕರಣವು, 52.8% ಮತ್ತು 47.21% ಆಗುವ ಸಾಧ್ಯತೆಯಿದೆ. ಈ ಬದಲಾವಣೆಗೆ ಕಾರಣವೇನು? ನಿರೀಕ್ಷೆ. ಜನರು ಉತ್ತಮ ಉದ್ಯೋಗಗಳನ್ನು ಪಡೆಯಲು ಬಯಸುತ್ತಾರೆ ಮಾತ್ರವಲ್ಲದೇ ಹೆಚ್ಚು ಗಳಿಸಲು, ಉತ್ತಮ ಜೀವನಶೈಲಿಯನ್ನು ಹೊಂದಲು, ಉತ್ತಮ ಶಾಲೆಗಳು ಮತ್ತು ಉತ್ತಮ ಆರೋಗ್ಯ ಸೌಕರ್ಯನ್ನು ಹೊಂದಲು ಬಯಸುತ್ತಾರೆ


    ಆದರೆ ಮೆಟ್ರೋಪಾಲಿಟನ್ ನಗರಗಳಲ್ಲಿ ಮಾತ್ರ ಉದ್ಯಮಗಳು ಅಭಿವೃದ್ಧಿ ಹೊಂದುತ್ತಿವೆಯೇ? ಇಂದೋರ್, ಜೈಪುರ, ರಾಯ್ಪುರ ಮತ್ತು ಚಂಡೀಗಢದಂತಹ ಸಣ್ಣ ನಗರಗಳು ಉದ್ಯಮಿಗಳಿಗೆ ಉತ್ಪಾದಕತೆಯ ತಾಣಗಳಾಗುತ್ತಿವೆ, ದೊಡ್ಡ ನಗರಗಳಿಗಿಂತ ಹೆಚ್ಚು ಪ್ರಯೋಜನಗಳನ್ನು ನೀಡುತ್ತಿವೆ ಮತ್ತು ಸ್ಟಾರ್ಟಪ್ ಹಬ್‌ಗಳಾಗಿ ಹೊರಹೊಮ್ಮುತ್ತಿವೆ. ತಂತ್ರಜ್ಞಾನವು ಸಮಾನ ಅವಕಾಶವನ್ನು ನೀಡುವ ಮೂಲಕ ಅರ್ಹ ವ್ಯಕ್ತಿಗಳಿಗೆ ಜಾಗ ಕಲ್ಪಿಸಿಕೊಟ್ಟಿದೆ. ಇನ್ನು ಮೇಲೆ ಭಾರತೀಯ ಉದ್ಯಮಗಳು ಭೌಗೋಳಿಕ ಅಥವಾ ದೂರದ ಮಿತಿಯಿಂದ ನಿರ್ಬಂಧಿತವಾಗಿಲ್ಲ.


    ಭಾರತವು  2026 ರ ವೇಳೆಗೆ 1 ಬಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಹೊಂದಲಿದೆ  ನಮ್ಮ  ಇಂಟರ್ನೆಟ್ ದರಗಳು  US ಗ್ರಾಹಕರು ಪಾವತಿಸುವ ಸರಾಸರಿಯ 1/5 ಭಾಗವಾಗಿದೆ, ಮತ್ತು ಮೊಬೈಲ್ ಮಾರುಕಟ್ಟೆಯು ಪ್ರತಿಯೊಂದು ವಿಧದ ಬೆಲೆಯನ್ನು ಬಯಸುವ ಗ್ರಾಹಕರಿಗೆ ಅವಶ್ಯವಿರುವ ಉತ್ಪನ್ನವನ್ನು ಹೊಂದಿದೆ (ನೀವು $100 ಕ್ಕಿಂತ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಖರೀದಿಸಬಹುದು). ಜನರಿಗೆ ಮನೆಯಿಂದಲೇ ಕೆಲಸ ಮಾಡಲು ಮಾತ್ರವಲ್ಲದೇ, ಮನೆಯಿಂದಲೇ ಶಾಪಿಂಗ್ ಮಾಡಲು, ಟೆಲಿಮೆಡಿಸಿನ್ ಪಡೆಯಲು, ಸರ್ಕಾರದ ಪ್ರಯೋಜನಗಳನ್ನು ಪಡೆಯಲು, ಮನೆಯಿಂದಲೇ ಬ್ಯಾಂಕ್, ಮನೆಯಿಂದಲೇ ವಿದ್ಯಾಭ್ಯಾಸ ಮಾಡಲು ಹಾಗೂ ಮನೆಯಿಂದಲೇ ಅಭಿವೃದ್ಧಿ ಹೊಂದಲು ಅವಕಾಶ ಮಾಡಿಕೊಡುವಂತಹ ಡಿಜಿಟಲ್ ಮೂಲಸೌಕರ್ಯವನ್ನು ಭಾರತವು ಸದ್ದಿಲ್ಲದೇ ನಿರ್ಮಿಸುತ್ತಿದೆ.


    ಈ ಕೋವಿಡ್-19 ಲಾಕ್‌ಡೌನ್‌ಗಳು ಭೌತಿಕ ಗಡಿಗಳು ಹೆಚ್ಚು ಮುಖ್ಯವಲ್ಲ ಎಂಬುದನ್ನು ನಮಗೆ ತೋರಿಸಿದೆ: ನಾವು ದೇಶಾದ್ಯಂತದ ಉದ್ಯಮದಿಂದ ಶಾಪಿಂಗ್ ಮಾಡಿದ್ದೇವೆ. ಉದ್ಯಮಕ್ಕೆ ಪರಿಣಾಮವು ಹೆಚ್ಚು ಗಾಢವಾಗಿದೆ. ತೇಜ್‌ಪುರ ಮೂಲದ ಉದ್ಯಮವೊಂದು ಮುಂಬೈ ಮೂಲದ ಉದ್ಯಮವು ಗಳಿಸುವಷ್ಟೇ ಗ್ರಾಹಕರು, ಹಣಕಾಸು ಮತ್ತು ಬೆಂಬಲವನ್ನು ಪಡೆಯುತ್ತಿದೆ. ಲಾಕ್‌ಡೌನ್‌ಗಳು ಸಡಿಲಗೊಂಡರೂ ಈ ಅನುಕೂಲಗಳು ಉಳಿದಿವೆ.


    ಭಾರತದ ತಂತ್ರಜ್ಞಾನ ಆಧಾರಿತ ಸ್ಟಾರ್ಟಪ್‌ಗಳು ಉತ್ತುಂಗಕ್ಕೆ
    ಭಾರತದ ಫಿನ್‌ಟೆಕ್ ಕ್ರಾಂತಿಯು ಈಗ ಒಂದು ದಂತಕಥೆಯಾಗಿದೆ.  ಸರ್ಕಾರದಿಂದ ಗುರುತಿಸಲ್ಪಟ್ಟ 2000 ಕ್ಕೂ ಹೆಚ್ಚು ಫಿನ್‌ಟೆಕ್ ಸ್ಟಾರ್ಟಪ್‌ಗಳೊಂದಿಗೆ ನಾವು ವಿಶ್ವದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಫಿನ್‌ಟೆಕ್ ಮಾರುಕಟ್ಟೆಗಳನ್ನು ಹೊಂದಿದ್ದೇವೆ. ನಮ್ಮ ಮಾರುಕಟ್ಟೆ ಗಾತ್ರವು 2021 ರಲ್ಲಿ $50 Bn ಇತ್ತು ಮತ್ತು 2025 ರಲ್ಲಿ $150 Bn ತಲುಪುವ ನಿರೀಕ್ಷೆಯಿದೆ. UPI ಈಗ ನಮ್ಮ ಗಡಿಗಳನ್ನು ದಾಟಿ, ವಿದೇಶಗಳಲ್ಲಿಯೂ ಬಳಕೆಗೆ ಬಂದಿದೆ. ಅತಿ ಮುಖ್ಯವಾಗಿ, ಈ ಭಾರತೀಯ ಫಿನ್‌ಟೆಕ್ ಎಕೋಸಿಸ್ಟಮ್, ದೇಶಾದ್ಯಂತ ಜನರು ಆನ್‌ಲೈನ್‌ನಲ್ಲಿ ಬ್ಯಾಂಕ್ ವ್ಯವಹಾರಗಳನ್ನು ಕೈಗೊಳ್ಳಲು, ವಾಲೆಟ್‌ಗಳು ಮತ್ತು ಖಾತೆಗಳಲ್ಲಿ ಸುರಕ್ಷಿತ ಪಾವತಿಗಳನ್ನು ಮಾಡಲು ಹಾಗೂ ಸ್ವೀಕರಿಸಲು, ಸಂಪತ್ತು ನಿರ್ವಹಣೆ ಮತ್ತು ವೈಯಕ್ತಿಕ ಆರ್ಥಿಕ ಸೇವೆಗಳನ್ನು ಮಾಡಲು, ವಿಮೆಗಳನ್ನು ಮಾಡಲು, ಅಲ್ಲದೇ ತಮ್ಮ ವ್ಯವಹಾರದ ಲೆಕ್ಕಪತ್ರ ನಿರ್ವಹಣೆ ಮತ್ತು ನಿಯಂತ್ರಕ ಕಾರ್ಯಗಳಿಗೆ ಸಹಾಯವನ್ನು ಪಡೆಯಲು ಸಾಧ್ಯವಾಗಿಸುತ್ತಿದೆ.


    ಭಾರತವು ಕೇವಲ 18 ತಿಂಗಳುಗಳಲ್ಲಿ 2 ಬಿಲಿಯನ್ ವ್ಯಾಕ್ಸಿನೇಷನ್ ಸಾಧಿಸಿದ್ದು ಶ್ಲಾಘನೀಯ ಮಾತ್ರವಲ್ಲದೇ ಇದರಿಂದ ನಮ್ಮ ಆರೋಗ್ಯ ಉದ್ಯಮವೂ ಕ್ರಾಂತಿಯನ್ನು ಕಂಡಿತು. ಟೆಲಿಮೆಡಿಸಿನ್ 2025 ರ ವೇಳೆಗೆ $5.4 Bn ತಲುಪುವ ನಿರೀಕ್ಷೆಯಿದೆ, ಮತ್ತು ನ್ಯಾಷನಲ್ ಡಿಜಿಟಲ್ ಹೆಲ್ತ್ ಬ್ಲೂಪ್ರಿಂಟ್ ಮುಂದಿನ 10 ವರ್ಷಗಳಲ್ಲಿ $200 Bn ಗಿಂತಲೂ ಹೆಚ್ಚಿನ ಆರ್ಥಿಕ ಮೌಲ್ಯವನ್ನು ಅನ್‌ಬ್ಲಾಕ್ ಮಾಡುವ ನಿರೀಕ್ಷೆಯಿದೆ. ಈ ಎಲ್ಲಾ ಬದಲಾವಣೆಗಳು ಗ್ರಾಮೀಣ ಪ್ರದೇಶದ ಜನರು ಗುಣಮಟ್ಟದ ವೈದ್ಯಕೀಯ ವೃತ್ತಿಪರರನ್ನು ದೂರದಿಂದಲೇ ಸಂಪರ್ಕಿಸಲು ಸಾಧ್ಯವಾಗುವಂತೆ ಮಾಡಿದೆ. ಮುಂದಿನ ಪೀಳಿಗೆಯ AI ಆಧಾರಿತ ರೋಗನಿರ್ಣಯ ಸಾಧನಗಳು ರೋಗನಿರ್ಣಯದಲ್ಲಿನ ದೋಷಗಳನ್ನು ಕಡಿಮೆ ಮಾಡುತ್ತದೆ ಹಾಗೂ ಸಮಯವನ್ನು ಉಳಿಸುತ್ತದೆ. ಅಷ್ಟೇ ಅಲ್ಲ, ಈ ಸಾಧನಗಳನ್ನು ಗ್ರಾಮೀಣ ವ್ಯವಸ್ಥೆಯಲ್ಲಿ ಸೇರಿಸುವ ಮೂಲಕ ರೋಗಿಗಳು ತೀರಾ ಅಗತ್ಯವಿದ್ದಾಗ ಮಾತ್ರ ವೈದ್ಯಕೀಯ ಸಹಾಯಕ್ಕಾಗಿ ನಗರಕ್ಕೆ ಪ್ರಯಾಣಿಸುವ ಮೂಲಕ ಅಮೂಲ್ಯ ಸಮಯ ಹಾಗೂ ಹಣವನ್ನು ಉಳಿಸಬಹುದು.


    ಇ-ಕಾಮರ್ಸ್ ಮಹಾನಗರಗಳನ್ನು ಮೀರಿದ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತೊಂದು ಸ್ಥಳವಾಗಿದೆ. ಎಲ್ಲಾ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಭೌಗೋಳಿಕತೆಯ ಗಡಿಯನ್ನು ಮೀರಿ ಬೆಳೆಯುತ್ತಿರುವಾಗ, ದಿ ಡಿಪಾರ್ಟ್‌ಮೆಂಟ್ ಫಾರ್ ಪ್ರೊಮೋಷನ್ ಆಫ್ ಇಂಡಸ್ಟ್ರಿ ಆ್ಯಂಡ್ ಇಂಟರ್ನಲ್ ಟ್ರೇಡ್ (DPIIT) ಈ ಇ-ಕಾಮರ್ಸ್ ಅನ್ನು ರಚಿಸಿದ್ದು ಅದು ನಿಜವಾಗಿಯೂ ಪ್ರಜಾಪ್ರಭುತ್ವದ ಜನರನ್ನು ತಲುಪುತ್ತಿದೆ. ಈ ONDC ಪ್ಲಾಟ್‌ಫಾರ್ಮ್ ಇ-ಕಾಮರ್ಸ್‌ನಲ್ಲಿ ಎಲ್ಲಾ ಪ್ರತ್ಯೇಕತೆಯನ್ನು ಮುರಿಯುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಪ್ಲಾಟ್‌ಫಾರ್ಮ್ ಇತರ ಆ್ಯಪ್‌ಗಳೊಂದಿಗೆ ಸಂವಹನ ನಡೆಸುವುದಲ್ಲದೇ ದೊಡ್ಡ ಉದ್ಯಮಿಗಳು ಹೊಂದಿರುವ ರೀತಿಯಲ್ಲಿ ಜಾಹೀರಾತು ಮತ್ತು ಮಾರುಕಟ್ಟೆ ಬಜೆಟ್‌ಗಳನ್ನು ಹೊಂದಿರದ ಹೊಸ ಉದ್ಯಮಿಗಳಿಗೂ ಮುಕ್ತ ಮತ್ತು ಸಮಾನವಾದ ಅವಕಾಶವನ್ನು ಕಲ್ಪಿಸುತ್ತದೆ. ಆದ್ದರಿಂದ ಈಗ ಭಾರತದಾದ್ಯಂತ ಸಣ್ಣ ಉದ್ಯಮಿಗಳು ಕೃತಕ ಚೋಕ್ ಪಾಯಿಂಟ್‌ಗಳು ಅಥವಾ ಅನಗತ್ಯ ವೆಚ್ಚಗಳಿಲ್ಲದೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಬಹುದು.


    ಭಾರತದ ಸ್ಟಾರ್ಟಪ್ ವ್ಯವಸ್ಥೆ
    ಈ ಎಲ್ಲಾ ಬೆಳವಣಿಗೆಗಳು ಸುವ್ಯವಸ್ಥಿತ ಎಂದು ತೋರುತ್ತಿದ್ದರೆ, ಇದು ಭಾರತದ ಬೆಳೆಯುತ್ತಿರುವ ಸ್ಟಾರ್ಟಪ್ ವ್ಯವಸ್ಥೆಯ ಬೆಂಬಲವನ್ನು ಹೊಂದಿದೆ.


    ಸ್ಟಾರ್ಟಪ್ ವ್ಯವಸ್ಥೆ ಎಂಬುದು ಸ್ಟಾರ್ಟಪ್‌ಗಳ ಮೂಲಕ ನಾವೀನ್ಯತೆಯನ್ನು ಉತ್ತೇಜಿಸುವ ಸಂಪನ್ಮೂಲಗಳ ನೆಟ್‌ವರ್ಕ್‌ಗಳಾಗಿವೆ. ಈ ವ್ಯವಸ್ಥೆ ಸ್ಟಾರ್ಟಪ್‌ಗಳಿಗೆ ಮಾರ್ಗದರ್ಶನ, ಕಚೇರಿಗೆ ಸ್ಥಳಾವಕಾಶ, ಹೂಡಿಕೆ ಆಯ್ಕೆಗಳಿಗೆ ಪ್ರವೇಶವನ್ನು ಒದಗಿಸುತ್ತವೆ ಮತ್ತು ಇತರೆ ಉದ್ಯಮಗಳೊಂದಿಗೆ ಸಂಪರ್ಕ ಹೊಂದಲು ಸಹ ಅವುಗಳನ್ನು ಸಕ್ರಿಯಗೊಳಿಸುತ್ತವೆ. ಈ ವ್ಯವಸ್ಥೆ ಕೇವಲ ಹಾಗೆಯೇ ಸಂಭವಿಸಿಬಿಡುವುದಿಲ್ಲ – ಅವುಗಳಿಗೆ ಸರ್ಕಾರಗಳು, ಸ್ಥಳೀಯ ಅಧಿಕಾರಿಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಇನ್ನಿತರ ಪ್ರಮುಖ ಸಂಸ್ಥೆಗಳಿಂದ ಪ್ರಜ್ಞಾಪೂರ್ವಕ ನೆರವು ಮತ್ತು ಸಂಪನ್ಮೂಲಗಳ ಅಗತ್ಯವಿರುತ್ತದೆ.


    2016 ರಲ್ಲಿ ಪ್ರಾರಂಭವಾದ GOI ನ ಸ್ಟಾರ್ಟಪ್ ಇಂಡಿಯಾ ಇನಿಶಿಯೇಟಿವ್ ಮೂಲಕ ಭಾರತದ ಸ್ಟಾರ್ಟಪ್ ವ್ಯವಸ್ಥೆ ಒಂದು ದೊಡ್ಡ ಮಟ್ಟದ ಉತ್ತೇಜನವನ್ನು ಪಡೆಯಿತು. ಇದು ಮೂರು ಅಂಶಗಳ ವಿಧಾನವನ್ನು ಅನ್ವಯಿಸಿತು:


    • ಸಂಪೂರ್ಣ ಸ್ಟಾರ್ಟಪ್ ವ್ಯವಸ್ಥೆಗೆ ಸಂಪರ್ಕದ ಏಕೈಕ ಪಾಯಿಂಟ್ ಅನ್ನು ಸೃಷ್ಟಿಸುವ ಮತ್ತು ಜ್ಞಾನದ ವಿನಿಮಯ ಹಾಗೂ ಫಂಡಿಂಗ್‌ಗೆ ಪ್ರವೇಶ ಒದಗಿಸುವ ಸ್ಟಾರ್ಟಪ್ ಇಂಡಿಯಾ ಹಬ್ ಸ್ಥಾಪನೆ.

    • ಸ್ವಯಂ ಪ್ರಮಾಣೀಕರಣವನ್ನು ಆಧರಿಸಿದ ಅನುಸರಣೆ ಆಡಳಿತವು ಸ್ಟಾರ್ಟಪ್‌ಗಳ ಮೇಲಿನ ನಿಯಂತ್ರಕ ಹೊಣೆಯನ್ನು ಗಣನೀಯವಾಗಿ ಕಡಿಮೆಗೊಳಿಸುತ್ತದೆ.

    • ಸ್ಟಾರ್ಟಪ್‌ಗಳು ಎಲ್ಲಿದ್ದರೂ ಸರ್ಕಾರ ಮತ್ತು ನಿಯಂತ್ರಣ ಸಂಸ್ಥೆಗಳೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುವ ಮೊಬೈಲ್ ಆ್ಯಪ್ ಮತ್ತು ಪೋರ್ಟಲ್‌ನ ಅನಾವರಣ.


    ಇದರ ಜೊತೆಗೆ, DPIIT ಯು ಭಾರತೀಯ ಸ್ಟಾರ್ಟಪ್ ವ್ಯವಸ್ಥೆಯನ್ನು ಉತ್ತೇಜಿಸಲು $1.33 ಬಿಲಿಯನ್ ಹಣವನ್ನು ಮಂಜೂರು ಮಾಡಿದೆ. ಆಸ್ಪೈರ್ (ನಾವೀನ್ಯತೆ, ಗ್ರಾಮೀಣ ಕೈಗಾರಿಕೆಗಳು ಮತ್ತು ಉದ್ಯಮಶೀಲತೆಯ ಉತ್ತೇಜನಕ್ಕಾಗಿ ಒಂದು ಯೋಜನೆ), ಸ್ಟ್ಯಾಂಡ್-ಅಪ್ ಇಂಡಿಯಾ, ಅಟಲ್ ಇನೋವೇಶನ್ ಮಿಷನ್‌ನಂತಹ ಯೋಜನೆಗಳು ವೈವಿಧ್ಯಮಯ ಹಿನ್ನೆಲೆಯ ಉದ್ಯಮಿಗಳಿಗೆ ತಮ್ಮ ನಾವೀನ್ಯತೆಗಳನ್ನು ಜಗತ್ತಿನ ಜನರೆದುರು ಕೊಂಡೊಯ್ಯಲು ಸುಲಭಗೊಳಿಸುತ್ತದೆ. ಆಸ್ಪೈರ್ ಇನ್‌ಕ್ಯುಬೇಟರ್‌ಗಳ ಮೂಲಕ ಕೃಷಿ ಆಧಾರಿತ ಕೈಗಾರಿಕೆಗಳ ಮೇಲೆ ಕೇಂದ್ರೀಕರಿಸಿದರೆ, ಸ್ಟ್ಯಾಂಡ್-ಅಪ್ ಇಂಡಿಯಾವು SC, ST ಮತ್ತು ಮಹಿಳಾ ಉದ್ಯಮಿಗಳಿಗೆ ಸುಲಭವಾಗಿ ಸಾಲದ ವ್ಯವಸ್ಥೆಯನ್ನು ಒದಗಿಸುತ್ತದೆ. ಅಟಲ್ ಇನೋವೇಶನ್ ಮಷಿನ್ ಸ್ಟಾರ್ಟಪ್‌ಗಳನ್ನು ಪೋಷಿಸುತ್ತದೆ ಹಾಗೂ ಅವುಗಳನ್ನು ಮೇಲೆತ್ತಲು ಸಹಾಯ ಮಾಡುತ್ತದೆ.


    ನಿಯಂತ್ರಣವು ಉದ್ಯಮಕ್ಕೂ ಉತ್ತಮ, ಜನರಿಗೂ ಉತ್ತಮ
    ಈ ವಿಭಾಗದಲ್ಲಿ ಭಾರತದ ಪ್ರಗತಿಯು, ವಿಶೇಷವಾಗಿ, FTX ಮತ್ತು ಥೆರಾನೋಸ್‌ನಂತಹ ಜಾಗತಿಕ ಉದ್ಯಮದಾರರ ಕುಸಿತದ ಹಿನ್ನೆಲೆಯಲ್ಲಿ ಭಾರತೀಯ ನಿಯಂತ್ರಕ ವ್ಯವಸ್ಥೆ ಮತ್ತು ಗುಣಮಟ್ಟದ ಚೌಕಟ್ಟಿನ ಬಲವನ್ನು ಸೂಚಿಸುತ್ತದೆ. ಇಲ್ಲಿ, ಪರಿಶೀಲನೆ ಮತ್ತು ಬ್ಯಾಲೆನ್ಸ್ ನಿಯಂತ್ರಣಗಳನ್ನು ಮೀರಿವೆ. 1997 ರಲ್ಲಿ ರೂಪುಗೊಂಡ, ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ, ಗ್ರಾಹಕರು ಮತ್ತು ಮಾರಾಟಗಾರರು, ಉದ್ಯೋಗಿಗಳು ಮತ್ತು ಉದ್ಯೋಗದಾತರು, ನಿಯಂತ್ರಕರು ಮತ್ತು ವ್ಯವಹಾರಗಳ ನಡುವಿನ ಗುಣಮಟ್ಟದ ವ್ಯವಸ್ಥೆ ರಚಿಸಲು ದಣಿವರಿಯದೇ ಕೆಲಸ ಮಾಡುತ್ತಿದೆ.


    QCI ನ ಕೆಲಸವು ನಿರ್ವಾತದಲ್ಲಿ ನಡೆಯುವುದಿಲ್ಲ. ಪ್ರತಿ ಮಾನ್ಯತೆ ಮಾನದಂಡ ಮತ್ತು ಪ್ರತಿ ಪ್ರಮಾಣೀಕರಣವು ನಿಯಂತ್ರಣಗಳ ಮೇಲೆ ಪರಿಣಾಮ ಬೀರುವ ಕೈಗಾರಿಕಾ ಮಂಡಳಿಗಳ ಸಮಾಲೋಚನೆಯೊಂದಿಗೆ ಬರುತ್ತದೆ. ಸೂತ್ರೀಕರಿಸಿದ ಬಳಿಕ, QCI ತರಬೇತಿ ಕಾರ್ಯಕ್ರಮವನ್ನು ರಚಿಸುತ್ತದೆ, ಇದು ಉದ್ಯಮಗಳು ಹಾಗೂ ನಿಯಂತ್ರಕರಿಗೆ ಈ ಮಾನದಂಡಗಳನ್ನು ಸಮಾಜೀಕರಿಸಲು ಸುಲಭವಾಗುತ್ತದೆ. ಅಂತಿಮವಾಗಿ, QCI, ಈ ತರಬೇತಿ ಮತ್ತು ಸಮಾಲೋಚನೆ ಒದಗಿಸುವವರ ಮಾನ್ಯತೆಯ ಮೂಲಕ ಗುಣಮಟ್ಟ ಇನ್‌ಸ್ಪೆಕ್ಟರ್‌ಗಳು ಮತ್ತು ಆಡಿಟರ್‌ಗಳನ್ನು ನಿರ್ವಹಿಸಲು ನೆರವಾಗುತ್ತದೆ.


    QCI ಯು ಐದು ಘಟಕ ಮಂಡಳಿಗಳಿಂದ ಕೂಡಿದೆ, ಈ ಪ್ರತಿಯೊಂದೂ ತಮ್ಮದೇ ಆದ ವಿಶಿಷ್ಟ ವ್ಯಾಪ್ತಿಯನ್ನು ಹೊಂದಿವೆ: ನ್ಯಾಶನಲ್ ಬೋರ್ಡ್ ಫಾರ್ ಕ್ವಾಲಿಟಿ ಪ್ರಮೋಶನ್ (NBQP), ನ್ಯಾಶನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಸರ್ಟಿಫಿಕೇಶನ್ ಬಾಡೀಸ್ (NABCB), ನ್ಯಾಶನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಎಜುಕೇಶನ್ ಆಂಡ್ ಟ್ರೈನಿಂಗ್ (NABET), ನ್ಯಾಶನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಹಾಸ್ಪಿಟಲ್ಸ್ ಆಂಡ್ ಹೆಲ್ತ್‌ಕೇರ್ ಪ್ರೊವೈಡರ್ಸ್ (NABH) ಮತ್ತು ನ್ಯಾಶನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಟೆಸ್ಟಿಂಗ್ ಆಂಡ್ ಕ್ಯಾಲಿಬ್ರೇಶನ್ ಲ್ಯಾಬೊರೇಟರೀಸ್ (NABL).


    ಭಾರತದ ಗುಣಮಟ್ಟದ ಮಾನದಂಡಗಳು, ಜಾಗತಿಕ ಗುಣಮಟ್ಟ ಮಾನದಂಡಗಳಿಗಿಂತ ಬಹುಮಟ್ಟಿಗೆಮುಂದಿದೆ. NABCB ಯು ಇಂಟರ್‌ನ್ಯಾಶನಲ್ ಅಕ್ರೆಡಿಟೇಶನ್ ಫೋರಂ (IAF), ಇಂಟರ್‌ನ್ಯಾಶನಲ್ ಲ್ಯಾಬೊರೇಟರಿ ಅಕ್ರೆಡಿಟೇಶನ್ ಕಾರ್ಪೊರೇಶನ್ (ILAC) ಮತ್ತು ಏಷ್ಯಾ ಪೆಸಿಫಿಕ್ ಅಕ್ರೆಡಿಟೇಶನ್ ಕಾರ್ಪೊರೇಶನ್ (APAC) ನ ಸದಸ್ಯನಾಗಿದೆ. ಜತೆಗೆ ಅನೇಕ ಅಕ್ರೆಡಿಟೇಶನ್‌ಗಳಿಗೆ ಮಲ್ಟಿಲ್ಯಾಟರಲ್ ಮ್ಯೂಚುವಲ್ ರೆಕಗ್ನಿಶನ್ ಅರೇಂಜ್‌ಮೆಂಟ್ಸ್ (MLAs / MRAs) ನ ಸಹಿದಾರನಾಗಿದೆ. NABH ಎಂಬುದು ಇಂಟರ್‌ನ್ಯಾಶನಲ್ ಸೊಸೈಟಿ ಫಾರ್ ಕ್ವಾಲಿಟಿ ಇನ್ ಹೆಲ್ತ್ ಕೇರ್‌ನ (lSQua) ಸಾಂಸ್ಥಿಕ ಸದಸ್ಯನಾಗಿದೆ. ಇದು ಏಷ್ಯನ್ ಸೊಸೈಟಿ ಫಾರ್ ಕ್ವಾಲಿಟಿ ಇನ್ ಹೆಲ್ತ್‌ಕೇರ್‌ನ (ASQua) ಸದಸ್ಯನಾಗಿದೆ ಹಾಗೂ ಆಡಳಿತ ಮಂಡಳಿಯಲ್ಲೂ ಸ್ಥಾನ ಹೊಂದಿದೆ.


    ಈ ಎಲ್ಲಾ ಅಂತಾರಾಷ್ಟ್ರೀಯ ಸಹಯೋಗಗಳ ಅರ್ಥವೇನೆಂದರೆ, ಭಾರತೀಯ ಗುಣಮಟ್ಟ ಮಾನದಂಡಗಳು ಸದಾ ಜಾಗತಿಕ ಮಾನದಂಡಗಳಿಗೆ ಜತೆಯಾಗಿವೆ, ಭಾರತೀಯ ಉದ್ಯಮಗಳು ಜಾಗತಿಕ ಸಂಸ್ಥೆಗಳೊಂದಿಗೆ ಸ್ಪರ್ಧಿಸಲು ಸಮರ್ಥವಾಗಿವೆ.


    QCI ನ ಝೀರೋ ಎಫೆಕ್ಟ್ ಝೀರೋ ಡಿಫೆಕ್ಟ್ (ZED) ಪ್ರಮಾಣೀಕರಣ ಕಾರ್ಯಕ್ರಮವು MSME ಕ್ಷೇತ್ರಕ್ಕೆ ಈ ಕಲಿಕೆಗಳನ್ನು ಭಟ್ಟಿ ಇಳಿಸುತ್ತದೆ. ONDC ನ ಜತೆಗೂಡಿ ಇದು, ದೊಡ್ಡ, ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಪರಿಣಾಮಕಾರಿಯಾಗಿ ಸ್ಪರ್ಧಿಸಲು ಸಣ್ಣ ಉದ್ಯಮಗಳಿಗೆ ಸುಲಭವಾಗುವಂತಹ ವ್ಯವಸ್ಥೆಯನ್ನು ರಚಿಸಿದೆ.


    ಉಪಸಂಹಾರ
    ಭಾರತವು ವಿಶ್ವದಲ್ಲೇ ಮೂರನೇ ಅತಿದೊಡ್ಡ ಸ್ಟಾರ್ಟಪ್ ವ್ಯವಸ್ಥೆಯನ್ನು ಹೊಂದಿದೆ ಮತ್ತು ಈಗಾಗಲೇ ಒಟ್ಟಾರೆ $450 ಬಿಲಿಯನ್ ಮೌಲ್ಯದ 57000 ಗೂ ಮಿಕ್ಕಿದ ಸ್ಟಾರ್ಟಪ್‌ಗಳನ್ನು ಬಿಡುಗಡೆಗೊಳಿಸಿದೆ ಅಥವಾ ಈ ಸ್ಟಾರ್ಟಪ್‌ಗಳು ದೇಶಾದ್ಯಂತ ವ್ಯಾಪಿಸಿವೆ ಹಾಗೂ ಮೆಟ್ರೋಗಳಿಗಷ್ಟೇ ಸೀಮಿತವಾಗಿಲ್ಲ ಎಂದರೆ ಇದಕ್ಕಿಂತ ಅದ್ಭುತ ಬೇರೆ ಬೇಕೇ?


    ಸಂಭ್ರಮಿಸಲು ನಮ್ಮ MSME ಗಳು ಇನ್ನೊಂದು ಕಾರಣವಾಗಿದೆ. FY22 ನಲ್ಲಿ ಭಾರತದ ಸರಕು ರಫ್ತು  $400 ಬಿಲಿಯನ್ ಗಡಿ ದಾಡಿದೆ. ನಮ್ಮ ರಫ್ತಿನ 40% ಭಾಗ ಬಂದಿರುವುದೇ MSME ನಿಂದ.  ಅಷ್ಟೇ ಅಲ್ಲ, ನಮ್ಮ GDP ಯ 30% ಮತ್ತು ನಮ್ಮ ಒಟ್ಟಾರೆ ಉತ್ಪಾದನಾ ಹೊರಸುರಿಯ 45% ಇದರಿಂದಾಗಿದೆ. ಅವುಗಳು 114 ಮಿಲಿಯನ್ ಜನರಿಗೆ ಉದ್ಯೋಗಾವಕಾಶ ನೀಡಿವೆ. MSME ಗಳು ಕೂಡಾ ದೇಶಾದ್ಯಂತ ವ್ಯಾಪಿಸಿವೆ.


    ಇಂಡಿಯಾ ನಿಜವಾಗಿ ಬೆಳಗಲು, ಭಾರತೀಯ ಆಕಾಂಕ್ಷೆಗಳು ಗರಿಗೆದರಿದ್ದೇ ಕಾರಣವಾಗಿದೆ. ಪ್ರಗತಿಶೀಲ ಸರ್ಕಾರದ ನೀತಿಗಳ ನಡುವೆ, ಬಲಿಷ್ಠವಾದ ಗುಣಮಟ್ಟ ವ್ಯವಸ್ಥೆ ಮತ್ತು ನಿಯಂತ್ರಕ ಚೌಕಟ್ಟು ಜಾಗತಿಕ ಆರ್ಥಿಕತೆಗಳು ಭಾರತೀಯ ಆರ್ಥಿಕತೆಯನ್ನು ಸೂರೆಗೈಯದಂತೆ ರಕ್ಷಿಸಿವೆ, ಭಾರತವು ಗುಣವತ್ತಾ ಸೇ ಆತ್ಮನಿರ್ಭರತಾ ಸಾಧಿಸಲು ಇಂಡಿಯಾ ವೇದಿಕೆ ಸಿದ್ಧಮಾಡಿದೆ.

    First published: