• Home
  • »
  • News
  • »
  • business
  • »
  • Bounce Story: 1 ಬುಲೆಟ್​ನಿಂದ 6 ಸಾವಿರ ಎಲೆಕ್ಟ್ರಿಕ್​ ಬೈಕ್​, ಹಾಸನದ ಈ 3 ಯುವಕರ ಅಸಲಿ ಕಹಾನಿ ಇದು!

Bounce Story: 1 ಬುಲೆಟ್​ನಿಂದ 6 ಸಾವಿರ ಎಲೆಕ್ಟ್ರಿಕ್​ ಬೈಕ್​, ಹಾಸನದ ಈ 3 ಯುವಕರ ಅಸಲಿ ಕಹಾನಿ ಇದು!

ವರುಣ್,ವಿವೇಕಾನಂದ, ಅನಿಲ್​

ವರುಣ್,ವಿವೇಕಾನಂದ, ಅನಿಲ್​

ಈ ಮೂವರು ಮತ್ತೆ ಸೇರಿ ಬೌನ್ಸ್ ಶೇರ್ (Bounce)​ ಎಂಬ ದೊಡ್ಡ ಸ್ಟಾರ್ಟ್​ಅಪ್​ (Big Startups) ಶುರು ಮಾಡಿ ಹೆಸರು ಮಾಡುತ್ತಾರೆ ಎಂದು ಅವರಿಗೆ ಗೊತ್ತೇ ಇರಲಿಲ್ಲ ಅನ್ನಿಸುತ್ತೆ.

  • Share this:

ಮನಸ್ಸಿದ್ದರೇ ಮಾರ್ಗ. ಏನಾದರೂ ಸಾಧನೆ ಮಾಡಬೇಕು ಅಂತ ಛಲ ಇದ್ದರೇ ಸಾಕು, ಅದನ್ನು ಮಾಡಿ ಮುಗಿಸುವ ವರೆಗೂ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಇಂದು ನಾವು ಹೇಳುತ್ತಿರುವ ಈ ಹುಡುಗರು ಬಗ್ಗೆ ಕರ್ನಾಟಕ (Karnataka) ದ ಮಂದಿಗೆ ಗೊತ್ತಿರುತ್ತೆ. ಆ ಮೂವರು ಹುಡುಗರು ಚಿಕ್ಕವಯಸ್ಸಿನಿಂದಲೂ ಸ್ನೇಹಿತರು. ಓದು ಮುಗಿದ ಬಳಿಕ ಮೂವರು ಕಾರಣಾಂತರಗಳಿಂದ ದೂರಾಗಿದ್ದರು. ಅನಿಲ್​ ಜಿ , ವಿವೇಕಾನಂದ ಹಳ್ಳೆಕೆರೆ (Vivekananda Hallekere) ಹಾಗೂ ವರುಣ್​ ಅಗ್ನಿ (Varun Agni) ಮೂವರು ಬೆಸ್ಟ್​ ಫ್ರೆಂಡ್ಸ್​ . ಒಟ್ಟಿಗೆ ಕ್ರಿಕೆಟ್ (Cricket) ಆಡುತ್ತಾ ಬೆಳೆದವರು. ವರುಣ್​ ಅಗ್ನಿ ಅಮೆರಿಕಾ (America) ದಲ್ಲಿ ಮಾಸ್ಟರ್ಸ್​ ಮಾಡ್ತಾ ಇದ್ದರು. ಇತ್ತ ಅನಿಲ್​​​, ವಿವೇಕಾನಂದ ಬೆಂಗಳೂರಿನಲ್ಲೇ ಕೆಲಸ ಮಾಡಿಕೊಂಡಿದ್ದರು. ಈ ಮೂವರು ಮತ್ತೆ ಸೇರಿ ಬೌನ್ಸ್ ಶೇರ್​ (Bounce)​ ಎಂಬ ದೊಡ್ಡ ಸ್ಟಾರ್ಟ್​ಅಪ್​ (Big Startups) ಶುರು ಮಾಡಿ ಹೆಸರು (Name) ಮಾಡುತ್ತಾರೆ ಎಂದು ಅವರಿಗೆ ಗೊತ್ತೇ ಇರಲಿಲ್ಲ ಅನ್ನಿಸುತ್ತೆ.


ಬೌನ್ಸ್​ಗೂ ಮುನ್ನ ಮಾಡಿದ್ದು ವೀಕೆಡ್​ ರೈಡ್​!


ವರುಣ್​ ಅಗ್ನಿ ಫಾರಿನ್​ನಲ್ಲಿ ಸೆಟಲ್​ ಆಗಿದ್ದರು. ಇತ್ತ ಬೆಂಗಳೂರಿನಲ್ಲಿ ಅನಿಲ್ ಜಿ​ ಹಾಗೂ ವಿವೇಕಾನಂದ ಇಬ್ಬರಲ್ಲಿ ಒಬ್ಬರು ರಾಯಲ್​ ಎನ್​ಫೀಲ್ಡ್​ ಬೈಕ್​ ಕೊಂಡುಕೊಳ್ಳುವ ಆಸೆಯಾಗಿತ್ತು. ಇಂದು 8 ರಿಂದ 9 ವರ್ಷಗಳ ಹಿಂದೆ ನಡೆದ ಘಟನೆ. ಹೀಗೆ ಬೈಕ್​ ಬುಕ್​ ಮಾಡುವಾಗ ಬುಲೆಟ್​ ಬೈಕ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇತ್ತು. ಬೈಕ್​ ಬುಕ್ ಮಾಡಿ ಡೆಲಿವರಿಯಾಗೋದಕ್ಕೆ 6 ಕ್ಕಿಂತ ಹೆಚ್ಚು ತಿಂಗಳು ಕಾಯುವ ಪರಿಸ್ಥಿತಿ ಇತ್ತು. ಆಗ ವರುಣ್ ಅಗ್ನಿ ಅಮೆರಿಕಾದಿಂದ ಭಾರತಕ್ಕೆ ವಾಪಸ್​ ಆಗಿದ್ದರು. ಬುಲೆಟ್ ಬೈಕ್​ ತೆಗೆದುಕೊಳ್ಳಲು ಅನಿಲ್​ ಜಿ ​ ಹಾಗೂ ವಿವೇಕಾನಂದ ಸ್ಥಿತಿ ಕಂಡ ವರುಣ್​ಗೆ ಒಂದು ಐಡಿಯಾ ಬಂದಿತ್ತು. ಅದುವೆ ವೀಕೆಡ್​ ರೈಡ್​.


ವಿಕೆಡ್​ ರೈಡ್​ ಶುರು ಹಿಂದಿದೆ ರೋಚಕ ಕಹಾನಿ!


ಹೌದು, ವೀಕೆಡ್ ರೈಡ್ ಶುರು ಮಾಡುವ ಹಿಂದಿರುವ ಸತ್ಯ ಇದು. ಎಲ್ಲರಿಗೂ ಕಾಸ್ಟ್ಲಿ ಬೈಕ್​ನಲ್ಲಿ ಓಡಾಡುವ ಆಸೆ ಇರುತ್ತೆ. ಆದರೆ, ಒಮ್ಮೆ ಓಡಿಸಿ ಆಸೆ ಪಡಲು ಅಷ್ಟೊಂದು ದುಡ್ಡು ಯಾರು ಖರ್ಚು ಮಾಡುತ್ತಾರೆ. ಜೊತೆಗೆ ಸ್ನೇಹಿತರು ಕೂಡ ಬುಲೆಟ್​ ಬೈಕ್​ ಕೊಂಡುಕೊಳ್ಳಲು ಕಷ್ಟಪಡುತ್ತಿದ್ದರು. ಈ ಸಮಯದಲ್ಲಿ ಮೂವರು ಸ್ನೇಹಿತರು ವಿಕೆಡ್ ರೈಡ್ ಶುರು ಮಾಡಿದರು. ಈ ವಿಕೆಡ್​ ರೈಡ್​ನಲ್ಲಿ ಕಾಸ್ಟ್ಲಿ ಬೈಕ್​ನ ಬಾಡಿಗೆ ಪಡೆಯಬಹುದು. ಬುಲೆಟ್ ಬೈಕ್​ಗಳಿಂದ ಹಿಡಿದು ಕಾಸ್ಟ್ಲಿ ಬೈಕ್​ಗಳನ್ನು ಖರೀದಿಸಿ ಅದನ್ನು ಬಾಡಿಗೆ ಬಿಡಲು ಶುರು ಮಾಡಿದರು. ವಿಕೆಡ್ ರೈಡ್​ ಸಿಕ್ಕಾಪಟ್ಟೆ ಕ್ಲಿಕ್​ ಆಗಿತ್ತು.


ಇದನ್ನೂ ಓದಿ: ಕಾರ್ಪೊರೇಟ್​​ ಕೆಲ್ಸ ಬಿಟ್ಟು, ಲಕ್ಷ ಲಕ್ಷ ದುಡಿಯುತ್ತಿದ್ದಾರೆ ಬೆಂಗಳೂರು ಹುಡುಗಿ!


ಟ್ರಾಫಿಕ್​ ಸಮಸ್ಯೆಗಾಗಿ ತಂದಿದ್ದೇ ಬೌನ್ಸ್!


ಈ ವಿಕೆಡ್​ ರೈಡ್ ಚೆನ್ನಾಗಿಯೇ ನಡೀತ್ತಿತ್ತು. ಈ ಸಮಯದಲ್ಲಿ ಬೆಂಗಳೂರಿನಲ್ಲಿ ಟ್ರಾಫಿಕ್​ ಸಮಸ್ಯೆ ಹೆಚ್ಚಾಯ್ತು. ಆಗ ಮೂವರು ಸ್ನೇಹಿತರು ಮತ್ತೊಂದು ಪ್ಲ್ಯಾನ್ ಮಾಡಿದರು. ಸಿಟಿ ಟ್ರಾಫಿಕ್​ನಲ್ಲಿ ಓಡಾಡಲು ಮೊಪೆಡ್​ಗಳನ್ನು ಬಾಡಿಗೆ ಬಿಡುವ ಬಗ್ಗೆ ಆಲೋಚನೆ ಮಾಡಿದರು. ವೀಕೆಡ್​ ರೈಡ್​ ಜೊತೆಗೆ ಬೌನ್ಸ್ ಶೇರ್​ ಎಂಬ ಸ್ಟಾರ್ಟ್​ಅಪ್​ ಶುರು ಮಾಡಿದರು. ಬೌನ್ಸ್​ ಶೇರ್ ಯಾವ ಮಟ್ಟಕ್ಕೆ ಹೆಸರು ಮಾಡಿದೆ ಎಂಬುದನ್ನು ಈಗ ಹೇಳಬೇಕಿಲ್ಲ. ನಗರದ ಮೂಲೆ ಮೂಲೆಯಲ್ಲೂ ಬೌನ್ಸ್​ ಗಾಡಿಗಳು ಓಡಾಡುತ್ತಿವೆ. ಆದರೆ, ನಮ್ಮ ಜನರಿಗೆ ಒಳ್ಳೆಯದ್ದು ಕೊಟ್ಟರೆ ಸರಿಯಾಗಿ ಉಪಯೋಗಿಸಿಕೊಳ್ಳಲು ಬರುವುದಿಲ್ಲ. ಬೌನ್ಸ್ ಗಾಡಿಗಳಿಂದ ಪೆಟ್ರೋಲ್​ ಕದಿಯಲು ಆರಂಭಿಸಿದರು. ನಂತರ ಗಾಡಿಗಳ ಪಾರ್ಟ್ಸ್​ ಕೂಡ ಕದ್ದರು. ಬೌನ್ಸ್ ನ ಹೆಲ್ಮೆಟ್ ಗಳನ್ನು ಅನೇಕ ಕಡೆ ಕದ್ದವರಿಂದ ಜನರೇ ಹುಡುಕಿ ಇವರಿಗೆ ಮರಳಿಸಿದ ಉದಾಹರಣೆಗಳೂ ಸಾಕಷ್ಟಿವೆ.


ಇದನ್ನೂ ಓದಿ: ವಯಸ್ಸು 63, ಆದ್ರೆ ಇವರ ಟೆರೇಸ್ ಮೇಲಿನ ಕೈತೋಟ ಹೇಗಿದೆ ನೋಡಿ


ಪೆಟ್ರೋಲ್​ ಗಾಡಿ ಬಿಟ್ಟು ಎಲೆಕ್ಟ್ರಿಕ್ ಗಾಡಿ ತಂದ ಹುಡುಗುರು!


ನಮ್ಮ ಜನ ಯಾವಾಗ ಪೆಟ್ರೋಲ್​ ಗಾಡಿಗಳನ್ನು ಹಾಳು ಮಾಡಲು ಶುರು ಮಾಡಿದರೋ, ಆಗ ಈ ಮೂವರು ಎಲೆಕ್ಟ್ರಾನಿಕ್​ ಗಾಡಿಗಳನ್ನು ತಂದು ಬಾಡಿಗೆ ಬಿಟ್ಟರು. ಅಲ್ಲದೇ ದೀರ್ಘಕಾಲಕ್ಕೆ ಎಲೆಕ್ಟ್ರಿಕ್ ಗಾಡಿಗಳೇ ಬೆಸ್ಟ್ ಅನ್ನೋದನ್ನೂ ಇವ್ರು ಅರಿತುಕೊಂಡರು. ಬೌನ್ಸ್, ದೊಡ್ಡ ದೊಡ್ಡ ನಗರ ಪ್ರದೇಶಗಳಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಎಲ್ಲಿ ಬೇಕಾದರೂ ಬಿಟ್ಟು ಹೋಗುವಂತಹ ಸೇವೆ ನೀಡುತ್ತಿರುವ ಬೈಕ್‌ ಶೇರ್​ ಸೇವೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇವರು ಮಾರುಕಟ್ಟೆಗೆ ಎಲೆಕ್ಟ್ರಿಕ್​ ವಾಹನಗಳನ್ನು ಮಾರಾಟ ಮಾಡಲು ಶುರು ಮಾಡಿದ್ದಾರೆ. ಬೌನ್ಸ್ ಇನ್ಫಿನಿಟಿ ಹೆಸರಿನಲ್ಲಿ ಬೌನ್ಸ್ ಎಲೆಕ್ಟ್ರಿಕ್​ ವಾಹನ ಮಾರಾಟಕ್ಕೆ  ಲಭ್ಯವಿದೆ. ಹಾಸನ ಮೂಲದ ಈ ಯುವಕರ ಸಾಧನೆ ನಿಜಕ್ಕೂ ಮತ್ತೊಬ್ಬರಿಗೆ ಸ್ಫೂರ್ತಿಯಾಗುತ್ತೆ.


ವಾಹನವನ್ನು ಬಾಡಿಗೆಗೆ ನೀಡುವ ಸಿದ್ಧತೆಗಳು ಹೆಗಿತ್ತು ಗೊತ್ತಾ?


ಇಂಧನ ಚಾಲಿತ ವಾಹನವನ್ನು ಕೀ ರಹಿತ ವಾಹನ ಮಾಡುವುದು ಸುಲಭವಾಗಿರಲಿಲ್ಲ. ವಾಹನವನ್ನು ಟ್ರ್ಯಾಕ್ ಮಾಡಲು, ಅದರ ವೇಗ, ಪಾರ್ಕಿಂಗ್ ಸ್ಥಳ, ಇಂಜಿನ್ ಕಾರ್ಯಾಚರಣೆ ಎಲ್ಲದರ ಮಾಹಿತಿ ಲಭ್ಯವಾಗುವಂತಹ ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕಿತ್ತು. ಆ ಸಮಯದಲ್ಲಿ ಇಂಧನ ಚಾಲಿತ ವಾಹನದಲ್ಲಿ ಈ ತಂತ್ರಜ್ಞಾನ ಎಲ್ಲಿಯೂ ಇರಲಿಲ್ಲ. ಇಂಜಿನಿಯರ್ ಆಗಿರುವ ಪಾಲುದಾರರಾದ ವರುಣ್ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿದರು.


ಬೌನ್ಸ್ ಇನ್ಫಿನಿಟಿ ವಾಹನವನ್ನು ಭಾರತೀಯ ರಸ್ತೆಗಳು, ನಗರಗಳಲ್ಲಿ  ಬಳಕೆಯ ಪ್ರಮಾಣ, ಸಮಯವನ್ನು ಗಮನದಲ್ಲಿರಿಸಿಕೊಂಡು ತಯಾರಿಸಲಾಗಿದೆ. ಒಂದು ಅಧ್ಯಯನದ ಪ್ರಕಾರ, ಬೆಂಗಳೂರು ಸೇರಿದಂತೆ ಇತರ ಮೆಟ್ರೋಪಾಲಿಟನ್ ನಗರಗಳಲ್ಲಿ ಜನರು ದಿನವೊಂದಕ್ಕೆ ಸಂಚರಿಸುವುದು ಸರಾಸರಿ 15ರಿಂದ 20 ಕಿಮೀ ಮಾತ್ರ. ಬೌನ್ಸ್ ಭಾರತದ ರಸ್ತೆಗಳಿಗಾಗಿಯೇ ತಯಾರಾದ ವಾಹನ.


ಇದನ್ನೂ ಓದಿ: ಹಳೆಯ ವಾಹನಗಳನ್ನು ಇವಿಯಾಗಿ ಪರಿವರ್ತನೆ, ಇದು ಯುವ ಎಂಜಿನಿಯರ್‌ನ ಹೊಸ ಸಾಧನೆ!


ಅಲ್ಲದೆ, ನಗರ ಪ್ರದೇಶಗಳಲ್ಲಿ 30ರಿಂದ 40 ಕಿಮೀವರೆಗೆ ವೇಗದಲ್ಲಿ ಮಾತ್ರ ಸಂಚರಿಸಲು ಸಾಧ್ಯ. ಅದಕ್ಕೆ ತಕ್ಕಂತೆ ಬೌನ್ಸ್ ಇನ್ಫಿನಿಟಿ 65 ಕಿಮೀ ರೇಂಜ್ ನೀಡಲಿದೆ. ಜೊತೆಗೆ, 65 ಕಿಮೀ ವೇಗವಾಗಿ ಸಂಚರಿಸಲಿದೆ. ಇದರಲ್ಲಿ 1.5 ಕೆಡಬ್ಲ್ಯು ಮೋಟಾರ್, 2 ಕೆಡಬ್ಲ್ಯು ಬ್ಯಾಟರಿ ಇದೆ. ಇದರಲ್ಲಿ ಬದಲಿಸಬಹುದಾದ ಬ್ಯಾಟರಿ ಇರುವುದರಿಂದ ಜನರು ಅದರ ಚಾರ್ಜಿಂಗ್ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಹೀಗೆ ಬದಲಿಸಬಲ್ಲ ಬ್ಯಾಟರಿ ಇರುವ ಏಕೈಕ ಇ-ಸ್ಕೂಟರ್ ಬೌನ್ಸ್ ಇನ್ಫಿನಿಟಿ. ಕನ್ನಡದ ಹುಡುಗರ ಈ ಗ್ಲೋಬಲ್ ಸಾಧನೆ ಎಲ್ಲರೂ ಹೆಮ್ಮೆ ಪಡುವಂಥಾದ್ದು ಅನ್ನೋದು ಮಾತ್ರ ಸುಳ್ಳಲ್ಲ.

Published by:ವಾಸುದೇವ್ ಎಂ
First published: