Success Story: ಸೈಕಲ್‌ನಲ್ಲಿ ಮಸಾಲೆ ಮಾರುತ್ತಿದ್ದ ವ್ಯಕ್ತಿ ಈಗ 154 ಕೋಟಿ ಮೌಲ್ಯದ ಕಂಪನಿಯ ಒಡೆಯ! ಗೆಲುವಿನ ಕತೆ ಓದಿ

ಬಾದ್‌ಶಾ ಮಸಾಲಾ ಆರು ವಿಭಾಗಗಳಲ್ಲಿ ಕಾರ್ಯಾಚರಿಸುತ್ತಿದ್ದು, ಸುಮಾರು 60 ದಾಸ್ರಾನು ಸಂಗ್ರಹ ಘಟಕಗಳನ್ನು ಹೊಂದಿದೆ. ಬಾದ್‌ಶಾ ಮಸಾಲಾ ಕಂಪನಿಯು ಪ್ರತಿ ತಿಂಗಳೂ 400-500 ಟನ್ ಮಸಾಲೆ ಪದಾರ್ಥಗಳನ್ನು ಉತ್ಪಾದಿಸುತ್ತಿದೆ.

 ಹೇಮಂತ್ ಝವೇರಿ

ಹೇಮಂತ್ ಝವೇರಿ

  • Share this:
ಸ್ವಾಧ ಸುಗಂಧದ ರಾಜ, ಬಾದ್‌ಶಾ (Badshah Masala) ಮಸಾಲಾ" ಈ ಮಾತು ನಿಮ್ಮ ಕಿವಿಗೆ ಚಿರಪರಿಚಿತವೆನ್ನಿಸುತ್ತಿದೆಯೆ? ಹಾಗಾದರೆ, ಈ ಘೋಷವಾಕ್ಯದ ಹಿಂದೆ ಅಡಗಿರುವ ಯಶೋಗಾಥೆಯನ್ನು ನೀವೆಲ್ಲ ಅರಿಯಲೇಬೇಕಿದೆ!!! ಮೊದಲಿಗೆ ಸೈಕಲ್‌ನಲ್ಲಿ(Bicycle) ಮಸಾಲೆ (Spices) ಪದಾರ್ಥಗಳನ್ನು ಮಾರುತ್ತಿದ್ದ ವ್ಯಕ್ತಿಯೊಬ್ಬ 154 ಕೋಟಿ ಮೌಲ್ಯದ ಮಸಾಲೆ ಉತ್ಪನ್ನಗಳ ಕಂಪನಿಯ(Products Company) ಒಡೆಯನಾಗಿ ಬೆಳೆದ ರೋಚಕಗಾಥೆಯದು.

ಜಾಹೀರಾತಿನ ನೆನಪು ಮತ್ತೆ ಮೆಲುಕು
ಟಿವಿ ಜಾಹೀರಾತಿನಲ್ಲಿ ಪ್ರಸಾರವಾಗುವ ಘೋಷವಾಕ್ಯ ಹಾಗೂ ಅದರಲ್ಲಿ ಪ್ರದರ್ಶನಗೊಳ್ಳುವ ಅಹಾರ ಖಾದ್ಯಗಳನ್ನು ನೋಡುತ್ತಿದ್ದಂತೆಯೇ ವೀಕ್ಷಕರ ಬಾಯಲ್ಲಿ ನೀರೂರುತ್ತದೆ. ಇತ್ತೀಚಿಗೆ ಇನ್‌ಸ್ಟಾಗ್ರಾಮ್ ಬಳಕೆದಾರರು ಈ ಜಾಹೀರಾತನ್ನು ಮತ್ತಷ್ಟು ಸುಧಾರಿಸಿದ್ದು, ಹಲವಾರು ಮಂದಿಯು 1990ರ ಅವಧಿಯಲ್ಲಿ ರೇಡಿಯೊ, ಟಿವಿಗಳಲ್ಲಿ ಪ್ರಸಾರವಾಗುತ್ತಿದ್ದ ಈ ಜಾಹೀರಾತಿನ ನೆನಪನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿದ್ದಾರೆ.

ಈ ಬ್ರ್ಯಾಂಡ್ ತಾನು ಪ್ರಾರಂಭವಾದ 1958ನೇ ಇಸವಿಯಿಂದಲೇ ಗ್ರಾಹಕರ ಹೃದಯ ಗೆದ್ದಿದ್ದು, ಹೀಗಿದ್ದೂ ಭಾರತದಲ್ಲಿನ ಈ ಪುರಾತನ ಮಸಾಲೆ ಪದಾರ್ಥಗಳ ಕಂಪನಿಯ ಹಿಂದಿರುವ ವ್ಯಕ್ತಿಯ ಬಗ್ಗೆ ಸಾಕಷ್ಟು ಮಂದಿಗೆ ತಿಳಿದೇ ಇಲ್ಲ. ಈ ಕುರಿತು ಬಾದ್‌ಶಾ ಮಸಾಲಾ ಕಂಪನಿಯ ಎರಡನೆ ತಲೆಮಾರಿನ ಉದ್ಯಮಿ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಹೇಮಂತ್ ಝವೇರಿಯೊಂದಿಗೆ ಎಸ್‌ಎಂಬಿಸ್ಟೋರಿ ಸುದ್ದಿ ಸಂಸ್ಥೆ ಸಂವಾದ ನಡೆಸಿದೆ.

ಆ ಸಂವಾದದಲ್ಲಿ ಭಾರತದ ಉತ್ಪಾದನೆ ಬ್ರ್ಯಾಂಡ್ ಆಗಿರುವ ಬಾದ್‌ಶಾ ಮಸಾಲಾ ಕಂಪನಿಯ ಪರಂಪರೆ ಹಾಗೂ ಅದು ಹೇಗೆ ಹಲವಾರು ವರ್ಷಗಳ ನಂತರವೂ ಪ್ರಸ್ತುತವಾಗುಳಿದು, 2020-21ನೇ ಆರ್ಥಿಕ ವರ್ಷದಲ್ಲಿ ಹೇಗೆ ₹ 154 ಕೋಟಿ ವ್ಯವಹಾರ ನಡೆಸಿದ ಉದ್ಯಮವಾಗಿ ಬೆಳೆದು ನಿಂತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಾಗಿದೆ.

ಇದನ್ನೂ ಓದಿ: Ranjith Ramachandran: ವಾಚ್​ಮ್ಯಾನ್​ ಆಗಿದ್ದ ಬಡ ಯುವಕ ರಂಜಿತ್ ರಾಮಚಂದ್ರನ್ ಈಗ ಐಐಎಂ ಪ್ರೊಫೆಸರ್​!

ಮಸಾಲೆ ಟೀ ಮಾರಾಟ
ಬಾದ್‌ಶಾ ಮಸಾಲೆಯ ಕತೆಯು 1958ನೇ ಇಸವಿಗಿಂತಲೂ ಹಿಂದೆ ಹೋಗಿ ನಿಲ್ಲಲಿದ್ದು, ಆಗ ಜವಾಹರ್‌ಲಾಲ್ ಜಮ್ನಾದಾಸ್ ಝವೇರಿ ಮುಂಬೈನಲ್ಲಿ ಕೇವಲ ಗರಂ ಮಸಾಲಾ, ಮಸಾಲೆ ಟೀ ಮಾರಾಟ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ಈ ಮಸಾಲೆಯು ಶೀಘ್ರವಾಗಿ ಜನಪ್ರಿಯಗೊಂಡಿತಲ್ಲದೆ, ಅವರು ತಮ್ಮ ಉತ್ಪನ್ನಗಳ ಜಾಹೀರಾತಿನಲ್ಲಿ "ಗುಣಮಟ್ಟದ ಉತ್ಪನ್ನ ಯಶಸ್ಸು ಗಳಿಸಲು ದೀರ್ಘಕಾಲ ತೆಗೆದುಕೊಳ್ಳುವುದಿಲ್ಲ" ಎಂದೂ ಸೇರಿಸಿದರು.

ಇದಾದ ನಂತರ ಜವಾಹರಲಾಲ್ ಜಮ್ನಾದಾಸ್ ಮುಂಬೈನ ಉಪನಗರವಾದ ಘಟ್ಕೊಪಾರ್‌ನಲ್ಲಿ ಸಣ್ಣದೊಂದು ಘಟಕವನ್ನು ಶುರು ಮಾಡಿದರು. ಈ ಘಟಕವು ಗುಜರಾತ್‌ನ ಉಂಬರ್‌ಗಾಂವ್‌ನಲ್ಲಿ 6000 ಚದರ ಅಡಿ ವಿಸ್ತಾರದ ದೊಡ್ಡ ಘಟಕವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಇದಾದ ನಂತರ ಕಂಪನಿಯು ಪಾವ್ ಭಾಜಿ ಮಸಾಲಾ, ಚಾಟ್ ಮಸಾಲಾ ಹಾಗೂ ಚನ್ನಾ ಮಸಾಲಾ ಕೊಡುಗೆಗಳನ್ನು ವಿಸ್ತರಿಸಿತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಮಾರಾಟ
1996ರವರೆಗೆ ಜವಾಹರಲಾಲ್ ಜಮ್ನಾದಾಸ್ ಈ ವ್ಯವಹಾರವನ್ನು ಯಶಸ್ವಿಯಾಗಿ ಮುನ್ನಡೆಸಿದರಾದರೂ ಅಕಾಲಿಕವಾಗಿ ನಿಧನಗೊಂಡರು. ಇದಾದ ನಂತರ ಅವರ ಪುತ್ರ ಹೇಮಂತ್ ಕಂಪನಿಯ ಸಾರಥ್ಯ ವಹಿಸಿಕೊಂಡರು. ಹೇಮಂತ್ ಕಂಪನಿಯ ಸಾರಥ್ಯವನ್ನು ವಹಿಸಿಕೊಂಡ ನಂತರ ಕಂಪನಿಯು ಜನರ ಬಳಿಗೆ ತಲುಪುವಂಥ ದಿಟ್ಟ ಹೆಜ್ಜೆಗಳನ್ನಿಟ್ಟರು.

ಅವರು ದೇಶಾದ್ಯಂತ ಕಂಪನಿಯ ಉತ್ಪನ್ಬಗಳು ತಲುಪುವಂತೆ ವಿಸ್ತರಣಾ ಕ್ರಮಗಳನ್ನು ಕೈಗೊಂಡಿದ್ದು, ಇಂದು ಬಾದ್‌ಶಾ ಮಸಾಲಾ 20ಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗುತ್ತಿದೆ. 450 ವಿತರಕರ ವಿತರಣಾ ಜಾಲದೊಂದಿಗೆ ಈ ಬ್ರ್ಯಾಂಡ್ ಸೂಪರ್ ಮಾರ್ಕೆಟ್‌ಗಳು, ಸ್ಥಳೀಯ ದಿನಸಿ ಅಂಗಡಿಗಳು ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಕಪಾಟಿನಲ್ಲೂ ಪ್ರಮುಖ ಜಾಗ ಗಿಟ್ಟಿಸಿದೆ.

ಇದನ್ನೂ ಓದಿ: ಏಕಾಂಗಿಯಾಗಿ 60 ಅಡಿ ಆಳದ ಬಾವಿ ತೋಡಿ ಜನರ ದಾಹ ನೀಗಿಸಿದ 56 ವರ್ಷದ ಧೀರ ‌ಮಹಿಳೆ!

ಬಾದ್‌ಶಾ ಮಸಾಲಾ ಆರು ವಿಭಾಗಗಳಲ್ಲಿ ಕಾರ್ಯಾಚರಿಸುತ್ತಿದ್ದು, ಸುಮಾರು 60 ದಾಸ್ರಾನು ಸಂಗ್ರಹ ಘಟಕಗಳನ್ನು ಹೊಂದಿದೆ. ಬಾದ್‌ಶಾ ಮಸಾಲಾ ಕಂಪನಿಯು ಪ್ರತಿ ತಿಂಗಳೂ 400-500 ಟನ್ ಮಸಾಲೆ ಪದಾರ್ಥಗಳನ್ನು ಉತ್ಪಾದಿಸುತ್ತಿದೆ. ತಮ್ಮಂತೆಯೇ ಮಸಾಲೆ ಪದಾರ್ಥ ತಯಾರಿಕಾ ಪ್ರತಿಸ್ಪರ್ಧಿಗಳಾಗಿರುವ ವಸಂತ್ ಮಸಾಲಾ, ಪುಷ್ಪ್ ಮಸಾಲಾ, ಎಂಡಿಎಚ್ ಮಸಾಲಾ, ಎವರೆಸ್ಟ್ ಫುಡ್ ಪ್ರಾಡಕ್ಟ್ಸ್ ಪ್ರೈ.ಲಿ, ಮದರ್ ಸ್ಪೈಸ್ ಲಿಮಿಟೆಡ್‌ನಂತಹ ಕಂಪನಿಗಳ ತುರುಸಿನ ಪೈಪೋಟಿಯ ನಡುವೆಯೂ ಮಾರುಕಟ್ಟೆಯ ಶೇ. 35ರಷ್ಟು ಪ್ರಮಾಣವನ್ನು ಬಾದ್‌ಶಾ ಮಸಾಲಾ ಆಕ್ರಮಿಸಿಕೊಂಡಿದೆ ಎನ್ನುತ್ತಾರೆ ಹೇಮಂತ್. ಹೀಗಿದ್ದೂ ಅವರು ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಭಾರಿ ಮಾರಾಟ ಇಳಿಕೆಯನ್ನು ಎದುರಿಸಿದ್ದರು.
Published by:vanithasanjevani vanithasanjevani
First published: