Frog and Snake: ಹಾವು, ಕಪ್ಪೆಗಳಿಂದ ಆರ್ಥಿಕತೆಗೆ 1.2 ಲಕ್ಷ ಕೋಟಿ ರೂ. ನಷ್ಟವಂತೆ! ಶಾಕ್ ಆಗ್ಬೇಡಿ ವಿಷಯ ತಿಳ್ಕೊಳ್ಳಿ

ಸೊಳ್ಳೆ, ಜಿರಳೆ, ನೊಣದಂತಹ ಕೆಲವು ಪ್ರಾಣಿಗಳು ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ಉಂಟುಮಾಡಿದರೆ, ಈ ಹಾವಿನಂತಹ ಕೆಲ ಜೀವಿಗಳು ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತವೆ. ಆದರೆ ಇನ್ನೂ ಕೆಲ ಪ್ರಾಣಿಗಳಿವೆ. ಇವು ವಿಶ್ವದ ಆರ್ಥಿಕತೆಗೆ ಹೊಡೆತ ನೀಡುವಂತಹ ಪ್ರಾಣಿಗಳು. ಪಾಪ.. ಈ ಪ್ರಾಣಿಗಳಿಂದ ಹೇಗೆ ವಿಶ್ವದ ಆರ್ಥಿಕತೆಗೆ ವೆಚ್ಚ ಉಂಟಾಗುತ್ತದೆ ಅಂತೀರಾ ಇಲ್ಲಿದೆ ಓದಿ..

ಅಮೇರಿಕನ್ ಬುಲ್‌ಫ್ರಾಗ್ ಮತ್ತು ಬ್ರೌನ್ ಟ್ರೀ ಸ್ನೇಕ್

ಅಮೇರಿಕನ್ ಬುಲ್‌ಫ್ರಾಗ್ ಮತ್ತು ಬ್ರೌನ್ ಟ್ರೀ ಸ್ನೇಕ್

  • Share this:
ಕೆಲವು ಪ್ರಾಣಿಗಳು (Animals) ನೋಡಲು ಚಿಕ್ಕದಾಗಿದ್ದರೂ ಅವುಗಳ ಉಪಟಳ ಹೆಚ್ಚಾಗಿರುತ್ತದೆ. ಸೊಳ್ಳೆ, ಜಿರಳೆ, ನೊಣದಂತಹ ಕೆಲವು ಪ್ರಾಣಿಗಳು ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ಉಂಟುಮಾಡಿದರೆ, ಈ ಹಾವಿನಂತಹ (Snake) ಕೆಲ ಜೀವಿಗಳು ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತವೆ. ಆದರೆ ಇನ್ನೂ ಕೆಲ ಪ್ರಾಣಿಗಳಿವೆ. ಇವು ವಿಶ್ವದ ಆರ್ಥಿಕತೆಗೆ ಹೊಡೆತ ನೀಡುವಂತಹ ಪ್ರಾಣಿಗಳು. ಪಾಪ.. ಈ ಪ್ರಾಣಿಗಳಿಂದ ಹೇಗೆ ವಿಶ್ವದ ಆರ್ಥಿಕತೆಗೆ ವೆಚ್ಚ (cost to the world economy) ಉಂಟಾಗುತ್ತದೆ ಅಂತೀರಾ. ಇದು ಅಷ್ಟಿಷ್ಟು ವೆಚ್ಚಲ್ಲ ಬರೋಬ್ಬರಿ 1.2 ಲಕ್ಷ ಕೋಟಿ ರೂಪಾಯಿ. ಹೌದು ಅಮೇರಿಕನ್ ಬುಲ್‌ಫ್ರಾಗ್ (American bullfrog) ಮತ್ತು ಬ್ರೌನ್ ಟ್ರೀ ಸ್ನೇಕ್ (Brown Tree Snake) ಎಂಬ ಎರಡು ಆಕ್ರಮಣಕಾರಿ ಪ್ರಭೇದಗಳಿಂದ ಇಷ್ಟೇಲ್ಲಾ ವೆಚ್ಚವಾಗುತ್ತಿದೆ.

1986 ರಿಂದ 2020 ರವರೆಗೆ ಬೆಳೆ ಹಾನಿ, ವಿದ್ಯುತ್ ತಂತಿ ಸ್ಥಗಿತ ಹೀಗೆ ಹಲವಾರು ಸಮಸ್ಯೆಗಳನ್ನು ಉಂಟುಮಾಡುವ ಮೂಲಕ ಜಗತ್ತಿಗೆ ಅಂದಾಜು 1.2 ಲಕ್ಷ ಕೋಟಿ ರೂಪಾಯಿ ( $ 16 ಬಿಲಿಯನ್ ) ನಷ್ಟವನ್ನು ಉಂಟು ಮಾಡಿವೆ ಈ ಎರಡು ಜೀವಿಗಳು! ಈ ಬಗ್ಗೆ ಗುರುವಾರ ಇಸ್ಮಾಯೆಲ್ ಸೊಟೊ ಎಂಬ ಪಿಹೆಚ್ಡಿ ಲೇಖಕ ಪ್ರಕಟಿಸಿದ ಅಧ್ಯಯನವೊಂದರಿಂದ ತಿಳಿದುಬಂದಿದೆ.

ಅಮೇರಿಕನ್ ಬುಲ್‌ಫ್ರಾಗ್
ವೈಜ್ಞಾನಿಕ ವರದಿಗಳಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಲಿಥೋಬೇಟ್ಸ್ ಕ್ಯಾಟೆಸ್ಬಿಯಾನಸ್ ಎಂದು ಕರೆಯಲ್ಪಡುವ ಕಂದು-ಹಸಿರು ಕಪ್ಪೆ ಯುರೋಪಿನಲ್ಲಿ ಹೆಚ್ಚು ಕಂಡುಬರುತ್ತದೆ ಮತ್ತು ಇದು ಸುಮಾರು 2 ಪೌಂಡುಗಳಷ್ಟು (0.9 ಕಿಲೋಗಳು) ಹೆಚ್ಚು ತೂಕವನ್ನು ಹೊಂದಿದೆ. ಪೂರ್ವ ಉತ್ತರ ಅಮೆರಿಕದ ಸ್ಥಳೀಯ ಕಪ್ಪೆಯಾಗಿರುವ ಇದು, ಸಾಮಾನ್ಯವಾಗಿ ಜೌಗು ಪ್ರದೇಶಗಳು, ಕೊಳಗಳು ಮತ್ತು ಸರೋವರಗಳಂತಹ ದೊಡ್ಡ ಶಾಶ್ವತ ಜಲಮೂಲಗಳಲ್ಲಿ ವಾಸಿಸುತ್ತದೆ.

ಅಮೇರಿಕನ್ ಬುಲ್‌ಫ್ರಾಗ್


ಈ ಕಪ್ಪೆಗಳು 1 ಮೀಟರ್ ಜಿಗಿಯುತ್ತವೆ, ಮತ್ತು 6 ಅಡಿ ದೂರವನ್ನು ಸುಲಭವಾಗಿ ನೆಗೆಯಬಲ್ಲವು. ಹೆಣ್ಣು ಕಪ್ಪೆಗಳನ್ನು ಆಕರ್ಷಿಸಲು ಮತ್ತು ತಮ್ಮ ಪ್ರದೇಶಗಳನ್ನು ಸ್ಥಾಪಿಸಲು ಗಂಡು ಕಪ್ಪೆಗಳು ಜೋರಾಗಿ ಕೂಗುತ್ತವೆ. ಜೊತೆಗೆ ತಮ್ಮ ಜಾಗವನ್ನು ರಕ್ಷಿಸುವಾಗ ಅವು ತುಂಬಾ ಆಕ್ರಮಣಕಾರಿಯಾಗಿರುತ್ತವೆ. ಹೊಲಗಳಲ್ಲಿ ಬೆಳೆಹಾನಿಯಂತಹ ಕೆಲಸವನ್ನು ಸಹ ಇವು ಮಾಡುತ್ತವೆ.

ಬ್ರೌನ್ ಟ್ರೀ ಸ್ನೇಕ್
ಇನ್ನೂ ಬ್ರೌನ್ ಟ್ರೀ ಸ್ನೇಕ್, ಅಥವಾ ಬೋಯಿಗಾ ಇರ್ಗ್ಯುಲಾರಿಸ್, ಗುವಾಮ್ ಮತ್ತು ಮರಿಯಾನಾ ದ್ವೀಪಗಳು ಸೇರಿದಂತೆ ಪೆಸಿಫಿಕ್ ದ್ವೀಪಗಳಲ್ಲಿ ಕಂಡು ಬರುವಂತಹ ಹಾವಿನ ಜಾತಿ. 2ನೇ ಮಹಾಯುದ್ಧದ ಸಂದರ್ಭದಲ್ಲಿ ಯುಎಸ್ ಪಡೆಗಳು ಈ ಹಾವಿನ ಜಾತಿಯನ್ನು ಇಲ್ಲಿ ಪರಿಚಯಿಸಿದರು ಎಂದು ಸಂಶೋಧಕ ಇಸ್ಮಾಯೆಲ್ ಸೊಟೊ ತಿಳಿಸಿದ್ದಾರೆ. ಕೋರೆಹಲ್ಲುಳ್ಳ ಕೊಲುಬ್ರಿಡ್ ಹಾವು ಗುವಾಮ್‌ನಲ್ಲಿನ ಬಹುಪಾಲು ಸ್ಥಳೀಯ ಪಕ್ಷಿ ಸಂಕುಲವನ್ನು ನಿರ್ನಾಮ ಮಾಡಲು ಕಾರಣವಾಗಿರುವ ಆಕ್ರಮಣಕಾರಿ ಜಾತಿಗೆ ಕುಖ್ಯಾತವಾಗಿದೆ.

ಇದನ್ನೂ ಓದಿ: Elephant: ಆನೆಯ ಸೊಂಡಿಲಿನಲ್ಲಿ ಎಷ್ಟು ಶಕ್ತಿ ಇದೆ ಗೊತ್ತಾ? ಇದಕ್ಕೆ ಪುಷ್ಟಿ ನೀಡೋದು ಸ್ನಾಯು ಮತ್ತು ಚರ್ಮವಂತೆ!

ಈ ಪ್ರದೇಶದಲ್ಲಿ ಹಾವುಗಳ ಸಂತಾನೋತ್ಪತ್ತಿ ಹೆಚ್ಚಾಗಿ ಎಲ್ಲೆಂದರಲ್ಲಿ ಬ್ರೌನ್ ಟ್ರೀ ಸ್ನೇಕ್ ಕಾಣಿಸಿಕೊಳ್ಳಲು ಪ್ರಾರಂಭವಾದವು. ಹಾವುಗಳು ಹೇರಳವಾಗಿದ್ದು, ವಿದ್ಯುತ್ ಉಪಕರಣಗಳ ಮೇಲೆ ಹರಿದಾಡುವ ಮೂಲಕ ವಿದ್ಯುತ್ ಕಡಿತವನ್ನು ಉಂಟು ಮಾಡುತ್ತಿದ್ದವು ಎಂದು ಸೊಟೊ ಅವುಗಳಿಂದಾಗುತ್ತಿದ್ಧ ಉಪಟಳವನ್ನು ವಿವರಿಸಿದ್ದಾರೆ.

ಮತ್ತು ಬ್ರೌನ್ ಟ್ರೀ ಸ್ನೇಕ್


ಈ ಕಪ್ಪೆ ಮತ್ತು ಹಾವಿನಿಂದಾಗಿ ಹಲವು ರೀತಿಯಲ್ಲಿ ಆಕ್ರಮಣಗಳು ಸಂಭವಿಸಿದ ನಂತರ ಈ ಪ್ರಾಣಿಗಳ ಸಂಖ್ಯೆಯ ತಗ್ಗಿಸುವಿಕೆಗಾಗಿ ಪಾವತಿಸುವುದನ್ನು ತಪ್ಪಿಸಲು ಆಕ್ರಮಣಕಾರಿ ಪ್ರಭೇದಗಳ ಜಾಗತಿಕ ಸಾರಿಗೆಯನ್ನು ನಿಯಂತ್ರಿಸುವ ಹೂಡಿಕೆಯ ಅಗತ್ಯವನ್ನು ಇದು ಸಂಕೇತಿಸುತ್ತದೆ ಎಂದು ಅಧ್ಯಯನದ ಪ್ರಮುಖ ಸಂಶೋಧಕರಾದ ಜೆಕ್ ಗಣರಾಜ್ಯದ ದಕ್ಷಿಣ ಬೊಹೆಮಿಯಾ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ಸೊಟೊ ಹೇಳಿದ್ದಾರೆ.

ಇದನ್ನೂ ಓದಿ:  Explained: ಆರ್ಥಿಕ ಹಿಂಜರಿತ ಉಂಟಾದರೆ ನಮಗೆ ಹೇಗೆ ತಿಳಿಯುತ್ತದೆ? ಇಲ್ಲಿದೆ ಉತ್ತರ

"ಇತ್ತೀಚಿನ ದಿನಗಳಲ್ಲಿ, ಸಾಕುಪ್ರಾಣಿ ವ್ಯಾಪಾರವು ಈ ಜಾತಿಗಳಿಗೆ ಮುಖ್ಯ ಮಾರ್ಗವಾಗಿದೆ, ವಿಶೇಷವಾಗಿ ಈಗ ಪ್ರತಿಯೊಬ್ಬರೂ ಅತ್ಯಂತ ವಿಲಕ್ಷಣ ಹಾವುಗಳನ್ನು ಸಾಕಲು ಬಯಸುತ್ತಾರೆ" ಎಂದು ಸೊಟೊ ರಾಯಿಟರ್ಸ್ಗೆ ತಿಳಿಸಿದರು. ಆಕ್ರಮಣಕಾರಿ ಜಾತಿಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಒಟ್ಟುಗೂಡಿಸುವ ಮೂಲಕ ಅಂಕಿಅಂಶಗಳನ್ನು ಇಲ್ಲಿ ಪಡೆಯಲಾಗಿದೆ.
Published by:Ashwini Prabhu
First published: