• Home
  • »
  • News
  • »
  • business
  • »
  • Free WiFi: ರೈಲ್ವೇ ಸ್ಟೇಷನ್​ಗಳಲ್ಲಿ ಇನ್ಮುಂದೆ ಉಚಿತ ವೈಫೈ ಸೇವೆ ಲಭ್ಯ! ರೈಲ್​​ಟೆಲ್ ಕಂಪನಿಯಿಂದ ಒಪ್ಪಂದ

Free WiFi: ರೈಲ್ವೇ ಸ್ಟೇಷನ್​ಗಳಲ್ಲಿ ಇನ್ಮುಂದೆ ಉಚಿತ ವೈಫೈ ಸೇವೆ ಲಭ್ಯ! ರೈಲ್​​ಟೆಲ್ ಕಂಪನಿಯಿಂದ ಒಪ್ಪಂದ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ದೇಶದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಒದಗಿಸಲು ಭಾರತೀಯ ರೈಲ್ವೇ ಇಲಾಖೆ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿರುವುದು ಎಲ್ಲರಿಗೂ ತಿಳಿದೇ ಇದೆ. ಇದರ ಭಾಗವಾಗಿ 6,100 ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯವನ್ನು ರೈಲ್ವೇ ಇಲಾಖೆ ತನ್ನ ಪ್ರಯಾಣಿಕರಿಗೆ ರೈಲ್‌ಟೆಲ್ ಮೂಲಕ ಒದಗಿಸುತ್ತಿದೆ.

ಮುಂದೆ ಓದಿ ...
  • Share this:

    ಭಾರತವು (India) ವಿಶ್ವದ ಅತಿದೊಡ್ಡ ರೈಲ್ವೆ ಜಾಲವನ್ನು ಹೊಂದಿದೆ. ಅತಿ ಹೆಚ್ಚು ಉದ್ಯೋಗ ಒದಗಿಸುವ ಕ್ಷೇತ್ರಗಳಲ್ಲಿಯೂ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ಹೆಚ್ಚಿನ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಉದ್ಯೋಗಗಳು (Jobs), ಶಿಕ್ಷಣ ಸಂಸ್ಥೆಗಳು ಮತ್ತು ಇತರ ಚಟುವಟಿಕೆಗಳಿಗೆ ಹೋಗುವ ಜನರಿಗೆ ರೈಲ್ವೇ ಮುಖ್ಯ ಬೆಂಬಲವಾಗಿದೆ. ಇದೀಗ ದೇಶದ ಎಲ್ಲಾ ರೈಲು ನಿಲ್ದಾಣಗಳಲ್ಲಿ (Railway Station) ಉಚಿತ ವೈಫೈ (Free WiFi) ಒದಗಿಸಲು ಭಾರತೀಯ ರೈಲ್ವೇ ಇಲಾಖೆ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿರುವುದು ಎಲ್ಲರಿಗೂ ತಿಳಿದೇ ಇದೆ. ಇದರ ಭಾಗವಾಗಿ 6,100 ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯವನ್ನು ರೈಲ್ವೇ ಇಲಾಖೆ ತನ್ನ ಪ್ರಯಾಣಿಕರಿಗೆ ರೈಲ್‌ಟೆಲ್ ಮೂಲಕ ಒದಗಿಸುತ್ತಿದೆ.


    ರೈಲಿನಲ್ಲಿ ಪ್ರಯಾಣ ಮಾಡುವುದು ಭಾರೀ ಅಗ್ಗದ ಬೆಲೆಯಲ್ಲಿ ಸುಧಾರಿಸಬಹುದಾಗಿದೆ. ಇದೀಗ ಪ್ರಯಾಣಿಕರಿಗಾಗಿ ಹೊಸ ಯೋಜನೆಯನ್ನು ಕೈಗೊಂಡಿದೆ. ಉಚಿತ ವೈಫೈ ಸೌಲಭ್ಯವನ್ನು ನೀಡುವ ನಿರ್ಧಾರವನ್ನು ಭಾರತೀಯ ರೈಲ್ವೇ ಇಲಾಖೆ ಕೈಗೊಂಡಿದೆ.


    ಹಣಗಳಿಕೆಗೆ ರೈಲ್‌ಟೆಲ್ ಹೊಸ ಒಪ್ಪಂದ


    ಪ್ರಸ್ತುತ ರೈಲ್ವೇ ಸಚಿವಾಲಯದ ಅತಿದೊಡ್ಡ ಟೆಲಿಕಾಂ ಮೂಲಸೌಕರ್ಯ ಪೂರೈಕೆದಾರರಲ್ಲಿ ಒಂದಾದ ರೈಲ್‌ಟೆಲ್ ಆದಾಯದ ಮೂಲವನ್ನಾಗಿ ಈ ಯೋಜನೆಯನ್ನು ಪರಿವರ್ತಿಸಲು ನಿರ್ಧರಿಸಿದೆ. ಜನವರಿ 3 ರಂದು ಭಾರತದಾದ್ಯಂತ 6,100 ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ ತನ್ನ ವೈ-ಫೈ ಯೋಜನೆಯಲ್ಲಿ ಆದಾಯದ ಭಾಗವಾಗಿ ತಂತ್ರಜ್ಞಾನ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಘೋಷಿಸಿದೆ.


    ಇದನ್ನೂ ಓದಿ: ಬ್ಯಾಂಕ್​ಗೆ ಚೆಕ್​ ಹಾಕುವಾಗ ಜೋಪಾನ, ವಂಚಕರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ!


    3ಐ ಇನ್ಫೋಟೆಕ್ ಲಿಮಿಟೆಡ್ ಜೊತೆ 5 ವರ್ಷಗಳ ಒಪ್ಪಂದ


    ರೈಲ್‌ಟೆಲ್ ಕಂಪನಿ ಮುಂಬೈ ಮೂಲದ ಜಾಗತಿಕ ಮಾಹಿತಿ ತಂತ್ರಜ್ಞಾನ ಕಂಪನಿಯಾದ 3i ಇನ್ಫೋಟೆಕ್ ಲಿಮಿಟೆಡ್ ನೇತೃತ್ವದ ಒಕ್ಕೂಟದೊಂದಿಗೆ ಐದು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದು, ಹಣಗಳಿಕೆಯ ಗುರಿಯನ್ನು ಹೊಂದಿದೆ ಎಂದು ಕಂಪನಿಯ ಹೇಳಿಕೆ ತಿಳಿಸಿದೆ. ಇನ್ನೂ ಈ ಒಪ್ಪಂದದ ಅಡಿಯಲ್ಲಿ ಫೊರೆನ್ಸಿಕ್ಸ್ ಇಂಟೆಲಿಜೆನ್ಸ್ ಸರ್ವೈಲೆನ್ಸ್ ಮತ್ತು ಸೆಕ್ಯುರಿಟಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (ಎಫ್‌ಐಎಸ್‌ಎಸ್‌ಟಿ) ಮತ್ತು ಯೆಲ್ಲೋ ಇಂಕ್ ಕಂಪನಿ ಸಹ ಸದಸ್ಯತ್ವ ಪಡೆದಿದೆ.


    ಸಾಂಕೇತಿಕ ಚಿತ್ರ


    ರೈಲ್‌ಟೆಲ್ ಮತ್ತು 3i ಇನ್ಫೋಟೆಕ್ ಲಿಮಿಟೆಡ್ ಕಂಪನಿಯ ಒಪ್ಪಂದದ ಅಡಿಯಲ್ಲಿ, ಉದ್ದೇಶಿತ ಜಾಹೀರಾತುಗಳ ಮೂಲಕ ಮತ್ತು ರೈಲು ಪ್ರಯಾಣಿಕರಿಗೆ ಮಲ್ಟಿಮೀಡಿಯಾ ಇನ್ಫೋಟೈನ್‌ಮೆಂಟ್ ಸೇವೆಗಳನ್ನು ವಿಸ್ತರಿಸುವ ಮೂಲಕ ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳಲ್ಲಿ ಹಣಗಳಿಸುವ ಮೂಲಕ ಆದಾಯವನ್ನು ಪಡೆಯುವ ಗುರಿಯನ್ನು ಹಾಕಿಕೊಂಡಿದೆ.


    ಐದು ವರ್ಷಗಳ ಅವಧಿಯಲ್ಲಿ ₹250 ಕೋಟಿ ಆದಾಯ ನಿರೀಕ್ಷೆ


    ಒಪ್ಪಂದದ ಪ್ರಕಾರ, 3i ಇನ್ಫೋಟೆಕ್ ನೇತೃತ್ವದ ಒಕ್ಕೂಟವು ವರ್ಷಕ್ಕೆ ₹ 14 ಕೋಟಿ ಅಥವಾ ಗಳಿಸಿದ ಆದಾಯದ 40 ಪ್ರತಿಶತವನ್ನು ರೈಲ್‌ಟೆಲ್‌ಗೆ ಪಾವತಿಸುವುದಾಗಿ ತಿಳಿಸಿದೆ. ಈ ಆದಾಯವು ಹೆಚ್ಚಾಗಿ ಜಾಹೀರಾತುಗಳಿಂದ ಮತ್ತು ವಿಷಯ/ಸೇವೆ ಆಧಾರಿತ ಆದಾಯದಿಂದ ಬರುತ್ತದೆ ಎನ್ನಲಾಗಿದೆ. 3i ಇನ್ಫೋಟೆಕ್‌ನ ಅಂದಾಜಿನ ಪ್ರಕಾರ, ಯೋಜನೆಯಿಂದ ಐದು ವರ್ಷಗಳ ಅವಧಿಯಲ್ಲಿ ₹250 ಕೋಟಿಗಿಂತ ಹೆಚ್ಚಿನ ಆದಾಯವನ್ನು ನಿರೀಕ್ಷಿಸಲಾಗಿದೆ.


    ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ ಮೂಲಕ ಹಣಗಳಿಸುವಲ್ಲಿ ಇದು ಭಾರತದ ಮೊದಲ ಬಹು-ವರ್ಷದ ವಾಣಿಜ್ಯ ಒಪ್ಪಂದವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


    ಉಚಿತ ವೈಫೈ ಸೌಲಭ್ಯ


    ರೈಲ್‌ಟೆಲ್‌ನ ಸಾರ್ವಜನಿಕ ವೈ-ಫೈ ನೆಟ್‌ವರ್ಕ್ ಈಗ ಭಾರತದಾದ್ಯಂತ 6,108 ರೈಲು ನಿಲ್ದಾಣಗಳಲ್ಲಿ ಲಭ್ಯವಿದೆ ಮತ್ತು ದಿನಕ್ಕೆ 1.1 ಮಿಲಿಯನ್‌ಗಿಂತಲೂ ಹೆಚ್ಚು ಅನನ್ಯ ಬಳಕೆದಾರರನ್ನು ಹೊಂದಿದೆ. ಭಾರತದಲ್ಲಿ 7,000 ಕ್ಕೂ ಹೆಚ್ಚು ರೈಲು ನಿಲ್ದಾಣಗಳಿವೆ. ಇವುಗಳಲ್ಲಿ ಕೆಲವು ಹಾಲ್ಟ್ ರೈಲು ನಿಲ್ದಾಣಗಳನ್ನು ಒಳಗೊಂಡಿವೆ. ರೈಲ್‌ಟೆಲ್ ಹಾಲ್ಟ್ ಹೊರತುಪಡಿಸಿ ಎಲ್ಲಾ ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ನೀಡುತ್ತಿದೆ.


    ಸಾಂಕೇತಿಕ ಚಿತ್ರ


    ಪ್ರಸ್ತುತ 6,100 ರೈಲು ನಿಲ್ದಾಣಗಳಲ್ಲಿ ವೈ-ಫೈ ಉಚಿತವಾಗಿ ಲಭ್ಯವಿದೆ. ಇವುಗಳಲ್ಲಿ 5,000ಕ್ಕೂ ಹೆಚ್ಚು ರೈಲು ನಿಲ್ದಾಣಗಳು ಗ್ರಾಮೀಣ ಪ್ರದೇಶದಲ್ಲಿವೆ. ಇನ್ನು ಈ ವೈಫೈ ಸೇವೆಯ ಮೂಲಕ ಚಲನಚಿತ್ರ, ಶೈಕ್ಷಣಿಕ ವಿಷಯಗಳ ಪ್ರದರ್ಶನವನ್ನು ವಿಕ್ಷಿಸಬಹುದು. ಹಾಗಯೇ ಇಂಟರ್‌ನೆಟ್‌ನ ಅನೇಕ ಸೇವೆಗಳನ್ನು ಪಡೆದುಕೊಳ್ಳಬಹುದು.


    2015ರ ರೈಲ್ವೆ ಬಜೆಟ್‌ ಕಲ್ಪನೆ


    ಇನ್ನು ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಇಂಟರ್‌ನೆಟ್ ಸೌಲಭ್ಯ ಒದಗಿಸುವ ಪ್ಲಾನ್‌ ಅನ್ನು 2015ರ ರೈಲ್ವೆ ಬಜೆಟ್‌ನಲ್ಲಿ ಕಲ್ಪಿಸಲಾಗಿತ್ತು. ಅಂದಿನಿಂದ ಇಲ್ಲಿಯವರೆಗೆ 6100 ರೈಲು ನಿಲ್ದಾಣಗಳಲ್ಲಿ ಉಚಿತ ಹೈಸ್ಪೀಡ್‌ ವೈಫೈ ಇಂಟರ್‌ನೆಟ್‌ ಸೇವೆ ನೀಡಲಾಗ್ತಿದೆ.


    ರೈಲ್‌ಟೆಲ್ ಆದಾಯ


    ಇನ್ನೂ ಸೆಪ್ಟೆಂಬರ್ 2022ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ರೈಲ್‌ಟೆಲ್ ₹440 ಕೋಟಿಗಳ ಏಕೀಕೃತ ಆದಾಯವನ್ನು ಪ್ರಕಟಿಸಿದೆ. ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಆದಾಯ ₹385 ಕೋಟಿ ಆಗಿತ್ತು. ಅದಕ್ಕೆ ವಿರುದ್ಧವಾಗಿ ಸೆಪ್ಟೆಂಬರ್‌ನಲ್ಲಿ 14 ಪ್ರತಿಶತ ಬೆಳವಣಿಗೆಯನ್ನು ಕಂಪನಿ ಕಂಡಿದೆ. ಒಟ್ಟು 2022ರ ಅರ್ಧವರ್ಷದಲ್ಲಿ ರೈಲ್‌ಟೆಲ್ ₹825 ಕೋಟಿ ಆದಾಯವನ್ನು ದಾಖಲಿಸಿದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು