Cyber Crime: ಮೃತಪಟ್ಟ ವ್ಯಕ್ತಿಯ PPF ಖಾತೆಯಿಂದ ಒಂದೂವರೆ ಕೋಟಿ ಎಗರಿಸಿದ ವಂಚಕರು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೊಸ ಹೊಸ ಟೆಕ್ನಾಲಜಿ (New Technology) ಬಳಿಸ ಜನ ಸಾಮಾನ್ಯರ ಜೇಬಿಗೆ ಕನ್ನ ಹಾಕುತ್ತಿದ್ದಾರೆ. ಇಂತಹವರ ಜಾಲಕ್ಕೆ ಸಿಲುಕಿ ಹಲವು ಅಮಾಯಕರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.

  • Share this:

ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ. ಅದರಲ್ಲೂ ಈ ಸೈಬರ್​ ವಂಚಕರಂತೂ (Cyber Criminals) ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಅಪ್​ಡೇಟ್​ ಆಗುತ್ತಿದ್ದಾರೆ. ಯಾವ ರೀತಿ ವಂಚಿಸುತ್ತಾರೆ ಅಂತ ಕಂಡುಹಿಡಿಯುವುದಕ್ಕೂ ಸಾಧ್ಯವಾಗುವುದಿಲ್ಲ. ಆ ರೀತಿ ಹೊಸ ಹೊಸ ಟೆಕ್ನಾಲಜಿ (New Technology) ಬಳಿಸ ಜನ ಸಾಮಾನ್ಯರ ಜೇಬಿಗೆ ಕನ್ನ ಹಾಕುತ್ತಿದ್ದಾರೆ. ಇಂತಹವರ ಜಾಲಕ್ಕೆ ಸಿಲುಕಿ ಹಲವು ಅಮಾಯಕರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಮೃತಪಟ್ಟ ವ್ಯಕ್ತಿಗೂ ವಂಚಿಸಿದ್ದಾರೆ ಈ ಕಿರಾತಕರು. ಇತ್ತೀಚೆಗೆ ಇಂತಹದೊಂದು ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಈ ವಂಚನೆ ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳೂ (Bank Officials) ಭಾಗಿಯಾಗಿರುವುದು ಕುತೂಹಲ ಮೂಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು (Police) ಕೆಲ ಆರೋಪಿಗಳನ್ನು ಬಂಧಿಸಿದ್ದು, ಇತರ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.


ಮೃತಪಟ್ಟ ವ್ಯಕ್ತಿ ಖಾತೆಗೆ ಖನ್ನ!


ಪ್ರಸ್ತುತ ಆನ್‌ಲೈನ್ ವಹಿವಾಟಿನಿಂದಾಗಿ ಹ್ಯಾಕಿಂಗ್, ವಂಚನೆ ಇತ್ಯಾದಿ ಘಟನೆಗಳು ಹೆಚ್ಚುತ್ತಿವೆ. ಅಲ್ಲದೇ ನಕಲಿ ದಾಖಲೆ ನೀಡಿ ವಂಚಿಸುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸದ್ಯ ಇಂತಹದ್ದೊಂದು ಘಟನೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಈ ವೇಳೆ ಆರೋಪಿ ಮೃತ ವ್ಯಕ್ತಿಯೊಬ್ಬರ ನಕಲಿ ದಾಖಲೆ ಸೃಷ್ಟಿಸಿ ಪಿಪಿಎಫ್ ಖಾತೆಯಲ್ಲಿದ್ದ  1.39 ಕೋಟಿ ರೂಪಾಯಿ ಹಣ ಎಗರಿಸಿದ್ದಾರೆ.


1.39 ಕೋಟಿ ಎಗರಿಸಿದ ಖದೀಮರು!


ಇಂಟ್ರೆಸ್ಟಿಂಗ್​ ಅಂದ್ರೆ ಈ ಪ್ರಕರಣದ ಆರೋಪಿಗಳಲ್ಲಿ ಎಸ್‌ಬಿಐನ ಶಾಖಾ ವ್ಯವಸ್ಥಾಪಕರೂ ಭಾಗಿಯಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಪ್ರಕರಣದಲ್ಲಿ ಎಸ್‌ಬಿಐನ ಸಹಾಯಕ ಶಾಖಾ ವ್ಯವಸ್ಥಾಪಕ ಮತ್ತು ಭೂಲೇಶ್ವರದ ಉದ್ಯಮಿ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮೃತನ 88 ವರ್ಷದ ತಂದೆ ತನ್ನ ಮಗನ ಹಣಕ್ಕೆ ಯಾರೋ ವಂಚಿಸಿದ್ದಾರೆ ಎಂದು ತಿಳಿದು ಆಘಾತಕ್ಕೊಳಗಾಗಿದ್ದಾರೆ. ಅವರ ಪುತ್ರ ಅಮಿತ್ ಪ್ರಸಾದ್ 2008 ರಲ್ಲಿ ಅಮೆರಿಕದಲ್ಲಿ ನಿಧನರಾಗಿದ್ದರು.


ಇದನ್ನೂ ಓದಿ: PPF ಖಾತೆದಾರರು ಮೆಚ್ಯೂರಿಟಿ ಮೊದಲು ಮರಣಹೊಂದಿದ್ರೆ, ಹಣವನ್ನು ಕ್ಲೈಮ್ ಮಾಡೋದು ಹೇಗೆ?


ವಂಚನೆಯಲ್ಲೇ ಬ್ಯಾಂಕ್​ನವರು ಶಾಮೀಲು!


ಈ ಪ್ರಕರಣದಲ್ಲಿ  ಎಸ್‌ಬಿಐ ಅಸಿಸ್ಟೆಂಟ್ ಬ್ರಾಂಚ್ ಮ್ಯಾನೇಜರ್ ಪ್ರಿಯಾಂಕ್ ಶರ್ಮಾ, ಪದ್ಮಾ ಸೇನ್ ಮತ್ತು ಹವಾಲಾ ಆಪರೇಟರ್ ರಾಜೇಶ್ ಪಾಂಚಾಲ್ ಅವರನ್ನು ಮುಂಬೈನ ಮರೈನ್ ಡ್ರೈವ್ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ.


ಈ ವರ್ಷದ ಮಾರ್ಚ್‌ನಲ್ಲಿ, ವಾರ್ಡನ್ ರಸ್ತೆಯ ನಿವಾಸಿ ಹನುಮಂತ್ ಪ್ರಸಾದ್, ನಾರಿಮನ್ ಪಾಯಿಂಟ್‌ನಲ್ಲಿರುವ ಎಸ್‌ಬಿಐನ ಬ್ಯಾಕ್‌ಬೇ ರಿಕ್ಲಮೇಷನ್ ಶಾಖೆಯಲ್ಲಿ ತನ್ನ ಮಗನ ಪಿಪಿಎಫ್ ಖಾತೆಯ ಕುರಿತು ಮರೈನ್ ಡ್ರೈವ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.


ಸತ್ತವನಿಗೂ ವಂಚಿಸಿದ ಕಿರಾತಕರು!


ಮಗನ ಮರಣದ ಒಂದು ವರ್ಷದ ನಂತರ, ಹನುಮಂತ್ ಪ್ರಸಾದ್ ತನ್ನ ಮಗನ ಪಿಪಿಎಫ್ ಖಾತೆಯಿಂದ ಹಣವನ್ನು ತನ್ನ ಖಾತೆಗೆ ವರ್ಗಾಯಿಸಲು ಬ್ಯಾಂಕ್ ಅನ್ನು ಸಂಪರ್ಕಿಸಿದ್ದರು. ಬ್ಯಾಂಕ್‌ಗೆ ಪುನರಾವರ್ತಿತ ಅನುಸರಣೆಗಳ ನಂತರ, ಪಿಪಿಎಫ್ ಹಣವನ್ನು ವರ್ಗಾಯಿಸುವ ಪ್ರಕ್ರಿಯೆಯನ್ನು ಟ್ರ್ಯಾಕ್ ಮಾಡಲು ಅಧಿಕಾರಿಯೊಬ್ಬರು ಅವರ ಮ್ಯಾನೇಜರ್  ಅವರನ್ನು ನಿಯೋಜಿಸಿದರು.


ಆದರೆ, ಪ್ರಸಾದ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವಂಚನೆಯಿಂದ ಪಡೆದ ಹಣವನ್ನು ಪ್ರೇಮ್ ಶರ್ಮಾ ರಾಜೇಶ್ ಪಾಂಚಾಲ್ ಗೆ ನೀಡಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಇನ್ನೂ ಈ ಇಬ್ಬರು ಹಣ ವಂಚಿಸಿ, ತನ್ನ ಸ್ನೇಹಿತರ ಖಾತೆಗೆ ಹಣ ವರ್ಗಾಯಿಸಿದ್ದಾರೆ.

ವಿಚಾರಣೆ ನಂತರ ಮೃತ ಮಗನ ಖಾತೆಯಿಂದ ಬೇರೆಯವರ ಖಾತೆಗೆ 1.39 ಕೋಟಿ ಹಣ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ತನಿಖೆಯ ಸಮಯದಲ್ಲಿ, ಈ ಮೊತ್ತವನ್ನು ಗೋರೆಗಾಂವ್‌ನಲ್ಲಿರುವ ಐಸಿಐಸಿಐ ಬ್ಯಾಂಕ್ ಶಾಖೆಯ ಅಮಿತ್ ಪ್ರಸಾದ್ ಅವರ ಖಾತೆಗೆ ಪಾವತಿಸಲಾಗಿದೆ. ಅದರ ನಂತರ ಈ ಖಾತೆಯನ್ನು ಮುಚ್ಚಲಾಗಿದೆ. ನೀವು ಕೂಡ ಆನ್​ಲೈನ್​ನಲ್ಲಿ ಹಣದ ವ್ಯವಹಾರ ಮಾಡುವ ಮುನ್ನ ಎಚ್ಚರದಿಂದಿರಿ.


top videos
    First published: