Freedom App Fruad: ತಾವೇ ಹೆಣೆದಿದ್ದ ಬಲೆಗೆ ಬಿದ್ರಾ ಸುಧೀರ್? ನಿರುದ್ಯೋಗಿಗಳನ್ನೇ ಟಾರ್ಗೆಟ್ ಮಾಡಿದ್ದೇಗೆ?

ಸಿಎಸ್​ ಸುಧೀರ್​

ಸಿಎಸ್​ ಸುಧೀರ್​

ಬೆಂಗಳೂರಿನ ಬನಶಂಕರಿ ಪೊಲೀಸರು ಸುಧೀರ್ ಮತ್ತು ರಘು ಎಂಬುವವರನ್ನು ಬಂಧಿಸಿದ್ದಾರೆ. ತಾನೇ ಬೀಸಿದ್ದ ಬಲೆಯೊಳಗೆ ಈ ಫ್ರೀಡಂ ಆ್ಯಪ್​ ಸಿಕ್ಕಿಕೊಂಡಿದ್ದೇಗೆ? ಇಲ್ಲಿದೆ ನೋಡಿ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

'ಕಡಿಮೆ ಹೂಡಿಕೆ ಮಾಡಿ (Investment) ಹೆಚ್ಚಿನ ಲಾಭ ಪಡೆದುಕೊಳ್ಳಬೇಕೆ ಹಾಗಿದ್ರೆ ಫ್ರೀಡಂ​ ಆ್ಯಪ್​ನ ಡೌನ್​ಲೋಡ್​ ಮಾಡಿಕೊಳ್ಳಿ' ಈ ಡೈಲಾಗ್​ನ ಕೇಳಿ ಯಾಕಪ್ಪ ಇಷ್ಟು ಟಾರ್ಚರ್ ಕೊಡ್ತೀಯಾ ಅಂತ ಹೇಳದ ಜನರೇ ಇಲ್ಲ  ಅನ್ನಬಹುದು. ಹೌದು, ಯಾವುದೇ ಚಾನೆಲ್ (Channel)​ ಇರಲಿ, ಯಾವುದೇ ವಿಡಿಯೋ (Video) ನೋಡ್ತಿರ್ಲಿ ಸಡನ್​ ಆಗಿ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಈ ಡೈಲಾಗ್​ ಹೇಳಿ ಕಡೆಯಲ್ಲಿ  ಈ  ಫ್ರೀಡಂ (Frerdome App) ಆ್ಯಪ್​  ಡೌನ್​ಲೋಡ್​ ಮಾಡಿ ಅಂತ ಹೇಳುವ ಸುಧೀರ್ (Sudheer)​ ಅವರ ಪರಿಚಯ ಯಾರಿಗೆ ಇಲ್ಲ ಹೇಳಿ. ಸದ್ಯಕ್ಕೆ ಬ್ಯುಸಿನೆಸ್ ಪಾಠ ಮಾಡುತ್ತಿದ್ದ ಸುಧೀರ್​ ಅವರನ್ನು ಪೊಲೀಸರು (Police) ಬಂಧಿಸಿದ್ದಾರೆ . ಬೆಂಗಳೂರಿನ ಬನಶಂಕರಿ ಪೊಲೀಸರು ಸುಧೀರ್ ಮತ್ತು ರಘು ಎಂಬುವವರನ್ನು ಬಂಧಿಸಿದ್ದಾರೆ. ತಾನೇ ಬೀಸಿದ್ದ ಬಲೆಯೊಳಗೆ ಈ ಫ್ರೀಡಂ ಆ್ಯಪ್​ ಸಿಕ್ಕಿಕೊಂಡಿದ್ದೇಗೆ? ಇಲ್ಲಿದೆ ನೋಡಿ.


ಬ್ಯುಸಿನೆಸ್​ ಹೆಸರಲ್ಲಿ ಹಲವರಿಗೆ ದೋಖಾ!


ಬಿಸಿನೆಸ್ ಕಟ್ಟಬೇಕು, ಉದ್ಯಮಿಗಳಾಗಬೇಕು ಎಂದು ಬಯಸುವವರಿಗೆ ನಾವು ಸಹಾಯ ಮಾಡ್ತೀವಿ ಅಂತ ಈ ಮಾರುಕಟ್ಟೆಗೆ ಎಂಟ್ರಿಯಾಗಿದ್ದವರು ಈ ಸುಧೀರ್. ಮೊದಲು ಹಣಕಾಸು ತಜ್ಞ ಎಂದು ಕರೆಸಿಕೊಳ್ಳುತ್ತಿದ್ದ ಸುಧೀರ್​ ಬಳಿಕ ಇಂಡಿಯನ್​ ಮನಿ.ಕಾಮ್​ ಸಂಸ್ಥೆ ಹುಟ್ಟುಹಾಕಿದ್ದರು.  ಮೊದಲಿಗೆ ಈ ಆ್ಯಪ್ ಬಗ್ಗೆ ಎಲ್ಲರಿಗೂ ಕುತೂಹಲ ಹೆಚ್ಚಿತ್ತು. ಆಮೇಲೆ ಇತ್ತೀಚೆಗೆ ಈ ಆ್ಯಪ್​ ಯಾಕೋ ತುಂಬಾ ಟಾರ್ಚರ್​ ಕೊಡ್ತಿದೆ ಅಂತ ಅದೆಷ್ಟೋ ಮಂದಿ ಆರೋಪ ಮಾಡಿದ್ದರು.


ಕೆಲಸದ ಆಮಿಷವೊಡ್ಡಿ ವಂಚನೆ!


ಕೆಲಸದ ಆಮಿಷವೊಡ್ಡಿ ವಂಚಿಸಿದ ಪ್ರಕರಣ ಸಂಬಂಧ ಇಂಡಿಯನ್‌ ಮನಿ ಫ್ರೀಡಂ ಆ್ಯಪ್‌ ಸಿಇಒ ಸಿ.ಎಸ್‌. ಸುಧೀರ್‌ ಸೇರಿದಂತೆ ಇಬ್ಬರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.


ಇದನ್ನೂ ಓದಿ: ದೇಶದ ಲಕ್ಷಾಂತರ ಪಿಂಚಣಿದಾರರಿಗೆ ಇಲ್ಲಿದೆ ಬೊಂಬಾಟ್​ ಸುದ್ದಿ!


ಏಪ್ರಿಲ್ 4ರಂದು ದೂರು ದಾಖಲು!


ಸುಧೀರ್‌ ಸೇರಿದಂತೆ ಇಂಡಿಯನ್‌ ಮನಿ ಫ್ರೀಡಂ ಆ್ಯಪ್‌ ಸಂಸ್ಥೆಯ 20ಕ್ಕೂ ಹೆಚ್ಚು ಮಂದಿ ವಿರುದ್ಧ ಈ ಹಿಂದೆ ನಯನಾ ಎಂಬುವರು ಏ. 4ರಂದು ವಂಚನೆಯ ದೂರು ಕೊಟ್ಟಿದ್ದರು. ಈ ದೂರಿನ ಸಂಬಂಧ ಸುಧೀರ್‌ ಹಾಗೂ ಸಂಸ್ಥೆ ಸಿಬ್ಬಂದಿ ನಿರೀಕ್ಷಣಾ ಜಾಮೀನು ಪಡೆದಿದ್ದರು.


ಇತ್ತೀಚೆಗೆ ಮತ್ತಷ್ಟು ಮಂದಿ ಇಂಡಿಯನ್‌ ಮನಿ ಫ್ರೀಡಂ ಆ್ಯಪ್‌ ಸಂಸ್ಥೆಯಿಂದ ವಂಚನೆಗೆ ಒಳಗಾಗಿರುವುದಾಗಿ ದೂರು ಕೊಟ್ಟರು. ಹೀಗಾಗಿ, ಮೂರು ದಿನದೊಳಗೆ ವಿಚಾರಣೆಗೆ ಹಾಜರಾಗುವಂತೆ ಸುಧೀರ್‌ ಮತ್ತು ಸಂಸ್ಥೆ ಸಿಬ್ಬಂದಿಗೆ ನೋಟಿಸ್‌ ಜಾರಿ ಮಾಡಿದ್ದೆವು. ಇದರ ಬೆನ್ನಲ್ಲೇ ವಿಚಾರಣೆಗೆ ಹಾಜರಾದ ಸುಧೀರ್‌ ಮತ್ತು ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ರಘು ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.


ತಾನೇ ಹೆಣೆದಿದ್ದ ಬಲೆಯಲ್ಲಿ ಬಿದ್ದ ಸುಧೀರ್​!


ಸುಧೀರ್‌ ಮತ್ತು ಅವರ ತಂಡದ ಸದಸ್ಯರು ಪಾರ್ಟ್‌ ಟೈಮ್‌ ಕೆಲಸ ಕೊಡುವುದಾಗಿ ನಂಬಿಸಿ ಇಂಡಿಯನ್‌ ಮನಿ ಫ್ರೀಡಂ ಆ್ಯಪ್‌ನ ಚಂದಾದಾರರ ಶುಲ್ಕದ ರೂಪದಲ್ಲಿ ಹಣ ಪಡೆದಿದ್ದರು. ಸಾಕಷ್ಟು ಮಂದಿಗೆ ತಿಂಗಳಿಗೆ 15 ಸಾವಿರ ಸಂಬಳ ಕೊಡುವುದಾಗಿ ಹೇಳಿದ್ದರಂತೆ. ಶುಲ್ಕ ಪಾವತಿಸಿದ ನಂತರ ಇತರೆ ನಿರುದ್ಯೋಗಿ ವ್ಯಕ್ತಿಗಳನ್ನು ಸಂಪರ್ಕಿಸಿ ಆ್ಯಪ್‌ಗೆ ಚಂದಾದಾರರಾಗಿ ಮಾಡುವಂತೆ ಹೇಳಿದ್ದರಂತೆ. ಈ ಬಗ್ಗೆ ಕನ್ನಡಪ್ರಭ ವರದಿ ಮಾಡಿದೆ.


ನಿರುದ್ಯೋಗಿಗಳೇ ಇವರ ಟಾರ್ಗೆಟ್!


ತಿಂಗಳಿಗೆ ಕನಿಷ್ಠ 60 ಸಾವಿರ ರೂ. ಚಂದಾದಾರಿಕೆ ಶುಲ್ಕ ಸಂಗ್ರಹಿಸುವಂತೆ ಎಲ್ಲರಿಗೂ ಒತ್ತಡ ಹೇರಿದ್ದರಂತೆ. ದಿನ್ಕಕೆ ಇಷ್ಟು ಚಂದಾಗಾರಿಕೆ ಮಾಡಿಸಬೇಕಂತ ಟಾರ್ಗೆಟ್​ ನೀಡುತ್ತಿದ್ದರಂತೆ. ಇದರಿಂದ ರೋಸಿ ಹೋದ ಸಾಕಷ್ಟು ಮಂದಿ ಸುಧೀರ್ ಅವರನ್ನು ಭೇಟಿಯಾಗಿ ತಮಗಾದ ನಷ್ಟವನ್ನು ತುಂಬಿಕೊಡುವಂತೆ ಕೇಳಿದ್ದರಂತೆ. ಇದು ವರ್ಕೌಟ್ ಆಗದ ಕಾರಣ ಸಂತ್ರಸ್ತರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು.


ಆ್ಯಪ್​ ಡೌನ್​ಲೋಡ್ ಮಾಡಿದ್ರೆ ಟಾರ್ಚರ್ ಅಂತೆ!

top videos


    ಈ ಆ್ಯಪ್ ಡೌನ್​ಲೋಡ್​ ಮಾಡಿಕೊಂಡ ಕೂಡಲೇ ಈ ಕಂಪನಿಯಿಂದ ಕರೆ ಬರುತ್ತಿತ್ತು. ಹೇಗಾದರೂ ಮಾಡಿ ಒಂದು ಕೋರ್ಸ್​ ಚಂದಾಗಾರಿಕೆ ಮಾಡಿಕೊಳ್ಳಿ ಅಂತ ಫೋರ್ಸ್ ಮಾಡುತ್ತಿದ್ದರಂತೆ. ಆ ಡಿಸ್ಕೌಂಟ್ ಇದೆ, ಈ ಡಿಸ್ಕೌಂಟ್ ಇದೆ ಅಂತ ಟಾರ್ಚರ್ ಮಾಡುತ್ತಿದ್ದರಂತೆ. ಇದರ ಸಹವಾಸವೇ ಬೇಡ ಅಂತ ಅದೆಷ್ಟೋ ಮಂದಿ ಈ ಆ್ಯಪ್​ನ ಡಿಲೀಟ್ ಮಾಡಿದ್ದಾರಂತೆ.

    First published: