• Home
  • »
  • News
  • »
  • business
  • »
  • Indian Equities: ಭಾರತೀಯ ಈಕ್ವಿಟಿ ಮಾರುಕಟ್ಟೆಯಿಂದ ವಿದೇಶಿ ಹೂಡಿಕೆದಾರರು ಹಿಂಪಡೆದ ಮೊತ್ತವೆಷ್ಟು ಗೊತ್ತಾ?

Indian Equities: ಭಾರತೀಯ ಈಕ್ವಿಟಿ ಮಾರುಕಟ್ಟೆಯಿಂದ ವಿದೇಶಿ ಹೂಡಿಕೆದಾರರು ಹಿಂಪಡೆದ ಮೊತ್ತವೆಷ್ಟು ಗೊತ್ತಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇನ್ನು, ಅಮೆರಿಕದಲ್ಲಿ ಹೆಚ್ಚಿಸಲಾದ ದರಗಳು ಈಗ ಭಾರತದಲ್ಲಿರುವ ಈಕ್ವಿಟಿ ಮಾರುಕಟ್ಟೆಯ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುವಂತೆ ಮಾಡುತ್ತಿದೆ, ಕಾರಣ ಇಲ್ಲಿರುವ ಮಾರುಕಟ್ಟೆಯಲ್ಲಿನ ವಿದೇಶಿ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಹಿಂತೆದುಕೊಳ್ಳುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಮುಂದೆ ಓದಿ ...
  • Share this:

ಈಗ ನಿಮಗೆಲ್ಲ ಗೊತ್ತಿರುವ ಹಾಗೆ ಜಾಗತಿಕವಾಗಿ ಹಲವು ವಿದ್ಯಮಾನಗಳು ಜರುಗುತ್ತಿವೆ. ಅದರಲ್ಲಿ ವಿಶೇಷವಾಗಿ ಹೆಸರಿಸಬೇಕೆಂದರೆ ಜಾಗತಿಕ ಮಟ್ಟದಲ್ಲಿ ಪ್ರತಿ ದೇಶಗಳ ಆರ್ಥಿಕ ಸ್ಥಿತಿಗತಿಗಳು (Financial Status) ಹಾಗೂ ಹಣದುಬ್ಬರದ (Inflation) ಏರಿಕೆ. ಇತ್ತೀಚಿಗಷ್ಟೇ ಅಮೆರಿಕದ ಫೆಡರಲ್ ರಿಸರ್ವ್, ತನ್ನ ದೇಶದಲ್ಲಿ ಏರುತ್ತಿರುವ ಹಣದುಬ್ಬರದ ಪ್ರಮಾಣವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದನ್ನು ಗಮನಿಸಬಹುದು. ಅದರಂತೆ ಭಾರತದ ಮಟ್ಟಿಗೆ ಹೇಳುವುದಾದರೆ ದೇಶ ಕಾಣುತ್ತಿರುವ ಹಣದುಬ್ಬರದ ದರವನ್ನು ಪಳಗಿಸುವ ನಿಮಿತ್ತ ಕೇಂದ್ರ ಸರ್ಕಾರವು (Central Government) ಇತ್ತೀಚಿಗಷ್ಟೆ ಚಿನ್ನದ ಆಮದು (Import of gold) ಮೇಲಿನ ಸುಂಕ ಹೆಚ್ಚಿಸಿದ್ದಲ್ಲದೆ ವಿದೇಶದಲ್ಲಿರುವ ಭಾರತೀಯರು ಭಾರತದಲ್ಲಿರುವ ತಮ್ಮ ಸಂಬಂಧಿಕರಿಗೆ ಹೆಚ್ಚಿನ ಹಣ ಕಳುಹಿಸಿಕೊಡಲು ಅನುವಾಗುವಂತೆ ನಿಯಮಗಳನ್ನು ಸಡಿಲುಗೊಳಿಸಿದ್ದನ್ನು ನೋಡಬಹುದು.


ಭಾರತದಲ್ಲಿರುವ ಈಕ್ವಿಟಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿರುವ ಅಮೆರಿಕ
ಇನ್ನು, ಅಮೆರಿಕದಲ್ಲಿ ಹೆಚ್ಚಿಸಲಾದ ದರಗಳು ಈಗ ಭಾರತದಲ್ಲಿರುವ ಈಕ್ವಿಟಿ ಮಾರುಕಟ್ಟೆಯ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುವಂತೆ ಮಾಡುತ್ತಿದೆ, ಕಾರಣ ಇಲ್ಲಿರುವ ಮಾರುಕಟ್ಟೆಯಲ್ಲಿನ ವಿದೇಶಿ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಹಿಂತೆದುಕೊಳ್ಳುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.


ಈಗ ತಿಳಿದುಬಂದಿರುವ ಮಾಹಿತಿಯ ಪ್ರಕಾರ, ಕಳೆದ ಎರಡು ವರ್ಷಗಳನ್ನು ನೋಡಿದರೆ ಈ ಜೂನ್ ನಲ್ಲಿ ಗರಿಷ್ಠ ಎಂದೇ ಹೇಳಲಾಗುವ ಸುಮಾರು 50,203 ಕೋಟಿ ರೂಪಾಯಿಗಳನ್ನು ಈಕ್ವಿಟಿ ಮಾರುಕಟ್ಟೆಯಿಂದ ವಿದೇಶಿ ಹೂಡಿಕೆದಾರರು ಹಿಂತೆಗೆದುಕೊಂಡಿದ್ದಾರೆನ್ನಲಾಗಿದೆ. ಈಗ ಇದು ಸತತ ಒಂಭತ್ತನೇ ಬಾರಿಗೆ ತಿಂಗಳುವಾರು ವಿದೇಶಿ ಹೂಡಿಕೆದಾರರು ಹಣವನ್ನು ಹಿಂಪಡೆಯುತ್ತಿರುವ ಪ್ರಕ್ರಿಯೆ ಎಂದು ಹೇಳಲಾಗಿದೆ.


ಭಾರತದ ಈಕ್ವಿಟಿ ಮಾರುಕಟ್ಟೆಯಿಂದ ನಿಧಾನವಾಗಿ ನಿರ್ಗಮಿಸಲು ಪ್ರಾರಂಭಿಸಿದ ವಿದೇಶಿ ಹೂಡಿಕೆದಾರರು
ಈ ಹಿಂದೆ, ಮಾರ್ಚ್ 2020 ರಲ್ಲಿ 61,973 ಕೋಟಿ ರೂಪಾಯಿಗಳನ್ನು ಹಿಂತೆಗೆದುದ್ದನ್ನು ಬಿಟ್ಟರೆ ಇದು ಈ ಬಾರಿಯ ಗರಿಷ್ಠ ಹಿಂಪಡೆತ ಎನ್ನಲಾಗುತ್ತಿದೆ. ಹಾಗೇ ನೋಡಿದರೆ ಅಕ್ಟೋಬರ್ 2021 ರಿಂದಲೇ ವಿದೇಶಿ ಹೂಡಿಕೆದಾರರು ಭಾರತದ ಈಕ್ವಿಟಿ ಮಾರುಕಟ್ಟೆಯಿಂದ ನಿಧಾನವಾಗಿ ನಿರ್ಗಮಿಸಲು ಪ್ರಾರಂಭಿಸಿದ್ದರು.


ಇದನ್ನೂ ಓದಿ: LIC Shares: ಇಂದು ರಂಗೇರಿದ ಷೇರು ಪೇಟೆ! ಮತ್ತೆ ಎಲ್​ಐಸಿ ಸ್ಟಾಕ್​ ಜಿಗಿತ


ಅಮೆರಿಕದಲ್ಲಿ ಕಳೆದ ಆರು ತಿಂಗಳುಗಳಲ್ಲಿ ಹೆಚ್ಚಾಗಿರುವ ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಮರಿಕದ ಫೆಡರಲ್, ದರಗಳನ್ನು ಹೆಚ್ಚಿಸಿರುವುದರಿಂದ ವಿದೇಶಿ ಹೂಡಿಕೆದಾರರು ಮಾರುಕಟ್ಟೆಯಿಂದ ಮರಳುವಂತೆ ಮಾಡಿದ್ದು ಜನವರಿಯಿಂದ ಜೂನ್ ವರೆಗಿನ ಒಟ್ಟಾರೆ ಅವಧಿಯಲ್ಲಿ ಏನಿಲ್ಲವೆಂದರೂ ಸುಮಾರು 2.2 ಲಕ್ಷ ಕೋಟಿ ರೂಪಾಯಿಯನ್ನು ಹಿಂಪಡೆಯಲಾಗಿದೆ ಎಂದು ತಿಳಿದುಬಂದಿದೆ.


79ರ ಗಡಿ  ದಾಟಿದ ಭಾರತೀಯ ರೂಪಾಯಿ
ಈಗಾಗಲೇ ಈ ಟ್ರೆಂಡ್ ನಿಂದಾಗಿ ಭಾರತದ ಮಾರುಕಟ್ಟೆಯಲ್ಲಿ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿದ್ದು ಈ ನಡುವೆ ಭಾರತೀಯ ರೂಪಾಯಿಯ ಪ್ರದರ್ಶನ ಅಮೆರಿಕದ ಡಾಲರ್ ಎದುರು ಮತ್ತಷ್ಟು ಕಳಪೆಯಾಗುತ್ತಿರುವುದಕ್ಕೆ ಈ ನಿರಂತರ ಹೊರಹರಿವು ಸಾಕಷ್ಟು ಕೊಡುಗೆ ನೀಡುತ್ತಿದೆ ಎನ್ನಲಾಗಿದೆ. ಇದಕ್ಕೆ ಉದಾಹರಣೆಯೆಂದರೆ ಕಳೆದ ವಾರದಂದು ಮೊದಲ ಬಾರಿಗೆ ಭಾರತೀಯ ರೂಪಾಯಿ 79ರ ಗಡಿಯನ್ನು ದಾಟಿದ್ದನ್ನು ಗಮನಿಸಬಹುದು. ಇನ್ನು ಈ ಟ್ರೆಂಡ್ ಗೆ ಸಂಬಂಧಿಸಿದಂತೆ ವಿದೇಶಿ ಹೂಡಿಕೆದಾರರ ನಿರ್ಗಮನ ಮುಂದಿನ ಕೆಲ ಸಮಯ ಹೀಗೆ ಮುಂದುವರಿಯಬಹುದೆಂದು ಇಂಡಸ್ಟ್ರಿ ಪರಿಣಿತರ ಅಭಿಪ್ರಾಯವಾಗಿದೆ.


"ಸದ್ಯದ ಪರಿಸ್ಥಿತಿಗಳನ್ನು ಗಮನಿಸಿ ಹೇಳುವುದಾದರೆ ಹಣದುಬ್ಬರ ಎಂಬುದು ಈ ರೀತಿ ವಿದೇಶಿ ಹೂಡಿಕೆದಾರರು ಹಿನ್ನಡೆಯುವ ನಿರ್ಧಾರಕ್ಕೆ ಪ್ರಮುಖವಾಗಿ ಕಾರಣವಾಗಿದೆ" ಎಂದು ಕೋಟಕ್ ಸೆಕ್ಯೂರಿಟೀಸ್ ಸಂಸ್ಥೆಯ ಈಕ್ವಿಟಿ ರಿಸರ್ಚ್ ಮುಖ್ಯಸ್ಥರಾದ ಶ್ರೀಕಾಂತ್ ಚೌಹಾಣ್ ಹೇಳುತ್ತಾರೆ. ಈಗಾಗಲೇ, ಗೊತ್ತಾದ ಅಂಕಿ-ಅಂಶಗಳ ಪ್ರಕಾರ, ಈಕ್ವಿಟಿ ಮಾರುಕಟ್ಟೆಯಿಂದ ಜೂನ್ ತಿಂಗಳೊಂದರಲ್ಲೇ ಏನಿಲ್ಲವೆಂದರೂ 50,203 ಕೋಟಿ ರೂಪಾಯಿಗಳನ್ನು ಹಿಂಪಡೆಯಲಾಗಿದೆ ಎಂದು ತಿಳಿದುಬಂದಿದೆ.


ಈ ಕುರಿತು ಹಿಮಾಂಶು ಶ್ರೀವಾಸ್ತವ ಅವರು ಹೇಳಿದ್ದೇನು
"ಯುಎಸ್ ಫೆಡ್‌ನಿಂದ ಆಕ್ರಮಣಕಾರಿಯಾದಂತಹ ದರ ಏರಿಕೆ, ಹೆಚ್ಚಿನ ಹಣದುಬ್ಬರ ಹಾಗೂ ಭಾರತೀಯ ಷೇರುಗಳ ತುಲನಾತ್ಮಕವಾಗಿ ಹೆಚ್ಚಿನ ಮೌಲ್ಯಮಾಪನವು ಜೂನ್ ತಿಂಗಳಲ್ಲಿ ವಿದೇಶಿ ಹೂಡಿಕೆದಾರರನ್ನು ಅಂಚಿನಲ್ಲಿ ಇರಿಸುವಂತೆ ಮಾಡಿತ್ತು" ಎಂದು ಮಾರ್ನಿಂಗ್‌ಸ್ಟಾರ್ ಇಂಡಿಯಾದ ರಿಸರ್ಚ್‌ನ ಅಸೋಸಿಯೇಟ್ ಡೈರೆಕ್ಟರ್ ಆದ ಹಿಮಾಂಶು ಶ್ರೀವಾಸ್ತವ ಅವರ ಅಭಿಪ್ರಾಯವಾಗಿದೆ.


ಇದನ್ನೂ ಓದಿ:  Money Matters: ಜನರೇ ಜುಲೈ 18 ದಿನಾಂಕ ನೆನಪಿಟ್ಟುಕೊಳ್ಳಿ, ಅಂದು ಮತ್ತೆ ಏರಿಕೆಯಾಗಲಿದೆ ಬೆಲೆ


ಅವರ ಪ್ರಕಾರ, ಈ ಸಂದರ್ಭದಲ್ಲಿ ಹೆಚ್ಚಿನ ಮಟ್ಟಿನ ವಿದೇಶಿ ಹೂಡಿಕೆದಾರರ ಭಾವನೆಯು ಭಾರತದ ಕಡೆಗೆ ನಕಾರಾತ್ಮಕವಾಗಿಯೇ ಉಳಿಯುವಂತೆ ಮಾಡಿದ್ದು ಅವರು ದೇಶೀಯ ಷೇರುಗಳ ಹೂಡಿಕೆಯ ಮೇಲೆ ಬಲು ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಮಾಡಿದೆ. ಅಲ್ಲದೆ, ನಿವ್ವಳ ಹೊಹರಿವಿಗೆ ಸಂಬಂಧಿಸಿದಂತೆ ಇತರೆ ಉದಯೋನ್ಮುಖ ಮಾರುಕಟ್ಟೆಗಳಿಗೆ ಹೋಲಿಸಿದರೆ ಭಾರತದ ಮಾರುಕಟ್ಟೆ ತೀವ್ರತರವಾದ ಪೆಟ್ಟು ತಿಂದಿದೆ.


ಇನ್ನೊಂದು ವಿಚಾರವೆಂದರೆ ಎಫ್‍ಪಿಐ (ಫಾರೆನ್ ಪೋರ್ಟ್ ಫೋಲಿಯೊ ಇನ್ವೆಸ್ಟರ್ಸ್) ಮಾರಾಟಗಳು ಜೂನ್ ತಿಂಗಳಿನಲ್ಲಿ ಹೆಚ್ಚು ಕುಸಿತ ಕಂಡಿದ್ದವು. ಮುಂಬರುವ ಜುಲೈ ತಿಂಗಳಿನಲ್ಲಿ ಮತ್ತೆ ಮಾರುಕಟ್ಟೆಯಲ್ಲಿ ಮಾರಾಟ ಸಕ್ರಿಯವಾಗಿ, ಮಾರುಕಟ್ಟೆ ಚೇತರಿಸಿಕೊಂಡರೆ ವಿದೇಶಿ ಹೂಡಿಕೆಗಳು ಮತ್ತೆ ಒಳ ಹರಿದು ಬರುವ ಎಲ್ಲ ಸಾಧ್ಯತೆಯೂ ಇದೆ ಎಂದು ವಿಶ್ಲೇಷಿಸಲಾಗಿದೆ. ಒಟ್ಟಿನಲ್ಲಿ ಮತ್ತೆ ಭಾರತೀಯ ಈಕ್ವಿಟಿ ಮಾರುಕಟ್ಟೆ ಮತ್ತೆ ಚೇತರಿಸಿಕೊಳ್ಳುವಂತಾಗಲಿ ಎಂದಷ್ಟೇ ಆಶಿಸಬಹುದು.

Published by:Ashwini Prabhu
First published: